ಲಿಂಗಸುಗೂರು ಕಾರಾಗೃಹದಲ್ಲಿ ಖೈದಿಗಳಿಗೆ ನಡೆದ ವಚನ ಶ್ರಾವಣ

ಬಸವ ಮೀಡಿಯಾ
ಬಸವ ಮೀಡಿಯಾ

ಲಿಂಗಸುಗೂರು

ವಚನ ಶ್ರಾವಣ-೨೦೨೫ರ ಅಂಗವಾಗಿ ಸ್ಥಳೀಯ ಕಾರಾಗೃಹದಲ್ಲಿ ಬಂಧಿತ ಅಪರಾಧಿಗಳ ಮನಪರಿವರ್ತನೆಗೆ ಪ್ರಯತ್ನಿಸುವ ಅಪರೂಪದ ಕಾರ್ಯಕ್ರಮ ಈಚೆಗೆ ನಡೆಯಿತು.

ಸ್ವಾತಂತ್ರ್ಯ ದಿನಾಚರಣೆಯನ್ನು ದೇಶದ ಎಲ್ಲಾ ನಾಗರಿಕರು ಆಚರಣೆ ಮಾಡಿದ್ದೇವೆ, ಆದರೆ ಯಾವುದೋ ಒಂದು ಘಟನೆಯ ಅಪರಾಧದಲ್ಲಿ ಭಾಗಿಯಾಗಿ, ಜೈಲಿನಲ್ಲಿ ಬಂಧಿತರಾದವರು ಸ್ವತಂತ್ರವಾಗಿ ತಮ್ಮ ಇಚ್ಚೆ ಬಂದಲ್ಲಿ ಹೋಗಿ ಭಾಗಿಯಾಗಲು, ಅವರ ತಪ್ಪು ಹೆಜ್ಜೆಯೇ ಕಾರಣ. ಹಾಗಾಗಿ ಅವರನ್ನು ಕಾನೂನು ಪ್ರಕಾರ ಜೈಲಿನಲ್ಲಿ ಬಂಧಿತರನ್ನಾಗಿಸಲಾಗಿದೆ.

ಅದಕ್ಕಾಗಿ ಅವರೆಲ್ಲರ ಮನ ಪರಿವರ್ತನೆ ಆಗಿ, ಬಂಧಿತರಾದ ಎಲ್ಲರೂ ಹೊರ ಬಂದು ಮೊದಲಿನಂತೆ ಜಿವನ ನಡೆಸುವಂತಾಗಲು ನಮ್ಮ ಕಾರ್ಯಕ್ರಮದ ಪ್ರಯತ್ನವಾಗಿದೆ ಎಂದು ಮುಖ್ಯ ಪೇದೆ ಶೇಖರಪ್ಪ ಸುರಪುರ ಹೇಳಿದರು.

ಕಾರ್ಯಕ್ರಮದಲ್ಲಿ ಅವರು “ಸದ್ಗುಣ ಮತ್ತು ಅಪರಾಧ ” ವಿಷಯ ಕುರಿತಾದ ಅನುಭಾವನ್ನು ನೀಡಿದರು.

ಆತುರದ ನಿರ್ಧಾರದಿಂದ ಅಪರಾಧಗಳು ಹೆಚ್ಚುತ್ತಿವೆ. ಅದಕ್ಕಾಗಿ ನಮ್ಮ ಮನಸ್ಸು ನಿಯಂತ್ರಣದಲ್ಲಿ ಇಡಲು ಬಸವಾದಿ ಶರಣರ ವಚನಗಳೆ ನಮಗೆ ಪ್ರಸ್ತುತವಾಗಿವೆ, ವಚನಗಳನ್ನು ಓದಿ ಅರ್ಥೈಸಿಕೊಂಡು ಅವುಗಳನ್ನು ನಾವುಗಳು ಜೀವನದಲ್ಲಿ ಅಳವಡಿಸಿಕೊಂಡು ಸುಖಿ ಜಿವನ ಸಾಗಿಸೋಣ ಎಂದು ಕರೆ ನೀಡಿದರು.

ಬಂಧಿಖಾನೆಯಲ್ಲಿ ೨೫ ವರ್ಷದ ಯುವಕರೆ ಹೆಚ್ಚು ಅಪರಾದ ಕೃತ್ಯದಿಂದ ಬಂಧಿತರಾದವರಾಗಿದ್ದಾರೆ. ಅವರಿಗೆ ಮಾನವೀಯ ಮೌಲ್ಯದ ವಿಷಗಳನ್ನು ತಿಳಿಸಿ , ಸನ್ನತೆಯಿಂದ ನಡೆಯಲು ತಿಳಿಸಲಾಯಿತು.

ಬಂಧಿತರು ಮೌಲ್ಯಯುತ ಮಾತುಗಳನ್ನು ಸಂತೋಷದಿಂದ ಆಲಿಸಿದರು, ನಾವು ಮುಂದಿನ ದಿನದಲ್ಲಿ ತಪ್ಪು ಮಾಡದಂತೆ ಕುಟುಂಬದವರ ಜೊತೆಗೆ ನಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಚಿತ್ತರಗಿ ಶ್ರೀವಿಜಯ ಮಹಾಂತೇಶ್ವರ ಶಾಖಾ ಅನುಭವ ಮಂಟಪದ ಪೂಜ್ಯ ಸಿದ್ದಲಿಂಗ ಸ್ವಾಮಿಗಳು ವಹಿಸಿ ಮಾತನಾಡುತ್ತ, ಮನ ಪರಿವರ್ತನೆ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿದರು.

ಜಾಗತಿಕ ಲಿಂಗಾಯತ ಮಹಾಸಭಾ, ಬಸವಪರ ಸಂಘಟನೆಗಳ ಶರಣ, ಶರಣೆಯರು ಭಾಗವಹಿಸಿದ್ದರು. ಜೈಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮ ನಡೆಯಲು ಸಹಕರಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bo3i1f468pxBcYJIXNRpTK

Share This Article
Leave a comment

Leave a Reply

Your email address will not be published. Required fields are marked *