ಬಸವ ಕಲ್ಯಾಣ
ಮಾನವ ಧರ್ಮಕ್ಕೆ ಜಯವಾಗಲಿ ಎಂದು ಘೋಷಣೆ ಮಾಡುವ ಪಂಚಾಚಾರ್ಯರು ಮಾನವರ ಹೆಗಲ ಮೇಲೆ ಕುಳಿತು ಮೆರೆಯುವುದು ಅವೈಚಾರಿಕ ನಡೆಯಾಗಿದೆ.
ಎನಗಿಂತ ಕಿರಿಯರಿಲ್ಲ ಶಿವ ಭಕ್ತರಿಗಿಂತ ಹಿರಿಯರಿಲ್ಲ ಎಂದು ಎಲ್ಲಾ ವರ್ಗದ ಮಾನವರನ್ನು ಸರಿಸಮಾನವಾಗಿ ಕಂಡ ನಾಡು ಬಸವಕಲ್ಯಾಣ. ಇಂತಹ ಸಮತಾ ಭೂಮಿಯಲ್ಲಿ ಅಸಮಾನತೆ ಸೃಷ್ಟಿಸುವ ಪಂಚಾಚಾರ್ಯರ ದಸರಾ ದರ್ಬಾರ್ ನಡೆಯಬಾರದು. ಕೂಡಲೇ ಕೈ ಬಿಡಬೇಕು, ಇಲ್ಲವಾದರೆ ಎರಡನೇ ಕ್ರಾಂತಿ ನಡೆಯುತ್ತದೆ.
ಕಲ್ಯಾಣದಲ್ಲಿ ಕಾರ್ಯಕ್ರಮ ಮಾಡುವವರು ಮೊದಲು ಬಸವತತ್ವ ಪಾಲಿಸಲಿ, ಬಸವಣ್ಣನವರನ್ನು ಧರ್ಮಗುರು ಎಂದು ಒಪ್ಪಿಕೊಳ್ಳಲಿ. ಬಸವಣ್ಣನವರನ್ನು ದ್ವೇಷಿಸುವ ಪಂಚಾಚಾರ್ಯರಿಗೆ ಬಸವ ನಾಡಲ್ಲಿ ಕಾರ್ಯಕ್ರಮ ಮಾಡುವ ಯಾವ ನೈತಿಕ ಹಕ್ಕಿಲ್ಲ. ಬಸವ ಭೂಮಿ ಪಂಚಾಚಾರ್ಯರಿಂದ ಅಪವಿತ್ರವಾಗಲು ಬಿಡುವುದಿಲ್ಲ.
ಬಸವ ಕಲ್ಯಾಣ ಎಂಬ ಬಸವಾದಿ ಶಿವಶರಣರು ಕಟ್ಟಿದ ಕೋಟೆ ಇದು 12ಶತಮಾನದಿಂದ ಈ ಕಲ್ಯಾಣ ನಾಡು ಈ ಭಾಗದ ಮಠಾಧೀಶರು ಹಾಗು ಶರಣ ಬಂಧುಗಳು ಬಸವ ಪರಂಪರೆ ಉಳಿಸಿ ಬೆಳೆಸಿಕೊಂಡು ಬಂದಿದ್ದಾರೆ ಅಡ್ಡ ಪಲ್ಲಕ್ಕಿ ಉತ್ಸವ ದಸರಾ ನಡಿಯಬಾರದು ಈ ಭಾಗದಲ್ಲಿ ಬಸವಾದಿ ಶರಣರ (ಕಲ್ಯಾಣ ಪರ್ವ) ಗುಣ ಪರ್ವ ನಡಿಯಲಿ
ಸತ್ಯ… ಹೆಸರು ಬದಲಾಗಲಿ. ದರ್ಭಾರ ಬದಲಿಗೆ ಶರಣ ವಿಜಯೋತ್ಸವ ನಡೆಯಲಿ.