ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ

ಬಸವ ಮೀಡಿಯಾ
ಬಸವ ಮೀಡಿಯಾ

ಕಲಬುರ್ಗಿ

ಬಸವ ಸಮಿತಿಯ ಅನುಭವ ಮಂಟಪದಲ್ಲಿ ಬಸವ ಸಮಿತಿ ಸಂಸ್ಥಾಪಕರ ದಿನಾಚರಣೆ ನಡೆಯಿತು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಡಾ. ವೀರಣ್ಣ ದಂಡೆ ಅವರು, ಬಸವ ಸಮಿತಿಯು ವಚನ ಸಾಹಿತ್ಯಕ್ಕೆ ವಿಶೇಷ ಸೇವೆ ಸಲ್ಲಿಸಿದವರನ್ನು ಗುರುತಿಸಿ ಡಾ. ಬಿ.ಡಿ. ಜತ್ತಿ ಸಂಶೋಧನಾ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತದೆ.

ವಚನ ಗಾಯನದಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಡಾ. ಬಿ.ಡಿ. ಜತ್ತಿ ವಚನ ಸಂಗೀತ ವಿಭೂಷಣ ಪ್ರಶಸ್ತಿ ಕೊಡಲಾಗುತ್ತದೆ.

ಶರಣ ಸಾಹಿತ್ಯದಲ್ಲಿ ವಿಶೇಷ ಸೇವೆ ಸಲ್ಲಿಸಿದ ಶರಣೆಯರನ್ನು ಗುರುತಿಸಿ ವೈರಾಗ್ಯನಿಧಿ ಅಕ್ಕ ಪ್ರಶಸ್ತಿ ನೀಡಿ ಗೌರವಿಸುತ್ತದೆ.

ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಸಂಶೋಧನಾ ಲೋಕಕ್ಕೆ ವಿಶೇಷ ಕೊಡುಗೆ ಸಲ್ಲಿಸುತ್ತಿದೆ ಎಂದರು.

ಡಾ. ಬಿ.ಡಿ. ಜತ್ತಿ ವ್ಯಕ್ತಿತ್ವದ ಕುರಿತು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆಂಗಳೂರು ಬಸವ ಸಮಿತಿಯ ಅಧ್ಯಕ್ಷರಾದ ಡಾ. ಅರವಿಂದ ಜತ್ತಿ ಅವರು ಮಾತನಾಡಿ, ಡಾ. ಬಿ.ಡಿ‌. ಜತ್ತಿ ಅವರು (ಮೈಸೂರು ರಾಜ್ಯದ) ಕರ್ನಾಟಕದ ಮುಖ್ಯಮಂತ್ರಿ ಆಗಿದ್ದು, ಸ್ವಾರ್ಥ ಸಾಧಿಸದೆ ಸಮಾಜಕ್ಕಾಗಿ ದುಡಿದವರು.

ಬಸವ ಸಮಿತಿಯನ್ನು ಸ್ಥಾಪಿಸಿ ಬಸವ ದರ್ಶನ ಜಗತ್ತಿಗೆ ನೀಡಿದವರು. ಎಲ್ಲಾ ಸಮುದಾಯದವರು ಸೇರಿ ಕಟ್ಟಿದ್ದು ಬಸವ ಸಮಿತಿಯಾಗಿದೆ. ಬಿ.ಡಿ. ಜತ್ತಿಯವರಿಗೆ ಮುಸ್ಲಿಂ ಸಮುದಾಯದವರು ಧರ್ಮಗ್ರಂಥ ಖುರಾನ್ ಗೌರವ ಪ್ರತಿ ನೀಡಿದರೆ ಅದನ್ನು ತಲೆಯ ಮೇಲಿಟ್ಟುಕೊಂಡು ಗೌರವಿಸಿದ ದೊಡ್ಡ ವ್ಯಕ್ತಿತ್ವ ಅವರದಾಗಿತ್ತು.

