ಕೆರೆ ಹೆಸರು ಬದಲು, ವೃತ್ತ ಸ್ಥಾಪನೆಗೆ ತೀವ್ರ ವಿರೋಧ
ಬೀದರ
ಬಸವಕಲ್ಯಾಣದ ತ್ರಿಪುರಾಂತ ಕೆರೆಗೆ ರೇವಣಸಿದ್ಧೇಶ್ವರ ಹೆಸರಿಡಬೇಕು ಹಾಗೂ ಮುಖ್ಯ ರಸ್ತೆಯಲ್ಲಿ ರೇಣುಕಾಚಾರ್ಯರ ವೃತ್ತ ಸ್ಥಾಪಿಸಬೇಕೆಂಬ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರ ಸಲಹೆಗೆ ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷ ಬಸವರಾಜ ಧನ್ನೂರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಬಸವಕಲ್ಯಾಣ ಸಮಾನತೆಗಾಗಿ ಕ್ರಾಂತಿ ನಡೆದ ಪುಣ್ಯ ಭೂಮಿ. ಈ ನೆಲದ ಪಾವಿತ್ರ್ಯಕ್ಕೆ ಧಕ್ಕೆ ಉಂಟು ಮಾಡುವಂತಹ ಯಾವುದೇ ಕುತಂತ್ರಕ್ಕೆ ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಕೆರೆ ಹೆಸರು ಬದಲಿಸುವುದು ಹಾಗೂ ರೇಣುಕಾಚಾರ್ಯರ ವೃತ್ತ ಸ್ಥಾಪಿಸುವುದನ್ನು ಬಸವಾನುಯಾಯಿಗಳು ಒಪ್ಪುವುದಿಲ್ಲ. ಬಸವಕಲ್ಯಾಣದ ಮರದ ಒಂದು ಎಲೆಗೆ ಸಹ ಕೈ ಹಚ್ಚಲು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಬಸವ ಭಕ್ತರ ವಿರೋಧ ಮನ್ನಿಸಿ ರಂಭಾಪುರಿ ಶ್ರೀಗಳು ಅಡ್ಡಪಲ್ಲಕ್ಕಿ ಕೈಬಿಟ್ಟಿರುವುದನ್ನು ಸ್ವಾಗತಿಸುತ್ತೇವೆ. ಶರಣರ ನೆಲದಲ್ಲಿ ದಸರಾ ದರ್ಬಾರ್ ನಡೆಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಶ್ರೀಗಳು ಬಸವ ಭಕ್ತರಿಗೆ ಕೃತಜ್ಞರಾಗಿರಬೇಕೇ ಹೊರತು ದರ್ಬಾರ್ ಅನ್ನು ಬಸವ ತತ್ವ ವಿರೋಧಿ ಕಾರ್ಯಕ್ಕೆ ವೇದಿಕೆ ಆಗಿಸಿಕೊಳ್ಳಬಾರದು. ಜನರ ತಲೆ ಕೆಡಿಸುವ ಹಾಗೂ ಸಮಾಜದ ಸ್ಥಾಸ್ಥ್ಯ ಹಾಳುಗೆಡುವ ಕೆಲಸಕ್ಕೆ ಕೈಹಾಕಬಾರದು ಎಂದು ತಿಳಿಸಿದ್ದಾರೆ.
ಬಸವ ಭಕ್ತರ ವಿರೋಧ ಇರುವುದು ಗೊತ್ತಿದ್ದೂ ಸ್ಥಳೀಯ ಶಾಸಕರು ದಸರಾ ದರ್ಬಾರ್ ಆಯೋಜನೆ ಮುಂದಾಳತ್ವ ವಹಿಸಿರುವುದು ಬಸವ ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನು ಕೆರೆ ಹೆಸರು ಬದಲಾವಣೆ ಹಾಗೂ ವೃತ್ತ ಸ್ಥಾಪನೆಗೆ ಮುಂದಾದರೆ ಅದಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಸವ ಶರಣರಲ್ಲಿ ವಿಭಿನ್ನ ಯೋಚನೆ, ವಿಭಿನ್ನ ವಿಚಾರ ಬೇಡ.
