‘ದಸರಾ ದರ್ಭಾರದಲ್ಲಿ ಬಸವಣ್ಣನವರಿಗೆ ಅವಮಾನವಾದರೆ ಉಗ್ರ ಹೋರಾಟ’

ಬಸವ ಮೀಡಿಯಾ
ಬಸವ ಮೀಡಿಯಾ

ಬಸವ ಕಲ್ಯಾಣ

ಬಸವಕಲ್ಯಾಣದಲ್ಲಿ ನಡೆಯಲಿರುವ ದಸರಾ ದರ್ಭಾರದಲ್ಲಿ ಬಸವಣ್ಣನವರಿಗೆ ಅವಮಾನವಾದರೆ ಉಗ್ರ ಹೋರಾಟ ನಡೆಸಲಾಗುವುದೆಂದು ಬಸವಕಲ್ಯಾಣದ ಬಸವಪರ ಸಂಘಟನೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ.

ಬಸವಾದಿ ಶರಣರು ಸಮಾನತೆ ಸಾರಿದ ಪುಣ್ಯಭೂಮಿಯಾದ ಬಸವಕಲ್ಯಾಣದಲ್ಲಿ ಪಂಚಾಚಾರ್ಯರಿಂದ ನಡೆಯುವ 35ನೇ ದಸರಾ ದರ್ಭಾರದಲ್ಲಿ ಗುರು ಬಸವಣ್ಣನವರಿಗೆ ಗುರು ಸ್ಥಾನ ಕೊಟ್ಟು ಗೌರವಿಸಬೇಕು.

ಬಸವಣ್ಣನವರ, ಶರಣರ ಅಥವಾ ಬಸವತತ್ವದವರ ಬಗ್ಗೆ ಹಗುರವಾಗಿ ಮಾತನಾಡುವ, ಅವಮಾನವಾಗುವ ರೀತಿಯಲ್ಲಿ ಪ್ರಚೋದನಾಕಾರಿ ಮಾತುಗಳನ್ನಾಡಿದರೆ ಉಗ್ರ ಹೋರಾಟ ಮಾಡಲಾಗುವುದು. ಆದ್ದರಿಂದ ಈ ನಾಡಿನಲ್ಲಿ ಶಾಂತಿ ಭಂಗವಾಗದಂತೆ ಎಚ್ಚರಿಕೆ ವಹಿಸಬೇಕು, ಎಂದು ಮಾಧ್ಯಮಗಳಿಗೆ ಕಳಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಕಟಣೆ ಗುಣತೀರ್ಥವಾಡಿಯ ಪೂಜ್ಯ ಬಸವಪ್ರಭು ಸ್ವಾಮೀಜಿ, ಹರಳಯ್ಯ ಪೀಠದ ಪೂಜ್ಯ ಅಕ್ಕ ಗಂಗಾಂಬಿಕೆ, ಬಂದವರ ಓಣಿಯ ಕಲ್ಯಾಣಮ್ಮ, ಬಸವ ತತ್ವ ಪ್ರಚಾರ ಕೇಂದ್ರದ ಜಯಪ್ರಕಾಶ್ ಸದಾನಂದೆ, ಅರಿವು ಆಚಾರ ಅನುಭಾವ ಕೇಂದ್ರದ ಎಸ್.ಎಸ್. ನಾಗರಾಳೆ, ದಾನಮ್ಮದೇವಿ ಬಳಗದ ಸುಮಿತ್ರಾ ದಾವಣಗಾವೆ, ಅಕ್ಕನ ಬಳಗದ ಸುಲೋಚನಾ ಮಾಮನೆ, ಶಕ್ತಿ ಕೂಟದ ಸೋನಾಲಿ ನೀಲಕಂಠ ಲಿಂಗಮ್ಮ — ಅವರ ಹೆಸರಿನಲ್ಲಿ ಬಂದಿರುವ ಪ್ರಕಟಣೆಯಲ್ಲಿ ಲಿಂಗಾಯತ ಸಮಾಜದ ಮುಂದಿರುವ ಹಲವಾರು ವಿಷಯಗಳು ಚರ್ಚೆಯಾಗಿವೆ.

ಧರ್ಮ ಕಾಲಂ ದಲ್ಲಿ ಲಿಂಗಾಯತ

ವಿಶ್ವಗುರು ಬಸವಾದಿ ಪ್ರಮಥರಿಂದ ಸ್ಥಾಪಿತವಾದ ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಿದ್ದು, ಹಿಂದೂ ಧರ್ಮದ ಪರ್ಯಾಯ ಧರ್ಮವಾಗಿದೆ.

