ದಸರಾ ದರ್ಬಾರಿಗೆ ಕ್ಲೀನ್ ಚಿಟ್ ಕೊಡಲು ಕಾರಣವೇನು?
ಬೆಂಗಳೂರು

ಬಸವಕಲ್ಯಾಣದಲ್ಲಿ ದಸರಾ ದರ್ಬಾರಿನ ಸಿದ್ಧತೆ ಭರದಿಂದ ಸಾಗುತ್ತಿರುವುದನ್ನು ಬಸವ ಭಕ್ತರು ಗಮನಿಸುತ್ತಿದ್ದಾರೆ. ಬಸವಣ್ಣನವರ ಕರ್ಮಭೂಮಿಯಲ್ಲಿ ಆಯೋಜಿತವಾಗಿರುವ ದರ್ಬಾರನ್ನು ವಿರೋಧಿಸಲು ಆಗಸ್ಟ್ 17ರಂದು ಕರೆದಿದ್ದ ಬಸವ ಸಂಘಟನೆಗಳ ಸಭೆಯನ್ನು ಪೂಜ್ಯ ಶ್ರೀ ಬಸವಲಿಂಗ ಪಟ್ಟದೇವರು ಹಠಾತ್ತಾಗಿ ರದ್ದು ಪಡಿಸಿದರು.
ಈ ಬೆಳವಣಿಗೆಗಳ ಬಗ್ಗೆ ಶರಣತತ್ವ ಚಿಂತಕಿ ಮೀನಾಕ್ಷಿ ಬಾಳಿ ಬಸವ ಮೀಡಿಯಾದೊಂದಿಗೆ ಮಾತನಾಡಿದ್ದಾರೆ.
1) ಬಸವಕಲ್ಯಾಣದಲ್ಲಿ ದಸರಾ ಧರ್ಬಾರ್ ಸಿದ್ಧತೆ ಭರದಿಂದ ಸಾಗುತ್ತಿದೆ. ಇವರ ಅಜೆಂಡಾವೇನು?
ಬಸವ ಕಲ್ಯಾಣದಲ್ಲಿ ಚಿಂತನೆ, ಕಾರ್ಯಕ್ರಮಗಳು ಬಸವಾದಿ ಶರಣರಿಗೆ ಸೀಮಿತವಾಗಿರಬೇಕು. ಅಲ್ಪ ಸಂಖ್ಯಾತರೂ ಸೇರಿದಂತೆ ಅಲ್ಲಿರೋ ಎಲ್ಲಾ ಸಮುದಾಯಗಳು ಬಸವಣ್ಣನವರನ್ನು ಮಹಾತ್ಮರೆಂದು ಒಪ್ಪಿಕೊಂಡಿವೆ.
ಆದರೆ ಬಸವಣ್ಣನವರನ್ನು ಗುರುವೆಂದು ಒಪ್ಪಿಕೊಳ್ಳದ ಪಂಚಾಚಾರ್ಯರಿಗೆ ಅಲ್ಲೇನು ಕೆಲಸ. ಇಂದು ಪಂಚಾಚಾರ್ಯರು ತಮ್ಮ ಅಸ್ತಿತ್ವದ ಹುಡುಕಾಟ ನಡೆಸಿದ್ದಾರೆ. ಬಸವಣ್ಣನವರ ಕರ್ಮಭೂಮಿಯಲ್ಲಿ, ಜನ್ಮಭೂಮಿಯುಲ್ಲಿ ತಮ್ಮ ಅಸ್ತಿತ್ವ, ಪ್ರಭಾವವಿದೆ ಎಂದು ತೋರಿಸುವ ಪ್ರಯತ್ನವಿದು.
2) ದಸರಾ ದರ್ಬಾರ್ ವಿರೋಧಿಸಲು ಆಗಸ್ಟ್ 17 ಬಸವಕಲ್ಯಾಣದಲ್ಲಿ ಸಭೆ ಕರೆಯಲಾಗಿತ್ತು. ಅದಕ್ಕೆ ಹೋಗಲು ನೀವೂ ಸಿದ್ಧರಾಗಿದ್ರಿ. ಅದರ ಉದ್ದೇಶವೇನಿತ್ತು?
