ಮಂಡ್ಯದಲ್ಲಿ ಬಸವ ಸಂಸ್ಕೃತಿ ಅಭಿಯಾನ

ಬಸವ ಮೀಡಿಯಾ
ಬಸವ ಮೀಡಿಯಾ
7Posts
Auto Updates

24ನೇ ದಿನದ ಲೈವ್‌ ಬ್ಲಾಗ್

2 weeks agoSeptember 25, 2025 6:44 pm

ಮಂಡ್ಯದಲ್ಲಿ ಬಸವ ಸಂಸ್ಕೃತಿ ಅಭಿಯಾನದ ಸಂಭ್ರಮ

2 weeks agoSeptember 25, 2025 1:33 pm

ಅನುಭಾವ

ಪೂಜ್ಯ ಪ್ರಭುಶ್ರೀ ತಾಯಿ ಅವರಿಂದ ಸ್ವರ್ಗ ನರಕ ವಿಷಯವಾಗಿ ಅನುಭಾವ.

ಬಸವಧರ್ಮ ಪೀಠದ ಡಾ. ಗಂಗಾ ಮಾತಾಜಿ ಅವರಿಂದ ಅನುಭಾವ.

ಅಭಿಯಾನದೊಂದಿಗೆ ಸೈಕ್ಲಿಂಗ್ ಮಾಡಿಕೊಂಡು ಬರುತ್ತಿರುವ ಹನುಮಂತ ಟಕ್ಕಣ್ಣವರ, ಶಂಕರ ಕೊಡತೆ, ವೀರಭದ್ರಪ್ಪ ಅಂಬಿ ಅವರನ್ನು ಸತ್ಕರಿಸಲಾಯಿತು.

ರಾಮಕೃಷ್ಣ ಗೌಡರು ಸಮಾರಂಭ ಕುರಿತು ಮಾತನಾಡಿದರು.

ವೇದಿಕೆಯ ಮೇಲಿದ್ದ ಎಲ್ಲ ಪೂಜ್ಯರನ್ನು ಸತ್ಕರಿಸಲಾಯಿತು

ವೇದಿಕೆಯ ಮೇಲಿದ್ದ ಎಲ್ಲ ಪೂಜ್ಯರನ್ನು ಆದಿಚುಂಚನಗಿರಿ ಮಠದ ವತಿಯಿಂದ ಸತ್ಕರಿಸಲಾಯಿತು.

ಆದಿಚುಂಚನಗಿರಿ ಮಠದ ದಾಸೋಹಿ ರಾಮಕೃಷ್ಣ ಗೌಡರನ್ನು ಪೂಜ್ಯರು ಸತ್ಕರಿಸಿದರು.

ಭಾಲ್ಕಿಯ ಬಸವಲಿಂಗ ಪಟ್ಟದ್ದೇವರಿಂದ ಆಶೀರ್ವಚನ.

ಕಲ್ಯಾಣ ಗೀತೆಯೊಂದಿಗೆ ಸಮಾವೇಶ ಮಂಗಲಗೊಂಡಿತು.

2 weeks agoSeptember 25, 2025 1:06 pm

ಇಂದಿನ ಪ್ರಶ್ನೆಗಳು

ವಚನಗಳು, ಸಂವಾದ ಕುರಿತು ಶೇಗುಣಸಿ ಮಹಾಂತಪ್ರಭು ಸ್ವಾಮೀಜಿ ಮಾತನಾಡಿದರು.

ಓದಿದ್ದನ್ನು ನೆನಪಿಟ್ಟುಕೊಳ್ಳುವುದು ಹೇಗೆ?

ಏಕಾಗ್ರತೆ ಗಳಿಸಿಕೊಳ್ಳುವುದು ಹೇಗೆ?

ಈ ಜಾತಿ ಧರ್ಮಗಳು ಅನ್ನುವಂತಹವು ದೇಶಕ್ಕೆ ಮಾರಕವೋ ಪೂರಕವೋ?

ಪ್ರಸ್ತುತ ಸನ್ನಿವೇಶದಲ್ಲಿ ಒತ್ತಡಕ್ಕೆ ಒಳಗಾಗದಿರಲು ಏನು ಮಾಡಬೇಕು?

ಶರಣನಾಗಲು ಸನ್ಯಾಸತ್ವ ಸ್ವೀಕರಿಸಲೇಬೇಕಾ?

ಆತ್ಮ ಎಂದರೇನು? ಅದನ್ನು ಕಂಡುಕೊಳ್ಳುವುದು ಹೇಗೆ?

ಬಸವಕಲ್ಯಾಣದ ಅನುಭವ ಮಂಟಪ ನಮಗೆ ತುಂಬಾ ದೂರ. ನಾವಿಲ್ಲಿನ ಜನರು ಲಿಂಗಾಯತರಾಗಿದ್ದು ಹೇಗೆ? ಮಾಡಿದವರು ಯಾರು?

