ತ್ರಿಪುರಾಂತಕ ಕೆರೆಗೆ ರೇವಣರ ಹೆಸರಿಡಿ: ರಂಭಾಪುರಿ ಶ್ರೀಗೆ ಬಸವ ಭಕ್ತರ ಖಂಡನೆ

ಬಸವಕಲ್ಯಾಣ

‘ಕಲ್ಯಾಣನಗರ ಆಚಾರ್ಯರ ತವರು ಮನೆ ಆಗಿದೆ. ಇಲ್ಲಿನ ತ್ರಿಪುರಾಂತ ಕೆರೆಗೆ ಜಗದ್ಗುರು ರೇವಣಸಿದ್ಧೇಶ್ವರರ ಹೆಸರಿಡಬೇಕು. ಮುಖ್ಯ ರಸ್ತೆಯಲ್ಲಿ ರೇಣುಕಾಚಾರ್ಯರ ವೃತ್ತ ಸ್ಥಾಪಿಸಬೇಕು’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಸಲಹೆ ನೀಡಿದರು.

ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಬುಧವಾರ ರಾತ್ರಿ ನಡೆದ 34ನೇ ದಸರಾ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿಕೊಂಡು ಮಾತನಾಡಿದರು.

‘ಸ್ಥಳೀಯ ಶಾಸಕರು ಮುಂದಾಳತ್ವ ವಹಿಸಿಕೊಂಡು ವೃತ್ತ ಸ್ಥಾಪಿಸುವ ನಿರ್ಧಾರಕ್ಕೆ ಬಂದರೆ ವಿಜಯ ದಶಮಿಯ ದಿನದಂದು ನಾವೇ ಸ್ವತಃ ಸಾಂಕೇತಿಕವಾಗಿ ಅದರ ಉದ್ಘಾಟನೆ ಮಾಡುತ್ತೇವೆ.

ಬಸವ ಭಕ್ತರ ಖಂಡನೆ

ಬಸವಕಲ್ಯಾಣದ ಸದ್ಗುರು ಬಸವಪ್ರಭು ಸ್ವಾಮೀಜಿ ಹಾಗೂ ಲಿಂಗಾಯತ ಸಮನ್ವಯ ಸಮಿತಿಯ ಶ್ರೀಕಾಂತ ಸ್ವಾಮಿ, ರಂಭಾಪುರಿ ಶ್ರೀಗಳ ಹೇಳಿಕೆಗೆ ತಕ್ಷಣ ಪ್ರತಿಕ್ರಿಯೆ ನೀಡಿದ್ದಾರೆ.

ರಂಭಾಪುರಿ ಪೀಠದ ಶ್ರೀ ವೀರಸೋಮೇಶ್ವರ ಶಿವಾಚಾರ್ಯರು ದಸರಾ ಧರ್ಮ ಸಮ್ಮೇಳನದಲ್ಲಿ ಇತಿಹಾಸದಲ್ಲಿ ಹೆಸರಾದ ತ್ರಿಪುರಾಂತ ಕೆರೆಗೆ ರೇಣುಕಾಚಾರ್ಯರ ಹೆಸರಿಡಬೇಕು ಹಾಗೂ ಅಲ್ಲಿರುವ ವೃತ್ತದ ಹೆಸರಿಡುವ ಹೇಳಿಕೆ ಕುತಂತ್ರಭರಿತ ಮತ್ತು ಖಂಡನೀಯ.

ಹಲವಾರು ಶರಣರ ವಚನಗಳಲ್ಲಿ ಉಲ್ಲೇಖಗೊಂಡ ತ್ರಿಪುರಾಂತ ಕೆರೆಯ ಹೆಸರು ಬದಲಾಯಿಸಿದ್ದರೆ ಶರಣರ ಇತಿಹಾಸಕ್ಕೂ ಹಾಗೂ ಬಸವಕಲ್ಯಾಣ ನಗರಕ್ಕೂ ಅಪಚಾರ ಬಗೆದಂತೆ ಆಗುತ್ತದೆ, ಯಾವುದೇ ಕಾರಣಕ್ಕೂ ಹೆಸರು ಬದಲಾಯಿಸ ಕೂಡದು.

ಇಂತಹ ವೈಮನಸ್ಸು ಹುಟ್ಟಿಸುವ ವಿಷಯವನ್ನು ಪೂಜ್ಯ ರಂಭಾಪುರಿ ಜಗದ್ಗುರುಗಳ ತಲೆಯಲ್ಲಿ ತುಂಬಿ ವೀರಶೈವ ಮತ್ತು ಲಿಂಗಾಯತರ ಮಧ್ಯೆ ವಿಷಬೀಜ ತುಂಬುವ ಕೆಲಸ ಮಾಡಿದ್ದು ಲಿಂಗಾಯತರ ತಾಳ್ಮೆಗೆ ಧಕ್ಕೆ ತಂದಿದೆ.

