ಜಾತಿಗಣತಿಯಲ್ಲಿ ಲಿಂಗಾಯತ ‘ಅಥವಾ’ ವೀರಶೈವ ಬರೆಸಿ: ವೀರಶೈವ ಮಹಾಸಭಾ

ಬಸವ ಮೀಡಿಯಾ
ಬಸವ ಮೀಡಿಯಾ

ವೀರಶೈವ ಮಹಾಸಭಾದ ನಿಲುವಿನಲ್ಲಿ ಮಹತ್ತರ ಬದಲಾವಣೆ

ಬೆಂಗಳೂರು

ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯ ಸರಕಾರ ಆರಂಭಿಸುತ್ತಿರುವ ಜಾತಿಗಣತಿಯಲ್ಲಿ ‘ಲಿಂಗಾಯತ’ ಅಥವಾ ‘ವೀರಶೈವ’ ಎಂದು ನಮೂದಿಸಬೇಕೆಂದು ಮನವಿ ಮಾಡಲು ವೀರಶೈವ ಮಹಾಸಭಾ ನಿರ್ಧರಿಸಿದೆ.

ಇಲ್ಲಿಯವರೆಗೆ ಜಾತಿಗಣತಿಯಲ್ಲಿ ‘ವೀರಶೈವ-ಲಿಂಗಾಯತ’ ಎಂದೇ ಬರೆಸಿ ಎಂದು ಹಠ ಹಿಡಿದಿದ್ದ ವೀರಶೈವ ಮಹಾಸಭಾದ ನಿಲುವಿನಲ್ಲಿ ಗಮನಾರ್ಹ ಬದಲಾವಣೆಯಾಗಿದೆ.

ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಸಚಿವರು, ಸಂಸದರು, ಶಾಸಕರು ಸೇರಿದಂತೆ 50ಕ್ಕೂ ಹೆಚ್ಚು ಜನಪ್ರತಿನಿಧಿಗಳು ಭಾಗವಹಿಸಿದ್ದರು. ಎಂ ಬಿ ಪಾಟೀಲ್, ಈಶ್ವರ ಖಂಡ್ರೆ, ಪ್ರಭಾಕರ ಕೋರೆಯಂತಹ ಮುಖಂಡರು ಮಾತನಾಡಿ ಲಿಂಗಾಯತ ‘ಅಥವಾ’ ವೀರಶೈವ ಎಂದು ಬರೆಸಲು ಸಮುದಾಯಕ್ಕೆ ಕರೆ ಕೊಟ್ಟರು.

ಲಿಂಗಾಯತ ಅಥವಾ ವೀರಶೈವ ಎಂದು ನಮೂದಿಸಲು ಸಮಾಜದಲ್ಲಿ ಜನಾಭಿಪ್ರಾಯ ಮೂಡಿಸಲು ಮಠಾಧಿಪತಿಗಳೊಂದಿಗೆ ಚರ್ಚಿಸಿ ಉನ್ನತಮಟ್ಟದ ಸಮಿತಿ ರಚಿಸಿಲು ಸಭೆ ತೀರ್ಮಾನಿಸಿದೆ ಎಂದು ಖಂಡ್ರೆ ತಿಳಿಸಿದರು.

ಶಾಮನೂರು ಶಿವಶಂಕರಪ್ಪ ಅವರ ಅನುಪಸ್ಥಿತಿಯಲ್ಲಿ ಖಂಡ್ರೆಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಸೆಪ್ಟೆಂಬರ್ 20ರಿಂದ ಪ್ರಾರಂಭವಾಗಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಲಿಂಗಾಯತ ಸಮುದಾಯದ ನೈಜ ಸಂಖ್ಯೆ ಹೊರಹೊಮ್ಮುವಂತೆ ಶ್ರಮಿಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದೆ, ಎಂದು ಖಂಡ್ರೆ ಹೇಳಿದರು.

ಸಭೆಯಲ್ಲಿ ಮಾತನಾಡಿದ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ “ಒಳ ಪಂಗಡಗಳ ಹೆಸರನ್ನಷ್ಟೇ ಬರಸದೆ ಎಲ್ಲರೂ ಧರ್ಮದ ಕಾಲಂನಲ್ಲಿ ಲಿಂಗಾಯತ ಅಥವಾ ವೀರಶೈವ ಎಂದು, ಉಪ ಜಾತಿಯ ಕಾಲಂನಲ್ಲಿ ಒಳ ಪಂಗಡದ ಹೆಸರು ಬರೆಸುವಂತೆ ಅರಿವು ಮೂಡಿಸಬೇಕು,” ಎಂದು ಹೇಳಿದರು.