ಆಗಸ್ಟ್ 17ರ ಸಭೆಯ ಉದ್ದೇಶವಿದ್ದುದ್ದು ಬರೀ ಅಡ್ಡಪಲ್ಲಕ್ಕಿಯನ್ನು ವಿರೋಧಿಸಲು ಅಲ್ಲ. ಪಂಚಾಚಾರ್ಯರ ಮತ್ತು ಬಸವತತ್ವದ ನಡುವಿನ ಇಂದಿನ ಸಂಬಂಧವನ್ನು, ಸಂಘರ್ಷವನ್ನು ಸಮಗ್ರವಾಗಿ ಚರ್ಚಿಸಬೇಕಿತ್ತು. ಕಲ್ಯಾಣದಲ್ಲಿ ನಡೆಯುತ್ತಿರುವ ದಸರಾ ದರ್ಬಾರಿನ ಎಲ್ಲಾ ಚಟುವಟಿಕೆಗಳ ಬಗ್ಗೆ ಅಲ್ಲಿ ಚರ್ಚೆಯಾಗಬೇಕಿತ್ತು.
ಆಗಸ್ಟ್ 17ರ ಸಭೆಯ ಉದ್ದೇಶವಿದ್ದುದ್ದು ಬರೀ
ಅಡ್ಡಪಲ್ಲಕ್ಕಿಯನ್ನು ವಿರೋಧಿಸಲು ಅಲ್ಲ.
3) ಸಭೆಯನ್ನು ಭಾಲ್ಕಿ ಶ್ರೀಗಳು ತಡರಾತ್ರಿ ಕೊಟ್ಟ ಹೇಳಿಕೆಯ ಮೂಲಕ ರದ್ದು ಪಡಿಸಿದ್ರು. ಅದು ಸರೀನಾ?
ಸಭೆಯನ್ನು ರದ್ದು ಪಡಿಸಿದ್ದು ತಪ್ಪು. ಯಾರು ಯಾರನ್ನು ಕೇಳಿ ಅದನ್ನು ರದ್ದು ಪಡಿಸಿದ್ರು ಅಂತ ಭಾಲ್ಕಿ ಶ್ರೀಗಳು ಸ್ಪಷ್ಟನೆ ಕೊಡಬೇಕು.
ಈ ಸಭೆಗೆ ಬರಲು ಬಹಳ ದೂರಗಳಿಂದ ಬಸವ ಸಂಘಟನೆಗಳು ಮತ್ತು ಮಠಾಧೀಶರು ತಯಾರಿದ್ರು. ಇದನ್ನು ಹಠಾತ್ತಾಗಿ ರದ್ದು ಪಡಿಸಿದ್ದು ಎಲ್ಲರಿಗೂ ದಿಗ್ಬ್ರಮೆಯಾಗಿದೆ.. ಸುದ್ದಿ ಕೇಳಿ ಅನೇಕ ಕಾರ್ಯಕರ್ತರು ಅರ್ಧ ದಾರಿಯಿಂದ ರಾತ್ರಿಯೇ ಹಿಂದಿರುಗಿದರು. ಇವರಿಗೆಲ್ಲ ಸ್ಪಷ್ಟನೆ ನೀಡುವ ಅಗತ್ಯವಿದೆ.
ಹಠಾತ್ತಾಗಿ ರದ್ದು ಪಡಿಸಿದ್ದು ಎಲ್ಲರಿಗೂ ದಿಗ್ಬ್ರಮೆಯಾಗಿದೆ.
4) ಸಭೆ ಹಠಾತ್ತಾಗಿ ರದ್ದಾಗಿದ್ದನ್ನು ಬಸವ ಭಕ್ತರು ಹೇಗೆ ಅರ್ಥ ಮಾಡಿಕೊಳ್ಳಬೇಕು?