ರಾಷ್ಟ್ರಪತಿಗಳಾಗಿದ್ದ ಬಿ.ಡಿ. ಜತ್ತಿಯವರಿಗೆ ವಿಭೂತಿ ಹಚ್ಚುವುದನ್ನು ಬಿಡಬೇಕು, ಇಲ್ಲವಾದರೆ ರಾಷ್ಟ್ರಪತಿ ಸ್ಥಾನವನ್ನು ಬಿಡಬೇಕು ಎಂಬ ಪ್ರಶ್ನೆ ಬಂದಾಗ
ರಾಷ್ಟ್ರಪತಿ ಸ್ಥಾನವನ್ನು ಬಿಡುತ್ತೇನೆ ವಿಭೂತಿ ಹಚ್ಚುವುದನ್ನು ಬಿಡುವುದಿಲ್ಲ. ನಾನು ನನ್ನ ಹಣೆಗೆ ವಿಭೂತಿ ಹಚ್ಚುತ್ತಿದ್ದೇನೆ ರಾಷ್ಟ್ರಪತಿ ಕುರ್ಚಿಗೆ ಹಚ್ಚುತ್ತಿಲ್ಲ ಎಂದವರು ಅವರು.

ಬೆಳಗಾವಿಯನ್ನು ಕರ್ನಾಟಕದ ಏಕೀಕರಣಕ್ಕೆ ಸೇರಲು ಶ್ರಮಿಸಿದವರು ಬಿ.ಡಿ. ಜತ್ತಿಯವರು. ಜತ್ತಿಯವರು ಬಸವನಿಷ್ಠರು ಲಿಂಗನಿಷ್ಠರು ಆಗಿದ್ದರು ಎಂದು ನುಡಿದರು.

ಡಾ. ಬಿ.ಡಿ. ಜತ್ತಿ ಸಂಶೋಧನಾ ಪ್ರಶಸ್ತಿ ಸ್ವೀಕರಿಸಿ ಬೆಂಗಳೂರಿನ ಬೇಲಿಮಠದ ಶಿವಾನುಭವ ಚರಮೂರ್ತಿ ಪೂಜ್ಯ ಶಿವರುದ್ರ ಮಹಾಸ್ವಾಮಿಗಳು ಮಾತನಾಡಿ, ನಾನು ಬಿ.ಡಿ. ಜತ್ತಿ ಅವರ ನಿಕಟವರ್ತಿಯಾಗಿ ಬೆಳೆದವನಾಗಿದ್ದೇನೆ. ಅವರು ಬಸವತತ್ವ ಅರಿತುಕೊಳ್ಳುವಲ್ಲಿ ನನ್ನ ಮಾರ್ಗದರ್ಶಕರಾಗಿದ್ದರು. ಹಗಲಿರುಳು ಬಸವ ತತ್ವ ಪ್ರಚಾರದ ಕುರಿತು ಚಿಂತಿಸುತ್ತಿದ್ದರು. ಅವರು ಅಂದು ನೆಟ್ಟ ಬಸವ ಸಮಿತಿಯ ಗಿಡ ಇಂದು ಹೆಮ್ಮರವಾಗಿ ಬೆಳೆದಿದೆ. ಜಗತ್ತಿನ 45 ಭಾಷೆಗಳಿಗೆ ವಚನಗಳನ್ನು ಅನುವಾದಿಸಿದೆ ಎಂದರು.

ಡಾ. ವೀರಣ್ಣ ದಂಡೆಯವರು ಸ್ವಾಗತಿಸಿದರು. ಡಾ. ಆನಂದ ಸಿದ್ಧಾಮಣಿ ವಂದಿಸಿದರು. ಡಾ. ನೀಲಾಂಬಿಕ ಪೊಲೀಸಪಾಟೀಲ, ರಾಜೇಂದ್ರ ಖೂಬಾ, ಬಂಡಪ್ಪ ಕೇಸುರ್ ಅವರು ಹಾಜರಿದ್ದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
Leave a comment

Leave a Reply

Your email address will not be published. Required fields are marked *