ಸಂಸತ್ ಸದಸ್ಯ ಪ್ರಭಾಕರ ಕೋರೆ ಸಮಾಜದ ಸಂಘಟನೆಗಳ ಪದಾಧಿಕಾರಿಗಳ ಮತ್ತು ಸದಸ್ಯರ ಮೂಲಕ ಸಮೀಕ್ಷೆಯಲ್ಲಿ ಲಿಂಗಾಯತ ಅಥವಾ ವೀರಶೈವ ಎಂದು ಬರೆಸಲು ಎಲ್ಲರಿಗೂ ಮನವಿ ಮಾಡಬೇಕೆಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಜಾತಿಯ ಹೆಸರು ಬರೆಸುವ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ಇದರ ನಿವಾರಣೆಗೆ ಸಮಾಜದ ಎಲ್ಲ ಬಾಂಧವರಿಗೆ ಸರಿಯಾದ ಮಾಹಿತಿ ರವಾನಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಹಾಸಭಾದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಹೇಳಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮುಂದಿನ ತಿಂಗಳಿನಿಂದಲೇ ಸಮೀಕ್ಷೆ ಆರಂಭವಾಗಲಿದ್ದು, ಸಮಯಾವಕಾಶ ಕಡಿಮೆ ಇರುವ ಹಿನ್ನೆಲೆಯಲ್ಲಿ ತತ್ ಕ್ಷಣವೇ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಜಾತಿಗಣತಿಯಲ್ಲಿ ‘ಲಿಂಗಾಯತ’ ಎಂದೇ ಬರೆಸಿ ಎಂದು ಬಸವ ಸಂಘಟನೆಗಳು ಮತ್ತು ಲಿಂಗಾಯತ ಮಠಗಳು ದೊಡ್ಡ ಮಟ್ಟದಲ್ಲಿ ಜನರನ್ನು ಸಂಘಟಿಸುತ್ತಿವೆ. ಸಾಮಾನ್ಯವಾಗಿ ಸೈದ್ಧಾಂತಿಕವಾಗಿ ಸ್ಪಷ್ಟತೆ ತೋರದ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿ ಸೋಮಶೇಖರ್ ಕೂಡ ಬರುವ ಜಾತಿಗಣತಿಯಲ್ಲಿ ಲಿಂಗಾಯತ ಎಂದೇ ಬರೆಸಿ ಎಂದು ಬುಧವಾರ ಹೇಳಿದ್ದರು.

ಈ ಹಿನ್ನಲೆಯಲ್ಲಿ ವೀರಶೈವ ಮಹಾಸಭಾದ ನಿಲುವು ಬದಲಾಗಿದೆ. ಮಹಾಸಭಾದ ಬದಲಾದ ನಿಲುವಿಗೆ ಬಸವ ಸಂಘಟನೆಗಳಿಂದ ಮತ್ತು ಪಂಚಪೀಠಗಳಿಂದ ಯಾವ ರೀತಿ ಪ್ರತಿಕ್ರಿಯೆ ಬರುತ್ತದೆಯೋ ಕಾದು ನೋಡಬೇಕು.

ಸಚಿವರುಗಳಾದ ದರ್ಶನಾಪೂರ, ಶರಣಪ್ರಕಾಶ್ ಪಾಟೀಲ್, ಎಸ್.ಎಸ್. ಮಲ್ಲಿಕಾರ್ಜುನ್, ಶಿವಾನಂದ ಪಾಟೀಲ್, ಶಾಸಕರುಗಳಾದ ಬಿ.ಆರ್. ಪಾಟೀಲ್, ಬಸವರಾಜ ರಾಯರೆಡ್ಡಿ, ಎಂ.ವೈ ಪಾಟೀಲ್, ವಿಜಯಾನಂದ ಕಾಶೆಪ್ಪನವರ್, ಗಣೇಶ್ ಹುಕ್ಕೇರಿ, ಸಿ.ಎಸ್. ನಾಡಗೌಡ, ಅಪ್ಪಾಜಿ ನಾಡಗೌಡ, ಗಣೇಶ್ ಪ್ರಸಾದ್, ಶಿವಗಂಗ ಬಸವರಾಜ್, ಜಿ.ಎಸ್. ಪಾಟೀಲ್, ಶರಣಗೌಡ ಕುಂದಕೂರ, ಬಾಬಾ ಸಾಹೇಬ್ ಪಾಟೀಲ್, ಶಾಂತನಗೌಡರ್, ತಮ್ಮಯ್ಯ, ಯುಬಿ ಬಣಕಾರ್, ಅಲ್ಲಮಪ್ರಭು ಪಾಟೀಲ್, ರಾಜು ಕಾಗೆ, ಷಡಕ್ಷರಿ, ಲತಾ ಮಲ್ಲಿಕಾರ್ಜುನ್, ಅಶೋಕ್ ಮನಗೂಳಿ, ಶಿವಾನಂದ ಕೌಜಲಗಿ, ಬಿ.ವೈ. ವಿಜಯೇಂದ್ರ, ಡಾ. ಶೈಲೇಂದ್ರ ಬೆಲ್ದಾಳೆ, ಅರವಿಂದ ಬೆಲ್ಲದ್, ಬಿ.ಪಿ. ಹರೀಶ್, ಜ್ಯೋತಿ ಗಣೇಶ್, ಭೀಮರಾವ್ ಪಾಟೀಲ್, ಡಾ. ಚಂದ್ರಶೇಖರ ಪಾಟೀಲ್, ಶರಣು ಸಲಗಾರ್ ಸೇರಿದಂತೆ 50ಕ್ಕೂ ಹೆಚ್ಚು ಶಾಸಕರು ಹಾಗೂ ಸಭಾದ ಶಂಕರ್ ಬಿದರಿ ಮತ್ತು ನಿವೃತ್ತ ನ್ಯಾಯಮೂರ್ತಿ ಸುಭಾಷ್ ಆಡಿ ಮತ್ತಿತರರು ಪಾಲ್ಗೊಂಡಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bo3i1f468pxBcYJIXNRpTK

