ಶರಣರು ಪುರಾಣಗಳಲ್ಲಿ ಬರುವ ಕಾಕುಪೀಕು ದೇವರನ್ನು ನಂಬಿರಲಿಲ್ಲ

ದಾವಣಗೆರೆ

ಈಗ ಎಲ್ಲೆಡೆಯೂ ಗಣಪತಿ ಹಬ್ಬ ಬಹಳ ವೈಭವದಿಂದ ನಡಿತಾ ಇದೆ. ಅದರಲ್ಲೂ ಶರಣರ ಅನುಯಾಯಿಗಳಾದವರ ನೇತೃತ್ವದಲ್ಲಿ ನಡೆಯುತ್ತಿದೆ.

ಶರಣರ ಅನುಯಾಯಿಗಳಿಗೆ ಶರಣರ ವಿಚಾರಗಳೇ ಗೊತ್ತಿಲ್ಲ ಶರಣರು ಇಷ್ಟ ಲಿಂಗದ ಮೂಲಕ ಶಿವಯೋಗವನ್ನು ಮಾತ್ರ ನಂಬಿದವರು.

ಪುರಾಣಗಳಲ್ಲಿ ಬರುವ ಕಾಕುಪೀಕು ದೇವರನ್ನು ನಂಬಿರಲಿಲ್ಲ ಹಾಗೂ ಅವುಗಳಿಗೆ ಪೂಜೆಯನ್ನು ಮಾಡಿದವರು ಅಲ್ಲ ಎಂಬುದನ್ನು ಅವರ ವಚನಗಳಲ್ಲಿ ಸ್ಪಷ್ಟವಾಗಿ ಕಾಣಬಹುದು.

ಮೊದಲನೆಯದಾಗಿ ಅಂಬಿಗರ ಚೌಡಯ್ಯನವರು ಈ ವಚನದಲ್ಲಿ ಬಹಳ ಸ್ಪಷ್ಟವಾಗಿ ಹೇಳಿದ್ದಾರೆ

ಬ್ರಹ್ಮನ ನಾವು ಬಲ್ಲೆವು,
ವಿಷ್ಣುವ ನಾವು ಬಲ್ಲೆವು,
ತೆತ್ತೀಸಕೋಟಿ ದೇವತೆಗಳ ನಾವು ಬಲ್ಲೆವು.
ಅದೇನು ಕಾರಣವೆಂದಡೆ:
ಇವರು ಹಲವು ಕಾಲ ನಮ್ಮ ನೆರೆಮನೆಯಲ್ಲಿದ್ದರಾಗಿ,
ಇವರು ದೇವರೆಂಬುದ ನಾ ಬಲ್ಲೆನಾಗಿ,
ಒಲ್ಲೆನೆಂದಾತನಂಬಿಗ ಚೌಡಯ್ಯ.

ಬ್ರಹ್ಮ ವಿಷ್ಣು ರುದ್ರ ಮುವತ್ತು ಮೂರು ಕೋಟಿ ದೇವರು ನಮಗೆ ಗೊತ್ತು ಹೇಗೆಂದರೆ ಅವರು ನಮ್ಮ ಹಲವು ಕಾಲ ನಮ್ಮ ನೆರೆಮನೆಯಲ್ಲಿ ಇದ್ದವರು ಅವರು ಏನು ಅಂತ ನಮಗೆ ಗೊತ್ತು ಹಾಗಾಗಿ ಅವರನ್ನು ನಾವು ದೇವರು ಎಂದು ಒಪ್ಪುವುದಿಲ್ಲ ಎಂದೇ ಹೇಳಿದ್ದಾರೆ.