ಎಲ್ಲರೂ ಒಗ್ಗಟ್ಟಿನಿಂದ ತುಂಬಾ ಚಾಕುವಿನಿಂದ ಚಕ್ಯತೆಯಿಂದ ಕೆಲಸ ಮಾಡಬೇಕು. ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ. ಸಮಿತಿಯ ಉಪಾಧ್ಯಕ್ಷ ಶ್ರೀ ಬಸವರಾಜ ಧನ್ನೂರ ರವರಿಗೇ ಬೆಂಬಲಕ್ಕೆ ನಿಲ್ಲುವ ಮೂಲಕ ತ್ರಿಪೂರಾಂತಕ ಕೆರೆ ಹೆಸರು ಬದಲಾಗದಂತೆ ಹಾಗೂ ಮುಖ್ಯ ರಸ್ತೆಯಲ್ಲಿ ರೇಣುಕಾಚಾರ್ಯ ರ ಮೂರ್ತಿ ಸ್ಥಾಪನೆ ಗೆ ವಿರೋಧಿಸಬೇಕು.
ಒಟ್ಟಾರೆ ಬಸವರಾಜ ಧನ್ನೂರ ರವರಿಗೆ ಸಂಪೂರ್ಣ ವಾದ ತನೇ ಮನ ಧನ ದಿಂದ ಬೆಂಬಲ ನೀಡಬೇಕು..
ಇತಿಹಾಸ ಸ್ಥಳಗಳಲ್ಲಿ, ಇತಿಹಾಸಕ್ಕೆ ಮಾತ್ರ ಅವಕಾಶ ಇರಬೇಕು. ಇತಿಹಾಸದ ತದ್ ವಿರುದ್ವದ ಕಾಲ್ಪನಿಕ ಪುರಾಣಕ್ಕೆ ಯಾವುದೇ ಕಾರಣಕ್ಕು ಅವಕಾಶ ನೀಡಬಾರದು.
ಲಿಂಗಾಯತರ ಸರಳ ನಡುವಳಿಗಳಿಂದ ಬದಲಾಗುವುದು ಅನಿವಾರ್ಯತೆ ಬಂದಂತಿದೆ.
JLM ge namma poorna bembal ide
🙏🙏
ಬಸವರಾಜ ಧನ್ನೂರು ಶರಣರ ಪ್ರತಿಕ್ರಿಯೆ ಸೂಕ್ತವಾಗಿದೆ. ಬಸವಾದಿ ಶರಣರ ಭಕ್ತರು ಈ ವಿಷಯದಲ್ಲಿ ಸದಾ ಜಾಗರೂಕರಾಗಿರಬೇಕು.
ನೂರು ಜನ…… ಸಾವಿರ ಸಾವಿರ ಜನ ಬಸವರಾಜ ಧನ್ನೂರರು ಎದ್ದು ನಿಲ್ಲಬೇಕು. ಈ ಕುತಂತ್ರವನ್ನು ತಡೆಗಟ್ಟ ಬೇಕು. ಕಾಲ್ಪನಿಕ ರೇಣುಕರಿಗೂ ಬಸವಕಲ್ಯಾಣಕ್ಕೂ ಏನು ಸಂಬಂಧ.. ಬಂಢತನಕ್ಕೂ ಒಂದು ಮಿತಿ ಇರಬೇಕು…
ಕೂಡಲು ಕೊಟ್ಟರೆ ಕಾಲುಚಚ್ಚಿದರಂತೆ ಈ ಪಂಚಾಚಾರ್ಯರಿಗೆ ಬಸವಭಕ್ತರು ಬುದ್ದಿಕಲಿಸುವರು. ನಿಮ್ಮ ಕೊಳಕು ಮನಸ್ಥಿತಿಯನ್ನು ಸುಧಾರಿಸಿಕೊಳ್ಳಿ.