Share This Article
22 Comments
  • ಬಸವಣ್ಣವರ ಶರಣರು ಲಿಂಗಾಯತ ಧರ್ಮ ಅಂತ ಬರೆಯುವರು . ಸನಾತನ ಹಿಂದು ಸಂಸ್ಕೃತಿಯ ಆಚರಣೆಯ ಮಾಡುವ ಕುಂಕುಮದಾರಿಗಳು ವೀರಶೈವ ಅಂತ ಬರೇದುಕೋಳ್ಳಲಿ.

    • ಜಗಳ ಬೇಡ ಯಲ್ಲರು ಒಂದಾಗಿ ಒಂದಾಗದಿದ್ದರೆ
      ಉಳಿಗಾಲವಿಲ್ಲ.

    • ನಮ್ಮ ಸಮಾಜದ ಯಮ್ಮೆಯ ಗಣ್ಯರಿಗೆ ಶರಣು ಶರಣಾರ್ಥಿ…. ನಮ್ಮ ಸಮುದಾಯದ ಜಾತಿ ವಿಚಾರ ತುಂಬಾ ತುಂಬಾ ಗೊಂದಲ ದಲ್ಲಿ ಸಿಲುಕಿದೆ… ಆದ್ದರಿಂದ ತಮಲ್ಲಿ ಮನವಿ ಮಾಡಿಕೊಳ್ಳುದೇನೆಂದರೆ….. ಯಲ್ಲರೂ ಸರಿಸಾಮಾನವಾಗಿ ಹೋಗಬೇಕೆಂದರೆ ಲಿಂಗಾಯಿತ ಎಂದು ಬರೆಸಲು ಯಲ್ಲಾ ಮಠ ದೀಪತಿಗಳಲ್ಲಿ… ನೀವು ಮನವಿ ಮಾಡಿ ಪೂಜ್ಯರ ಪಾದಗಳಿಗೆ ಹೊಂದಿಸಿ… ನೀವು ಒಪ್ಪಿಸಿ….. ನೀವು ಒಮ್ಮತದಿಂದ… ಒಂದು ಗಟ್ಟಿಯಾಗಿ ಈ ವಿಚಾರದಲ್ಲಿ ಬೆಂಬಲಿಸಬೇಕೆಂದು ನಮ್ಮ ಅಭಿಲಾಸ್…. ಇಂತಿ :- ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಳವಳ್ಳಿ ಘಟ್ಟಕ… 🙏🏻🙏🏻🙏🏻ಶರಣು ಶರಣಾರ್ಥಿ 🙏🏻🙏🏻🙏🏻

    • ಲಿಂಗಾಯತ ಅಂತಲೇ ಬರೆಸಬೇಕು.
      ಮತ್ತೆ ಎರಡು ದೋಣಿಯಲ್ಲಿ ಕಾಲಿಟ್ಟು ಪ್ರಯಾಣಿಸುವ ಕೆಲಸ ಮಾಡಬೇಡಿ.
      ಬಸವಪರ ಸಂಘಟನೆಗಳು ನಮ್ಮ ನಿಖರ ಸಂಖ್ಯೆ ಗೊತ್ತಾಗಲಿ ನಾವು ಲಿಂಗಾಯತವನ್ನೇ ಬರೆಸೋಣ

    • ಒಮ್ಮನವಾದರೆ ಒಡನೆ ನುಡಿವನು ಇಮ್ಮನವಾದರೆ ನುಡಿಯನು ನುಡಿಯನು ನಮ್ಮ ಕೂಡಲಸಂಗಮದೇವನೆಂಬ ಬಸವಣ್ಣನವರ ಎಚ್ಚರಿಕೆಯ ಮಾತನ್ನು ಮರೆಯಬಾರದು ಲಿಂಗಾಯತ ಧರ್ಮ ಮಾನ್ಯತೆ ಪಡೆಯಬೇಕಾದರೆ.

  • ಇದು ಒಮ್ಮತದ ನಿರ್ಧಾರವಾಗದು, ಬಸವಪ್ರಣಿತ ಲಿಂಗಾಯತರು, “ಲಿಂಗಾಯತ” ಯಂದೇ ಬರೆಸುವರು,
    ಪಂಚಪೀಠಗಳ ಹಿಂಬಾಲಕರು “ವೀರಶೖವ” ಯಂದು ಬರೆಸುವರು
    ಇದರಲ್ಲೇನು ವೆತ್ಯಾಸ? ನಮ್ಮ ದಾರಿ ನಮಗೆ, ಅವರದಾರಿ ಅವರಿಗೆ.
    ಈಗಲಾದರೂ ವೀರಶೖವ ಲಿಂಗಾಯತ ಒಂದೇ ಯಂಬ ಭಾವದಿಂದ ಆಚೆಬರುವವರಿಗೆ ಈ ಸಭೆಯಿಂದ ಸ್ಪಸ್ಟವಾದ ಸಂದೇಶ ಯಂದುಕೊಳ್ಳಬಹುದೆ?

