ಬಸವಕಲ್ಯಾಣ
ಸಮಾನತೆ, ಸಹೋದರತೆಗಾಗಿ ಪ್ರಾಣ ಬಲಿದಾನ ಮಾಡಿದ ಶರಣ ಸ್ಮರಣೆಗಾಗಿ ಶರಣ ವಿಜಯೋತ್ಸವ, ಲಿಂಗವಂತ ಹುತಾತ್ಮ ದಿನಾಚರಣೆಯನ್ನು ದಿನಾಂಕ: ೨೨-೦೯-೨೦೨೫ ರಿಂದ ೦೨-೧೦-೨೦೨೫ ರವರೆಗೆ ಇಲ್ಲಿನ ಹರಳಯ್ಯನವರ ಗವಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ನುಡಿದರು.
ಅವರು ಇಲ್ಲಿನ ಹರಳಯ್ಯನವರ ಕಾರ್ಯಕ್ರಮದ ನಿಮಿತ್ಯ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ೨೨ ರಂದು ಮುಂಜಾನೆ ೮-೦೦ ಗಂಟೆಗೆ ಆರಂಭೋತ್ಸವ. ಪೂಜ್ಯರ ಸಾನಿಧ್ಯದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಪ್ರಾರ್ಥನೆಯೊಂದಿಗೆ ಆರಂಭಿಸಿ ಸಕಲ ವೈಭವದೊಂದಿಗೆ ಪರುಷಕಟ್ಟೆಯವರೆಗೆ ವಚನ ಸಾಹಿತ್ಯದ ಪಲ್ಲಕ್ಕಿ ಉತ್ಸವ ವಚನ ಪಠಣದೊಂದಿಗೆ ಮಂಗಲಗೊಳ್ಳುವುದು.
೨೨-೦೯-೨೦೨೫ ಸೋಮವಾರ ಸಾಯಂಕಾಲ ೬-೦೦ ಗಂಟಗೆ ಉದ್ಘಾಟನೆ. ಜೇವರ್ಗಿ ಜಿಲ್ಲೆಯ ಸೊನ್ನ ವಿರಕ್ತಮಠದ ಪೂಜ್ಯರಾದ ಶಿವಾನಂದ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ, ಅಥಣಿ ಅಲ್ಲಮಪ್ರಭು ಮಠದ ಪೂಜ್ಯರಾದ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಸಾನಿಧ್ಯ ಪೂಜ್ಯ ಡಾ. ಗಂಗಾಂಬಿಕಾ ಅಕ್ಕನವರ ನೇತೃತ್ವದಲ್ಲಿ ಅರಣ್ಯ ಜೀವಿಶಾಸ್ತ್ರ ಪರಿಸರ ಇಲಾಖೆ ಸಚಿವರು ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ. ಖಂಡ್ರೆ ಉದ್ಘಾಟಿಸುವರು.
ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಿಕೊಳ್ಳುವರು. ಮಾಜಿ ವಿಧಾನ ಪರಿಷತ್ತು ಸದಸ್ಯರಾದ ವಿಜಯಸಿಂಗ್, ಶ್ರೀ ಬಸವೇಶ್ವರ ದೇವಸ್ಥಾನ ವಿಶ್ವಸ್ಥ ಸಮಿತಿ ಅಧ್ಯಕ್ಷರಾದ ಶಶಿಕಾಂತ ದುರ್ಗೆ, ಶ್ರೀ ಬಸವೇಶ್ವರ ದೇವಸ್ಥಾನ ಪಂಚಕಮಿಟಿ ನಿರ್ದೇಶಕರಾದ ಅನಿಲಕುಮಾರ ರಗಟೆ, ವಿಜಯಲಕ್ಷ್ಮಿ ಗಡ್ಡೆ, ಕಲಬುರಗಿಯ ರಾಜಶೇಖರ ಯಂಕಂಚಿ, ಬೀದರ ಬಸವ ಸೇವಾ ಪ್ರತಿಷ್ಠಾನದ ಗುಂಡಪ್ಪ ಬಳತೆ, ಅಶೋಕ ವಡಗಾಂವೆ ಶರಣಬಸವ ಪಾರಾ ಉಪಸ್ಥಿತರಿರುವರು.
