23ನೇ ದಿನದ ಅಭಿಯಾನದ ಲೈವ್ ಬ್ಲಾಗ್
ಧನ್ಯವಾದ ಬಸವ ಯೋಗೇಶ್
ಫೋಟೋ, ವಿಡಿಯೋ, ಮಾಹಿತಿಗೆ
ಫೋಟೋಗಳಲ್ಲಿ ಸಮಾವೇಶ






ಸಮಾವೇಶದ ಮುಖ್ಯಾಂಶ
ಆರಂಭಕ್ಕೆ ಷಟಸ್ಥಲ ಧ್ವಜಾರೋಹಣ, ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಇವರಿಂದ. ಪೂಜ್ಯರು ಗಣ್ಯರು ಉಪಸ್ಥಿತರಿದ್ದರು. ಸಾಣೇಹಳ್ಳಿ ಕಲಾವಿದರಿಂದ ಧ್ವಜಗೀತೆ ಮೊಳಗಿತು.
ಬಸವಮೂರ್ತಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ಹಂದಿಗುಂದ ಶಿವಾನಂದ ಸ್ವಾಮೀಜಿ ಅವರಿಂದ ಆಶಯ ಅನುಭಾವ ನುಡಿ
ಚಾಮರಾಜನಗರದ ಕಾಳನಹುಂಡಿ ವಿರುಪಾಕ್ಷ ಅವರಿಂದ ‘ಸ್ವತಂತ್ರ ಧರ್ಮ’ ವಿಷಯವಾಗಿ ಉಪನ್ಯಾಸ.
ಕರಂಜಿಪುರ ರಾವಬಹಾದ್ದೂರ್ ಗುಬ್ಬಿ ತೋಟದಪ್ಪ ವಸತಿ ನಿಲಯದ ವಿದ್ಯಾರ್ಥಿಗಳಿಂದ ವಚನ ನೃತ್ಯ.
ಪೂಜ್ಯ ನಿಜಗುಣಾನಂದ ಶ್ರೀಗಳಿಂದ ಅನುಭಾವ ನುಡಿ.
ಕಲಬುರ್ಗಿಯ ಚಿಂತಕಿ ಮೀನಾಕ್ಷಿ ಬಾಳಿ ಅವರಿಂದ ‘ಶಿವಶರಣೆಯರ ಜೀವನ ಆದರ್ಶ’ ವಿಷಯವಾಗಿ ಅನುಭಾವ.
ಕುಮಾರಿ ಹೆಚ್.ಜಿ. ಕಾವ್ಯಶ್ರೀ ಅವರಿಂದ ವಚನ ನೃತ್ಯ.
ಇಳಕಲ್ಲ ಗುರುಮಹಾಂತ ಮಹಾಸ್ವಾಮಿಗಳಿಂದ ಆಶೀರ್ವಚನ.
ಗುಂಡ್ಲುಪೇಟೆ ಶಾಸಕ ಎಚ್. ಎಮ್. ಗಣೇಶಪ್ರಸಾದ ಅವರಿಂದ ಮಾತುಗಳು.
ನಾಲ್ಕು ವರ್ಷದ ಪುಟ್ಟ ಮಗು ‘ಅಕ್ಷರ’ ಅವರು ನಾಲ್ಕಾರು ವಚನ ಹೇಳಿ ಎಲ್ಲರನ್ನೂ ಖುಷಿ ಪಡಿಸಿದಳು.
ಮಾಜಿ ಶಾಸಕ ಕೆ.ಆರ್. ಮಲ್ಲಿಕಾರ್ಜುನಪ್ಪ ಅವರಿಂದ ಮಾತು.
ಕೂಡಲಸಂಗಮ ಬಸವಧರ್ಮ ಪೀಠದ ಡಾ. ಗಂಗಾ ಮಾತಾಜಿ ಅವರಿಂದ ಆಶೀರ್ವಚನ.
ಕಾಡಾ ಅಧ್ಯಕ್ಷ ಮರಿಸ್ವಾಮಿ ಅವರಿಂದ ನುಡಿ.
ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರು, ಭಾಲ್ಕಿ ಬಸವಲಿಂಗ ಪಟ್ಟದ್ದೇವರಿಂದ ಆಶೀರ್ವಚನ.
ಸಮಾರಂಭದ ಅಧ್ಯಕ್ಷೀಯ ನುಡಿ, ಪಡಗೂರ ಅಡವಿ ಮಠಾಧಿಪತಿ ಶಿವಲಿಂಗೇಂದ್ರ ಸ್ವಾಮೀಜಿ ಅವರಿಂದ.
ಉದ್ದಾನ ಸ್ವಾಮಿಗಳಿಂದ ಶರಣು ಸಮರ್ಪಣೆ.
ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.
ಕಲ್ಯಾಣ ಗೀತೆಯೊಂದಿಗೆ ಬಹಿರಂಗ ಸಮಾವೇಶ ಮಂಗಲಗೊಂಡಿತು
ಬಹಿರಂಗ ಸಮಾವೇಶ
ಜೆ. ಎಸ್. ಎಸ್. ಕಾಲೇಜು ಆವರಣದಲ್ಲಿ ಬಹಿರಂಗ ಸಮಾವೇಶ.
ಆರಂಭಕ್ಕೆ ಷಟಸ್ಥಲ ಧ್ವಜಾರೋಹಣ, ಭಾಲ್ಕಿ ಬಸವಲಿಂಗ ಪಟ್ಟದ್ದೇವರು ಇವರಿಂದ. ಪೂಜ್ಯರು ಗಣ್ಯರು ಉಪಸ್ಥಿತರಿದ್ದರು. ಸಾಣೇಹಳ್ಳಿ ಕಲಾವಿದರಿಂದ ಧ್ವಜಗೀತೆ ಮೊಳಗಿತು.
ಬಸವಮೂರ್ತಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ಹಂದಿಗುಂದ ಶಿವಾನಂದ ಸ್ವಾಮೀಜಿ ಅವರಿಂದ ಆಶಯ ಅನುಭಾವ ನುಡಿ.
ಕರಂಜಿಪುರ ರಾವಬಹಾದ್ದೂರ್ ಗುಬ್ಬಿ ತೋಟದಪ್ಪ ವಸತಿ ನಿಲಯದ ವಿದ್ಯಾರ್ಥಿಗಳಿಂದ ವಚನ ನೃತ್ಯ.