ದಸರಾ ಧರ್ಬಾರ್ ಮೇಲೆ ಬಸವ ಭಕ್ತರಿಗೆ ಬಹಳ ಸಿಟ್ಟು, ಆಕ್ರೋಶವಿದೆ. ಅದನ್ನು ತಣ್ಣಗಾಗಿಸುವ ತಂತ್ರಗಾರಿಕೆ ಬಸವಕಲ್ಯಾಣದಲ್ಲಿ ನಮ್ಮ ಕಣ್ಣ ಮುಂದೆಯೇ ನಡೆಯಿತು. ತಾವೇ ವಿರೋಧಿಸಿದಂತೆ ಮಾಡಿ ಬೇರೆಯವರಿಂದ ವಿರೋಧ ಬರದ ಹಾಗೆ ನೋಡಿಕೊಂಡರು.
ಹಾರಕೂಡ ಶ್ರೀಗಳು ಅಡ್ಡ ಪಲ್ಲಕ್ಕಿಯನ್ನು ದೊಡ್ಡ ವಿಷಯ ಮಾಡಿದ ಮೇಲೆ ರಂಭಾಪುರಿ ಶ್ರೀಗಳು ಮೊದಲು ಹಠಮಾಡಿ ನಂತರ ವಾಹನದಲ್ಲಿ ಹೋಗಲು ಒಪ್ಪಿಕೊಂಡರು. ಆಗಸ್ಟ್ 16ರ ಸಂಜೆ ಅವರ ಹೇಳಿಕೆ ಬಂದ ಬೆನ್ನಲ್ಲಿಯೇ ಭಾಲ್ಕಿ ಶ್ರೀಗಳೂ ಮರುದಿನದ ಸಭೆಯನ್ನು ರಾತ್ರೋರಾತ್ರಿ ರದ್ದು ಪಡಿಸಿದರು.
ಇವೆಲ್ಲಾ ಸಂಶಯ ಹುಟ್ಟಿಸುತ್ತವೆ. ಇವರೆಲ್ಲರ ಮಧ್ಯೆ ಒಳ ಒಪ್ಪಂದವಿತ್ತೇ? ಜನರ ಸಿಟ್ಟು ಇಳಿಸಲು ಇವರೆಲ್ಲಾ ತಂತ್ರಗಾರಿಕೆ ಮಾಡಿದರೆ? ದಸರಾ ದರ್ಬಾರಿಗೆ ಕ್ಲೀನ್ ಚಿಟ್ ಕೊಡುವ ವಾತಾವರಣ ಸೃಷ್ಟಿಸಿದರೆ? ಈ ಪ್ರಶ್ನೆಗಳು ಈಗ ಕೇಳಿ ಬರುತ್ತಿವೆ.
ಇವರೆಲ್ಲರ ಮಧ್ಯೆ ಒಳ ಒಪ್ಪಂದವಿತ್ತೇ? ಜನರ ಸಿಟ್ಟು
ಇಳಿಸಲು ಇವರೆಲ್ಲಾ ತಂತ್ರಗಾರಿಕೆ ಮಾಡಿದರೆ?
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ದಸರಾ ದರ್ಬಾರನ್ನು ವಿರೋಧಿಸುವ ಹೊಣೆಗಾರಿಕೆ ಇದ್ದುದ್ದು ಹಾರಕೂಡ ಶ್ರೀಗಳಿಗಲ್ಲ ಭಾಲ್ಕಿ ಶ್ರೀಗಳಿಗೆ.
5) ಇದರಲ್ಲೆಲ್ಲಾ ಭಾಲ್ಕಿ ಶ್ರೀಗಳ ಪಾತ್ರವೇನಿತ್ತು?