ಹರಳಯ್ಯ ಸಮಾಜ ಬಸವಕಲ್ಯಾಣದ ಅಧ್ಯಕ್ಷರಾದ ಶಿವಾಜಿ ಕಾಂಬಳೆ ಧ್ವಜಾರೋಹಣ ನೇರವೇರಿಸುವರು. ಆಕಾಶವಾಣಿ ಕಲಾವಿದ ಶಿವಕುಮಾರ ಪಂಚಾಳ ಮತ್ತು ಸಂಗಡಿಗರಿಂದ ವಚನ ಸಂಗೀತ ನೇರವೇರುವುದು. ಜ್ಞಾನ ಭಾರತಿ ತಂಡ ವಚನ ನೃತ್ಯ ನಡೆಸಿಕೊಡುವರು.
೨೩-೦೬-೨೦೨೫ ರಂದು ಮಕ್ಕಳ ಸಮಾವೇಶ. ಅನುಭವ ಮಂಟಪ ಸಂಚಾಲಕರಾದ ಪೂಜ್ಯ ಶಿವಾನಂದ ಸ್ವಾಮಿಗಳು ಸಾನಿಧ್ಯದಲ್ಲಿ, ನ್ಯಾಯಾಧೀಶರಾದ ಯಶ್ವಂತ ಪಾಟೀಲ ಉದ್ಘಾಟಿಸುವರು, ಬಿಡಿವಿಸಿ ವಿಶ್ವಸ್ಥರಾದ ಬಸವರಾಜ ಪಾಟೀಲ ಅಧ್ಯಕ್ಷತೆ ವಹಿಸಿಕೊಳ್ಳುವರು.
ಮಕ್ಕಳಿಂದಲೇ ಉಪನ್ಯಾಸ, ನಾಟಕ, ವಚನ ನೃತ್ಯ, ವಚನ ಗಾಯನ, ರೂಪಕಗಳು ಜರುಗಲಿವೆ. ಕಲಬುರ್ಗಿಯ ಕಲಾವಿದ ಗುಣವಂತ ಹಾಸ್ಯ ಮತ್ತು ಗೊಂಬೆ ಕಲೆಯನ್ನು ನಡೆಸಿಕೊಡುವರು.
೨೪-೧೦-೨೦೨೫ ರಂದು ಸಾಯಂಕಾಲ ೬-೦೦ ಗಂಟೆಗೆ ಮಹಾಶಕ್ತಿ ಕೂಟಗಳ ಸಮಾವೇಶ. ಗೋಷ್ಠಿಯನ್ನು ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ, ಬೆಂಗಳೂರು ಅಧ್ಯಕ್ಷರಾದ ಮಾಲಾ ಬಿ. ನಾರಾಯಣರಾವ ಉದ್ಘಾಟಿಸುವರು. ತುಮಕೂರ ಸಿದ್ಧಗಂಗಾ ಆಸ್ಪತ್ರೆಯ ಕಾರ್ಯಾಚರಣೆ ವ್ಯವಸ್ಥಾಪಕರಾದ ಡಾ. ರೂಪಾ ಜಿ.ಬಿ. ಅನುಭಾವ ನೀಡುವರು. ಸುವರ್ಣಾ ಚಿಮಕೊಡೆ ಅವರಿಗೆ ಶರಣ ನಾಯಕ ಪ್ರಶಸ್ತಿನೀಡಿ ಗೌರವಿಸಲಾಗುವದು.
ಸುಶೀಲಾಬಾಯಿ ಹೊಳಕುಂದೆ ಅಧ್ಯಕ್ಷತೆ ವಹಿಸಿಕೊಳ್ಳುವರು. ಪ್ರೊ. ಮಲ್ಲಮ್ಮ ಪಾಟೀಲ ಭಾಲ್ಕಿ ಇವರು ಸೇರಿದಂತೆ ಇತರರು ಉಪಸ್ಥಿತರಿರುವರು.
ಸಾಯಂಕಾಲ ೬-೦೦ ಗಂಟೆಗೆ ವೀರ ಸೈನಿಕರ ವೇದಿಕೆ ಗೋಷ್ಠಿಯನ್ನು ನಗರಸಭೆ ಪೌರಾಯುಕ್ತ ರಾಜು ಬಣಕಾರ ಉದ್ಘಾಟಿಸುವರು. ಕಾರ್ಗಿಲ್ ಹಿರೋ ಇಂಡಿಯನ್ ಆರ್ಮಿಯ ಕ್ಯಾಪ್ಟನ್ ನವೀನ ನಾಗಪ್ಪ ಅನುಭಾವ ನೀಡುವರು. ಜಿಲ್ಲಾ ಹಾಗೂ ತಾಲೂಕು ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿರುವರು. ರಾಧಾ ಯವಳೆ ಇವರಿಂದ ದೇಶ ಭಕ್ತಿಗೀತೆಗಳು ಹಾಗೂ ಮಕ್ಕಳಿಂದ ಅಪರೇಷನ್ ಸಿಂಧೂರ ರೂಪಕ ಜರುಗಲಿದೆ.