  • ಆಶ್ಚರ್ಯಕರ ಬೆಳವಣಿಗೆ.
    ” ವೀರಶೈವ ಲಿಂಗಾಯತ ” ಎಂದು ಬರೆಸದೇ ವೀರಶೈವರು “ವೀರಶೈವ” ಎಂದು ಬರೆಸಿ, ಲಿಂಗಾಯತರು ” ಲಿಂಗಾಯತ ” ಎಂದು ಬರೆಸಿ ಎಂದು ತೀರ್ಮಾನಿಸಿ ಬಹಿರಂಗ ಪ್ರಕಟಣೆ ಕೊಟ್ಟಿದ್ದರೆ ಮುಕ್ಕಾಲು ಗೊಂದಲ ನಿವಾರಣೆ ಯಾಗುತಿತ್ತು. ಲಿಂಗಾಯತರಿಗೆ, ಧರ್ಮವೂ ಲಿಂಗಾಯತ, ಜಾತಿಯೂ ಲಿಂಗಾಯತ, ಉಪ ಜಾತಿ(ಉಪ ಪಂಗಡ) ಬೇರೆ ಬೇರೆ ಇದ್ದು ಅದನ್ನು ಬರೆಸ ಬೇಕಾಗಿದೆ. ಲಿಂಗಾಯತ ಧರ್ಮ ಸ್ವೀಕರಿಸಿರುವ ಎಲ್ಲಾ ಉಪ ಪಂಗಡಗಳ ಹಿತ ಕಾಯ್ದು ಅವರ ಮೂಲ ಜಾತಿಯವರಿಗೆ ಸಿಗುವ ಎಲ್ಲಾ ಮೀಸಲಾತಿ ಸೌಲಭ್ಯ ಅವರಿಗೂ ಒದಗಿಸುವ ಪ್ರಯತ್ನಗಳು ಈಗಿನಿಂದಲೇ ಪ್ರಾರಂಭಿಸ ಬೇಕು ಮತ್ತು ವೀರಶೈವ ಮಹಾಸಭೆ ತನ್ನ ದಾವಣಗೆರೆ ಮಹಾಧಿವೇಶನ ದಲ್ಲಿ ತೆಗೆದುಕೊಂಡ ನಿರ್ಣಗಳಿಗೆ ಬದ್ದವಾಗಿದ್ದರೆ ಬಹಳಷ್ಟು ಇನ್ನಿತರೆ ಗೊಂದಲಗಳು ನಿವಾರಣೆ ಯಾಗುತ್ತದೆ.

  • ಎಂ ಬಿ ಪಾಟೀಲರ ಇಂತಹ ಇಬ್ಬಂದಿತನವು ಬಸವಾಭಿಮಾನಿಗಳಲ್ಲಿ ನಿರಾಶ ತಂದಿದೆ. ಬಿ. ಆರ್.ಪಾಟೀಲ ರನ್ನೊಳಗೊಂಡಂತೆ ಅಲ್ಲಿರುವ ಯಾವ ರಾಜಕೀಯ ನಾಯಕರು ಈ ನಿರ್ಣಯಕ್ಕೆ ಆಕ್ಷೇಪಿಸದಿರುವುದು ಸಮಾಜದ ದುರಂತ.

    • ಲಿಂಗಾಯತ ಅಥವಾ ವೀರಶೈವ ಬರಸುವುದರಿಂದ ಹಾನಿ ಆಗುವುದು ಸಮಾಜಕ್ಕೆ.ಭಕ್ತರಿಗೆ ಸಮಾಜಕ್ಕೆ ಒಳ್ಳೆಯದು ಆಗಲಿ ಎಂದರೆ ಪಂಚಪೀಠದ ಪೂಜ್ಯರು ಅದರಲ್ಲೂ ರಂಭಾಪುರಿ ಪೂಜ್ಯರು ಹೇಗೆ ವಾಹನದ ಮೇಲೆ ಅಡ್ಡಪಲ್ಲಕಿಗೆ ಒಪ್ಪಿಕೊಂಡರೊ ಹಾಗೆ ಹಠಕ್ಕೆ ಬೀಳದೆ ವೀರಶೈವ ಬದಲಾಗಿ ಲಿಂಗಾಯತ ಎಂದು ಬರೆಸಲು ಹೇಳಬೇಕು.ವೀರಶೈವ ಮಹಾಸಭಾದ ಕೂಡಾ ಲಿಂಗಾಯತ ಎಂದೇ ನಿರ್ಣಯ ತೆಗೆದುಕೊಂಡಿದ್ದರೆ ಚೆನ್ನಾಗಿತ್ತು. ಈ ನಿರ್ಣಯ ಸಮಾಜದ ಏಳಿಗೆಗೆ ಸಹಕಾರಿ ಅಲ್ಲ. ಮಾನ್ಯ ಎಂ ಬಿ ಪಾಟೀಲರು ಲಿಂಗಾಯತ ಬರೆಯಲು ಹೇಳಿದ್ದಾರೆ ಇದರಲ್ಲಿ ಇಬ್ಬಂದಿತನ ಹೇಗೆ ಆಗುತ್ತದೆ
      ಶರಣುಶರಣಾರ್ಥಿಗಳು.