ಹಾಗೆಯೇ ಸಿದ್ಧರಾಮೇಶ್ವರರು ತಮ್ಮ ಒಂದು ವಚನದಲ್ಲಿ ಬಹಳ ಸ್ಪಷ್ಟವಾಗಿ ಕಾಲ್ಪನಿಕ ದೇವರುಗಳನ್ನು ಪೂಜೆಗೆ ಅರ್ಹರಲ್ಲ ಎಂದು ಹೇಳಿದ್ದಾರೆ:

ಇಂದ್ರ ನೋಡುವಡೆ ಭಗದೇಹಿ;
ಚಂದ್ರ ನೋಡುವಡೆ ಗುರುಪತ್ನೀಗಮನಿ;
ಉಪೇಂದ್ರ ನೋಡುವಡೆ
ಬಾರದ ಭವದಲ್ಲಿ ಬಂದ ಅವತಾರಿ;
ಬ್ರಹ್ಮ ನೋಡುವಡೆ ಸ್ವಪುತ್ರೀಪತಿ;
ಮುನಿಗಣ ನೋಡುವಡೆ ಕುಲಹೀನರು;
ಗಣಪತಿ ನೋಡುವಡೆ ಗಜಾನನ;
ವೀರಭದ್ರ ನೋಡುವಡೆ ಮಹತ್ಪ್ರಳಯಾಗ್ನಿ ಸಮಕ್ರೋಧಿ;
ಷಣ್ಮುಖ ನೋಡುವಡೆ ತಾರಕಧ್ವಂಸಿ.
ಇವರೆಲ್ಲರು ಎಮ್ಮ ಪೂಜೆಗೆ ಬಾರರು.
ನೀ ನೋಡುವಡೆ ಸ್ಮಶಾನವಾಸಿ,
ರುಂಡಮಾಲಾದ್ಯಲಂಕಾರ;
ನಿನ್ನ ವಾಹನ ಚಿದಂಗ ಆದಿವೃಷಭ.
ನಿರೂಪಿಸಾ, ಕಪಿಲಸಿದ್ಧಮಲ್ಲಿಕಾರ್ಜುನಾ.

ಹಾಗಾಗಿ ಇವರಾರೂ ನಮ್ಮ ಪೂಜೆಗೆ ಅರ್ಹತೆ ಪಡೆದಿಲ್ಲ ಎಂದು ಹೇಳಿದ್ದಾರೆ

ಚನ್ನಬಸವಣ್ಣನವರು ಗಣಪತಿಯೇ ನಿನಗೆ ನಮ್ಮ ಶರಣರು ಅಂಜುವುದಿಲ್ಲ ಎಂದು ಹೇಳಿದ್ದಾರೆ

ಗಣಪತಿ ಬಗ್ಗೆ ನಮ್ಮ ಅಲ್ಲಮಪ್ರಭುಗಳು ತಮ್ಮ ಒಂದು ವಚನದಲ್ಲಿ ಪುರಾಣಗಳು ಹೇಳುವ ಎಲ್ಲಾ ಗಣಗಳು ನಮ್ಮ ಇಷ್ಟ ಲಿಂಗದಲ್ಲಿ ಇವೆ ಎಂದು ಹೇಳಿದ್ದಾರೆ

ರುದ್ರನೆಂಬಾತನೊಬ್ಬ ಗಣೇಶ್ವರನು, ಭದ್ರನೆಂಬಾತನೊಬ್ಬ ಗಣೇಶ್ವರನು.
ಶಂಕರನೆಂಬಾತನೊಬ್ಬ ಗಣೇಶ್ವರನು, ಶಶಿಧರನೆಂಬಾತನೊಬ್ಬ ಗಣೇಶ್ವರನು.
ಪೃಥ್ವಿಯೆ ಪೀಠ ಆಕಾಶವೆ ಲಿಂಗಅಂತಹ ಆತನೊಬ್ಬ ಗಣೇಶ್ವರನು. ಬಲ್ಲಾಳನ ವಧುವ ಬೇಡಿದಾತನೊಬ್ಬ ಗಣೇಶ್ವರನು. ಸಿರಿಯಾಳನ ಮಗನ ಭಿಕ್ಷವ ಬೇಡಿದಾತನೊಬ್ಬ ಗಣೇಶ್ವರನು. ಬ್ರಹ್ಮಕಪಾಲ ವಿಷ್ಣುಕಂಕಾಳವನಿಕ್ಕಿ ಆಡುವಲ್ಲಿ ನೀಲಕಂಠನೆಂಬಾತನೊಬ್ಬ ಗಣೇಶ್ವರನು.
ಇವರೆಲ್ಲರು ನಮ್ಮ ಗುಹೇಶ್ವರಲಿಂಗದೊಳಡಗಿಪ್ಪರು

