ತ್ರಿಪುರಾಂತಕ ಕೆರೆ ವಿವಾದ: ಒಪ್ಪಿಗೆ ಕೊಟ್ಟಿದ್ದೇ ದೊಡ್ಡ ಪ್ರಮಾದವಾಯಿತು

ದಾವಣಗೆರೆ

ಬಸವ ಕಲ್ಯಾಣದಲ್ಲಿ ದಸರಾ ದರ್ಬಾರ್ ನಡೆಸಲು ಆರಂಭದಲ್ಲಿ ವ್ಯಾಪಕ ವೀರೋಧ ಬಂದು, ಕೊನೆಯಲ್ಲಿ ಅಡ್ಡಪಲ್ಲಕ್ಕಿ ಉತ್ಸವ ಬಿಟ್ಟು ದಸರಾ ದರ್ಬಾರ್ ನಡೆಸಲು ಬಸವಪರ ಸಂಘಟನೆಗಳು ಒಪ್ಪಿಗೆ ಕೊಟ್ಟಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.

ದಸರಾ ದರ್ಬಾರ್ ನಿರಾತಂಕವಾಗಿ ನಡೆಯಲು ಪ್ರಾರಂಭ ಆಗಿದ್ದೇ ತಡ, ಈಗ ತಮ್ಮ ಕಾರ್ಯಕ್ರಮ ಯಾವುದೇ ಭಯ ಇಲ್ಲದೆ ನಡೆಯುತ್ತದೆ ಎಂದು ಭರವಸೆ ಮೂಡಿದ ತಕ್ಷಣವೇ ತಮ್ಮ ವಕ್ರ ದೃಷ್ಟಿಯನ್ನು ಶರಣರ ಮೇಲೆ ಬಿಟ್ಟಿದ್ದಾರೆ.

ಬಸವಕಲ್ಯಾಣದ ಐತಿಹಾಸಿಕ ಕೆರೆಯಾದ ಶರಣರ ವಚನಗಳಲ್ಲಿ ಉಲ್ಲೇಖಗೊಂಡಿರುವ ತ್ರಿಪುರಾಂತಕ ಕೆರೆಯ ಹೆಸರನ್ನು ಬದಾಲಾಯಿಸಿ, ಕಾಲ್ಪನಿಕ ರೇಣುಕಾಚಾರ್ಯ ಅವರ ಹೆಸರು ಇಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ, ಹಾಗೂ ಒಂದು ವೃತ್ತಕ್ಕೆ ರೇಣುಕಾಚಾರ್ಯ ಅವರ ಹೆಸರು ಇಡಬೇಕು ಎಂಬ ಇನ್ನೊಂದು ಪ್ರಸ್ತಾಪ ಇಟ್ಟಿದ್ದಾರೆ.

ಬಸವಪರ ಸಂಘಟನೆಗಳು ಇವರ ದಸರಾ ದರ್ಬಾರ್ ನಡೆಸಲು ಒಪ್ಪಿಗೆ ಕೊಟ್ಟಿದ್ದು ದೊಡ್ಡ ಪ್ರಮಾದ ಆಗಿದೆ ಅನಿಸುತ್ತದೆ.

ಹಾಗೇನಾದರೂ ಆದರೆ ಈ ಬಗ್ಗೆ ಬಸವಾಭಿಮಾನಿಗಳು ದೊಡ್ಡಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಹಾಗೂ ರಂಭಾಪುರಿ ಶ್ರೀಗಳಿಗೆ ಎಚ್ಚರಿಕೆ ನೀಡುತ್ತೇವೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/BvguxN7Z0AG9g7Il7l5Lzh

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ, ಶರಣ ಸಾಹಿತ್ಯ ಪರಿಷತ್ತು ದಾವಣಗೆರೆ ತಾಲ್ಲೂಕು