ಚಿತ್ರದುರ್ಗ
ಏಕಾಗ್ರತೆಯಿಂದ ಧ್ಯಾನ ಮಾಡಿದವರಿಗೆ ಮಾತ್ರ ಶಿವಯೋಗ ದೊರೆಯುತ್ತದೆ ಎಂದು ಗುರುಮಠಕಲ್ ಖಾಸಾ ಶ್ರೀ ಮುರುಘಾಮಠದ ಶ್ರೀ.ಶಾಂತವೀರ ಮುರುಘರಾಜೇಂದ್ರ ಸ್ವಾಮಿಗಳು ತಿಳಿಸಿದರು.
ಶ್ರೀಗಳು ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಗುರುವಾರ ಸಹಜ ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟು ಮಾತನಾಡಿ, ಯಾರು ಏಕಾಗ್ರತೆಯನ್ನು ಸಾಧಿಸುತ್ತಾರೆಯೋ ಅವರು ತನ್ನ ಬದುಕಿನಲ್ಲಿ ಸಾಧನೆ ಮಾಡುತ್ತಾರೆ.
ಮುರುಘಾ ಪರಂಪರೆಯೆಂದರೆ ಭಕ್ತರಿಗೆ ಶಿವಯೋಗವನ್ನು ಕಲಿಸುವುದಾಗಿದೆ. ಭಾರತದಲ್ಲಿ ಯಾರಿಗೆ ಹಸಿವಿರುತ್ತದೆಯೋ ಅವರಿಗೆ ಸಾಧನೆಯು ಲಭಿಸುತ್ತದೆ. ಪ್ರತಿನಿತ್ಯ ಶಿವಯೋಗ ಮಾಡಿದರೆ ಆಧ್ಯಾತ್ಮದ ಹಸಿವು ನಿವಾರಣೆಯಾಗುತ್ತದೆ. ಪ್ರತಿದಿನ ಹದಿನೈದು ನಿಮಿಷ ಶಿವಯೋಗ ಮಾಡಿ ಅದು ನಿಮ್ಮ ಜೀವನ ಉದ್ಧಾರ ಮಾಡಿಕೊಳ್ಳಲು ಸಹಾಯಕ. ಯಾರು ಶಿವಯೋಗ ಮಾಡುತ್ತಾರೋ ಅವರ ಮನೆ ಮಹಾಮನೆಯಾಗುತ್ತದೆ.

ಸಂತೋಷ, ಶಿಸ್ತಿನಿಂದ ಕಾಯಕ ಮಾಡಿದರೆ ಅದು ಜೀವನಕ್ಕೆ ಸಹಾಯಕವಾಗುತ್ತದೆ. ವಚನ ಹೇಳುವುದನ್ನು ಹಿರಿಯರು ಮಕ್ಕಳಿಗೆ ತಿಳಿಸಬೇಕು. ಅವರು ಮುಂದೆ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಇಲ್ಲವಾದಲ್ಲಿ ನಿರ್ಲಕ್ಷ ಮಾಡುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ಚಿಗರಹಳ್ಳಿ ಶ್ರೀ.ಮರುಳಶಂಕರದೇವ ಗುರುಪೀಠದ ಶ್ರೀ.ಸಿದ್ದಬಸವ ಕಬೀರಸ್ವಾಮಿಗಳು, ಶಿರಗುಪ್ಪ ಬಸವಕೇಂದ್ರದ ಶ್ರೀ.ಬಸವಭೂಷಣ ಸ್ವಾಮಿಗಳು, ಗೋರಚಿಂಚೋಳಿ ಶ್ರೀ.ಸಿದ್ದರಾಮೇಶ್ವರಮಠದ ಶ್ರೀ.ಸಿದ್ದರಾಮ ಪಟ್ಟದೇವರು, ಚಿತ್ರದುರ್ಗದ ಡಾ.ಬಸವ ಚೇತನ ಸ್ವಾಮಿಗಳು, ಐಮಂಗಲ ಶ್ರೀ.ಹರಳಯ್ಯ ಗುರುಪೀಠದ ಶ್ರೀ.ಬಸವ ಹರಳಯ್ಯ ಸ್ವಾಮಿಗಳು, ಶರಣೆ ಮುಕ್ತಾಯಕ್ಕ, ಬೀದರ್‌ನ ಮಾತೆ ವಚನ ಸಂಸ್ಕೃತಿ ತಾಯಿ, ಮಾತೆ ಲಲಿತಾ ತಾಯಿ, ಕೆಇಬಿ ಷಣ್ಮುಖಪ್ಪ, ಬಾಪೂಜಿ ವಿದ್ಯಾಸಂಸ್ಥೆಯ ಕೆ.ಎಂ.ವೀರೇಶ್, ನಿವೃತ್ತ ಪ್ರಾಚಾರ್ಯ ರುದ್ರಪ್ಪ ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.