ಸಾಮರಸ್ಯ ನಡಿಗೆಯಲ್ಲಿ ಸಾಂಸ್ಕೃತಿಕ ವಾದ್ಯ ಮೇಳಗಳ ವೈಭವ
ಬೃಹತ್ ಮೆರವಣಿಗೆ
2 ಕಿ.ಮೀ. ಉದ್ದದ ಸಾವಿರಾರು ಬಸವಭಕ್ತರ ಬೃಹತ್ ಮೆರವಣಿಗೆ.





ಒಬ್ಬ ಲಿಂಗಾಯತ ಕೋಟಿ ಲಿಂಗಾಯತ
ಚಾಮರಾಜನಗರ ಸಾಮರಸ್ಯ ನಡಿಗೆಯ ವೀಡಿಯೋ
ಸಾಮರಸ್ಯ ನಡಿಗೆಯ ಚಿತ್ರಗಳು
ಚಾಮರಾಜೇಶ್ವರ ದೇವಸ್ಥಾನದಿಂದ ಆರಂಭಗೊಂಡಿರುವ ಜಾಗೃತಿ ಜಾಥಾ-ಪಾದಯಾತ್ರೆ. ಜೆ ಎಸ್ ಎಸ್ ಕಾಲೇಜ್ ಆವರಣದವರೆಗೆ ನಡೆಯಲಿದೆ.








ಸಂವಾದ ಕಾರ್ಯಕ್ರಮ ಮುಕ್ತಾಯ
ಷಡಾಕ್ಷರಿ ಸ್ವಾಮೀಜಿಯಿಂದ ಶರಣು ಸಮರ್ಪಣೆ
ಕಲ್ಯಾಣ ಗೀತೆಯೊಂದಿಗೆ ಸಂವಾದ ಕಾರ್ಯಕ್ರಮ ಮಂಗಲಗೊಂಡಿತು.
ಸಂವಾದದ ಚಿತ್ರಗಳು








