ನಂಜನಗೂಡು
ಶ್ರೀಕಂಠೇಶ್ವರ ನಗರ ಜಂಗಮ ಮಾರ್ಗದಲ್ಲಿ ವಾಸವಾಗಿರುವ ರೂಪ-ಮಂಜುನಾಥ ದಂಪತಿ ಮನೆಯಲ್ಲಿ ವಿಶ್ವ ಬಸವಸೇನೆ ಸಹಯೋಗದೊಂದಿಗೆ ಇಷ್ಟಲಿಂಗ ದೀಕ್ಷಾ ಮತ್ತು ಗರ್ಭಲಿಂಗ ದೀಕ್ಷಾ ಕಾರ್ಯಕ್ರಮ ನಡೆಯಿತು. ಸುಮಾರು 50 ಹೆಚ್ಚು ಬಸವ ಭಕ್ತರು ಗುಂಡ್ಲುಪೇಟೆ ತಾಲ್ಲೂಕಿನ ಮೂಡುಗೂರು ವಿರಕ್ತ ಮಠದ ಪೂಜ್ಯ ಉದ್ಧಾನಸ್ವಾಮಿಗಳಿಂದ ಇಷ್ಟಲಿಂಗ ದೀಕ್ಷೆ ಪಡೆದರು.
ಸಾನಿಧ್ಯ ಮತ್ತು ಇಷ್ಟಲಿಂಗ ಪೂಜೆಯೊಂದಿಗೆ ಶ್ರೀಗಳು ದೀಕ್ಷೆ ನೀಡಿ, ಇಷ್ಟಲಿಂಗ ಯೋಗವು ಜಗತ್ತಿನ ಸರ್ವಶ್ರೇಷ್ಠ ಯೋಗವಾಗಿರುವುದರಿಂದ ವಿದ್ಯಾರ್ಥಿಗಳ ಅಧ್ಯಯನಕ್ಕೆ ಬಹಳ ಸಹಕಾರಿಯಾಗಲಿದೆ ಎಂದು ಇಷ್ಟಲಿಂಗ ಯೋಗದ ಮಹತ್ವ ತಿಳಿಸಿದರು. ನಂಜನಗೂಡಿನ ಅನುರಾಗ ಮಕ್ಕಳ ಮನೆ ಮತ್ತು ಜಗನ್ಮಾತೆ ಅಕ್ಕಮಹಾದೇವಿ ಉಚಿತ ಮಹಿಳಾ ವಿದ್ಯಾರ್ಥಿನಿಲಯ ವಿದ್ಯಾರ್ಥಿನಿಯರು ಇಷ್ಟಲಿಂಗ ದೀಕ್ಷೆ ಪಡೆದರು.

ಕಾರ್ಯಕ್ರಮವನ್ನು ವಿಶ್ವ ಬಸವಸೇನೆ ಪದಾಧಿಕಾರಿಗಳು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶರಣ ಪ್ರಸಾರ ವೇದಿಕೆಯ ಅಧ್ಯಕ್ಷ ಕಾ.ಸು. ನಂಜಪ್ಪನವರು ದೀಕ್ಷೆ ಎಂದರೆ ಗುರು ತನ್ನ ಹಸ್ತಮಸ್ತಕ ಸಹಯೋಗದ ಮುಖಾಂತರ ಭಕ್ತರಿಗೆ ಜ್ಞಾನ ಮಾರ್ಗ ತೋರುವುದಾಗಿದೆ ಎಂದು ತಿಳಿಸಿದರು.
ನಂಜನಗೂಡಿನ ಬ್ರಾಂಡ್ ನ್ಯೂ ಗಿಪ್ಟ್ ಸೆಂಟರ್ ಮಾಲೀಕರಾದ ಆನಂದ್ ಅವರ ಮಡದಿಗೆ ಗರ್ಭಲಿಂಗ ದೀಕ್ಷೆಯನ್ನು ಶ್ರೀಗಳು ನೀಡಿ ಬಸವಣ್ಣನವರು ಅಕ್ಕ ನಾಗಲಾಂಬಿಕೆಯವರಿಗೆ ಗರ್ಭಲಿಂಗ ದೀಕ್ಷೆ ನೀಡಿದ ಪರಿಣಾಮ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರಿಗೆ ಜನ್ಮ ನೀಡಿದ ಬಗ್ಗೆ ತಿಳಿಸಿ ಅದರ ಮಹತ್ವ ಅರಿಯಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶ್ವ ಬಸವ ಸೇನೆ ಅಧ್ಯಕ್ಷರಾದ ಬಸವಯೋಗೇಶ, ಮಕ್ಕಳ ಮನೆ ಸೋಮಣ್ಣ, ಅಕ್ಕಮಹಾದೇವಿ ವಿದ್ಯಾರ್ಥಿ ನಿಲಯದ ಚನ್ನಪ್ಪಣ್ಣ, ವಸಂತಕ್ಕ, ವಿಶ್ವ ಬಸವ ಸೇನೆಯ ಪದಾಧಿಕಾರಿಗಳಾದ ಹಂಗಳಪುರ ಸುರೇಶಣ್ಣ, ಜ್ಯೋತಿ ಅಕ್ಕ, ಕಲ್ಪುರ ಮಹೇಶ, ಕಸುವಿನಹಳ್ಳಿ ಮಹಾದೇವಸ್ವಾಮಿ, ಬ್ರಾಂಡ್ ನ್ಯೂ ಆನಂದ್, ಆಯರಳ್ಳಿ ಪ್ರಭುಸ್ವಾಮಿ, ಮುದ್ದಹಳ್ಳಿ ಅಶೋಕ್, ಪವಿತ್ರಕ್ಕ, ಕವಿತಕ್ಕ, ಶಿಕ್ಷಕರಾದ ನಂದೀಶ್ವರ ಹಾಗು ಹಲವು ಬಸವ ಭಕ್ತರು ಭಾಗವಹಿಸಿದ್ದರು.