ಬೆಂಗಳೂರು
ಇಂದು ನಗರದಲ್ಲಿ ನಡೆಯುತ್ತಿರುವ ‘ಬಸವ ಸಂಜೆ’ ಕಾರ್ಯಕ್ರಮವನ್ನು ದೂರದ ಊರಿನ ಬಸವಣ್ಣನವರ ಅನುಯಾಯಿಗಳು ಫೇಸ್‍ಬುಕ್‍ನಲ್ಲಿ ಲೈವ್ ನೋಡಬಹುದು.
ಸಂಜೆ ನಾಲ್ಕು ಗಂಟೆಯಿಂದ ಈ ಕೆಳಗಿನ ಲಿಂಕ್ ಬಳಸಿಕೊಂಡು ಕಾರ್ಯಕ್ರಮವನ್ನು ಅಂತರ್ಜಾಲದಲ್ಲಿ ನೋಡಬಹುದು
ಬಸವ ಸಂಜೆ ಲೈವ್ ಲಿಂಕ್
https://www.facebook.com/profile.php?id=61560636714251
ಬಸವ ಮೀಡಿಯಾ ಒಂದು ವರ್ಷ ಪೂರೈಸಿರುವ ಸಂದರ್ಭದಲ್ಲಿ ಆಯೋಜಿತವಾಗಿರುವ ಬಸವ ಸಂಜೆ ಕಾರ್ಯಕ್ರಮದಲ್ಲಿ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲರು ‘ಬೆಸ್ಟ್ ಆಫ್ ಬಸವ ಮೀಡಿಯಾ’ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಪುಸ್ತಕ ಬಿಡುಗಡೆಯ ಜೊತೆಗೆ ಎರಡು ವಿಶೇಷ ಕಾರ್ಯಕ್ರಮಗಳು ‘ಬಸವ ಸಂಜೆ’ಯಲ್ಲಿ ನಡೆಯುತ್ತಿವೆ.
ಹಿರಿಯ ಚಿಂತಕ ಅಶೋಕ ಬರಗುಂಡಿ ಅವರ ಅಧ್ಯಕ್ಷತೆಯಲ್ಲಿ ಖ್ಯಾತ ವಿದ್ವಾಂಸ ಕೆ ರವೀಂದ್ರನಾಥ್ ಪ್ರೊಫೆಸ್ಸರ್ ಎಂ. ಎಂ. ಕಲಬುರ್ಗಿಯವರ ಮೇಲೆ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ನಂತರ ‘ಬಸವ ತತ್ವ – ಸಂಘರ್ಷ, ಸವಾಲು, ಸಾಧ್ಯತೆ’ ವಿಷಯದ ಮೇಲೆ ನಡೆಯುವ ಚರ್ಚಾ ಗೋಷ್ಠಿಯಲ್ಲಿ ಶರಣ ತತ್ವ ಚಿಂತಕರಾದ ಡಾ. ಜೆ. ಎಸ್. ಪಾಟೀಲ, ರುದ್ರಪ್ಪ ಪಿ, ಮತ್ತು ಡಾ. ರಾಜಶೇಖರ ನಾರನಾಳ ಭಾಗವಹಿಸಲಿದ್ದಾರೆ.
ಬಸವ ಮೀಡಿಯಾ ಟ್ರಸ್ಟಿನ ಸದಸ್ಯ ಎಚ್. ಎಂ. ಸೋಮಶೇಖರಪ್ಪ ನಿರ್ವಹಿಸುವ ಈ ಕಾರ್ಯಕ್ರಮ ಟ್ರಸ್ಟಿನ ಮತ್ತೊಬ್ಬ ಸದಸ್ಯ ಶಾಂತಕುಮಾರ ಹರ್ಲಾಪುರ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕಾರ್ಯಕ್ರಮ ನಡೆಯುವ ಸ್ಥಳ
– ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣ, ಬಿ ಪಿ ವಾಡಿಯಾ ರಸ್ತೆ, ಬಸವನ ಗುಡಿ, ಬೆಂಗಳೂರು.
ಸಮಯ ಸಂಜೆ 4ರಿಂದ 8.

ಧನ್ಯವಾದಗಳು ಶರಣರೇ
ಶರಣು ಶರಣಾರ್ಥಿಗಳು