ಪಂಚಾಚಾರ್ಯರಿಗೆ ಒಂದು ಸ್ಪಷ್ಟ ನಿಲುವಿದೆ. ಅವರು ಬಸವ ವಿರೋಧಿಗಳು. ಆದರೆ ಭಾಲ್ಕಿ ಶ್ರೀಗಳು ಇಲ್ಲಿಯೂ ಕಾಣಿಸಿಕೊಳ್ಳುತ್ತಾರೆ, ಅಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಎಲ್ಲಿ ಪ್ರತ್ಯಕ್ಷವಾಗಿ ವಿರೋಧಿಸಬೇಕು, ಎಲ್ಲಿ ಪರೋಕ್ಷವಾಗಿ ಬೆಂಬಲಿಸಬೇಕು ಇವೆಲ್ಲಾ ಗೊತ್ತಿರುವ ಜಾಣ್ಮೆ ಇದೆ ಅವರಲ್ಲಿ.
ಮುಂದಿನ ವರ್ಷ ಸಂಘ ಪರಿವಾರದ ನಾಯಕ ಬಸವರಾಜ ಪಾಟೀಲ ಸೇಡಂ ನಡೆಸುತ್ತಿರುವ ಕಾರ್ಯಕ್ರಮವೂ ಇವರ ನೇತೃತ್ವದಲ್ಲಿಯೇ ನಡೆಯುತ್ತಿದೆ.
6) ದಸರಾ ದರ್ಬಾರ್ ವಿರೋಧ ಸಭೆ ರದ್ದಾಗಿರುವುದಕ್ಕೆ ಬಸವ ಸಂಘಟನೆಗಳ ಪ್ರತಿಕ್ರಿಯೆ ಹೇಗಿದೆ?
ಕೆಲವು ಬಸವ ಸಂಘಟನೆಗಳಿಗೆ ತತ್ವಕ್ಕೆ ಬದ್ಧತೆಯಿದೆ. ಆದರೆ ಅವರಿಗೆ ಜನರ ಸಂಘಟಿಸುವ ಸಾಮರ್ಥ್ಯವಿಲ್ಲ. ಕೆಲವು ಬಸವ ಸಂಘಟನೆಗಳಿಗೆ ಆ ಸಾಮರ್ಥ್ಯವಿದೆ. ಆದರೆ ಅವರಿಗೆ ಅವರದೇ ಅಜೆಂಡಾವಿದೆ.
ಸ್ಥಳೀಯವಾಗಿ ಕಲ್ಯಾಣದಲ್ಲಿ ವ್ಯವಹಾರಸ್ಥರು, ಉದ್ದಿಮೆದಾರರು ಜಾಸ್ತಿ. ಅವರಿಗೆ ಅಂತಹ ಸೈದ್ಧಾಂತಿಕ ಸ್ಪಷ್ಟತೆಯಿಲ್ಲ. ಅವರು ಬಸವ ಸಂಘಟನೆಗಳನ್ನೂ ಬೆಂಬಲಿಸುತ್ತಾರೆ, ಪಂಚಾಚಾರ್ಯರನ್ನೂ ಬೆಂಬಲಿಸುತ್ತಾರೆ. ಸ್ಥಳೀಯವಾಗಿ ಸರಿಯಾದ ಬೆಂಬಲ ಸಿಗದಿದ್ದರೆ ಹೊರಗಿನಿಂದ ಹೋಗಿ ಪ್ರತಿರೋಧಿಸುವುದು ಕಷ್ಟ. ಅಂತಹ ಪ್ರಯತ್ನಗಳ ಪ್ರಚಾರದಿಂದ ಕಾರ್ಯಕ್ರಮ ಇನ್ನಷ್ಟು ಜೋರಾಗಿ ನಡೆಯುವ ಸಾಧ್ಯತೆಯಿದೆ. ಇದರಲ್ಲೆಲ್ಲ ಸಂಘ ಪರಿವಾರದ ಪಾತ್ರವಿದೆ ಎಂಬುದನ್ನೂ ಮರೆಯಬಾರದು.
ದಸರಾ ದರ್ಬಾರನ್ನು ವಿರೋಧಿಸಲು ಮಠಾಧೀಶರು ಮುಂದೆ ಬರಬೇಕಿತ್ತು. ಅವರ ಜೊತೆ ಅವರ ಭಕ್ತರೂ ಬರುತ್ತಿದ್ದರು. ಈಗ ಅದಾಗದಿರುವುದು ದುರದೃಷ್ಟ.