ಬಸವಣ್ಣನವರು ಸಗಣಿಯ ಗಣಪತಿ ಮಾಡಿ ಸಂಪಿಗೆಯಲ್ಲಿ ಪೂಜೆ ಮಾಡಿದರೂ ಸಹ ಅದು ಗಂಜಾಳದ ವಾಸನೆ ಬರುತ್ತದೆ ವಿನಃ ಮತ್ತೇನೂ ಅಲ್ಲ ಎಂದು ಗಣಪತಿ ವಿಡಂಬನೆ ಮಾಡುತ್ತಾರೆ.

ಹಾಗಾಗಿ ಶರಣರ ಅನುಯಾಯಿಗಳಾದವರು ಯಾವುದೇ ಕಾರಣಕ್ಕೂ ಗಣಪತಿ ಸೇರಿದಂತೆ ಯಾವುದೇ ಕಾಲ್ಪನಿಕ ದೇವರುಗಳನ್ನು ನಂಬುವುದು ಪೂಜೆ ಮಾಡುವುದು ಶರಣರಿಗೆ ಮಾಡುವ ದ್ರೋಹ ಆಗುತ್ತದೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/KVCwk6IT1VBLPSuFiyKvN1

Share This Article
15 Comments
  • Is it necessary to destroy others faith. Can you also do the same with other’s religious faith?

  • ನಮ್ಮ ಭಾರತ ದೇಶದಲ್ಲಿ ಇದಿದ್ದು ಸನಾತನ ಸಂಸ್ಕೃತಿ, ನಿಮ್ಮ ಕಾಯಕ ನೀವು ಮಾಡಿ, ಅವ್ರು ಅವರ ಕಾಯಕ ಮಾಡುತಾರೆ, ನಿಮಗೆ ಯಾಕೆ ಅಷ್ಟ್ಟು ಹೊಟ್ಟೆ ಊರಿ, ನಿಮ್ಮ ಕಾಯಕಕ್ಕೆ ಯಾರು ಅಡ್ಡಿ ಮಾಡಿದ್ರೆ????? ಈ ಬಸವ ವಾದಿಗಳಿಗೆ ತಮ್ಮ ತಟ್ಟೆ ಬಿಟ್ಟು ಬೇರೆಯವರ ತಟ್ಟೆ ಅಲ್ಲಿ ಏನಿದೆ ಅನ್ನೋಧು ಬಹಳ ಇಷ್ಟ ಅನಿಸುತದೆ ಅಥವಾ ಈವರ ಕಾಯಕನೇ ಇರಬೇಕು!!!!!! ವಿನಾಶ ಕಾಲೇ ವಿಪರೀತ ಭುದ್ದಿ!!!!!

    • REPLY TO NITISH R
      BMV SHARANARU HELIRUVUDU ISHTA LINGA DHARISI ANYA DEVATEGALANNU POOJISUVA JANARIGE
      ISHTA LINGA DHARISADE ERUVA JANARIGALLA OKNA.
      VENKATESH LINGAYATH.

      • Sir ನೀವು ಮಾಡುತಿರುವುಧು ಏನು, ಅವರವರ ಆಚರಣೆ ಅವರಿಗೆ ಶ್ರೇಷ್ಠ, ನೀವು ಯಾರು ಮತೊಭರ ಆಚರಣೆ ಭಗ್ಗೆ ಮಾತಾಡೋಕೆ, ನಿಮಗೆ ಬೇಡವಾ ಬಿಡಿ, ಇನೊಬ್ಬರ ಆಚರಣೆಯ ಭಗ್ಗೆ ಹೀನವಾಗಿ ಮಾತಾಡುವು ನಿಮ್ಮ ಕೆಟ್ಟ ಮನಸ್ಥಿತಿಯೇ ಹೇಳುತದೇ ನಿಮ್ಮ ಶರಣ ಸಂಸ್ಕೃತಿ ಹೇಗೆ ಅಂತ,

