ಯಲಬುರ್ಗಾ
ತಾಲೂಕಿನ ಮರಕಟ್ಟ ಗ್ರಾಮದ ಬಸವ ಕೇಂದ್ರದ ವತಿಯಿಂದ ಶ್ರಾವಣ ಮಾಸದ ನಿಮಿತ್ತವಾಗಿ ‘ವಚನಗಳ ನಡಿಗೆ ಮನೆ ಮನಗಳ ಕಡೆಗೆ’ ಎಂಬ ಕಾಯ೯ಕ್ರಮದ ೨ನೇ ವಷ೯ದ, ೨೫ ನೇ ದಿನದ ಕಾಯ೯ಕ್ರಮ ರತ್ನವ್ವ ರೇಣಕಪ್ಪ ಪರಂಗಿ ಅವರ ಮನೆಯಲ್ಲಿ ನಡೆಯಿತು.

ಬಸವ ಕೇಂದ್ರದ ಅದ್ಯಕ್ಷರಾದ ಅಮರೇಶಪ್ಪ ಬಳ್ಳಾರಿ ಅವರು ಬಸವಣ್ಣನವರು ಕೊಟ್ಟ ಕಾಯಕ ಪ್ರಜ್ಞೆಯನ್ನು ವಿವರಿಸುತ್ತ, ಬಸವಣ್ಣನವರ ಆಗಮನಕ್ಕಿಂತ ಮೊದಲು ದುಡಿಯುವ ವಗ೯ವನ್ನು ಕಡೆಗಣಿಸಿ ದುಡಿಯದೆ ಇರುವ ಅನುತ್ಪಾದಕ ಸೋಮಾರಿಗಳನ್ನು ಶ್ರೇಷ್ಠವೆಂದು ಪರಿಗಣಿಸುವ ವ್ಯವಸ್ಥೆಯಿತ್ತು. ಆದರೆ ಬಸವಣ್ಣನವರು ಕೃಷಿಕೃತ್ಯ ಕಾಯಕ ಮಾಡುವವನ ಪಾದವ ತೋರಯ್ಯ ಎಂದು ಕಾಯಕಕ್ಕೆ ದೈವತ್ವ ತೋರಿ ಕಾಯಕವೇ ಕೈಲಾಸ ಎಂದರು. ಅಂತೆಯೇ ಕಾಯಕವ ಕಲಿಸುದದಕ್ಕೆ ನಾಯಕನು ಬಸವಣ್ಣ ಎಂದು ಜನಪದ ಸಾಹಿತ್ಯದಲ್ಲಿ ಹೇಳಿರುವುದನ್ನು ನೆನಪಿಸಿದರು.

ಕಾಯ೯ಕ್ರಮದ ಅಧ್ಯಕ್ಷತೆಯನ್ನು ಹನಮಂತಪ್ಪ ತೇರಿನ ಅವರು ವಹಿಸಿದ್ದರು. ಹನಮೇಶ ಗೌಡ್ರ ಸಾಮೂಹಿಕ ವಚನ ಪ್ರಾಥ೯ನೆ ಮಾಡಿದರು. ಹನಮಂತಪ್ಪ ಬಳ್ಳಾರಿ ಇವರು ವಚನ ಗಾಯನ ಮಾಡಿದರು.
ಹನಮಂತಪ್ಪ ಹುಣಿಸಿಹಾಳ ಸ್ವಾಗತ ಹಾಗೂ ಕಾಯ೯ಕ್ರಮದ ನಿರೂಪಣೆ ಮಾಡಿದರು. ಅನೇಕ ಶರಣ ಶರಣೆಯರು ಉಪಸ್ಥಿತರಿದ್ದರು.