ಬೆಳಗಾವಿ
ಮುಂಬರುವ ಸಾಮಾಜಿಕ ಹಾಗೂ ಶೈಕ್ಷಣಿಕ ಜನಗಣತಿ ಕುರಿತು ಚಿಂತನ ಮಂಥನ ನಡೆಯಿತು. ಅಂತಿಮವಾಗಿ ‘ಲಿಂಗಾಯತ ಧರ್ಮ’ ಎಂದು ಬರೆಸಲು ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ಎಲ್ಲರೂ ಲಿಂಗಾಯತ ಎಂದೇ ಬರೆಸಲು ಮನವಿ ಸಹ ಮಾಡಲಾಯಿತು.
ಲಿಂಗಾಯತ ಸಂಘಟನೆ ವತಿಯಿಂದ ಡಾ. ಫ. ಗು. ಹಳಕಟ್ಟಿ ಭವನದಲ್ಲಿ ವಾರದ ಸಾಮೂಹಿಕ ಪ್ರಾರ್ಥನೆ ಮತ್ತು ಚಿಂತನಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಈರಣ್ಣ ದೇಯಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಬರುವ ಗಣತಿಯಲ್ಲಿ ಇತರೆ ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಎಂದೇ ಬರೆಸಬೇಕು. ಇದು ಸ್ವತಂತ್ರ ಧರ್ಮ ಹೋರಾಟಕ್ಕೆ ಬಲವನ್ನೂ ನೀಡಲಿದೆ. ಸೌಲಭ್ಯ ಸಿಗಲು, ಕೇಳಲು ಅನುಕೂಲವಾಗುತ್ತದೆ ಎಂದರು.
ಬಿ.ಪಿ. ಜೇವಣಿ, ಮಹಾದೇವ ಕೆಂಪಿಗೌಡರ, ಬಾಬಣ್ಣ ತಿಗಡಿ, ಆನಂದ ಕರಕಿ, ಅಕ್ಕಮಹಾದೇವಿ ತೆಗ್ಗಿ, ಬಸವರಾಜ ಬಿಜ್ಜರಗಿ, ಸುನೀಲ ಸಾಣಿಕೊಪ್ಪ, ವಿ.ಕೆ. ಪಾಟೀಲ, ಸದಾಶಿವ ದೇವರಮನಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ದಾಸೋಹ ಸೇವೆಯನ್ನು ಕುಮಾರಿ ಮೇಘನಾ ಲೋಗಾವಿ ಮಾಡಿದರು. ಶೇಖರ ವಾಲಿಇಟಗಿ, ಲಕ್ಷ್ಮಣ ಕುಂಬಾರ, ಪ.ಬ. ಕರಿಕಟ್ಟಿ, ಮತ್ತಿಕೊಪ್ಪ ದಂಪತಿ, ಜಯಶ್ರೀ ನಷ್ಟೆ, ಶಾಂತಾ ಕಂಬಿ, ದೀಪಾ ಪಾಟೀಲ, ಲಕ್ಷ್ಮಿ ಜೇವಣಿ, ಮಹಾದೇವಿ ಘಾಟೆ, ಅಕ್ಕನವರ ದಂಪತಿ, ಬಿ.ಬಿ. ಮಠಪತಿ, ಮಹಾಂತೇಶ ಮೆಣಸಿನಕಾಯಿ, ಶಿವಾನಂದ ತಲ್ಲೂರ ಉಪಸ್ಥಿತರಿದ್ದರು.
ಸುರೇಶ ನರಗುಂದ ಸ್ವಾಗತಿಸಿದರು. ಸಂಗಮೇಶ ಅರಳಿ ನಿರೂಪಣೆ ಮಾಡಿದರು. ಶರಣ ಶರಣೆಯರು ಉಪಸ್ಥಿತರಿದ್ದರು.