ಇಂದಿನ ಪ್ರಶ್ನೆಗಳು
ಬಸವ ಕ್ರಾಂತಿ ಸಫಲವೋ, ವಿಫಲವೋ?
ಅನ್ಯ ಧರ್ಮಗಳಲ್ಲಿ ಬೋಧನೆ ಮಾಡುತ್ತಾರೆ. ನಮ್ಮ ಧರ್ಮದಲ್ಲಿ ಕನಿಷ್ಠ ವಾರದಲ್ಲಿ ಒಂದು ದಿನವಾದರು ಇದು ನಡೆಯಬೇಕಲ್ಲ?
ಬಸವಣ್ಣನವರು ಇಂದಿನ ರಾಜಕಾರಣಿಗಳಿಗೆ ಹೇಗೆ ಮಾರ್ಗದರ್ಶಿ, ಆದರ್ಶ ಆಗಬಲ್ಲರು?
ಅನುಭವ ಮಂಟಪದಲ್ಲಿ ಮಹಿಳಾ ಸಮಾನತೆ ಹೇಗಿತ್ತು?
ಶರಣರದು ವಚನ ಚಳುವಳಿಯೆ? ಸಾಮಾಜಿಕ ಚಳುವಳಿಯೆ?
ಸಮಾಜದಲ್ಲಿರುವ ಭೇದಭಾವ ನಿರ್ಮೂಲನೆ ಹೇಗೆ?
ಬಸವಣ್ಣನವರ ದೃಷ್ಟಿಯಲ್ಲಿ ದೇವರ ಪರಿಕಲ್ಪನೆ ಹೇಗೆ?
ಬಸವಣ್ಣನವರಿಗಿಂತ ಮೊದಲು ವಚನ ಸಾಹಿತ್ಯ ಇತ್ತೆ?
ಸಮಾಜದ ಒಳಿತಿಗಾಗಿನ ವಚನ ಸಾಹಿತ್ಯ ಒಂದು ವರ್ಗಕ್ಕೆ ಏಕೆ ಸೀಮಿತ?
ಇಷ್ಟಲಿಂಗ ಜಾತಿಯ ಸೂಚಕವೇ?
ಇಷ್ಟಲಿಂಗವನ್ನು ಕಟ್ಟಿಕೊಂಡು ಬೇರೆ ದೇವರ ವೃತ, ಪೂಜೆ ಮಾಡುವವರನ್ನು ಲಿಂಗಾಯತ ಎನ್ನಬಹುದೇ?
ವಚನ ಸಾಹಿತ್ಯದ ವೈಚಾರಿಕತೆ ಪ್ರಸ್ತುತ ಸಮಾಜಕ್ಕೆ ಹೇಗೆ ಪೂರಕ?
ವಿರಕ್ತ ಮಠಗಳಿಗೂ ದಾಸೋಹ ಮಠಗಳಿಗೂ ವ್ಯತ್ಯಾಸವೇನು? ಉದ್ದೇಶವೇನು?
ಅಲ್ಲಮ ಪ್ರಭುಗಳ ವಚನಗಳನ್ನು ಬೆಡಗಿನ ವಚನಗಳೆಂದು ಏಕೆ ಕರೆಯುತ್ತಾರೆ?
ಜೇಡರ ದಾಸಿಮಯ್ಯನವರ ವಚನಗಳಲ್ಲಿ ಬರುವ ಸನ್ಯಾಸತ್ವ ಮತ್ತು ಗೃಹಸ್ಥ, ಇದರಲ್ಲಿ ಯಾವುದು ಹೆಚ್ಚು?
ಎಲ್ಲರನ್ನೂ ಸಮಾನವಾಗಿ ಕಾಣುವ ನಮ್ಮ ಲಿಂಗಾಯತ ಧರ್ಮ ಯಾಕೆ ಮುನ್ನೆಲೆಗೆ ಬರ್ತಾ ಇಲ್ಲ?
ಲಿಂಗಾಯತ ಧರ್ಮದವರು ವೈದಿಕತೆ ಆಚರಿಸುತ್ತಿದ್ದಾರೆ, ಇದನ್ನು ಬಿಡಿಸುವ ಜವಾಬ್ದಾರಿ ಯಾರದು?
ಭಕ್ತಿ ಕಾಯಕ ದಾಸೋಹ ಸಮಾನತೆಯನ್ನು ಬಸವಮಾರ್ಗಿಗಳು ಆಚರಿಸುತ್ತಿದ್ದಾರೆಯೇ?
ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಯಾಕೆ ಘೋಷಿಸಲಾಯಿತು?
ಕಾರ್ಯಕ್ರಮಕ್ಕೆ ಚಾಲನೆ
ಬಸವ ಭಾವಚಿತ್ರಕ್ಕೆ ಪೂಜ್ಯರು, ಗಣ್ಯರಿಂದ ಪುಷ್ಪಾರ್ಪಣೆ.
ಶೇಗುಣಸಿ ಮಹಾಂತಪ್ರಭು ಸ್ವಾಮಿಗಳಿಂದ ಪ್ರಾಸ್ತಾವಿಕ ಮಾತು.

