ಶರಣ ವಿಜಯೋತ್ಸವದಲ್ಲಿ ಮಕ್ಕಳ ಸಮಾವೇಶ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

ದೈನಂದಿನ ವ್ಯವಹಾರಗಳಿಗೆ ಕಾನೂನು ಕಟ್ಟಳೆಗಳಿವೆ. ಆದರೆ ಬದುಕು ಹೇಗಿರಬೇಕು ಎನ್ನುವುದನ್ನು ಬಸವಾದಿ ಶರಣರ ವಚನಗಳು ಕಲಿಸಿಕೊಡುತ್ತವೆ ಎಂದು ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಯಶ್ವಂತ ತವಾರೆ ಹೇಳಿದರು.

ಅವರು ಅಂರ‍್ರಾಷ್ಟೀಯ ಲಿಂಗಾಯತ ಧರ್ಮಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಂಯುಕ್ತಾಶ್ರಯದಲ್ಲಿ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆ ಎರಡನೇ ದಿನ ಮಂಗಳವಾರ ನಡೆದ ಮಕ್ಕಳ ಸಮಾವೇಶ ಉದ್ಘಾಟಿಸಿ ಮಾತನಾಡಿ, ಆದರ್ಶ ಬದುಕಿಗೆ ಪುರಾಣ ಪ್ರವಚನ ಧರ್ಮ ಗ್ರಂಥಗಳು ಸಹಕಾರಿಯಾಗುತ್ತವೆ.

ಭಾರತೀಯ ಸಂಸ್ಕೃತಿ ವೈವಿದ್ಯತೆಯಿಂದ ಕೂಡಿದ್ದು, ಪರಕೀಯರ ಆಕ್ರಮಣದ ಮಧ್ಯೆಯು ಗಟ್ಟಿಯಾಗಿ ನಿಲ್ಲಲು ಧರ್ಮ ಗುರುಗಳ, ಮಠಾಧೀಶರ ಧರ್ಮ ಸಂಸ್ಕೃತಿಯ ಬಗ್ಗೆ ಮೂಡಿಸುತ್ತಿರುವ ಜಾಗ್ರತಿಯೇ ಕಾರಣ. ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ನಮ್ಮ ಮಕ್ಕಳನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡುವಲ್ಲಿ ಮಠಗಳ ಪಾತ್ರ ಮಹತ್ವದ್ದಾಗಿದೆ.

ಎಳೆಯ ವಯಸ್ಸಿನಲ್ಲಿ ಮಕ್ಕಳಿಗೆ ನೀಡುವ ಉತ್ತಮ ಸಂಸ್ಕಾರ ಅವರ ಜೀವನ ಪರ್ಯಂತರ ಉಳಿಯುತ್ತದೆ, ಬಸವಾದಿ ಶರಣರ ವಚನಗಳು ಅಮೃತಕ್ಕೆ ಸಮಾನ ಎಂದರು.

ನೇತೃತ್ವ ವಹಿಸಿದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಮಕ್ಕಳ ಸಂಸ್ಕಾರ ಎಂದರೆ ಅವರಿಗೆ ನೈತಿಕ ಮೌಲ್ಯಗಳು ಗೌರವ ಸಹಾನುಭೂತಿಯಂತಹ ಸದ್ಗುಣಗಳನ್ನು ಬೆಳೆಸುವುದು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು ತಾಯಿಯೇ ಮೊದಲ ಗುರು ಮಕ್ಕಳನ್ನು ಸತ್ಪ್ರಜೆಯನ್ನಾಗಿ ರೂಪಿಸುವಲ್ಲಿ ತಾಯಂದಿರ ಮೇಲೆ ಬಹಳ ಜವಾಬ್ದಾರಿ ಇದೆ ಎಂದರು.