ಲಿಂಗಾಯತರು ತಮ್ಮ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಮತ್ತು ನಾವು ಸ್ವತಂತ್ರ ಧರ್ಮದವರೆಂದು ಗುರುತಿಸಿಕೊಂಡು ಕೇಂದ್ರ ಸರಕಾರದಿಂದ ಮಾನ್ಯತೆ ಪಡೆಯಬೇಕಾಗಿದೆ. ಆದ್ದರಿಂದ ಕರ್ನಾಟಕ ಸರಕಾರ ನಡೆಸುವ ಜಾತಿ ಮತ್ತು ಆರ್ಥಿಕ ಸಮಿಕ್ಷೆಯಲ್ಲಿ ಲಿಂಗಾಯತ ಧರ್ಮಿಯರು ಧರ್ಮ ಕಾಲಂ ನಲ್ಲಿ ‘ಲಿಂಗಾಯತ’ ಎಂದು ಬರೆಯಿಸಿರಿ, ಉಪಜಾತಿ ಕಾಲಂ ದಲ್ಲಿ 101 ಜಾತಿಯವರು ನಿಮ್ಮ ನಿಮ್ಮ ಉಪಜಾತಿ ಬರೆಯಿಸಬೇಕು.

ಲಿಂಗಾಯತರು ವೀರಶೈವರು ಬೇರೆ ಬೇರೆ:

ಲಿಂಗಾಯತ ವೀರಶೈವ ಪದ ಬೇರೆ ಬೇರೆ. ವೀರಶೈವವು ಶೈವ ಧರ್ಮದ ಶಾಖೆಯಾಗಿದೆ. ಅದು ಧರ್ಮವಲ್ಲ. ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿ ಲಿಂಗಾಯತ ಧರ್ಮ ಸ್ಥಾಪನೆ ಮಾಡಿದ್ದಾರೆ. ವೀರಶೈವ ಪುರಾತನವಾದದ್ದು ಅಲ್ಲಿನ ತತ್ವ ಮತ್ತು ಆಚರಣೆಗಳೇ ಬೇರೆ, ಲಿಂಗಾಯತ ತತ್ವ ಆಚರಣೆಗಳೇ ಬೇರೆಯಾಗಿವೆ. ವೀರಶೈವರ ಕುತಂತ್ರ ಹೇಳಿಕೆಯಿಂದ ಲಿಂಗಾಯತರು ದಾರಿ ತಪ್ಪಬಾರದು.

ಲಿಂಗಾಯತರು ಹಿಂದೂ ವಿರೋಧಿಗಳಲ್ಲ:

ನಾವೆಲ್ಲ ಹಿಂದೂ ದೇಶದಲ್ಲಿದ್ದೇವೆ, ಹಿಂದೂ ನೆಲದಲ್ಲಿ ಜನಿಸಿದ್ದೇವೆ. ನಮ್ಮ ಧರ್ಮ ಹುಟ್ಟಿದ್ದು ಇದೇ ನೆಲದಲ್ಲಿ ಆದ್ದರಿಂದ ನಾವು ಹಿಂದೂ ಜನಾಂಗದವರು ಆದರೆ ವೈದಿಕ ಧರ್ಮಕ್ಕೆ ಪರ್ಯಾಯವಾಗಿದ್ದೇವೆ. ಕೆಲವರು ಲಿಂಗಾಯತರು (ಬಸವ ತತ್ವದವರು) ಹಿಂದೂ ವಿರೋಧಿಗಳು ಎಂದು ಅಪಪ್ರಚಾರ ಮಾಡುತ್ತಿರುವರು ಅದಕ್ಕೆ ಕಿವಿಗೊಡಬಾರದು.

ಲಿಂಗಾಯತರು ಜಾತಿಯಿಂದ ಹೊರಬರಲಿ:

ಇವನಾರವ ಇವನಾರವ ಇವನಾರವ ಎನ್ನದೆ ಇವನಮ್ಮವ ಇವನಮ್ಮವ ಎಂದು ಸರ್ವರನ್ನು ಇಂಬಿಟ್ಟುಕೊಂಡ ಶ್ರೇಷ್ಠ ಧರ್ಮ ಲಿಂಗಾಯತ ಧರ್ಮ. ಈ ಧರ್ಮ ಜಗತ್ತಿನ ಮಾನವರನ್ನೆಲ್ಲ ಒಂದೇ ಎಂದು ಸಮಾನತೆಯನ್ನು ಬೋಧಿಸುತ್ತದೆ, ಆದ್ದರಿಂದ ಲಿಂಗಾಯತರು ತಮ್ಮ ತಮ್ಮ ಉಪಜಾತಿಯ ಮೇಲರಿಮೆಯಿಂದ ಹೊರಬಂದು ನಾವು ಲಿಂಗಾಯತ ಧರ್ಮದವರೆಂಬ ಅಭಿಮಾನ ಮೂಡಿಸಿಕೊಳ್ಳಬೇಕು; ಜಾತಿ ನಿರ್ಮೂಲನೆಗೆ ಶ್ರಮಿಸಬೇಕು.