  • Nitis r
    ಲಿಂಗಾಯತರ ನಿಜವಾದ ದೇವರುಗಳಬಗ್ಗೆ ಲಿಂಗಾಯತರಿಗೆ ಜಾಗ್ರುತಿ ಮುಡಿಸುವ ಕಾರ್ಯ ಬಸವಮಿಡಿಯಾ ಮಾಡುತ್ತಿದೆ,
    ನಿವು ಸನಾತನಿಗಳಾಗಿದ್ದರೆ, ನಿಮ್ಮ ಕೆಲಸ ನಿವು ಮುಂದುವರಿಸಿ.
    ವಿಶ್ವೇಶ್ವರಯ್ಯ ರವರ ಈ ಲೇಖನ ಲಿಂಗಾಯತರಿಗಾಗಿ ಮಾತ್ರ, ಸನಾತನಿಗಳಿಗಲ್ಲಾ.

    • ಅವರ ಮಾತು ಹಿಡಿತದಳಿರಬೇಕು ಕಾಕು ಪಿಕು ಎಲ್ಲಬೇಡ, ನಿಮ್ಮ ತಿರುಚಿದ ವಚನಗನ್ನು ನೀವು ಆಚರಿಸಿಕೊಳ್ಳಿ ಇತರ ದೇವರ ಅವಹೇಳನ ಬೇಡ, ನಮ್ಮ ಸಂಸ್ಕೃತಿ ನಮ್ಮ ದೇವರುಗಳು ನಮಗೆ ಶ್ರೇಷ್ಠ, ನೀವು ನಿಮಗಿಷ್ಟ ಬಂದಂತೆ ತಿರುಚಿಕೊಂಡ ಪೊಳ್ಳು ವಚನಗಳು ನಮಗೆ ಬೇಡ

  • “ಸಗಣಿಯ ಬೆನಕಂಗೆ ಸಂಪಗೆಯರಳಲ್ಲಿ ಪೂಜಿಸಿದಡೆ ರಂಜನೆಯಹುದಲ್ಲದೆ ಅದರ ಗಂಜಳ ಬಿಡದಣ್ಣಾ, ಮಣ್ಣ ಪುತ್ಥಳಿಯ ಮಾಣದೆ ಜಲದಲ್ಲಿ ತೊಳೆದಡೆ ನಿಚ್ಚ ಕೆಸರಹುದಲ್ಲದೆ ಅದರಚ್ಚಿಗ ಬಿಡದಣ್ಣಾ. ಲೋಕದ ಮಾನವಂಗೆ ಶಿವದೀಕ್ಷೆಯ ಕೊಟ್ಟಡೆಕೆಟ್ಟವನೇಕೆ ಸದ್ಭಕ್ತನಹನು ಕೂಡಲಸಂಗಮದೇವಾ.”
    – ಬಸವಣ್ಣ

    • “ಅರಗಿನ ಪುತ್ಥಳಿಯನುರಿದು ನಾಲಗೆ ಮಾತಾನಾಡುವ ಸರಸ ಬೇಡ ಬೆಣ್ಣೆಯ ಬೆನಕನಂತೆಹೊಯಿದು ಕೆಂಡದುಂಡೆಲಿಗೆಯ ಮಾಡಿ ಚಲ್ಲವಾಡಿದಡೆ ಹಲ್ಲು ಹೋಹುದು ಕೂಡಲಸಂಗನ ಶರಣರೊಡನೆ ಸರಸವಾಡಿದಡೆ ಅದು ವಿರಸ ಕಾಣಿರಯ್ಯಾ.”
      – ಬಸವಣ್ಣ