ಸಾನಿಧ್ಯ ವಹಿಸಿದ ಅನುಭವ ಮಂಟಪದ ಸಂಚಾಲಕರಾದ ಪೂಜ್ಯ ಶಿವಾನಂದ ಸ್ವಾಮಿಗಳು ಆಶೀರ್ವಚನ ನೀಡಿದರು. ಕಲಬುರಗಿಯ ಹಾಸ್ಯ ಮತ್ತು ಗೊಂಬೆ ಕಲಾವಿದ ಗುಣವಂತ ಅವರು ಹಾಸ್ಯ ಜೀವನಕ್ಕೆ ಸಂಬಂಧಿಸಿದ ಮಾತುಗಳ ಮೂಲಕ ಮೌಲ್ಯಗಳ ಬಿತ್ತಿ ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.

ಮಕ್ಕಳಾದ ಕಸ್ತೂರಿ, ಸಿದ್ರಾಮ, ಪ್ರಿಯಾಂಕಾ, ಗಂಗೋತ್ರಿ, ಗಂಗಾಂಬಿಕಾ ಮಡಿವಾಳ, ಅನಿರುದ್ಧ, ದೀಕ್ಷಾ ಮಠಪತಿ, ಪ್ರೀತಿ ಶೇರಿಕಾರ, ಖುಷಿ ಶೇರಿಕಾರ, ಶ್ರೀಶೈಲಾ ವಡ್ಡೆ, ಸುರಕ್ಷಾ ಬಾಳಪ್ಪ, ಸ್ಪಂದನ ಡೊಳ್ಳೆ, ದೀಪಿಕಾ, ಪ್ರಿಯಾಂಕಾ ಆರಾಧ್ಯ ತನ್ವಿ, ಚೆನ್ನಮ್ಮಾ ಮಮ್ಮಾ ಮುಂತಾದವರು ಬಸವಣ್ಣ, ಅಕ್ಕಮಹಾದೇವಿ ಕಲ್ಯಾಣ ಕ್ರಾಂತಿ, ಅಷ್ಟಾವರಣಗಳು, ದೇವರ ಕಲ್ಪನೆ, ವಚನಗಳು, ಅನುಭವ ಮಂಟಪ ಇತರೆ ವಿಷಯಗಳ ಕುರಿತು ಕನ್ನಡ ಮತ್ತು ಇಂಗ್ಲೀಷ್, ಹಿಂದಿಯಲ್ಲಿ ಮಾತನಾಡಿ ಸಭಿಕರಿಂದ ಚಪ್ಪಾಳೆ ಗಿಟ್ಟಿಸಿದರು.

ರಂಜಾನ ಬೂಶೆಟ್ಟಿ ಮಾರ್ಗದರ್ಶನದಲ್ಲಿ ಪ್ರತೀಕ್ಷಾ, ಸಾಕ್ಷಿ, ಭಾಗ್ಯಲಕ್ಷ್ಮಿ, ವೈಷ್ಣವಿ, ಆದ್ಯಾ ಮುಂತಾದವರು ವಚನ ಗಾಯನ ಮಾಡಿದರು.

ವೀರಭದ್ರೇಶ್ವರ, ಬಾಲಾಜಿ, ಶ್ರೇಯಾ, ಶೃಷ್ಠಿ, ಸೌಂದರ್ಯ, ಆದಿ, ಗೌರಿ, ಶ್ರೇಯಾ, ತನುಶ್ರೀ, ಆರಾಧ್ಯ, ಸ್ವಾತಿ, ಕಾವ್ಯ, ಪೂರ್ವಿಕಾ ಇತರರು ಕೋಲಾಟ ಮಾಡಿದರು.

ವಿದ್ಯಾವತಿ ಶೇರಿಕಾರ, ಸುವರ್ಣಾ ಶಾಶೆಟ್ಟಿ, ಕಲಾವತಿ ಮಹಾಜನ ಉಪಸ್ಥಿತರಿದ್ದರು. ಆರಾಧ್ಯ ಬಿರಾದಾರ ಸ್ವಾಗತಿಸಿದರೆ. ರೇಣುಕಾ ಹೋಗ್ತಾಪುರೆ ನಿರೂಪಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BvguxN7Z0AG9g7Il7l5Lzh

Share This Article
Leave a comment

Leave a Reply

Your email address will not be published. Required fields are marked *