ಬೆಂಗಳೂರಿನಲ್ಲಿ ಅ 5ಕ್ಕೆ ಬಸವ ಸಂಸ್ಕೃತಿ ಅಭಿಯಾನಕ್ಕೆ ಕರೆ:

ಮಠಾಧೀಶರ ಒಕ್ಕೂಟದಿಂದ ಒಂದು ತಿಂಗಳ ಪರ್ಯಂತರ ರಾಜ್ಯಾದ್ಯಂತ ಹಮ್ಮಿಕೊಂಡ ಬಸವ ಸಂಸ್ಕೃತಿ ಅಭಿಯಾನದ ಬೃಹತ್ ಸಮಾರೋಪ ಸಮಾರಂಭ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಕ್ಟೋಬರ್ 5ಕ್ಕೆ ಬಸವ ಸಂಸ್ಕೃತಿ ಅಭಿಯಾನ ಜರುಗಲಿದೆ. ಲಕ್ಷಾಂತರ ಬಸವಭಕ್ತರು ಸೇರಲಿದ್ದು ಜಿಲ್ಲಾದ್ಯಂತ ಬಸವಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು.

https://basavamedia.com/dasara-darbar-basva-kalyana1a

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ

Share This Article
21 Comments
  • ಎಂಥ ಹೀನಮಾನ ಸ್ಥಿತಿಗೆ ಸ್ಥಿತಿಗೆ ತಲುಪಿದ್ದಾರೆ ಬಸವ ತತ್ವದವರು, ತಾವುಗಳು ಏನು ಮಾಡಿದರೂ ನಡೆಯುತ್ತದೆ, ತಾವುಗಳು ಬಸವ ಸಂಸ್ಕೃತಿಯ ಅಭಿಯಾನ ಅಂತ ವೀರಶೈವ ವಿರುದ್ಧ ವೇದಿಕೆಗಳಲ್ಲಿ ಮಾತನಾಡಿದರೆ ನಡೆಯುತ್ತದೆ, ವೀರಶೈವರ ವಿರುದ್ಧ ಷಡ್ಯಂತ್ರ ಮಾಡಿದರು ನಡೆಯುತ್ತದೆ, ಆದರೆ ಇವರಿಗೆ ಒಂದು ಅಡ್ಡ ಪಲ್ಲಕ್ಕಿ ಉತ್ಸವ ನಡೆಸಿದರೆ ಇವರಿಗೆ ಇಲ್ಲಿಲ್ಲದ ಉಗ್ರ ಹೋರಾಟದ ನೆನಪಾಗುತ್ತದೆ, ಬಸವಣ್ಣನವರು ಯಾವುದೇ ಒಂದು ಜಾತಿಗೆ ಸೀಮಿತವಾಗಿರಲಿಲ್ಲ, ಜಾತಿ ಭೇದವಿಲ್ಲದೆ ಸಮಾಜ ಸುಧಾರಣೆಯನ್ನು ಮಾಡಿದವರು, ಇಂದು ಈ ಹೀನ ಮನಸ್ಥಿತಿಯ ಬಸವವಾದಿಗಳು ಅವರನ್ನು ಒಂದು ಜಾತಿಗೆ ಸೀಮಿತ ಮಾಡಿ ಅವರ ಅವರ ತತ್ವಗಳಿಗೆ ಆದರ್ಶಗಳಿಗೆ ಮಸಿ ಬಡಿಯುವ ಪ್ರಯತ್ನ ಮಾಡುತ್ತಿದ್ದೀರಾ, ಬಸವಾದಿ ಶರಣರು ನೀಡಿದಂತ ಆದರ್ಶ ಮಾರ್ಗವನ್ನು ಬಿಟ್ಟು ನಿಮ್ಮ ನಡೆ ದುರ್ಮಾರ್ಗದಲ್ಲಿ ನಡೆಯುತ್ತಿದೆ

    • ಅಲ್ಲ ಸರ್, ಬೇಡ ಜಂಗಮ ಹೆಸರಲ್ಲಿ ಹಿಂಬಾಗಿಲಿನಿಂದ ದಲಿತರಾಗಲು ಹೊರಟಿದ್ದರು, ಅದನ್ನು ಸ್ಬಲ್ಪ ಪ್ರಶ್ನಿಸಬೇಕಲ್ವ ? ಮೀಸಲಾತಿ ಲಾಭಕ್ಕೆ ಇವರು ಬೇಡ ಜಂಗಮರಂತೆ . ಲಿಂಗಾಯತರ ಹೆಗಲ ಮೇಲೆ ಮೆರೆಯಲು ಇವರು ವೀರಶೈವರಂತೆ ಇದು ಇಬ್ಬದಿ‌ನೀತಿ ಅಲ್ವ ?

      ಬಸವಣ್ಣನವರ ಒಂದು ವಚನದಂತೆಯಾದರೂ ಇವರು ತಮ್ಮ ಮಠದಲ್ಲಿ ಅಥವಾ ಭಕ್ತರಿಗೆ ಬದುಕು ವಂತೆ ಹೇಳುತ್ತಾರಾ ?