7) ಇದರಲ್ಲಿ ರಾಜಕಾರಣಿಗಳು ಪಾತ್ರ ಏನಿದೆ?
ರಾಜಕಾರಣಿಗಳು ಕೆಲಸ ಮಾಡುವುದು ಅವರ ಅಧಿಕಾರಕ್ಕೆ ಮಾತ್ರ. ತತ್ವಕ್ಕೆ ನಿಲುವುಗಳಿಗೆ ಅಂಟಿಕೊಂಡು ಯಾವುದೇ ಪಂಗಡದ ಮತ ಕಳೆದುಕೊಳ್ಳಲು ಅವರು ತಯಾರಿಲ್ಲ. ರಾಜಕಾರಣಿಗಳು ಅಧಿಕಾರಕ್ಕೆ ಹೇಗೆ ದುಡಿಯುತ್ತಾರೋ ಅನೇಕ ಮಠಾಧೀಶರು ತಮ್ಮ ಮಠಗಳ ಆದಾಯ ಹೆಚ್ಚಿಸಿಕೊಳ್ಳಲು ದುಡಿಯುತ್ತಾರೆ. ಅವರಿಗೂ ಧರ್ಮ, ತತ್ವದ ಬಗ್ಗೆ ಅಂತಹ ಬದ್ಧತೆಯಿಲ್ಲ. ಅದು ಇಲ್ಲಿ ಸಮಸ್ಯೆ.
ಪಂಚಾಚಾರ್ಯರ ಒಡಕು ಮನಸುಗಳಿಗೆ ಬಾಲ್ಕಿ ಶ್ರೀಗಳು ಬಗ್ಗಬಾರದು ಎಂಬುದು ನಮ್ಮ ಕಳಕಳಿಯ ಪ್ರಾರ್ಥನೆ.
ಪಂಚಾಚಾರ್ಯರ ಬೀಜ ಬಿತ್ತಲು ಅಲ್ಲಿಗೆ ಬರುತ್ತಿರುವುದು ಮತ್ತು ಬಸವ ಭಕ್ತರ ಅಸ್ತಿತ್ವಕ್ಕೆ ಕಳಂಕ ತರುವುದು ಪಂಚರ ಉದ್ದೇಶವಾಗಿದೆ, ಅದನ್ನು ಶ್ರೀಗಳು ಅರ್ಥೈಸಿಕೊಳ್ಳಲಾರರೇನು? ನಮ್ಮ ಬುಡಕ್ಕೆ ನೀರು ತರುವಾಗ ನಾವು ಅವರಿಗೆ ರತ್ನಗಂಬಳಿ ಹಾಸಿ ಕೂಡಿಸುವುದು ಯಾವ ಪರಿ ? ಶ್ರೀಗಳು ಜ್ಞಾನಿಗಳು. ಕಣ್ಣು ತೆರೆಸಿರಿ.
ಬಸವಕಲ್ಯಾಣದಲ್ಲಿ ಎಲ್ಲ ನಂಬುಗೆಯ ಜನನಿರಿರುವರು,ಅವರವರ ನಂಬುಗೆ ಅವರಿಗೆ ಬಿಡಿ.
ಅಡ್ಡಪಲ್ಲಕ್ಕಿ ಉತ್ಸವ ಅಷ್ಟೇ ಅಲ್ಲ ದರ್ಬಾರು ಹೆಸರಿನ ಕಾರ್ಯಕ್ರಮಗಳು ಕೂಡ ಅಲ್ಲಿ ನಡೆಯಬಾರದು. ಇದು ಬಸವ ತತ್ವಕ್ಕೆ ಮಾಡಿದ ಅವಮಾನವಲ್ಲದೆ ಮತ್ತೇನೂ ಅಲ್ಲ. ಬಸವಾಭಾನಿಗಳೇ, ಬಸವಪ್ರಣೀತ ಲಿಂಗಾಯತರೇ ಎಚ್ಚೆತ್ತುಕೊಳ್ಳಿ.