  • 👁

    “ಬೇಡವೊ ಇಲಿಚಯ್ಯಾ !
    ಮೊನ್ನೆ ಬಂದು ನಮ್ಮ ಶಿವದಾರವ ಕಡಿದೆ,
    ಇಂದು ಬಂದು ನಮ್ಮ ವಸ್ತ್ರವ ಕಡಿದೆ.
    ಬೇಡವೋ ಇಲಿಚಯ್ಯಾ !
    ನಿನಗಂಜರು ನಿನ್ನ ಗಣಪತಿಗಂಜರು;
    ಕೂಡಲಚೆನ್ನಸಂಗನ ಶರಣರು ಕಂಡಡೆ,
    ನಿನ್ನ ಹಲ್ಲ ಕಳೆವರು, ದಂತವ ಮುರಿವರು.”
    – ಚೆನ್ನಬಸವಣ್ಣ
    ಸಮಗ್ರ ವಚನ ಸಂಪುಟ: 3
    ವಚನದ ಸಂಖ್ಯೆ: 1395

  • “ಬಡಹಾರುವನೇಸು ಭಕ್ತನಾದಡೆಯೂ ನೇಣಿನ ಹಂಗ ಬಿಡ !
    ಮಾಲೆಗಾರನೇಸು ಭಕ್ತನಾದಡೆಯೂ ಬಾವಿಯ ಬೊಮ್ಮನ ಹಂಗ ಬಿಡ !
    ಬಣಜಿಗನೇಸು ಭಕ್ತನಾದಡೆಯೂ ಒಟ್ಟಿಲ ಬೆನಕನ ಹಂಗ ಬಿಡ !
    ಕಂಚುಗಾರನೇಸು ಭಕ್ತನಾದಡೆಯೂ ಕಾಳಿಕಾದೇವಿಯ ಹಂಗ ಬಿಡ !
    ನಾನಾ ಹಂಗಿನವನಲ್ಲ, ನಿಮ್ಮ ಶರಣರ ಹಂಗಿನವನಯ್ಯಾ ಕೂಡಲಸಂಗಮದೇವಾ.”
    – ಬಸವಣ್ಣ

  • “ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ
    ಸ್ಥಾವರದೈವಕ್ಕೆರಗಲಾಗದು.
    ತನ್ನ ಪುರುಷನ ಬಿಟ್ಟು ಅನ್ಯಪುರುಷನ ಸಂಗ ಸಲ್ಲುವುದೇ?
    ಕರಸ್ಥಲದ ದೇವನಿದ್ದಂತೆ
    ಧರೆಯ ಮೇಲಣ ಪ್ರತಿಷ್ಠೆಗೆರಗಿದಡೆ
    ನರಕದಲ್ಲಿಕ್ಕುವ ಕೂಡಲಸಂಗಮದೇವ.”
    – ಬಸವಣ್ಣ

  • “ವೇದದವರನೊಲ್ಲದೆ ನಮ್ಮ ಮಾದಾರ ಚನ್ನಯ್ಯಂಗೊಲಿದ.
    ಶಾಸ್ತ್ರದವರನೊಲ್ಲದೆ ಶಿವರಾತ್ರಿಯ ಸಂಕಣ್ಣಂಗೊಲಿದ.
    ಆಗಮದವರನೊಲ್ಲದೆ ತೆಲುಗುಜೊಮ್ಮಯ್ಯಂಗೊಲಿದ.
    ಪುರಾಣಕರ್ಮಿಗಳೆಂಬ ವಿಶಿಷ್ಟಬ್ರಹ್ಮರನೊಲ್ಲದೆ ಉದ್ಭಟಯ್ಯಂಗೊಲಿದ.
    ಅಣ್ಣ ಕೇಳಾ ಸೋಜಿಗವ! ದಾಸದುಗ್ಗಳೆಯರಿಗೊಲಿದ
    ಮುಕ್ಕಣ್ಣ ಸೊಡ್ಡಳ, ಹಾರುವಣ್ಣಗಳಿಗೆ ಹೇಸಿ ಕದವನಿಕ್ಕಿಕೊಂಡನು. ”
    – ಸೊಡ್ಡಳ ಬಾಚರಸ