      ನೀವು ಕೇವಲ ರಾಜಕೀಯಕ್ಕಾಗಿ ಲಿಂಗಾಯತರನ್ನು ದೂಷಿಸುತ್ತಿದ್ದೀರಿ ಅಷ್ಟೇ. ಲಿಂಗಾಯತರು ಮುಸ್ಲಿಂ, ಕ್ರಶ್ಚಿಯನ್, ಹೀಮದೂಗಳ ವಿರೋಧಿಯಲ್ಲ ,ಆದರೆ ಲಿಂಗಾಯತ ಏಕದೇವೋಪಾಸನೆಯ ಅವೈದಿಕ ಧರ್ಮ ಅಷ್ಟೇ.

      • Highlighting Sub caste details in the caste census of the state is more deplorable and insult to Basavanna. It should be just one “Lingayats”. Nothing more or less or above and below. Alternative to Hindus?? Really? Do Jainism highlights anything like this? No. I see a strong sense of attachment towards calling Lingayats as Hindus. When Basavanna detached himself from vedic practice, why are the current leaders holding onto it? Instead of strengthening the community, there seem more cracks being created.

      • ಸರ್ ಸ್ವಲ್ಪ ಇತಿಹಾಸ ನೋಡಿ ಈ ಬಸವ ವಾದಿ ಕಾವಿಧಾರಿಗಳ ಮಠ, ಗಳ ಹಿನ್ನೆಲೆ ಏನು ಅಂಥ ತಿಳಿದುಕೊಂಡು ಜಂಗಮರ ಭಗ್ಗೆ ಮಾತಾಡಿ!!!!!!! ಹಾಗೆ ಕಲ್ಬುರ್ಗಿಯವರ ಎಲ್ಲಾ ಪೂಸ್ತಕ ಗಳ್ಳನು ಸ್ವಲ್ಪ ಓದಿ ನಿಮಗೆ ಇತಿಹಾಸ ತಿಳಿಯುತ್ತೆದೆ

    • 12 ನೆ ಶತಮಾನದಲ್ಲಿ ಅರಮನೆ,ಗುರುಮಾನೆ ಅವರು ಸೇರಿ, ರಾಜ ಪ್ರಭುತ್ವದವರೇ ದರ್ಬಾರ ಮಾಡಿದ್ದಾರೆ. ಅಲ್ಲದೆ ಬಸವಣ್ಣನವರನ್ನು ಗಡಿಪಾರು ಶಿಕ್ಷೆಗೆ ಒಳಪಡಿಸಿದ್ದಾರೆ. ರಾಜರು ಎಲ್ಲ ರೀತಿಯ ನಿರ್ಣಯಗಳನ್ನು ಗುರು ವರ್ಗದವರಿಬ್ಲಂದಲೇ ಸಲಹೆಪಡೆದು ಆಚರಣೆಗೆ ತರುತ್ತಿದ್ದರು. ಅಂಥ ದರ್ಬಾರ ಬಸವ ನೆಲದಲ್ಲಿ ಏಕೆ ಮಾಡಬೇಕು?
      ಈಗ ರಾಜರು ಎಲ್ಲ, ರಾಜ ಗುರುಗಳು ಇಲ್ಲ. ಆ ಆಚರಣೆಗಳು ಕೇವಲ ಗುಲಾಮಿ ಪದ್ಧತಿ ಸೂಚಿಸಲು ಮಾತ್ರ. ಧರ್ಮದ ಮೂಲ ಆಶಯಗಳನ್ನು ಗಳಿಗೆ ತೋರುತ್ತಿದ್ದಾರೆ. ಅದಕ್ಕೆ ಜನ ತೀವ್ರವಾಗಿ ವಿರೋಧಿಸಬಹುದು. ಶರಣು ಶರಣಾರ್ಥಿ, ಎಲ್ಲರಿಗೂ ಶುಭವಾಗಲಿ.

