ಚಾಮರಾಜನಗರ
ಚಾಮರಾಜನಗರ ತಾಲ್ಲೂಕಿನ ಕಲ್ಪುರ ಗ್ರಾಮದ ಮಲ್ಲಿಕಾರ್ಜುನ ದಂಪತಿಗಳ ಹೊಸ ಮನೆಯ ಗುರುಪ್ರವೇಶ ಬಸವತತ್ವದಂತೆ ನಡೆಯಿತು.
ವಿಶ್ವ ಬಸವಸೇನೆ ನೇತೃತ್ವದಲ್ಲಿ ಮೊದಲಿಗೆ ಗ್ರಾಮದ ಗುರುಮಲ್ಲೇಶ್ವರ ದಾಸೋಹ ಮಠದ ಮುಂಭಾಗ ಆರಂಭಗೊಂಡು, ಗ್ರಾಮದ ಬೀದಿಗಳಲ್ಲಿ ಭಕ್ತಿಯಿಂದ ಬಸವಾದಿ ಪ್ರಮಥರ ಭಾವಚಿತ್ರ ಹಾಗು ವಚನ ಸಂಪುಟದ ಕಟ್ಟುಗಳನ್ನು ಹಿಡಿದು ಶರಣರ ವಚನಗಳನ್ನ ಹೇಳುತ್ತಾ ಮೆರವಣಿಗೆ ನಡೆಸಲಾಯಿತು.
ಹೊಸ ಮನೆಯ ಮುಂಭಾಗ ಷಟಸ್ಥಲ ಧ್ವಜಾರೋಹಣ ನೆರವೇರಿಸಿ, ಗುರುಪ್ರವೇಶ ಮಾಡಲಾಯಿತು. ಮನೆಯೊಳಗೆ ಗುರುಗಳೊಂದಿಗೆ ಇಷ್ಟಲಿಂಗ ಪೂಜೆ ನಡೆಯಿತು. ಹಾಜರಿದ್ದ ಎಲ್ಲಾ ಗ್ರಾಮಸ್ಥರು, ಸಂಬಂಧಿಕರು, ಸ್ನೇಹಿತರು, ಬಸವ ಭಕ್ತರನ್ನ ಕುರಿತು ಗುರುಪ್ರವೇಶದ ವಿಶೇಷತೆಯನ್ನು ಚೌಹಳ್ಳಿ ಲಿಂಗರಾಜಣ್ಣ ಅವರು ತಿಳಿಸಿದರು.

ಕಾ.ಸು. ನಂಜಪ್ಪನವರು ದೇವನೆಂದರೆ ಯಾರು, ಆ ಬಗ್ಗೆ ಬಸವಾದಿ ಶರಣರು ಏನೆಂದು ವಚನಗಳಲ್ಲಿ ತಿಳಿಸಿದ್ದಾರೆ ಎಂಬುದರ ಕುರಿತು ಅನುಭಾವ ನೀಡಿದರು.
ಕಲ್ಪುರದ ಮಹಿಳಾ ಭಜನಾ ತಂಡದವರಿಂದ ವಚನ ಗಾಯನ ನಡೆಯಿತು.
ಇದೇ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ಇದೇ 22 ಸೆಪ್ಟೆಂಬರ್ ದಂದು ನಡೆಯಲಿರುವ ಬಸವ ಸಂಸ್ಕೃತಿ ಅಭಿಯಾನದ ಬಗ್ಗೆ ತಿಳಿಸಿ, ಎಲ್ಲರಿಗೂ ಕರಪತ್ರ ನೀಡಲಾಯಿತು.
ಕರ್ನಾಟಕದಲ್ಲಿ ಇರುವವರೆಲ್ಲಾ ಲಿಂಗಾಯತರೇ ಆಗಿದ್ದೇವೆ. ಆದ್ದರಿಂದ ಜಾತಿಗಣತಿಯಲ್ಲಿ ಎಲ್ಲರು ಲಿಂಗಾಯತ ಧರ್ಮ ಎಂದು ಬರೆಸುವಂತೆ ಮತ್ತು ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸುವಂತೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಚಾಮರಾಜನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೂಡ್ಲಪುರ ಮಂಜೇಶ್ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿಶ್ವ ಬಸವ ಸೇನೆಯ ಅದ್ಯಕ್ಷರಾದ ಬಸವಯೋಗೇಶ, ಕಲ್ಪುರ ಮಹೇಶ, ಹಂಗಳಪುರ ಸುರೇಶಣ್ಣ, ಕೀಳಲಿಪುರ ಸೋಮು, ಮುಕ್ಕಡಹಳ್ಳಿ ನಾಗೇಂದ್ರ, ಗಟ್ಟವಾಡಿಪುರ ಪ್ರಸಾದ, ಹಳೇಪುರ ಬಸವರಾಜ, ಕೆಪ್ಯಾಸಿಟಿ ಮಂಜು ಮತ್ತು ಮಕ್ಕಳಮನೆ ಸೋಮಣ್ಣ, ಅಕ್ಕಮಹಾದೇವಿ ಹಾಸ್ಟೆಲ್ನ ಚನ್ನಪ್ಪಣ್ಣ, ಮುದ್ದಹಳ್ಳಿ ಅಶೋಕ, ನಂದೀಶ್ವರ ಮೇಷ್ಟ್ರು, ತಮ್ಮಡಹಳ್ಳಿ ಮಂಜುನಾಥ, ಹೆಮ್ಮಿಗೆ ಗಂಗಾಧರ, ದೊಡ್ಡಹುಂಡಿ ಕುಮಾರಣ್ಣ ದಂಪತಿ, ಹೇಗೊಠಾರ ವಿಜಿ, ಕಾಳನಹುಂಡಿ ಗುರುಸೋಮಣ್ಣ, ವಕೀಲರಾದ ವಿರೂಪಾಕ್ಷಣ್ಣ, ನಂಜದೇವನಪುರದ ಭಜನೆ ಮಾದಪ್ಪಣ್ಣ, ಪಿಡಿಓ ಮಾದಪ್ಪಣ್ಣ ಹಾಗು ಕಲ್ಪುರ ಗ್ರಾಮದ ಮೂರ್ತಿ ಅಣ್ಣ ದಂಪತಿ, ಗುರುಮಲ್ಲಣ್ಣ , ಮುಖಂಡರಾದ ರೇವಣ್ಣ, ಮಂಜುನಾಥ, ಪದಾಧಿಕಾರಿಗಳು ಮುಂತಾದ ಗ್ರಾಮಸ್ಥರು, ಬಸವಭಕ್ತರು ಭಾಗವಹಿಸಿದ್ದರು.