  • 🐚📯🤥
    “ಕೊಂಬನೂದುವ ಹೊಲೆಯಂಗೆ ಕುಂಕುಮ ಹಣೆಯಲ್ಲಲ್ಲದೆ ಶ್ರೀವಿಭೂತಿ ಒಪ್ಪುವುದೆ? ಲಿಂಗಲಾಂಛನವ ತೊಟ್ಟು, ಗುರೂಪದೇಶವ ಹೇಳಿ, ನೊಸಲಲ್ಲಿ ವಿಭೂತಿಪಟ್ಟವ ಕಟ್ಟಿದ ಬಳಿಕ, ಮರಳಿ ಗುರುನಿಂದಕನಾಗಿ, ಹಣೆಯಲ್ಲಿ ಕುಂಕುಮಾದಿ ತಿಲಕವ ಕೊಂಡಡವನಾ ಕೊಂಬಿನ ಹೊಲೆಯಂಗಿಂದ ಕನಿಷ್ಠವೆಂದ, ಕಲಿದೇವಯ್ಯ.”
    – ಮಡಿವಾಳ ಮಾಚಿದೇವ

    🐘🐎🏇😤🌹🐓🦣👁🔍🤔
    “ಆನೆಯನೇರಿಕೊಂಡು ಹೋದಿರೇ ನೀವು,
    ಕುದುರೆಯನೇರಿಕೊಂಡು ಹೋದಿರೇ ನೀವು,
    ಕುಂಕುಮ ಕಸ್ತೂರಿಯ ಹೂಸಿಕೊಂಡು ಹೋದಿರೇ ಅಣ್ಣಾ !
    ಸತ್ಯದ ನಿಲವನರಿಯದೆ ಹೋದಿರಲ್ಲಾ,
    ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ !
    ಅಹಂಕಾರವೆಂಬ ಸದಮದಗಜವೇರಿ
    ವಿಧಿಗೆ ಗುರಿಯಾಗಿ ನೀವು ಹೋದಿರಲ್ಲಾ !
    ನಮ್ಮ ಕೂಡಲಸಂಗಮದೇವನರಿಯದೆ
    ನರಕಕ್ಕೆ ಭಾಜನವಾದಿರಲ್ಲಾ !”
    – ಬಸವಣ್ಣ

  • ಶರಣರ ಶಿವ:

    “ನಾದಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲ
    ವೇದಪ್ರಿಯ ಶಿವನೆಂಬರು ವೇದಪ್ರಿಯ ಶಿವನಲ್ಲ
    ನಾದವ ಮಾಡಿದ ರಾವಣಂಗೆ ಅರೆಯಾಯುಷವಾಯ್ತು
    ವೇದವನೋದಿದ ಬ್ರಹ್ಮನ ಶಿರಹೋಯ್ತು
    ನಾದಪ್ರಿಯನೂ ಅಲ್ಲ ವೇದಪ್ರಿಯನೂ ಅಲ್ಲ
    ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ”
    – ಬಸವಣ್ಣ

    “ರುದ್ರನೆಂಬಾತನೊಬ್ಬ ಗಣೇಶ್ವರನು, ಭದ್ರನೆಂಬಾತನೊಬ್ಬ ಗಣೇಶ್ವರನು. ಶಂಕರನೆಂಬಾತನೊಬ್ಬ ಗಣೇಶ್ವರನು, ಶಶಿಧರನೆಂಬಾತನೊಬ್ಬ ಗಣೇಶ್ವರನು. ಪೃಥ್ವಿಯೆ ಪೀಠ ಆಕಾಶವೆ ಲಿಂಗ_ಅಂತಹ ಆತನೊಬ್ಬ ಗಣೇಶ್ವರನು. ಬಲ್ಲಾಳನ ವಧುವ ಬೇಡಿದಾತನೊಬ್ಬ ಗಣೇಶ್ವರನು. ಸಿರಿಯಾಳನ ಮಗನ ಭಿಕ್ಷವ ಬೇಡಿದಾತನೊಬ್ಬ ಗಣೇಶ್ವರನು. ಬ್ರಹ್ಮಕಪಾಲ ವಿಷ್ಣುಕಂಕಾಳವನಿಕ್ಕಿ ಆಡುವಲ್ಲಿ ನೀಲಕಂಠನೆಂಬಾತನೊಬ್ಬ ಗಣೇಶ್ವರನು. ಇವರೆಲ್ಲರು ನಮ್ಮ ಗುಹೇಶ್ವರಲಿಂಗದೊಳಡಗಿಪ್ಪರು.”