    • ಪಂಚ ಪೀಠ, ಪುರೋಹಿತಾಶಾಹಿಗಳು, ತಮ್ಮ ತಮ್ಮ ಸ್ವ ಸ್ಥಾನದಲ್ಲಿ ಏನಾದ್ರೂ ಮಾಡಲಿ. ಬಸವ ನೆಲದಲ್ಲಿ ಬಂದು ಏಕೆ ಆಚರಿಸಬೇಕು! ತಮ್ಮ ಕ್ಷೇತ್ರದಲ್ಲಿ, ತಮ್ಮ ಹಣದಲ್ಲಿ( ಸ್ವ ಆರ್ಜನೆಯಲ್ಲಿ) ಮಾಡಲಿ. ಜನರ ಹಣದಿಂದ ಏಕೆ! ಜನರ ಯಾವ ಉದ್ಧಾರಕ್ಕಾಗಿ. ಈಗ ರಾಜರು ಇಲ್ಲ, ರಾಜಗುರುಗಳು ಇಲ್ಲ. ದರ್ಬಾರ ಕೇವಲ ಅರ ಮನೆಯುವರು ಜನರ ಮನೋರಂಜನೆಗಾಗಿ ಏರ್ಪಡಿಸುತ್ತಿದ್ದರು. ರಾಜರು,ರಾಜಗುರುಗಳು ಬಸವಣ್ಣನವರನ್ನು ಗಡಿಪಾರು ಶಿಕ್ಷೆಗೆ ಒಳಪಡಿಸಿದ್ದಾರೆ. ಅಂಥ ಪಾಪೀ ಜನರು ಬಸವ ನೆಲದಲ್ಲೂ ತಮ್ಮ ಆಚರಣೆ ಮಾಡುತ್ತಿದ್ದಾರೆ. ಅದಕ್ಕೆ ಲಿಂಗಾಯತ ಧರ್ಮದ ಜನರು ಸಹನೆ ಕಳೆದುಕೊಳ್ಳುವ ನಿರೀಕ್ಷೆ ಇದೆ. ಅಲ್ಲಿ ಯಾವದೇ ಅವಹೇಳನ ಈ ೨೧ ನೇ ಶತಮಾನದಲ್ಲಿ ಮಾಡುವುದೇ?
      ಸಾಧ್ಯವಿಲ್ಲ. ಲಿಂಗಾಯಗಾಯತ ಧರ್ಮಕ್ಕೆ ಮಾನ್ಯತೆಯನ್ನು ತಡೆಹಿಡಿದಿರುವ ಪಂಚ ಪೀಠಗಳಿಗೆ ಇಲ್ಲೇನು ಕೆಲಸ? ಜಗದ ಮಾನವರೆಲ್ಲ ದೇವನ ಮಕ್ಕಳು ಎಂಬ ಅರಿವು ಮೂಡಲಿ, ಮಾನವ ಧರ್ಮಕ್ಕೆ ಜಯ ವಾಗಲಿ. ಲಿಂಗಾಯತ ಧರ್ಮಕ್ಕೆ ಸರಕಾರದ ಮಾನ್ಯತೆ ಸಿಗಲಿ. ಶರಣು ಶರಣಾರ್ಥಿ. ಎಲ್ಲರಿಗೂ ಶುಭವಾಗಲಿ.

      • ಹಾಗಿದ್ದರೆ ಇದೇ ಮಾತು ನಿಮಗು ಅನ್ವಯಿಸುತ್ತೆ ತಾನೇ, ನೀವು ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಬಸವ ಸಂಸ್ಕೃತಿ ಅಭಿಯಾನವನ್ನು ಮಾಡಿದ್ದೀರಿ ತಾನೆ, ಹಾಗಿದ್ದರೆ ನೀವೆಂತ ಹೀನಮಾನ ಸ್ಥಿತಿಯವರು ನಿಮ್ಮ ನೆಲದಲ್ಲಿ ಮಾಡಿಕೊಳ್ಳಿ, ನೀವೇನು ಸಾಚಾಗಳ ನೀವು ಜನರ ದುಡ್ಡಲ್ಲಿ ಮಾಡಿರೋದು!!!!!!!! ರಾಜಗುರುಗಳೆಂದರೆ ಬರಿ ಇವರನ್ನು ಯಾಕೆ ದುಷಿಸುತ್ತೀರಿ, ರಾಜಗುರುಗಳು ಬ್ರಾಹ್ಮಣರು ಇದ್ದರು ತಾನೆ!!!!! ಇತಿಹಾಸವನ್ನೇ ತಿರುಚಿದ ನಿಮ್ಮಂತ ಹೀನಮಾನ ಸ್ಥಿತಿಯವರಿಗೆ ಇದೆಲ್ಲ ಎಲ್ಲಿ ಗೊತ್ತಾಗಬೇಕು, ಮೂಲ ಇತಿಹಾಸವನ್ನು ಮರೆಮಾಚಿದವರು, ಕೆಲವು ಕಾವಿಧಾರಿಗಳು ಕೆಲವು ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಸಮಾಜವನ್ನೇ ಹಾಳು ಮಾಡಲು ಹೊರಟಿರುವ ನಿಮ್ಮಂತ ಮತಿಗೆಟ್ಟವರಿಗೆಲ್ಲಿ ಅರ್ಥವಾಗುತ್ತದೆ, ಮತ್ತೊಂದು ಧರ್ಮದ ಆಶ್ರಯದಲ್ಲಿ ಬೆಳೆದು, ಉಂಡ ಮನೆಗೆ ದ್ರೋಹ ಬಗೆಯುವ ನೀತಿ ನಿಮ್ಮದು,

    • ಶೂದ್ರರನ್ನು ಉದ್ಧಾರ ಮಾಡಲು ಲಿಂಗಾಯತ ಧರ್ಮ ಸ್ಥಾಪನೆ ಬಸವಣ್ಣ ಮಾಡಿದರು.
      ಅದೇ ಪರಿಶಿಷ್ಟ ಜಾತಿಯ ಬೇಡ ಜಂಗಮರನ್ನು ಲಿಂಗಾಯತರು ಹೆಗಲ ಮೇಲೆ ಹೊರಬೇಕು ಅನ್ನುವ ನಿಮ್ಮ ಹೇಸಿ ಮನಸ್ಸು ಎಂತಹದು?