ಸಂವಾದ ಕಾರ್ಯಕ್ರಮ ಮುಕ್ತಾಯ.

2 weeks agoSeptember 25, 2025 12:15 pm

ಸಂವಾದ ಮತ್ತು ಸಾರ್ವಜನಿಕ ಸಮಾವೇಶ ಆರಂಭ

ಕಲಾಮಂದಿರದಲ್ಲಿ ಸಂವಾದ ಮತ್ತು ಸಾರ್ವಜನಿಕ ಸಮಾವೇಶ ಆರಂಭ.

ಆರಂಭದಲ್ಲಿ ನಾಡಗೀತೆ ಹಾಡಲಾಯಿತು

ಅಗಲಿದ ಸಾಹಿತಿ ಎಸ್.ಎಲ್. ಬೈರಪ್ಪ ಅವರಿಗೆ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.

ಸಾಣೇಹಳ್ಳಿ ಶಿವಸಂಚಾರ ತಂಡದಿಂದ ವಚನ ಪ್ರಾರ್ಥನೆ.

ಸುಬ್ರಹ್ಮಣ್ಯ ಅವರಿಂದ ಸರ್ವರಿಗೂ ಸ್ವಾಗತ.

ದೀಪ ಬೆಳಗಿಸಿ, ಬಸವ ಮೂರ್ತಿಗೆ ಪುಷ್ಪಾರ್ಪಣೆ ಮಾಡಿ ಪೂಜ್ಯರು ಹಾಗೂ ಗಣ್ಯರಿಂದ ಉದ್ಘಾಟನೆ.

ಪ್ರಾಸ್ತಾವಿಕ ನುಡಿ ಬೇಬಿಬೆಟ್ಟ ಮಠದ ಶಿವಬಸವ ಸ್ವಾಮೀಜಿ ಅವರಿಂದ.

ನಗರಸಭಾ ಆಯುಕ್ತೆ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.

ಮೈಸೂರು ಜಾ.ಲಿಂ. ಮಹಾಸಭಾ ಅಧ್ಯಕ್ಷ ಮಹಾದೇವಪ್ಪ ಮಾತನಾಡಿದರು.

2 weeks agoSeptember 25, 2025 11:52 am

ಚಿತ್ರಗಳಲ್ಲಿ ಸಾಮರಸ್ಯ ನಡಿಗೆ

2 weeks agoSeptember 25, 2025 11:29 am

ಬಸವ ರಥಕ್ಕೆ ಸ್ವಾಗತ

ಪ್ರವಾಸಿ ಮಂದಿರದ ಮುಂದೆ ಬಸವ ರಥವನ್ನು ಪೂಜ್ಯರು, ಗಣ್ಯರು ಸ್ವಾಗತಿಸಿಕೊಂಡರು.
ಅಲ್ಲಿಂದ ಮೆರವಣಿಗೆ ಆರಂಭಗೊಂಡಿದೆ. ಕಲಾಮಂದಿರದವರೆಗೆ ಸಾಗಲಿದೆ.

2 weeks agoSeptember 25, 2025 10:30 am

ಇಂದಿನ ಕಾರ್ಯಕ್ರಮ

ಮೆರವಣಿಗೆ

ಬೆಳಿಗ್ಗೆ 10.30 ಗಂಟೆಗೆ ಪ್ರವಾಸಿ ಮಂದಿರದ ಮುಂದೆ ಬಸವ ರಥವನ್ನು ಸ್ವಾಗತಿಸಿಕೊಂಡು, ಸಂಜಯ ವೃತ್ತ, ಮಹಾವೀರ ವೃತ್ತದ ಮೂಲಕ ಒಡೆಯರ್ ಕಲಾಮಂದಿರದವರೆಗೆ ಮೆರವಣಿಗೆ.

ಸಾರ್ವಜನಿಕ ಸಮಾವೇಶ

ಮುಂಜಾನೆ 11:30ಕ್ಕೆ ವಿದ್ಯಾರ್ಥಿಗಳು ಸಾರ್ವಜನಿಕರೊಂದಿಗೆ ವಚನ ಸಂವಾದ ಮತ್ತು ಸಮಾವೇಶ, ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ.

ನಾಟಕ ಪ್ರದರ್ಶನ

ಮಧ್ಯಾಹ್ನ 2 ಗಂಟೆಗೆ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ, ಸಾಣೇಹಳ್ಳಿ ಶಿವಸಂಚಾರ ಕಲಾತಂಡದಿಂದ.

Share This Article
Leave a comment

Leave a Reply

Your email address will not be published. Required fields are marked *