    “ಪಾರ್ವತಿಯು ಪರಶಿವನ ಸತಿಯೆಂಬ ಶಿವದ್ರೋಹಿಗಳು ನೀವು ಕೇಳಿರೆ. ಬೆನಕನು ಪರಶಿವನ ಮಗನೆಂಬ ಪಾತಕ ದುಃಖಿಗಳು ನೀವು ಕೇಳಿರೆ. ಸ್ವಾಮಿ ಕಾರ್ತಿಕೇಯನು ನಮ್ಮ ಹರಲಿಂಗನ ಮಗನೆಂಬ ಲಿಂಗದ್ರೋಹಿಗಳು ನೀವು ಕೇಳಿರೆ. ಭೈರವನು ಭಯಂಕರಹರನ ಮಗನೆಂಬ ಭವಹರಗುರುದ್ರೋಹಿಗಳು ನೀವು ಕೇಳಿರೆ. ಅಜಾತನ ಚರಿತ್ರ ಪವಿತ್ರ. ನಮ್ಮ ಗುಹೇಶ್ವರಲಿಂಗಕ್ಕೆ ಪ್ರಸಾದವ ಸಲಿಸಿದಾತ ಪೂರ್ವಾಚಾರಿ ಸಂಗನಬಸವಣ್ಣನ ಮಗನಾಗಿ, ಆದಿಯ ಲಿಂಗ ಅನಾದಿಯ ಶರಣ ಗುರುವಿನ ಗುರು ಪರಮಗುರುವರನ ತೋರಿದನಯ್ಯಾ ಸಿದ್ಧರಾಮಯ್ಯ ಚೆನ್ನಬಸವಣ್ಣನು”.

    “ಶಿವ, ಗುರುವೆಂದು ಬಲ್ಲಾತನೆ ಗುರು. ಶಿವ, ಲಿಂಗವೆಂದು ಬಲ್ಲಾತನೆ ಗುರು. ಶಿವ, ಜಂಗಮವೆಂದು ಬಲ್ಲಾತನೆ ಗುರು. ಶಿವ, ಪ್ರಸಾದವೆಂದು ಬಲ್ಲಾತನೆ ಗುರು. ಶಿವ, ಆಚಾರವೆಂದು ಬಲ್ಲಾತನೆ ಗುರು. ಇಂತೀ ಪಂಚವಿಧವೆ ಪಂಚಬ್ರಹ್ಮವೆಂದರಿದ ಮಹಾಮಹಿಮ ಸಂಗನಬಸವಣ್ಣನು ಎನಗೆಯೂ ಗುರು, ನಿನಗೆಯೂ ಗುರು, ಜಗವೆಲ್ಲಕ್ಕೆಯೂ ಗುರು ಕಾಣಾ ಗುಹೇಶ್ವರಾ.”
    -ಅಲ್ಲಮಪ್ರಭು

    ಬ್ರಾಹ್ಮ ಣನೆ ದೈವವೆಂದು ನಂಬಿದ ಕಾರಣ
    ಗೌತಮ ಮುನಿಗೆ ಗೋವಧೆಯಾಯಿತ್ತು.
    ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
    ಬಲಿಗೆ ಬಂಧನವಾಯಿತ್ತು.
    ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
    .ಕರ್ಣನ ಕವಚ ಹೋಯಿತ್ತು.
    ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
    ದಕ್ಷಂಗೆ ಕುರಿದಲೆಯಾಯಿತ್ತು.
    ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
    ಪರುಶುರಾಮ ಸಮುದ್ರಕ್ಕೆ ಗುರಿಯಾದನು.
    ಬ್ರಾಹ್ಮಣನೆ ದೈವವೆಂದು ನಂಬಿದ ಕಾರಣ
    ನಾಗರ್ಜುನನ ತಲೆ ಹೋಯಿತ್ತು.
    ದೇವಾ, ಭಕ್ರನೆಂದು ನಂಬಿದ ಕಾರಣ
    ನಮ್ಮ ಕೂಡಲಸಂಗನ ಶರಣರು ಕೈಲಾಸವಾಸಿಗಳಾದರು.
    – ಬಸವಣ್ಣ