  • ಇವರು ಮಾಡ್ತಾ ಇರೋದು ಬಸವ ಪ್ರಚಾರ ಅಲ್ಲ, ಹಿಂದೂ ಮತ್ತು ವೀರಶೈವರ ವಿರೋಧಕ್ಕಾಗಿ ಈ ಬಣ ಸೃಷ್ಟಿಯಾಗಿದೆ ಅನಿಸುತ್ತಿದೆ

    • ಬಸವಣ್ಣನವರ ಒಂದು ವಚನ ಹೀಗಿದೆ

      ಮಡಕೆ ದೈವ, ಮೊರ‌ ದೈವ , ಬೀದಿಯ ಕಲ್ಲು ದೈವ,

      ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೊ!

      ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೊ!

      *ದೈವ ದೈವವೆಂದು ಕಾಲಿಡಲಿಂಬಿಲ್ಲ, ದೈವನೊಬ್ಬನೆ ಕೂಡಲಸಂಗಮದೇವ*

      ಕಾಲಿಡಲು ಜಾಗವಿಲ್ಲದಷ್ಟು ದೇವರನ್ನು ಮಾಡಿದ್ದೀವಲ್ಲ ಎಂದು ಪ್ರಶ್ನಿಸಿದ ಶರಣರ ಇಂತಹ ವಚನಗಳು ಬೆಳಕಿಗೆ ಬಂದ ಮೇಲೆಯೇ ಅವರ ವೈಚಾರಿಕತೆಯ ಅರಿವಾಗಿದ್ದು.

      ಶರಣರು ತಮ್ಮ ಸಹಸ್ರ ವಚನಗಳಲ್ಲಿ ವೇದಗಳು, ಹದಿನೆಂಟು ಪುರಾಣಗಖಳು, ಹೋಮ, ಹವನ, ಶಿವ, ವಿಷ್ಣು, ಗಣಪ, ಕಾರ್ತಿಕ, ಪಾರ್ವತಿ, ಕೈಲಾಸ, ಸ್ವರ್ಗ, ಇಂದ್ರ, ಆರಾಧಿಸುವ ಅಗ್ನಿ ಇದಾವುದನ್ನೂ, ಸ್ತುತಿಸುವ, ಭಜಿಸುವ, ಹೊಗಳುವ, ಸಮರ್ಥಿಸುವ ವಚನಗಳಿಲ್ಲ.

      ಹಾಗಾಗಿಯೇ ಲಿಂಗಾಯತ ಸ್ವತಂತ್ರ ಧರ್ಮ, ಇದನ್ನು ಸಂಯುಕ್ತ ಕರ್ನಾಟಕದ ಸಂಪಾದಕರು ೫೦ ವರ್ಷದ ಕೆಳಗೆ ಹೇಳಿದ್ದಾರೆ, ಅಷ್ಟೇ ಏಕೆ ಗೋಲ್ವಾಲ್ಕರ್ ಅವರು ತಮ್ಮ ಪುಸ್ತಕದಲ್ಲಿ ಲಿಂಗಾಯತರನ್ನು ಇತರ ಧರ್ಮೀಯರಂದೇ ಸಂಭೋಧಿಸಿದ್ದಾರೆ.

      ಓದಿದ
      ಎಲ್ಲರಿಗೂ ಗೊತ್ತು, ಲಿಂಗಾಯತ ಒಂದು ಸ್ವತಂತ್ರ ಅವೈದಿಕ ಧರ್ಮ , ಆದರೆ ಲಿಂಗಾಯತರನ್ನು ರಾಜಕೀಯವಾಗಿ ಬಳಸಿಕೊಳ್ಳುವ ಹಿಂದೂ ಸಂಘಟನೆಗಳಿಗೆ ಲಿಂಗಾಯತರ ಅಸ್ಮಿತೆ ಪ್ರಶ್ನೆ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ ಅಷ್ಟೇ.

      • ಮಹಾತ್ಮಾ ಬಸವಣ್ಣನವರ ವಚನಗಳು ಸರ್ವ ಕಾಲಕ್ಕೂ ಪ್ರಸುತ. ಲಿಂಗಾಯತ ಧರ್ಮ ಸಮಾನತೆಯ ತೊಟ, ಇಲ್ಲಿ ಮೇಲು ಕೀಳು ಇಲ್ಲ. ಎಲ್ಲರೂ ಸಮಾನತೆಯ ತತ್ವದ ಪ್ರತಿಪಾದಕರು. ಎಲ್ಲರಿಗೂ ಶರಣು ಶರಣಾರ್ಥಿಗಳು. ಜೈ ಬಸವೇಶ್ವರ ಮಾರಾಜಕೀ ಜೈ.