  • ಸಮಸ್ಯಗೆ ೫೦% ಉತ್ತರ ಸಿಕ್ಕಿದ ಹಾಗೆ ಆಗಿದೆ. ಜನಗಣತಿಯ ಸಂದರ್ಭದಲ್ಲಿ ಧರ್ಮದ ಕಾಲಂನಲ್ಲಿ ಪಂಚಾಚಾರ್ಯರ ಅನುಯಾಯಿಗಳು ವೀರಶೈವ ಎಂದು ಬರೆಯಿಸಬಹುದು ಬಸವಾದಿ ಶರಣರ ಅನುಯಾಯಿಗಳು ಲಿಂಗಾಯತ ಎಂದು ಬರೆಯಬಹುದು . ಆದರೆ ಹಿಂದೂ ಎಂದು ಬರೆಸಬಾರದು ಎಂಬ ಸಂದೇಶ ತುಂಬಾ ಸೂಕ್ತವಾದುದು.. ಒಟ್ಟಾರೆಯಾಗಿ ಎಲ್ಲರು ಒಂದೇ ಛತ್ರದಡಿಯಲ್ಲಿ ಬಂದರೆ ರಾಜ್ಯದಲ್ಲಿ, ದೇಶದಲ್ಲಿ ಒಂದು ಧರ್ಮಕ್ಕೆ ಮಾನ್ಯತೆ, ಬೆಲೆ, ಘನತೆ ಬಂದಂತಾಗುತಿತ್ತು. ಭಾರತದ, ಮತ್ತು ಕರ್ನಾಟಕದ ಬಸವಾದಿ ಶರಣರ ಅಭಿಮಾನಿಗಳು ಸೂಕ್ತವಾದ ನಿರ್ಣಯ ತೆಗೆದುಕೊಂಡು ಧರ್ಮ ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರವಹಿಸಬೇಕು.🙏🙏

  • ಇದರಲ್ಲಿ ಎಂ.ಬಿ. ಪಾಟೀಲ್ ರವರ ಇಬ್ಬಂದಿತನ ಎಲ್ಲಿದೆ. ಅವರು ಬಸವ ಧರ್ಮಕ್ಕೆ ನಿಷ್ಠೆ ಇಟ್ಟೇ ಮಾತಾಡಿದ್ದಾರೆ.ಅವರಿಂದ ” ವೀರಶೈವ ಲಿಂಗಾಯತ ” ಎನ್ನುವುದಕ್ಕೆ ತೆರೆಬಿದ್ದಿದೆ. ಈಗ ಲಿಂಗಾಯತ ಸ್ವತಂತ್ರ ಆಗಿದೆ.

    • ಯಾರು ಏನೇ ಹೇಳಲಿ ನಾವು ಮಾತ್ರ ಬಸವಣ್ಣನವರು ಸ್ಥಾಪಿಸಿದ “ಲಿಂಗಾಯತ ಧರ್ಮ”ಎಂದೇ ಬರೆಯುತ್ತೇವೆ.ಇದರಲ್ಲಿ ನಮಗೆ ಯಾರ ಅನುಮತಿ ಬೇಕಾಗಿಲ್ಲ.
      ಜೈ ಬಸವೇಶ ಜೈ ಲಿಂಗಾಯತ

  • JLM ಸಭೆಗಳಲ್ಲಿ ಧರ್ಮದ ಕಾಲಂ ನಲ್ಲಿ ಲಿಂಗಾಯತ ಮಾತ್ರ ಬರೆಸಿರಿ, ವೀರಶೈವ ಬರೆಸಬೇಡಿ ಎಂದು ಹೇಳಿರುವುದು ಇಬ್ಬಂದಿತನವಲ್ಲವೆ?

  • ಸಮಾಜದ ಹಿರಿಯರು ಕೈಗೊಂಡ ನಿರ್ಣಯ ಸ್ವಾಗತಾರ್ಹ.

  • ಲಿಂಗಾಯತ ಧರ್ಮವು ಸ್ವತಂತ್ರ ಧರ್ಮದ. ಎಲ್ಲಾ ಅರ್ಹತೆಗಳನ್ನು ಹೊಂದಿರುತ್ತದೆ. ಆದರೆ ವೀರಶೈವ ಧರ್ಮದ ಯಾವ ಅರ್ಹತೆಯನ್ನು ಹೊಂದಿಲ್ಲ ,ಅದಕ್ಕಾಗಿ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ .ಎಲ್ಲರೂ ಧರ್ಮ, ಜಾತಿ ಕಾಲಂ ಗಳಲ್ಲಿ ಲಿಂಗಾಯತ ಎಂದು ಬರೆಸುವುದು ಒಳ್ಳೆಯದು.