    “ಗಿರಿಯ ಶಿಖರದ ಮೇಲೆ ಕುಳಿತುಕೊಂಡು, ಜಡೆಯನೇರಿಸಿಕೊಂಡು
    ಹುತ್ತೇರಿ ಹಾವು ಸುತ್ತಿರ್ದಡೇನಯ್ಯಾ?
    ಕೃತಯುಗ್ ತ್ರೇತಾಯುಗ ದ್ವಾಪರ ಕಲಿಯುಗದೊಡನೊಡನೆ
    ಸವೆದ ಪಾಷಾಣ!
    ನಮ್ಮ ಕೂಡಲಸಂಗನ ಶರಣರ ಪ್ರಸಾದ ಜೀವಿಗಳಲ್ಲದವರು
    ಏಸು ಕಾಲವಿರ್ದಡೆನು, ಅದರಂತು ಕಾಣಿರಣ್ಣಾ.”
    – ಬಸವಣ್ಣ
    “ಮಹಂತಿನ ಕೂಡಲದೇವರೆಂಬ ಪಾಷಂಡಿ, ವೇಷಧಾರಿ!
    ಇವರ, ಘಾತಕ ಮೂಳ ಮೂಳ ಹೊಲೆಯರನೇನೆಂಬೆನಯ್ಯಾ,
    ಮಹಂತಿನ ಪರಿವ್ರತವೆಂತೆಂದರಿಯರು,
    ಆ ಮಹಂತಿನ ಘನವನೆಂತೆಂದಡೆ:
    ಅಂತ:ಪರಂಜ್ಯೋತಿಸ್ವರೂಪನು,
    ನಿತ್ಯ ನಿರಂಜನನು,
    ನಿ:ಕಳಂಕನು, ನಿರ್ದೇಹನು, ನಿರಾಮಯನು, ನಿಶ್ಯೂನ್ಯನು,
    ಅನಂತಬ್ರಹ್ಮಾಂಡಗಳ ನೆನಹು ಮಾತ್ರದಲ್ಲಿ ನಿರ್ಮಿಸಿದ, ಕರ್ತೃ,
    ಪಾದದಲ್ಲಿ ಪಾತಾಳಲೋಕ, ನೆತ್ತಿಯಲ್ಲಿ ಸತ್ಯಲೋಕ,
    ಕುಕ್ಷಿಯಲ್ಲಿ ಹದಿನಾಲ್ಕು ಲೋಕವ ತಾಳಿಹ, ವಿಶ್ವಪರಿಪೂರ್ಣನು.
    ಇಂತಪ್ಪ ಪರಂಜ್ಯೋತಿಮಹನು
    ಇಂತಿವರೆಲ್ಲ ತನ್ನ ಸರ್ವಾಂಗದಲ್ಲಿ ಮಡುಗಿಸಿಕೊಂಡು,
    ನಿಬ್ಬೆರಗಿಯಾಗಿ, ಶಬ್ದ ಶೂನ್ಯನಾಗಿರಬಲ್ಲಡೆ
    ಮಹಂತಿನ ಕೂಡಲದೇವರೆಂಬೆನಯ್ಯಾ.
    ಇದನರಿಯದ ವೇಷಧಾರಿ ಲಾಂಛನಿ ಗರ್ವಿಗಳನೇನೆಂಬೆನಯ್ಯಾ?
    ಕೂಡಲಸಂಗಮದೇವರಲ್ಲಿ ಸಲ್ಲದ ನರಕಿಗಳು.”
    – ಬಸವಣ್ಣ

    “ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
    ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
    ಬ್ರಹ್ಮಾಂಡದಿಂದ ಅತ್ತತ್ತ ನಿಮ್ಮ ಶ್ರೀಮಕುಟ,
    ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,
    ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ.”
    – ಬಸವಣ್ಣ

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು