ಇಳಕಲ್ಲ
ನಿರಂತರ ೩೪ ಗಂಟೆ ೧೯ ನಿಮಿಷ ಶ್ರೀ ವಿಜಯಮಹಾಂತೇಶ್ವರ ಮಠದ ವಚನ ತಾಡೋಲೆ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಯುವ ಮೂಲಕ ಇಳಕಲ್ಲ ನಗರದಲ್ಲಿ ದಾಖಲೆಯ ಅಡ್ಡಪಲ್ಲಕ್ಕಿ ಮಹೋತ್ಸವ ನೆರವೇರಿತು.
ವಿಜಯಮಹಾಂತ ಶಿವಯೋಗಿಗಳ ಶರಣ ಸಂಸ್ಕೃತಿ ಮಹೋತ್ಸವ ಹಾಗೂ ಜಾತ್ರೆಯ ಹಿನ್ನೆಲೆಯಲ್ಲಿ ನಡೆಯುವ ಅಡ್ಡಪಲ್ಲಕ್ಕಿ ಉತ್ಸವ ಪ್ರತಿವರ್ಷ ನಡೆಯುತ್ತದೆ.
ನಗರದಲ್ಲಿ ಮನೆ ಮನೆಗಳ ಮುಂದೆ ಭಕ್ತರು ಪಲ್ಲಕ್ಕಿ ಪೂಜೆ, ಕಾಯಿ, ಕರ್ಪೂರ ಇತ್ಯಾದಿ ಅರ್ಪಿಸಿ ಭಕ್ತಿಯಿಂದ ನಮಿಸುತ್ತಾರೆ.






ಕೇವಲ 1.5 ಕಿ.ಮೀ. ಸಾಗಿ ಮರಳಿ ವಿಜಯಮಹಾಂತೇಶ ಮಠ ತಲುಪಲು ೩೪ ಗಂಟೆ ೧೯ ನಿಮಿಷ ಸಮಯ ತೆಗೆದುಕೊಂಡು ಹೊಸ ದಾಖಲೆ ನಿರ್ಮಿಸಿದೆ.
ಅಡ್ಡಪಲ್ಲಕ್ಕಿ ಉತ್ಸವದಲ್ಲಿ ವಚನ ಗಾಯನ, ಪಠಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾ ತಂಡಗಳ ಕಲಾಪ್ರದರ್ಶನಗಳ ವೈಭವ ಎಲ್ಲರ ಗಮನ ಸೆಳೆದವು. ಜನ ಕಣ್ತುಂಬಿಕೊಂಡು ಖುಷಿಪಟ್ಟರು. ನಾಡಿನ ವಿವಿಧ ಭಾಗಗಳಿಂದ ಸಹಸ್ರಾರು ಸಂಖ್ಯೆಯ ಶರಣರು, ಭಕ್ತರು, ಸ್ವಾಮಿಗಳು ಪಾಲ್ಗೊಂಡು ಸಂಭ್ರಮಪಟ್ಟರು.