ಕಲಬುರಗಿಯಲ್ಲಿ ‘ಮನೆಯಂಗಳದಲ್ಲಿ ವಚನ ವೈಭವ’ ಕಾರ್ಯಕ್ರಮಕ್ಕೆ ತೆರೆ

ಶರಣು ಶಿಣ್ಣೂರ್
ಶರಣು ಶಿಣ್ಣೂರ್

ಕಲಬುರಗಿ

ಶ್ರಾವಣ ಮಾಸದ ಅಂಗವಾಗಿ ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ತಿಂಗಳಾದ್ಯಂತ ನಡೆದ “ಮನೆಯಂಗಳದಲ್ಲಿ ವಚನ ವೈಭವ” ವಿಶೇಷ ಕಾರ್ಯಕ್ರಮದ ಸಮಾರೋಪ ಸಮಾರಂಭವು ಭಾನುವಾರ ಕಲಬುರಗಿಯ ಆನಂದನಗರದಲ್ಲಿನ ಬಸವ ಮಂಟಪದಲ್ಲಿ ಭವ್ಯವಾಗಿ ಜರುಗಿತು. ಸಮಾರಂಭಕ್ಕೆ ಶರಣ ಶ್ರೀ ಪ್ರಭುಲಿಂಗ ಮಹಾಗಂವಕರ್ ರವರು ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕಲಬುರಗಿ ದಕ್ಷಿಣದ ಶಾಸಕರಾದ ಶರಣ ಅಲ್ಲಮಪ್ರಭು ಪಾಟೀಲ ಮತ್ತು ಅಫಜಲಪುರದ ಶಾಸಕರಾದ ಶರಣ ಎಂ. ವೈ. ಪಾಟೀಲ ರವರು ಭಾಗವಹಿಸಿದರು. ಸನ್ಮಾನಿತರಾಗಿ ಕಲಬುರಗಿ ಮಹಾಪೌರ ಶರಣೆ ವರ್ಷಾ ರಾಜು ಮಾನೆ ಮತ್ತು ಉಪಮಹಾಪೌರ ಶರಣೆ ತೃಪ್ತಿ ಶ್ರೀನಿವಾಸ ಲಾಕೆ ಹಾಜರಿದ್ದರು.

ಜಾಗತಿಕ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಶರಣ ಆರ್. ಜಿ. ಶೆಟಕಾರ್ ರವರು ಪ್ರಾಸ್ತಾವಿಕ ನುಡಿಗಳನ್ನು ನೀಡಿದರು. ಅನುಭಾವಿಗಳಾದ ಶರಣ ಶ್ರೀ ಸೀತಾರಾಮ ಚವ್ಹಾಣ ರವರು ಪ್ರತಿದಿನ ನಡೆದ ಕಾರ್ಯಕ್ರಮದ ವೈಶಿಷ್ಟ್ಯವನ್ನು ವಿವರಿಸಿ ಶರಣ ತತ್ತ್ವಗಳನ್ನು ವಚನಗಳ ಮೂಲಕ ಬೆಳಗಿಸಿದರು.

ಅಲ್ಲಮಪ್ರಭು ಪಾಟೀಲ ರವರು ಮಾತನಾಡಿ ಶರಣರ ಕೊಡುಗೆಯನ್ನು ನೆನಪಿಸಿಕೊಂಡು, ಸೆಪ್ಟೆಂಬರ್ 2ರಂದು ನಡೆಯಲಿರುವ “ಬಸವ ಸಂಸ್ಕೃತಿ ಅಭಿಯಾನ” ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಿದರು. ಎಂ. ವೈ. ಪಾಟೀಲ ರವರು ಶರಣ ಸಾಹಿತ್ಯ, ಸ್ವಾತಂತ್ರ್ಯ ಹಾಗೂ ಸಮಗ್ರ ಕ್ರಾಂತಿಯ ಕುರಿತು ವಿಶದವಾಗಿ ಪ್ರಸ್ತುತಪಡಿಸಿ, ಇಂದಿನ ಸಂಸತ್ತನ್ನು ಅಂದಿನ ಅನುಭವ ಮಂಟಪಕ್ಕೆ ಹೋಲಿಸಿದರು. ಮುಂಬರುವ ಜನಗಣತಿಯಲ್ಲಿ ಎಲ್ಲರೂ ಲಿಂಗಾಯತ ಎಂದು ಬರೆಸಿಕೊಂಡು ಸಮುದಾಯದ ಒಗ್ಗಟ್ಟನ್ನು ತೋರಿಸುವಂತೆ ಕರೆ ನೀಡಿದರು.

ಕಾರ್ಯಕ್ರಮವನ್ನು ಜಾಗತಿಕ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಶರಣ ಅಶೋಕ ಗೂಳಿ ರವರು ನಿರ್ವಹಿಸಿದರು. ಮಹಿಳಾ ಘಟಕದ ಸದಸ್ಯರು ವಚನ ಪ್ರಾರ್ಥನೆ ಸಲ್ಲಿಸಿದರು.

ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ದಾಸೋಹಿಗಳು ಹಾಗೂ ಅನುಭವಿಗಳನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಬಸವರಾಜ್ ಕೋಣಿನ್, ಹಣಮಂತ್ರಯ, ಮುರುಘೇಂದ್ರ ಚಿಂಚೋಳಿಮಠ, ಶಿವಶರಣಪ್ಪ ದೇಗಾಂವ್, ನಳಿನಿ ಮಹಾಗಂವಕರ್, ವಿದ್ಯಾಶ್ರೀ ಶಿಣ್ಣೂರ, ನೀಲಮ್ಮ ತಾಯಿ, ಸಾವಿತ್ರಿ ಪಾಲ್ಕಿ, ಸೇರಿದಂತೆ ಮತ್ತು ಅನೇಕರು ಭಾಗವಹಿಸಿ ಸಮಾರಂಭಕ್ಕೆ ಶೋಭೆ ತಂದು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/Bo3i1f468pxBcYJIXNRpTK

Share This Article
Leave a comment

Leave a Reply

Your email address will not be published. Required fields are marked *

ಕಲಬುರ್ಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ ಕಾಯಕ ಮಾಡುತ್ತಾರೆ.