      • ಅಲ್ಲರೀ, ನಿತೀಶ್… ಪಂಚಾಚಾರ್ಯರು ಶಿಲೋದ್ಭವರು ಎನ್ನುತ್ತಾರಲ್ಲಾ ಇದನ್ನೇ ನಂಬಿಸಲು ಯತ್ನಿ ಸುತ್ತಿದ್ದಾರಲ್ಲ… ಇಂದಿನ ದಿನಮಾನಗಳಲ್ಲಿ ನಂಬಬಹುದ? ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನ ಹೆಗಲ ಮೇಲೆ ಅಡ್ಡ ಪಲ್ಲಕ್ಕಿ ಹೆಸರಿನಲ್ಲಿ ಮೆರೆದಾಡುವುದು ಮನುಷ್ಯತ್ವವೇ ?

    • ಒಂದು ಸಾರಿ ಸನಾತನ ಹಿಂದೂಯುಕ್ತ ವೀರಶೈವರು ಅಂತೀರಿ.ಒಂದು ಸಾರಿ ನಾವು ವೀರಶೈವರು ಹಿಂದೂಗಳಲ್ಲಾ ಅಂತೀರಿ.ಮತ್ತೊಂದು ಸಾರಿ ನಾವು ಲಿಂಗಿ ಬ್ರಾಹ್ಮಣರು ಅಂತೀರಿ.ಮುಗದೊಂದು ಸಾರಿ ನಾವು ಬೇಡ ಜಂಗಮರು ಪರಿಶಿಷ್ಟ ಜಾತಿಯವರು ಅಂತೀರಿ.ಎಲ್ಲಾ ಹೇಳಿದ ಮೇಲೆ ನಾವು ವಿರಶೈವ ಲಿಂಗಾಯತರು ವೀರಶೈವ ಲಿಂಗಾಯತ ಎರಡೂ ಒಂದೇ ಅಂತೀರಿ.ಪರಿಶಿಷ್ಟ ಜಾತಿಯವರಾದರೆ ಲಿಂಗಾಯತ ಬೇಡ ಜಂಗಮ ಹೇಗೆ ಒಂದೇ ಆಗುತ್ತದೆ.ನೀವು ಜೀವಂತ ಇರುವಾಗಲೇ ಮನುಷ್ಯರ ಹೆಗಲು ಮೇಲೆ ಅಡ್ಡ ಪಲ್ಲಕ್ಕಿ ಉದ್ದ ಪಲಕ್ಕಿ ನೆಪ ಮಾಡಿಕೊಂಡು ರಾಜರು ಮೆರೆದ ಹಾಗೆ ಮೆರೆಯಲಿಕ್ಕೆ ಹೋಗುತ್ತೀರಿ.ಅಥವಾ ಆಂಧ್ರದಿಂದ ವಲಸ್ಸೆ ಬಂದ ಆರಾಧ್ಯ ಬ್ರಾಹ್ಮಣ ಪುರೋಹಿತ ವೀರಶೈವರಾ? ನೀವು ಸರಿಯಾಗಿ ಮೊದಲು ನಿಮ್ಮ ಗುರುತನ್ನು ಸ್ಪಷ್ಟವಾಗಿ ದಯವಿಟ್ಟು ತಿಳಿಸಿರಿ.

  • ಈ ಪಂಚ ಪೀಡೆಗಳು ಬಸವಣ್ಣವರ ಬಗ್ಗೆ ಹಗುರವಾಗಿ ಮಾತನಾಡಿದರೆ ಉಗ್ರ ಹೋರಾಟ ಮಾಡಲೇಬೇಕು ಬಸವಕಲ್ಯಾಣದ ಶರಣರ ಈ ನಿರ್ಧಾರಕ್ಕೆ ಧನ್ಯವಾದಗಳು

    • ಬಸವ ತತ್ವ ಅಂಥ ಹೇಳಿಕೊಂಡು, ಬಸವಣ್ಣನವರಿಗೆ ಮಸಿ ಬಳಿಯುತಿರುವ ನಿಮ್ಮಂಥ ಪೀಡೆಗಳು ಇರುವವರೆಗೂ, ಯಾವ ಸಮಾಜನು ಉಧಾರ ಆಗಲ್ಲ ಬಿಡಿ

    • ಸರ್ ನಿಮಗೆ ಬೇಡ ಬಿಡಿ, ನಿಮಗೆ ಬಸವ ತತ್ವ ಮೂಕ್ಯ ನಾ ಮಾಡಿಕೊಳ್ಳಿ ಯಾರು ಬೇಡ ಅಂತಿಲ್ವಲ್ಲ, ನೀವು ಯಾಕೆ ಬೇರೆಯವರ ಆಚರಣೆ ಅಲ್ಲೀ ಮೂಗು ತೂರಿಸೊದು???????