  • ಬಸವಣ್ಣ ನವರು ಹೇಳಿಕೊಟ್ಟ ಸಮಾನತೆ ಗೆ ವಿರೋಧವಾಗಿ ಕೇವಲ ಲಿಂಗಾಯತ ಬರೆಸಲು ಹೇಳಬೇಕು. ಉಪ ಜ್ಯಾತಿ ಬರೆದರೆ ಬಸವಣ್ಣನವರಿಗೆ ಅಪಚಾರೆ ಅಲ್ಲವೇ.. ಎಲ್ಲವನ್ನು ಬಿಟ್ಟು ವೀರಶೈವ ಮತ್ತು ಲಿಂಗಾಯತ ರು ಒಗ್ಗೂಡಬೇಕು

  • ತಿಳಿದುಕೊಳ್ಳಿ, ನಮ್ಮ ಶರೀರದ ಒಳಗಿರುವ ಆತ್ಮವು ಅವಿನಾಶಿ ಆಗಿದೆ. ಆತ್ಮ ಅಮರ. ಆತ್ಮಕ್ಕೆ ಸಾವಿಲ್ಲ. ಸತ್ತ ನಂತರ ನಮ್ಮ ಶರೀರದಿಂದ ಹೊರಬಂದ ಆತ್ಮ ಯಾವ ಧರ್ಮದ ತಾಯಿಯ ಗರ್ಭವನ್ನು ಪ್ರವೇಶ ಮಾಡುತ್ತದೆಯೋ ಆ ಆತ್ಮ ಹೊಸ ಶರೀರವನ್ನು ತಾಯಿಯ ಗರ್ಭದ ಮೂಲಕ ತೆಗೆದುಕೊಂಡು ಭೂಮಿಯ ಮೇಲೆ ಪಾತ್ರವನ್ನು ಮಾಡುತ್ತದೆ ಅಷ್ಟೇ. ಆತ್ಮಕ್ಕೆ ನಿಜವಾಗಿಯೂ ಜಾತಿ, ಧರ್ಮ, ಕುಲ, ಪಂಗಡ ಯಾವುದೂ ಇರುವುದಿಲ್ಲ. ಆತ್ಮವು ಜಾತಿ ಇಲ್ಲದ ಜ್ಯೋತಿಯಾಗಿದೆ.

    ನಮ್ಮೊಳಗಿರುವ ಆತ್ಮನನ್ನು ಯಥಾರ್ಥವಾಗಿ ಅರಿಯುವುದರಿಂದಲೇ ಅಥವಾ ಆತ್ಮಜ್ಞಾನವನ್ನು ಸಂಪಾದನೆ ಮಾಡುವುದರಿಂದಲೇ ನಾವು ಜಾತಿ-ಧರ್ಮ-ಕುಲ-ಪಂಗಡ ಇವುಗಳಿಂದ ಆಚೆ ಬಂದು ನೆಮ್ಮದಿಯಾದ ಜೀವನವನ್ನು ನಡೆಸಬಹುದು.
    ಬಸವಣ್ಣನ ಧರ್ಮವೇ ಲಿಂಗಾಯತ: ವೀರಶೈವ ಮತ್ತು ಹಿಂದೂ ಧರ್ಮದಿಂದ ಪ್ರತ್ಯೇಕವಾದ ಅಸ್ತಿತ್ವ – Part 2

    —————————————————————

    “ನೋಟದ ಭಕ್ತಿ ಬಸವನಿಂದಾಯಿತ್ತು,

    ಕೂಟದ ಜ್ಞಾನ ಬಸವನಿಂದಾಯಿತ್ತು ಕಾಣಾ.

    ಎಲ್ಲಿಯ ಶಿವಜ್ಞಾನ, ಎಲ್ಲಿಯ ಮಾಟಕೂಟ ಬಸವನಲ್ಲದೆ?

    ಮಹಾಜ್ಞಾನ, ಮಹಾಪ್ರಕಾಶ ಬಸವಣ್ಣನ ಧರ್ಮವಯ್ಯಾ, ಕಪಿಲಸಿದ್ದಮಲ್ಲಿಕಾರ್ಜುನಯ್ಯ.”

    ವೀರಶೈವ ಮತ್ತು ಲಿಂಗಾಯತ: ಐತಿಹಾಸಿಕ ಮತ್ತು ತಾತ್ವಿಕ ಭಿನ್ನತೆಗಳ ವಿಮರ್ಶೆ

    ——————————————————————-

    ಲಿಂಗಾಯತವು ಹಿಂದೂ ಧರ್ಮದಿಂದ ಭಿನ್ನ ಎಂಬ ವಾದದಂತೆಯೇ, ಅದು ಆಗಮೋಕ್ತ ವೀರಶೈವದಿಂದಲೂ ಪ್ರತ್ಯೇಕವಾದುದು ಎಂಬುದು ಮತ್ತೊಂದು ಪ್ರಮುಖವಾದ ತಾತ್ವಿಕ ನಿಲುವು. ಇವೆರಡನ್ನೂ ಒಂದೇ ಎಂದು ಪರಿಗಣಿಸುವುದು ಐತಿಹಾಸಿಕ ಮತ್ತು ಸೈದ್ಧಾಂತಿಕ ದೃಷ್ಟಿಯಿಂದ ಸಮಂಜಸವಲ್ಲ.

    a) ಮೂಲ ಮತ್ತು ಪರಂಪರೆಯ ಸಂಘರ್ಷ

    ಎರಡೂ ಪರಂಪರೆಗಳ ಉಗಮ ಮತ್ತು ಮೂಲದ ಕುರಿತಾದ ಗ್ರಹಿಕೆಗಳಲ್ಲಿಯೇ ಮೂಲಭೂತ ವ್ಯತ್ಯಾಸವಿದೆ.