ಸಂವಾದ ಕಾರ್ಯಕ್ರಮ ಆರಂಭ
ಸಂವಾದ ಕಾರ್ಯಕ್ರಮದ ಆರಂಭದಲ್ಲಿ ಸಾಣೇಹಳ್ಳಿ ಕಲಾತಂಡದಿಂದ ವಚನ ಗಾಯನ.

ಶಿವಪ್ರಭು ಸ್ವಾಮೀಜಿ ಸರ್ವರನ್ನು ಸ್ವಾಗತಿಸಿದರು.

ಇಂದಿನ ಕಾರ್ಯಕ್ರಮ
ಸಂವಾದ
ಬೆಳಿಗ್ಗೆ 10.30ಕ್ಕೆ ವಿದ್ಯಾರ್ಥಿಗಳೊಂದಿಗೆ ಸಂವಾದ, ಜೆಎಸ್ಎಸ್ ಕಾಲೇಜು ಸೆಮಿನಾರ್ ಹಾಲ್ ನಲ್ಲಿ.
ಪಾದಯಾತ್ರೆ
ಮಧ್ಯಾಹ್ನ 12 ಗಂಟೆಗೆ ಜಾಗೃತಿ ಜಾಥಾ- ಪಾದಯಾತ್ರೆ, ಚಾಮರಾಜೇಶ್ವರ ದೇವಸ್ಥಾನದಿಂದ ಜೆಎಸ್ಎಸ್ ಕಾಲೇಜ್ ಆವರಣದವರೆಗೆ.
ಸಮಾವೇಶ
ಮಧ್ಯಾಹ್ನ 3 ಗಂಟೆಗೆ ಬಹಿರಂಗ ಸಮಾವೇಶ ಜೆಎಸ್ಎಸ್ ಕಾಲೇಜು ಆವರಣದಲ್ಲಿ.
ಅನುಭಾವ
ಡಾ. ಬಸವಕುಮಾರ ಸ್ವಾಮೀಜಿ ಚಿತ್ರದುರ್ಗ ಇವರಿಂದ ‘ದಾಸೋಹ v/s ದಾನ’ ವಿಷಯವಾಗಿ. ಕಾಳನಹುಂಡಿ ವಿರೂಪಾಕ್ಷ, ಚಾಮರಾಜನಗರ ಇವರಿಂದ ‘ಸ್ವತಂತ್ರ ಧರ್ಮ’ ವಿಷಯವಾಗಿ ಉಪನ್ಯಾಸಗಳು.
ನಾಟಕ ಪ್ರದರ್ಶನ
ರಾತ್ರಿ 7 ಗಂಟೆಗೆ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ, ಸಾಣೇಹಳ್ಳಿ ಶಿವಸಂಚಾರ ಕಲಾವಿದರಿಂದ.
ಇಂದು ರಾಜ್ಯದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನಕ್ಕೆ ಮತ್ತು ಯಶಸ್ಸಿಗೆ ಬಸವ ಮೀಡಿಯಾವೇ ಕಾರಣವೆಂದರೆ ತಪ್ಪಾಗಲಾರದು..ಯಾಕಂದ್ರೆ ಲಿಂಗಾಯತ ಮಠಾಧೀಶರ ಜಾಗೃತಿಗೊಳಿಸಿ ರಾಜ್ಯಾದ್ಯಂತ ಲಿಂಗಾಯತರು ಜಾಗೃತಿಯಾಗಲು ಕಾರಣವಾಗಿದೆ…
ಚಾಮರಾಜನಗರದಲ್ಲಿ ನಡೆದ ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿನ ಕಾರ್ಯಕ್ರಮ ರಾಷ್ಟ್ರಮಟ್ಟದಲ್ಲಿ ಸಂಚಲವನ್ನ ಮೂಡಿಸಿರುವುದು ಸತ್ಯ. ಈಗಾಗಲೇ ಬಿಜೆಪಿಯಲ್ಲಿ ನೆಲೆಕಂಡುಕೊಳ್ಳಲು ಅವಣಿಸುತ್ತಿರುವ ಮತ್ತು ತನ್ನ ಸಂಘದವರ ಮೆಚ್ಚಿಸಲು ಹೋರಟಿರುವ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ಥಕಥಕ ಕುಣಿಯಲಾರಂಭಿಸಿದ್ದಾರೆ