ಬಸವತತ್ವ ಧ್ವಜಾರೋಹಣ
ಬಸವತತ್ವದ ಧ್ವಜಾರೋಹಣ ನೆರವೇರಿಸಿದ ರಾಜ್ಯಸಭಾ ಮಾಜಿ ಸದಸ್ಯರಾದ ಶ್ರೀ.ಹೆಚ್.ಹನುಮಂತಪ್ಪ ಮಾತನಾಡಿ, ಹಿಂದಿನಿಂದಲೂ ಮುರುಘಾಮಠವೇ ಪ್ರಮುಖ ಮಠವಾಗಿದ್ದು, ಮುರುಘಾ ಪರಂಪರೆಗೆ ಶತಮಾನಗಳ ಇತಿಹಾಸವಿದೆ. ಈ ಪರಂಪರೆಯನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಬಸವ ತತ್ವ ಧ್ವಜಾರೋಹಣದ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ಹರಗುರು ಚರಮೂರ್ತಿಗಳು ಚಿತ್ರದುರ್ಗ ವೀರಶೈವ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಅಧ್ಯಕ್ಷರಾದ ಶ್ರೀ.ಪಟೇಲ್ ಶಿವಕುಮಾರ್, ಸಿದ್ದಾಪುರದ ವರ್ತಕರಾದ ಶ್ರೀ.ಎಸ್.ವಿ.ನಾಗರಾಜಪ್ಪ, ಬಾಪೂಜಿ ವಿದ್ಯಾಸಂಸ್ಥೆಯ ಶ್ರೀ.ಕೆ.ಎಂ.ವೀರೇಶ್, ಪಟೇಲ್ ಹನುಮಂತಪ್ಪ, ಕೆಇಬಿ ಷಣ್ಮ್ಮುಖಪ್ಪ, ವಿವಿಧ ಶಾಲಾ-ಕಾಲೇಜುಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ತೋಟಪ್ಪ ಉತ್ತಂಗಿ ಧ್ವಜ ಗೀತೆ ಹಾಡಿ, ನವೀನ್ ಮಸ್ಕಲ್ ನಿರೂಪಿಸಿ, ಪಿ.ಟಿ.ಜ್ಞಾನಮೂರ್ತಿ ಸ್ವಾಗತಿಸಿ ವಂದಿಸಿದರು.
ಶರಣ ಸಂಸ್ಕೃತಿ ಉತ್ಸವದ ದಾಸೋಹಕ್ಕೆ ಮುಖಂಡರಾದ ವಾಣಿಜ್ಯೋದ್ಯಮಿ ಶ್ರೀ.ಜೆ.ಎಂ.ಜಯಕುಮಾರ್ ೫೦ ಸಾವಿರ ದೇಣಿಗೆಯನ್ನು ನೀಡಿದರು.
ಯೋಗ-ಆಧ್ಯಾತ್ಮ
ಶರಣ ಸಂಸ್ಕೃತಿ ಉತ್ಸವ-೨೦೨೫ ರ ಅಂಗವಾಗಿ ನಡೆಯುತ್ತಿರುವ ಆರನೇಯ ದಿನದ ಯೋಗ-ಆಧ್ಯಾತ್ಮದ ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟು ಮಾತನಾಡಿದ ಯೋಗಗುರು ಚನ್ನಬಸವಣ್ಣನವರು ಪ್ರಾಣಯಾಮ ಪ್ರಾಣಲಿಂಗ ಪೂಜೆ ಯೋಗಾಸನ ಇಷ್ಟಲಿಂಗ ಪೂಜೆ ಅಲ್ಲಮಪ್ರಭುವಿನ ಯೋಗದೀಕ್ಷೆಯಾಗಿದೆ.
ಆದ್ದರಿಂದ ನೀವು ಲಿಂಗವನ್ನು ಕೈಯಲ್ಲಿ ಏಕೆ ಹಿಡಿದಿದ್ದೀರಿ ಎಂದು ಕೇಳಿದಾಗ ಸ್ಥೂಲ ಅಂಗವು ಸಂತೋಷ ಪಡಬೇಕಾದರೆ ಲಿಂಗ ಬೇಕು ಎಂದು ಹೇಳಿದರು. ಒಳಗಿನ ಮನಸ್ಸು ಶುದ್ದವಾಗಿದೆ ಹೊರ ಅಂಗಗಳು ಇಷ್ಟಲಿಂಗಗಳ ಸ್ಪರ್ಷದ ಮೂಲಕ ಶುದ್ದವಾಗಬೇಕು. ಇಷ್ಞಲಿಂಗವನ್ನು ಕಟ್ಟಿದಾಗ ದೇಹವು ವಜ್ರದಂತೆ ಗಟ್ಟಿಯಾಗುತ್ತದೆ. ಬಸವಲಿಂಗವಾಗಬೇಕು ಎಂದರೆ ಇಷ್ಟಲಿಂಗ ಪೂಜೆ ನಿರಂತರವಾಗಿರಬೇಕು.

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ಡಾ.ಬಸವಕುಮಾರ ಸ್ವಾಮಿಜೀ ಮಾತನಾಡಿ, ಇಂದಿನಿಂದ ವಿಚಾರ ವಿನಿಮಯ ಕಾರ್ಯಕ್ರಮಗಳು ಬಸವತತ್ವದ ಧ್ವಜಾರೋಹಣ ಮೂಲಕ ಪ್ರಾರಂಭವಾಗಲಿದ್ದು, ಇಳಕಲ್‌ನ ಮಹಾಂತಸ್ವಾಮಿಗಳು ಪ್ರವಚನ ನಡೆಸಲಿದ್ದು, ಭಕ್ತರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಸನ್ನ ಕುಮಾರ್, ಬಸವರಾಜಪ್ಪ ಯೋಗ ಸಾಧಕರು ಉಪಸ್ಥಿತರಿದ್ದರು.