    ಲಿಂಗಾಯತದ ಉಗಮ:

    ಈ ಹಿಂದೆಯೇ ಸ್ಥಾಪಿಸಿದಂತೆ, ಲಿಂಗಾಯತ ಧರ್ಮವು ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣ ಮತ್ತು ವಚನಕಾರ ಶರಣರಿಂದ ಪ್ರಾರಂಭವಾದ ಒಂದು ಐತಿಹಾಸಿಕ ಚಳುವಳಿ. ಇದರ ಅಧಿಕಾರದ ಕೇಂದ್ರ ‘ಅನುಭವ ಮಂಟಪ’ ಮತ್ತು ಇದರ ಧರ್ಮಗ್ರಂಥ ಕನ್ನಡದ ವಚನಗಳು.

    ವೀರಶೈವದ ಪ್ರಾಚೀನತೆಯ ವಾದ:

    ಇದಕ್ಕೆ ವಿರುದ್ಧವಾಗಿ, ಪಂಚಾಚಾರ್ಯ ಪರಂಪರೆಯ ವೀರಶೈವವು ತಾನು ಬಸವಣ್ಣನವರಿಗಿಂತಲೂ ಪ್ರಾಚೀನವಾದುದು ಎಂದು ಪ್ರತಿಪಾದಿಸುತ್ತದೆ. ಅದು ತನ್ನ ಪರಂಪರೆಯನ್ನು ಪೌರಾಣಿಕ ಶಿವಲಿಂಗಗಳಿಂದ ಉದ್ಭವಿಸಿದ ಪ್ರಾಚೀನ ಋಷಿಗಳಿಗೆ (ಪಂಚಾಚಾರ್ಯರು) ಸಂಪರ್ಕಿಸುತ್ತದೆ. ಇದರ ತಾತ್ವಿಕ ಆಧಾರ ಸಂಸ್ಕೃತದ ಶಿವಾಗಮಗಳೇ ಹೊರತು, ಕನ್ನಡದ ವಚನಗಳಲ್ಲ.

    ಐತಿಹಾಸಿಕ ವಿಶ್ಲೇಷಣೆ:

    ಬಸವಣ್ಣನವರ ಕ್ರಾಂತಿಕಾರಕ ಚಳುವಳಿಯ ನಂತರ, ಹೆಚ್ಚು ಸಂಪ್ರದಾಯವಾದಿ ಮತ್ತು ಸಂಸ್ಕೃತ-ಕೇಂದ್ರಿತ ಗುಂಪುಗಳು, ಈ ಹೊಸ ಮತ್ತು ಆಮೂಲಾಗ್ರವಾದ ಲಿಂಗಾಯತ ತತ್ವಗಳನ್ನು ಹೆಚ್ಚು ಸಾಂಪ್ರದಾಯಿಕ ಮತ್ತು ಆಗಮ-ಸಮ್ಮತ ಚೌಕಟ್ಟಿಗೆ ತರುವ ಪ್ರಯತ್ನದಲ್ಲಿ, ‘ವೀರಶೈವ’ ಎಂಬ ಪದವನ್ನು ಬಸವ ಚಳುವಳಿಗೆ ಅನ್ವಯಿಸಿರಬಹುದು. ಇದು ಮೂಲಭೂತ ಸೈದ್ಧಾಂತಿಕ ಭಿನ್ನತೆಗಳನ್ನು ಮರೆಮಾಚುವ ಒಂದು ಸಮನ್ವಯಕಾರಿ ಗುರುತನ್ನು ಸೃಷ್ಟಿಸಿತು.

    ಲಿಂಗಾಯತ ಮತ್ತು ವೀರಶೈವ: ಮೂಲಭೂತ ವ್ಯತ್ಯಾಸಗಳು

    ————————————————————–

    ವೀರಶೈವ ಮತ್ತು ಲಿಂಗಾಯತ ಒಂದೇ ಎಂದು ವಾದಿಸುವವರು, ವೀರಶೈವವು ಆಗಮ-ಶಾಸ್ತ್ರಗಳನ್ನು ಆಧರಿಸಿದ, ಪಂಚಾಚಾರ್ಯರಿಂದ ಸ್ಥಾಪಿತವಾದ ಪ್ರಾಚೀನ ಪರಂಪರೆ ಎಂದು ಹೇಳುತ್ತಾರೆ. ಆದರೆ, ಬಸವಣ್ಣನವರ ಚಳುವಳಿಯು ಈ ಎಲ್ಲ ಕಟ್ಟುಪಾಡುಗಳನ್ನು ಮೀರಿ ನಿಂತಿತು.