೨೬-೦೯-೨೦೨೫ ರಂದು ಸಾಯಂಕಾಲ ೬ ಗಂಟೆಗೆ ಪೂಜ್ಯ ಸಿದ್ಧರಾಮೇಶ್ವರ ಸ್ವಾಮಿಗಳ ಸಾನಿಧ್ಯದಲ್ಲಿ ತಹಸೀಲ್ದಾರ ದತ್ತಾತ್ರೆಯ ಗಾದಾ ಉದ್ಘಾಟಿಸುವರು. ಕಲಬುರಗಿಯ ಪ್ರೊ. ಶಿವರಾಜ ಪಾಟೀಲ ಅನುಭಾವ ನೀಡುವರು. ಶಿವಾನಿ ಶಿವದಾಸ ತಂಡದಿಂದ ವಚನ ಗಾಯನ ನಡೆಯಲಿದೆ.
೨೭-೦೯-೨೦೨೫ ರಂದು ಸಾಯಂಕಾಲ ೬-೦೦ ಗಂಟೆಗೆ ಸೂತ್ರದ ಗೊಂಬೆಯಾಟ ಪೂಜ್ಯ ಪಂಚಾಕ್ಷರಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ, ಬಸವರಾಜ ಪಾಟೀಲ ಸೇಡಂ ಉದ್ಘಾಟಿಸುವರು.
ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೊರಕೆ ಅಧ್ಯಕ್ಷತೆ ವಹಿಸಿಕೊಳ್ಳುವರು. ಇಸ್ರೋ ಸಮೂಹ ನೆವಿಗೇಶಷನ್ ಸಿಸ್ಸಮ್ ಡೈರೆಕ್ಟರ್ ರೂಪಾ ಎಂ.ವಿ. ಅನುಭಾವ ನೀಡುವರು. ಉತ್ತರಕನ್ನಡ ಜಿಲ್ಲೆಯ ಹಳಿಯಾಳದ ಹೊಂಗಿರಣ ಗೊಂಬೆಯಾಟ ಕಲಾ ತಂಡದವರು ಸೂತ್ರದ ಗೊಂಬೆಯಾಟ ನಡೆಸಿಕೊಡುವರು.
೨೮.೦೯.೨೦೨೫ ರಂದು ಸಾಯಂಕಾಲ ೬ ಗಂಟೆಗೆ ಲಿಂಗಾಯತ ಸ್ವತಂತ್ರ ಧರ್ಮ ಗೋಷ್ಠಿಯನ್ನು ಪೂಜ್ಯ ಸಿದ್ಧರಾಮ ಶರಣರು ಬೆಲ್ದಾಳ ಸಾನಿಧ್ಯದಲ್ಲಿ, ಜಾಲಿಂಮ ಸಭೆ ಹಿರಿಯ ಉಪಧ್ಯಕ್ಷರಾದ ಬಸವರಾಜ ಬುಳ್ಳಾ ಉದ್ಘಾಟಿಸಲಿದ್ದು ರಾಜೇಂದ್ರ ಜೊನ್ನಿಕೇರಿ, ರಾಜೇಂದ್ರಕುಮಾರ ಗಂದಗೆ, ಆನಂದ ದೇವಪ್ಪಾ ಸೇರಿದಂತೆ ಇತರರು ಉಪಸ್ಥಿತರಿರುವರು.
೨೯-೦೯-೨೦೨೫ ಸಾಯಂಕಾಲ ೬ ಗಂಟೆಗೆ ಮರೆತು ಹೋದ ಲಿಂಗಾಯತ ಮಹಾಸಾಮ್ರಾಜ್ಯ ವಿಜಯನಗರ ಪೂಜ್ಯಶ್ರೀ ಅಭಿನವ ಚನ್ನಬಸವ ಸ್ವಾಮಿಗಳು ಮಂಠಾಳ ಸಾನಿಧ್ಯದಲ್ಲಿ, ನಿವೃತ್ತ ಡೀನರಾದ ಡಾ. ಅಮರನಾಥ ಸೋಲಪುರೆ ಅನುಭಾವ ನೀಡುವರು. ಶರಣಪ್ಪ ಮಿಠಾರೆ, ಕ.ಸಾ.ಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಇತರರು ಇರುವರು.