  • ಈ ಪೂಜ್ಯರು ಕೆಲವು ದುಷ್ಟಶಕ್ತಿಗಳು ವೀರಶೈವಲಿಂಗಾಯತರನ್ನು ಬೇರೆ ಬೇರೆ ಮಾಡುತ್ತಿವೆಯೆಂದು ಹೇಳಿರುವುದನ್ನು ದಿನಪತ್ರಿಕೆಗಳಲ್ಲಿ ಓದಿರಬಹದು. ಯಾರು ಆ ದುಷ್ಟಶಕ್ತಿಗಳು?

  • Babagoud Bhalki ಶಿರಾಶ್ಯಾಡ್ ತಾ ಇಂಡಿ ಬಿಜಾಪುರ ಜಿಲ್ಲೆ says:

    ಶರಣು ಶರಣಾರ್ಥಿ ನಾನು ಒಬ್ಬ ಲಿಂಗಾಯತ ಪಂಚಾಪಿತಾಧೀಶರು ಸರಿಯಾಗಿ ಮಾರ್ಗದರ್ಶನ ಮಾಡದೆ ವೈದಿಕ ಧರ್ಮದ ಆಚರಣೆ ತಂದು ಜನರಲ್ಲಿ ಬಸವಣ್ಣ ನವರ ಲಿಂಗಾಯತ ಧರ್ಮಕ್ಕೆ ಬಹಳ ನೋವು ತರುವಂತ್ ಆಚರಣೆ ಮಾಡುತ್ತಾ ಜನರನ್ನ ಮೂಡ್ ನಂಬಿಕೆಗೆ ತಳ್ಳುತ್ತಾ ರಾಜಕೀಯ ಪಕ್ಷಗಳ ಕೈ ಗೊಂಬೆ ಯಾಗಿ ಕೆಲಸಮಾಡುತ್ತಿವೆ ಯಾವುದೇ ಕಾರಣಕ್ಕೂ ಬಸವಣ್ಣ ನವರನ್ನ ಲಿಂಗಾಯತ ಧರ್ಮದ ಕುರಿತು ಅವಹೇಳನ ಕಾರಿ ಹೇಳಿಕೆ ಮಾಡಿದರೆ ಹೋರಾಟಕ್ಕೆ ನಮ್ಮ ಬೆಂಬಲ್ ವಿದೆ

  • Babagoud Bhalki ಶಿರಾಶ್ಯಾಡ್ ತಾ ಇಂಡಿ ಬಿಜಾಪುರ ಜಿಲ್ಲೆ says:

    ಶರಣು ಶರಣಾರ್ಥಿ ನಾನು ಒಬ್ಬ ಲಿಂಗಾಯತ ಪಂಚಾಪಿತಾಧೀಶರು ಸರಿಯಾಗಿ ಮಾರ್ಗದರ್ಶನ ಮಾಡದೆ ವೈದಿಕ ಧರ್ಮದ ಆಚರಣೆ ತಂದು ಜನರಲ್ಲಿ ಬಸವಣ್ಣ ನವರ ಲಿಂಗಾಯತ ಧರ್ಮಕ್ಕೆ ಬಹಳ ನೋವು ತರುವಂತ್ ಆಚರಣೆ ಮಾಡುತ್ತಾ ಜನರನ್ನ ಮೂಡ್ ನಂಬಿಕೆಗೆ ತಳ್ಳುತ್ತಾ ರಾಜಕೀಯ ಪಕ್ಷಗಳ ಕೈ ಗೊಂಬೆ ಯಾಗಿ ಕೆಲಸಮಾಡುತ್ತಿವೆ ಯಾವುದೇ ಕಾರಣಕ್ಕೂ ಬಸವಣ್ಣ ನವರನ್ನ ಲಿಂಗಾಯತ ಧರ್ಮದ ಕುರಿತು ಅವಹೇಳನ ಕಾರಿ ಹೇಳಿಕೆ ಮಾಡಿದರೆ ಹೋರಾಟಕ್ಕೆ ನಮ್ಮ ಬೆಂಬಲ್ ವಿದೆ

  • ನಮ್ಮ ಲಿಂಗಾಯತ ಧರ್ಮದ ಅಸ್ಮಿತೆ ನಮಗೆಲ್ಲ ಮಾರ್ಗದರ್ಶನ. ಇತಿಹಾಸದ ಹೊರತಾದ ಕಟ್ಟುಕತೆಗಳ ವೀರಶೈವ ಬೇಕಾಗಿಲ್ಲ. ಇಂದಿನ ಜಾಗತಿಕ ನೆಲೆಯಲ್ಲಿ ನಮ್ಮನ್ನು ನಾವು ಗುರುತಿಸಿಕೊಂಡು ಮುನ್ನಡೆಯಬೇಕಾಗಿದೆ. ಇದು ಈ ಸಂಪ್ರದಾಯವಾದಿಗಳಿಗೆ ತಿಳಿಯದು. ಅವರ ವಿರೋಧಕ್ಕೆ ಸೊಪ್ಪುಹಾಕಬೇಕಾಗಿಲ್ಲ.

Leave a Reply

Your email address will not be published. Required fields are marked *