ಬಸವ ಕ್ಷೇತ್ರದಲ್ಲಿ, ಲಿಂಗಾಯತ ಧರ್ಮ ಹುಟ್ಟಿದ ಕ್ಷೇತ್ರದಲ್ಲಿಯೇ ಲಿಂಗಾಯತ ವಿರೋಧಿಗಳ, ಬಸವ ವಿರೋಧಿಗಳ ವೀಜಯೋತ್ಸವ ನಡೆಸುವುದು ಲಿಂಗಾಯತ ಧರ್ಮಕ್ಕೆ ಮಾರಕ
ಈ ಪಂಚಾಚಾರಿಗಳಿಗೆ ಬಸವಕಲ್ಯಾಣ ಬಿಟ್ಟು ಬೇರೆ ಯಾವ ಜಾಗವೂ ಸಿಗಲಿಲ್ಲವೇ ? ಸ್ಥಳೀಯ ಜನರ ಕುಮ್ಮಕ್ಕಿನಿಂದ ಈ ಕೆಲಸ ನಡೀತಾ ಇದೆ ಬಸವಣ್ಣನವರ ಕರ್ಮ ಭೂಮಿಯಲ್ಲಿ ದಸರಾ ದರ್ಬಾರ್ ನಡೆಸುತ್ತಿರುವುದು ವಿಪರ್ಯಾಸ ಮಠಾಧೀಶರ ಮುಖ್ಯಸ್ಥ ರೆಂದೂ ಹೇಳಿಕೊಳ್ಳುವವರು ಇದನ್ನು ವಿರೋಧಿಸುವ ಬದಲು ತೆಪ್ಪಗೆ ಕುಳಿತಿದ್ದರಲ್ಲ ಇವರೆಲ್ಲ ಬಸವಣ್ಣವರನ್ನು ಮುಂದಿಟ್ಟುಕೊಂಡು ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಿದ್ದಾರೆ
👍💯🙏
ಬಸವಣ್ಣನವರೇ ಹೇಳಿದಾರೆ ಏನಗಿಂತ ಕಿರಿಯರಿಲ್ಲವೆಂದು ಇನ್ನು ನಾವು ನೀವು ಯಾವ್ ಲೆಕ್ಕ
ಭಾಲ್ಕಿ ಶ್ರೀಗಳು ನಿಜವಾಗಿ ಬಸವ ತತ್ವಕ್ಕೆ ಬದ್ದರೆ
ಅನುಕೂಲ ಸಿದ್ದರೆ ಎಂಬುದನ್ನು ಸ್ಪಷ್ಟೀಕರಿಸಬೇಕು
ಬಸವಾದಿ ಶರಣರು ನಡೆದಾಡಿದ ನೆಲದಲ್ಲಿ
ಬಸವ ವಿರೋಧಿಗಳ ನಡೆಗೆ ಅವಕಾಶ ಇಲ್ಲ
ಇದರ ಬಗ್ಗೆ ಬಸವ ಪರ ಸಂಘಟನೆಗಳು
ಭಾಲ್ಕಿ ಶ್ರೀಗಳ ಹೊರತಾಗಿ ಉಳಿದವರು
ದಸರಾ ದರ್ಬಾರ್ ಕ್ಕೆ ಪ್ರತಿರೋಧ ಒಡ್ಡಬೇಕು.
👍💯🙏
😳🥹🥲🎯
ಭಾಲ್ಕಿಯ ಶ್ರೀಗಳು ತಮ್ಮ ದಿಟ್ಟ ಕ್ರಮವನ್ನು ಮುಂದುವರಿಸಲಿಲ್ಲ. ಶರನ್ನ ನವರಾತ್ರಿಯ ಪಂಚಾಚಾರ್ಯರ ಕುಟೀಲ ಹುನ್ನಾರವನ್ನು ತಿಳಿಯದೆಹೋದರು.ಹೀಗಾಗಿ ಅರಿವಿಲ್ಲದೆ ಹೀಗೆ ದಡ್ಡತನ ಮಾಡಿದರು.