ಬೈಲಹೊಂಗಲ
ಪಟ್ಟಣದ ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರ ವಿಶೇಷ ಕಾರ್ಯಕ್ರಮದಲ್ಲಿ ಪ್ರವಚನ ನೀಡಿದ ಪ್ರೇಮಕ್ಕ ಅಂಗಡಿ, ಜಾತಿ ಮತ ಪಂಥ ಭೇದಭಾವವಿಲ್ಲದೆ ಸರ್ವರ ಆತ್ಮ ಹಾಗೂ ಸಮಾಜ ಕಲ್ಯಾಣ ಬಯಸಿದ ಅನುಭವ ಮಂಟಪ ಪ್ರಥಮ ವಿಶ್ವಸಂಸ್ಥೆ ಎಂದು ನುಡಿದರು.
ಅಂಬಿಗರ ಚೌಡಯ್ಯ ಸುಲೋಚನಾ ದಂಪತಿಗಳು ಮಗ ಪುರವಂತ ಕಲ್ಯಾಣದ ಅನುಭವ ಮಂಟಪಕ್ಕೆ ಆಗಮಿಸಿದ ಪ್ರವಚನದ ಪ್ರಸಂಗ ವಿವರಿಸಿದರು.
ವಿನಾಯಕ ಶೃತಿ ರಾಮಗುಂಡಿ ದಂಪತಿ ಕುಮಾರ ವೀವೇಕ ಹವಳಪ್ಪನವರವರನ್ನು ಸಾಕ್ಷಿಕರಿಸಿ ಸನ್ಮಾನಿಸಿ ಬರಮಾಡಿಕೊಂಡ ಪ್ರವಚನ ಎಲ್ಲರ ಕಣ್ಮನ ಸೆಳೆಯಿತು.
ಶರಣೆ ವಿದ್ಯಾನೀಲಪ್ಪನವರ ವಚನ ಚಿಂತನಗೈದರು. ಅಜಗಣ್ಣ ಮುಕ್ತಾಯಕ್ಕ ಬಳಗದ ನೂರಾರು ಶರಣ ಶರಣೆಯರು ಉಪಸ್ಥಿತರಿದ್ದರು.
ಸಂಗೀತ ಶಿಕ್ಷಕಿ ಮಾಧುರಿ ರಾಮಗುಂಡಿ ಅವರ ವಿದ್ಯಾರ್ಥಿನಿಯರು ವಚನ ನೃತ್ಯ ಪ್ರಸ್ತುತಪಡಿಸಿದರು.
ಶೆಟ್ಟನ್ನವರ ಬಂಧುಗಳು ದಾಸೋಹಗೈದರು. ಗೀತಾ ಅರಳಿಕಟ್ಟಿ ಸ್ವಾಗತಿಸಿದರು. ಸುವರ್ಣ ಬಿಜುಗುಪ್ಪಿ ವಂದಿಸಿದರು. ರಾಜೇಶ್ವರಿ ದ್ಯಾಮನಗೌಡ ನಿರೂಪಿಸಿದರು. ಶರಣ ಶರಣೆಯರು ಉಪಸ್ಥಿತರಿದ್ದರು.