ರಂಭಾಪುರಿ ಪೀಠದ ದಸರಾ ದರ್ಬಾರ ಯಾರು ವಿರೋಧ ಮಾಡಿಲ್ಲ ಅಂದರೆ ನಾವು ಏನು ಬೇಕಾಗಿದ್ದು ಮಾಡಬಹುದು ಎಂದೂ, ಹಾಗೂ ಎಲ್ಲಾ ಚುನಾಯಿತ ಪ್ರತಿನಿಧಿಗಳ ಬಂದು ಪೂಜ್ಯರ ಪಾದಕ್ಕೆ ಬಿದ್ದು ಆಶೀರ್ವಾದ ಪಡೆದಿದ್ದಾರೆ ಅಂದರೆ ಏನು ಬೇಕಾಗಿದ್ದು ಮಾಡಬಹುದು ಎನ್ನುವ ಮನಸ್ಥಿತಿ ಜಗದ್ಗುರು ಶಿಷ್ಯರ ಅಹಂಕಾರ ಎದ್ದು ಕಾಣುತ್ತದೆ.

ಯಾವುದೇ ಕಾರಣಕ್ಕೂ ಸ್ಥಳೀಯ ಆಡಳಿತ ಮಂಡಳಿ ಮತ್ತು ಶಾಸಕರು ಈ ಪ್ರಸ್ತಾವಕ್ಕೆ ಮನ್ನಣೆ ಕೊಟ್ಟರೆ ದೊಡ್ಡ ಹೋರಾಟ ಮಾಡಬೇಕಾಗುತ್ತದೆ.

ಎಲ್ಲಾ ಬಸವಾದಿ ಶರಣರ ಪರ ಹಾಗೂ ಲಿಂಗಾಯತ ಧರ್ಮ ಪರ ಸಂಘಟನೆಗಳು ಎಚ್ಚೆತ್ತುಗೊಂಡು ತೀವ್ರವಾಗಿ ವಿರೋಧಿಸಬೇಕು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BvguxN7Z0AG9g7Il7l5Lzh

Share This Article
2 Comments
  • ಇದು ಊಟಕ್ಕೆ ಕರೆದರೆ ತಟ್ಟೆಯು ನಂದೆ ಅನ್ನುವ ಹಾಗಿದೆ ಈ ಜಗದ್ಗುರುವಿನ ಹೇಳಿಕೆ. ತಾವು ಹೇಳಿದಂತೆ ಸಮಾಜದ ಮಧ್ಯಮದ ಮೂಲಕ ಜನರಲ್ಲೂ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ. ಇಂದು ತವರುಮನೆ ಅಂತ ಹೇಳಿರುವ ಇವರು ನಾಳೆ ನಮ್ಮ ಮನೆ ಅನ್ನುವ ಮಟ್ಟಕ್ಕೆ ಹೋಗಲು ಹಿಂಜರಿಲಾರ. ಸ್ಥಾನಿಕ ರಾಜಕಾರಣಿಗಳ ಮೇಲೆ ಒತ್ತಡ ಇರಲಿ. ಹಾಗೆ ನಾವುಗಳು ಪತ್ರಿಕಾ ಹೇಳಿಕೆ ನೀಡುತ್ತಾ ಜನ ಜಾಗೃತಿ, ವಿರೋಧ ನಡೆಯುತ್ತಿರಲಿ.

  • ಇವರು ಬಸವಣ್ಣನವರನು ಕುರಿತು ಹಗುರವಾಗಿ ನಾಳೆ ಮಾತನಾಡಲು ಹಿಂಜರಿಯಲಾರರು, ಈಗಲೇ ಬಲವಾಗಿ ಖಂಡಿಸದೆ ಇದ್ದರೆ ಮತೊಂದು ಹೇಳಿಕೆ ಕೊಟ್ಟು ರಾಜಕಾರಣಿಗಳಿಗೆ ಮುಂದೆ ಮಾಡುತ್ತ ತಮ್ಮ ಕುತಂತ್ರ ನಡೆಸುತ್ತ ಮುಂದುವರಿಯುತಾರೆ. ಎಚ್ಚರಿಕೆ ಎಚ್ಚರಿಕೆ ಬಸವಭಕ್ತರೆ!!

Leave a Reply

Your email address will not be published. Required fields are marked *

ಪೂಜ್ಯ ಶ್ರೀ ಸದ್ಗುರು ಬಸವಪ್ರಭು ಸ್ವಾಮೀಜಿ ಕಲ್ಯಾಣ ಮಹಾಮನೆ ಗುಣತೀರ್ಥ-ಬಸವಕಲ್ಯಾಣ.
ಕರ್ನಾಟಕ ರಾಜ್ಯ ಸಂಚಾಲಕರು, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