    ಬಸವಣ್ಣನವರು “ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗಳವನಿಕ್ಕುವೆ” ಎಂದು ಹೇಳುವ ಮೂಲಕ, ಅಸ್ತಿತ್ವದಲ್ಲಿದ್ದ ವೈದಿಕ ಮತ್ತು ಆಗಮಿಕ ಪರಂಪರೆಗಳನ್ನು ಪ್ರಶ್ನಿಸಿದರು. ಅವರ ಧರ್ಮವು ಅನುಭವ ಮತ್ತು ಸಮಾನತೆಯ ಮೇಲೆ ನಿಂತಿದೆಯೇ ಹೊರತು, ಪಾರಂಪರಿಕ ಗ್ರಂಥಗಳ ಮೇಲೆ ಅಲ್ಲ. ಸಿದ್ಧರಾಮರು “ಎಲ್ಲಿಯ ಶಿವಜ್ಞಾನ, ಎಲ್ಲಿಯ ಮಾಟಕೂಟ ಬಸವನಲ್ಲದೆ?” ಎಂದು ಕೇಳುವುದರ ಮೂಲಕ, ಬಸವಣ್ಣನವರ ಚಿಂತನೆಗಳು ಅಂದಿನ ಯಾವುದೇ ಜ್ಞಾನ ಪರಂಪರೆಗಿಂತ ಭಿನ್ನ ಮತ್ತು ಶ್ರೇಷ್ಠ ಎಂದು ಸಾರಿದ್ದಾರೆ.

    ……… ಮುಂದುವರಿಯುವದು : ಬಸವಣ್ಣನವರ ಸ್ಥಾನಮಾನ: ಸ್ಥಾಪಕನೇ ಅಥವಾ ಸುಧಾರಕನೇ?

    ಸಕಲಜೀವಾತ್ಮರಿಗೆ ಲೇಸಾಗಲೆಂದು,ಅನ್ನದಾತನಿಗೆ/ಕಾಯಕ ಜೀವಿಗಳಿಗೆ ಜಯವಾಗಲೆಂದು ಪ್ರಾಥಿ೯ಸುತ್ತ, ಬಸವಾದಿ ಶರಣರಿಗೆ ಶರಣಾರ್ಥಿ ಹೇಳುವೆ.

    ವಿನಯ ಶಿರಹಟ್ಟಿಮಠ

    ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯಾ

    ‪‪‪‪+91-9742267547‬

    22-08-2025

    • ಈ ಇಬ್ಬಂದಿ ನಿರ್ಣಯ ಸಮಾಜಕ್ಕಂತೂ ಹಾನಿಯೇ. ಸಮಾಜಕ್ಕೆ ಭಕ್ತರಿಗೆ ಮತ್ತು ತಮಗೂ ನಿಜವಾಗಿಯೂ ಒಳಿತು ಮಾಡುವುದಿದ್ದರೆ ಲಿಂಗಾಯತ ಎಂದು ಬರೆಸಲು ವೀರಶೈವ ಮಹಾಸಭಾದವರು ಪಂಚಪೀಠದ ಪೂಜ್ಯರು ಅದರಲ್ಲೂ ರಂಭಾಪುರಿ ಪೂಜ್ಯರು ವಾಹನದ ಮೇಲೆ ಅಡ್ಡಪಲ್ಲಕ್ಕಿಗೆ ಒಪ್ಪಿಕೊಂಡಂತೆ ಲಿಂಗಾಯತ ಎಂದು ಬರಸಲು ಹೇಳಬೇಕು .

  • Again don’t create confusion in the minds of people of lingayath community, it’s not a political drama to be played every now and then. People are fed of with your agendas and dramas. Followers of 12 th century Social Reformer SRI BASAVESHWARA are requested to enroll themselves as LINGAYATHS in the caste column. Nothing more is acceptable
    With Pride,
    Followers of Sharanas

  • It is victory of Lingayat Movement. Those who are arguing that people can report either Lingayat or Virashaiva sure that people prefer to write Lingayat. They are afraid of people to recommend only Virashaiva or Virashsiva Lingayat. We, Lingayats have won the battle.

  • “ವೀರಶೈವ – ಲಿಂಗಾಯತ” ಅನ್ನುವ ಶಬ್ದ ಒಂದು ಮಿಶ್ರತಳಿ ಇದ್ದಹಾಗೆ ಮತ್ತು ಅಂತಹ ಯಾವುದೇ ಧರ್ಮ ಇಲ್ಲ. ಬಸವತತ್ವ ಅನುಯಾಯಿಗಳು “ಲಿಂಗಾಯತರು” ಮತ್ತು ಪಂಚಾಚಾರ್ಯರ ಅನುಯಾಯಿಗಳು “ವೀರಶೈವರು”. ಇದರಲ್ಲಿ ಗೊಂದಲವೆಲ್ಲಿದೆ. ಮಿಶ್ರನಾಮವಾದ “ವೀರಶೈವ – ಲಿಂಗಾಯತ” ಗೊಂದಲ ಬಿಟ್ಟು. “ವೀರಶೈವ” ಅಥವಾ “ಲಿಂಗಾಯತ” ಎಂದು ಬರೆಸೋಣ. ಜೊತೆಗೆ ನಮ್ಮ ನಮ್ಮ ಉಪಜಾತಿಗಳನ್ನು ಉಪಪಂಗಡಗಳಡಿ ಬರೆಸೋಣ.

Leave a Reply

Your email address will not be published. Required fields are marked *