೩೦-೦೯-೨೦೨೫ ಸಾಯಂಕಾಲ ೬ ಗಂಟೆಗೆ ಬಸವ ಬೆಳಕು ಆಂಧ್ರ, ಮಹಾರಾಷ್ಟ್ರ, ತೆಲಂಗಾಣ ಗೋಷ್ಠಿ ಸಂಸದ ಸಾಗರ ಖಂಡ್ರೆ ಉದ್ಘಟಿಸುವರು. ಚಂದ್ರಶೇಖರ ಸರಸ್ವತಿ ವಿಶ್ವವಿದ್ಯಾಲಯ ತೆಲಂಗಾಣ ಕುಲಪತಿ ಪ್ರೊ. ಎಸ್, ಜಯರಾಂ ರೆಡ್ಡಿ, ತೆಲುಗು ಯುನಿರ್ವಸಿಟಿ ಹೈದ್ರಬಾದನ ಮಾಜಿ ಕುಲಪತಿ ಥಾಂಗೆಡ ಕಿಸಾನರಾವ, ಗುಂಟೂರ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಕುರಪತಿ ನೀಲಕಂಠೇಶ್ವರ ಪ್ರಸಾದ ಮುಖ್ಯ ಅತಿಥಿಗಳಾಗಿ ಆಗಮಿಸುವರು. ಡಾ. ಜಿ.ಎಸ್. ಬುರಾಳೆ ಅಧ್ಯಕ್ಷತೆ ವಹಿಸಿಕೊಳ್ಳುವರು. ಶಿವಾನಂದ ದಾಪಶೆಟ್ಕರ ಮಹಾರಾಷ್ಟ ಬಸವ ಕೀರ್ತನ ನಡೆಸಿಕೊಡುವರು.
೦೧-೧೦-೨೦೨೫ ಮುಂಜಾನೆ ೧೧ ಗಂಟೆಗೆ ಹುತಾತ್ಮ ದಿನಾಚರಣೆ. ಪೂಜ್ಯ ಬಸವಪ್ರಭು ಸ್ವಾಮಿಗಳ ಸಾನಿಧ್ಯದಲ್ಲಿ ಡಾ. ಸೋಮನಾಥ ಯಾಳವಾರ ಅನುಭಾವ ನೀಡುವರು.
ವಿವಿಧ ಕ್ಷೇತ್ರ ಸಾಧಕರಿಗೆ ಶರಣ ನಾಯಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಮಧ್ಯಾಹ್ನ ೩ ಗಂಟೆಗೆ ಹುತಾತ್ಮ ಶರಣ ಎಳೆಹೂಟೆ ಮೆರವಣಿಗೆ: ಕೋಟೆಯಿಂದ ಹರಳಯ್ಯ ಗವಿಯವರೆಗೆ. ಕಲುಬುರಗಿ ಗ್ರಾಮಿಣ ಮತ ಕ್ಷೇತ್ರದ ಶಾಸಕರಾದ ಬಸವರಾಜ ಮತ್ತಿಮೂಡ ಮೆರವಣಿಗೆಗೆ ಚಾಲನೆ ನೀಡುವರು. ಸಿಪಿಐ ಅಲಿಸಾಬ ವಚನ ಪಠಣ ಮಾಡುವರು.

ಶರಣರ ತಲೆಯ ಮೇಲೆ ವಚನ ಸಾಹಿತ್ಯ ಎತ್ತಿನ ಬಂಡಿಯ ಮೇಲೆ ಶರಣರ ಸ್ತಬ್ಧ ಚಿತ್ರಗಳು, ಕುದುರೆ ಒಂಟೆಯ ಮೇಲೆ ಶರಣ ವೇಷಧಾರಿಗಳು, ಭಜನಾ ತಂಡಗಳು, ಡೊಳ್ಳು, ವಚನ ವಡಪು, ಜಾನಪದ ತಂಡಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಲಿವೆ.
ಸಾಯಂಕಾಲ ೬ ಗಂಟೆಗೆ ಶರಣ ವಿಜಯ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯವನ್ನು ನಿಡಸೋಸಿ ಜಗದ್ಗುರು ಸಿದ್ಧ ಸಂಸ್ಥಾನ ಮಠದ ಪೂಜ್ಯಶ್ರೀ ಜಗದ್ಗುರು ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಗಳು, ಪಾಂಟೋಮಟ್ಟಿಯ ಡಾ. ಶಿವಾನಂದ ಮಹಾಸ್ವಾಮಿಗಳು, ಹುಲಸೂರಿನ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು, ಭಾಲ್ಕಿಯ ಪೂಜ್ಯ ಗುರುಬಸವ ಪಟ್ಟದ್ದೇವರು ವಹಸಿಕೊಳ್ಳಲಿದ್ದು, ಪೂಜ್ಯ ಶ್ರೀ ಡಾ. ಗಂಗಾಂಬಿಕಾ ಅಕ್ಕ ನೇತೃತ್ವ ವಹಿಸಿಕೊಳ್ಳುವರು.
ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಉದ್ಘಾಟಿಸುವರು. ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸಿಕೊಳ್ಳುವರು. ಧನರಾಜ ತಾಳಂಪಳ್ಳಿ, ಡಾ. ವಿಜಯಶ್ರೀ ಬಶೆಟ್ಟಿ, ಸೋಮಶೇಖರ ಪಾಟೀಲ ಗಾದಗಿ ಸೇರಿದಂತೆ ಸಮಾಜದ ಮುಖಂಡರು ಪಾಲ್ಗೊಳ್ಳುವರು.
ಶರಣ ವಿಜಯ ರಾಷ್ಟೀಯ ಪುರಸ್ಕಾರ: ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರತಿ ವರ್ಷ ಶರಣ ವಿಜಯ ರಾಷ್ಟ್ರೀಯ ಪುರಸ್ಕಾರ ನೀಡಲಾಗುತ್ತಿದ್ದು, ೨೦೨೫ ನೇ ಸಾಲಿಗೆ ಪೂಜ್ಯ ಡಾ. ನಾಡೋಜ ಬಸವಲಿಂಗ ಪಟ್ಟದ್ದೇವರು ಅವರಿಗೆ ಪ್ರಧಾನ ಮಾಡಲಾಗುವುದು. ಪ್ರಶಸ್ತಿಯು ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ.
೦೨-೧೦-೨೦೨೫ ರಂದು ಶರಣ ವಿಜಯೋತ್ಸವ ಮಂಗಲ ಸಮಾರಂಭ ಸರ್ವರಿಂದ ವಚನ ಪಠಣ ನಡೆಯಲಿದೆ ಎಂದರು.
ದಿನಾಂಕ: ೨೭-೦೯-೨೦೨೫ ರಂದು ಶನಿವಾರ ಮುಂಜಾನೆ ೧೧.೦೦ ಗಂಟೆಗೆ ಯುವ ಸಮಾವೇಶ ನಡೆಯಲಿದ್ದು ಇಸ್ರೋದ ಚಂದ್ರಯಾನ -೩ ಯೋಜನೆಯ ಉಪನಿರ್ದೇಕರಾದ ರೂಪಾ ಎಂ.ವಿ ಅವರು ಉಪನ್ಯಾಸ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿಕೊಡಲಿದ್ದಾರೆ.
ದಿನಾಂಕ: ೨೨-೦೯-೨೦೨೫ ರಿಂದ ೦೧-೧೦-೨೦೨೫ ರವರೆಗ ಬೆಳಗ್ಗೆ ಸಾಮೂಹಿಕ ವಚನ ಇಷ್ಟಲಿಂಗ ಪೂಜಾ ಯೋಗ, ಪ್ರಭುಲಿಂಗಲೀಲೆ ಪ್ರವಚನ ನಡೆಯಲಿದೆ. ಮುಂಜಾನೆ ೧೧ ಗಂಟೆಗೆ ವಚನ ಓದು, ಗಣ ನಾಯಕ-ನಾಯಕಿಯರ ಸಮಾವೇಶ ಜಾನಪದ ಗಾಯನ, ಕೋಟೆಯ ಸ್ವಚ್ಚತಾ , ಭಜನೆ, ಕೀರ್ತನೆ ಕಥನಗಳು ನಡೆಯಲಿವೆ.
ಆದ್ದರಿಂದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕೆಂದರು. ಶ್ರೀ ಬಸವೇಶ್ವರ ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷ ಚನ್ನಪ್ಪ ಪ್ರತಾಪೂರೆ, ತಾಲೂಕ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಗುರುನಾಥ ಗಡ್ಡೆ, ಶಂಕರ ಕರಣೆ, ಸೋನಲಿಕಾ ನೀಲಕಂಠೆ, ರಾಜಶೆಖರ ಬಿರಾದಾರ, ಶಿವಕುಮಾರ ಬಿರಾದಾರ ಸೇರಿದಂತೆ ಇತರರಿದ್ದರು.
ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/LeqMgqmTFRYEVSrkuQhpeJ