ಭವಿಷ್ಯದ ಪ್ರಜೆಗಳನ್ನು ದೇಶಕ್ಕಾಗಿ ಸಿದ್ಧಪಡಿಸಬೇಕು: ಕ್ಯಾಪ್ಟನ್ ನವೀನ ನಾಗಪ್ಪ

ಬಸವ ಮೀಡಿಯಾ
ಬಸವ ಮೀಡಿಯಾ

ಬಸವಕಲ್ಯಾಣ

ಯಾವ ಸಮಯದಲ್ಲಿ ದೇಶಕ್ಕೆ ಆಪತ್ತು ಬರುತ್ತದೆಯೋ ಆ ಸಂದರ್ಭದಲ್ಲಿ ಸೈನಿಕರು ಸದಾ ಸೇವೆಗೆ ಸಿದ್ಧರಾಗಿರುತ್ತಾರೆ. ಯಾರು ಇತರರಿಗಾಗಿ ಬಾಳುತ್ತಾರೋ ಅವರದು ನಿಜವಾದ ಬಾಳು ಎಂದು ನಿವೃತ್ತ ಯೋಧ ಕಾರ್ಗಿಲ್ ಯುದ್ಧದ ಕ್ಯಾಪ್ಟನ್ ನವೀನ ನಾಗಪ್ಪ ಹೇಳಿದರು.

ಅವರು ಅಂತರ‍್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ವತಿಯಿಂದ ಇಲ್ಲಿನ ಹರಳಯ್ಯನವರ ಗವಿಯಲ್ಲಿ ನಡೆಯುತ್ತಿರುವ ಶರಣ ವಿಜಯೋತ್ಸವ ನಾಡಹಬ್ಬ ಹುತಾತ್ಮ ದಿನಾಚರಣೆಯ ನಾಲ್ಕನೇ ದಿನ ಗುರುವಾರ ಮಾಚಿದೇವ ಮಲ್ಲಿಬೊಮ್ಮ ವೀರ ಸೈನಿಕರ ವೇದಿಕೆಯಲ್ಲಿ ಮುಖ್ಯ ಅನುಭಾವ ನೀಡಿದ ಅವರು ಯುದ್ಧದ ಸಮಯದಲ್ಲಿ ಅನೇಕ ಗೆಳೆಯರನ್ನು ಕಳೆದುಕೊಳ್ಳಬೇಕಾಯಿತು. ತಾಯಿಯೊಬ್ಬಳು ನಿನೋಬ್ಬನೆ ಬಂದೆ, ಗೆಳೆಯನನ್ನು ಕರೆದುಕೊಂಡು ಬರಲಿಲ್ಲ ಎಂದು ಕೇಳಿದಾಗ ಅತೀವ ನೋವಾಯಿತು. ಹೀಗೆ ಕಾರ್ಗಿಲ್ ಯುದ್ಧದ ಸಂದರ್ಭದ ಘಟನೆಗಳನ್ನು ಹೇಳುತ್ತಿದ್ದರೆ ಸೇರಿದ ಜನರಲ್ಲಿ ಕಣ್ಣಾಲಿಗಳು ತುಂಬಿಕೊಂಡವು.

೧೨೦ ಸೈನಿಕರನ್ನು ೧೨ ತಂಡಗಳಾಗಿ ಮಾಡಿಕೊಂಡು ಯುದ್ಧ ಮಾಡಬೇಕಾಗಿತ್ತು. ಹತ್ತು ಬಂಕರ್ ಗಳ ಮೂಲಕ ವಿರೋಧಿಗಳು ದಾಳಿ ಮಾಡುತ್ತಿದ್ದರು, ನಾವು ೮ ಬಂಕರ್‌ಗಳನ್ನು ವಶಪಡಿಸಿಕೊಂಡೆವು. ಆದರೆ ಪಾಕಿಸ್ತಾನಿ ಸೈನಿಕನೊಬ್ಬ ಬಿಸಾಕಿದ ಬಾಂಬ್‌ನಿಂದ ನನ್ನ ಕಾಲು ಕಳೆದುಕೊಳ್ಳಬೇಕೆಂದು ನೆನಪಿಸಿಕೊಂಡು ಯಾವ ಪರಿಸ್ಥಿತಿಯಲ್ಲಿಯೂ ಮಾನಸಿಕವಾಗಿ ಕುಗ್ಗಬಾರದು ಎಂದರು.

ಸಾನಿಧ್ಯ ವಹಿಸಿದ ಪೂಜ್ಯ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ಸಮಾನತೆ, ಸ್ವಾತಂತ್ರ್ಯಕ್ಕಾಗಿ ಶರಣರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಕಲ್ಯಾಣ ಕ್ರಾಂತಿಯ ನಂತರ ವಚನ ಸಾಹಿತ್ಯವನ್ನು ರಕ್ಷಣೆ ಮಾಡಿದವರಲ್ಲಿ ಮಾಚಿದೇವ ಮಲ್ಲಿಬೊಮ್ಮ ಪ್ರಮುಖರಾಗಿದ್ದಾರೆ.

ಸೈನಿಕರಿಂದ ದೇಶ ಉಳಿಯುತ್ತದೆ. ಸೈನಿಕರ ಸಾಹಸ, ದೇಶದ ಜನರ ರಕ್ಷಣೆಗಾಗಿ ಅವರು ಮಾಡುವ ವೀರ ಕಾರ್ಯಗಳು, ತ್ಯಾಗಗಳು ಮತ್ತು ಬಲಿದಾನಗಳನ್ನು ಯುವ ಜನರಿಗೆ ತಿಳಿಸಿ ಅವರಿಗೆ ಪ್ರೇರಣೆಯಾಗಲೆಂದು ಇಂಥ ಕಾರ್ಯಕ್ರಮದ ಆಶಯವಾಗಿದ್ದು, ದೇಶಕ್ಕಾಗಿ ಕೊಡುಗೆ ನೀಡಬೇಕೆಂಬ ಚಿಂತನೆ ಮಕ್ಕಳಲ್ಲಿ ಬೆಳೆಸಿ ಆತ್ಮ ವಿಶ್ವಾಸ ಧೈರ್ಯ ತುಂಬಬೇಕು ಎಂದು ಸಲಹೆ ನೀಡಿದರು.

ನಗರಸಭೆ ಪೌರಾಯುಕ್ತ ರಾಜು ಡಿ. ಬಣಕಾರ ಮಾತನಾಡಿದರು. ಗಾಯತ್ರಿತಾಯಿ ನೇತೃತ್ವ ವಹಿಸಿದರು. ಮಾಜಿ ಸೈನಿಕರ ಸಂಘದ ಜಿಲ್ಲಾಧ್ಯಕ್ಷ ರಾಜಕುಮಾರ ಲದ್ದೆ ಅಧ್ಯಕ್ಷತೆ ವಹಿಸಿದರು.

ಮಾಜಿ ಸೈನಿಕರ ಸಂಘದ ತಾಲೂಕಾಧ್ಯಕ್ಷ ಬಾಬುರಾವ ಗೋಟೆ, ಉಪಾಧ್ಯಕ್ಷ ಮಲ್ಲಪ್ಪ ಭಾಗ್ಯವಾಡಿ, ಕಾರ್ಯದರ್ಶಿ ಪ್ರಕಾಶ ನೇತೆ ನಿರ್ದೇಶಕರಾದ ಸಿದ್ರಾಮಪ್ಪ ಬೇಲೂರೆ, ರಮೇಶ ಪಾಟೀಲ, ಪ್ರಕಾಶ ಸೋನಾರೆ, ಭಾಲ್ಕಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಜಗನ್ನಾಥ ಡಿಗ್ಗಿ, ಹುಲಸೂರ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಂಡಿತ ಸೂರ್ಯವಂಶಿ, ಹುಮನಾಬಾದ ಮಾಜಿ ಸೈನಿಕರ ಸಂಘದ ಅಧ್ಯಕ್ಷ ವಿಠಲ ಕಾದೇಪೂರೆ, ಚಿಟ್ಟಗುಪ್ಪ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಗಂಗಾಧರ ಕುಲಕರ್ಣಿ, ವಿ.ಕೆ. ತೆಲಂಗ ಸೇರಿದಂತೆ ನೂರಾರು ಮಾಜಿ ಸೈನಿಕರು, ಲಿಂಗರಾಜ ಶಾಶಟ್ಟಿ, ಸಿದ್ಧಣ್ಣಾ ಮರಪಳ್ಳೆ ಜಗದೇವಿ ಹೊಳಕುಂದೆ ಉಪಸ್ಥಿತರಿದ್ದರು.

ರಾಧಾ ಯವಳೆಯವರಿಂದ ದೇಶಭಕ್ತಿ ಗೀತೆಗಳು ಮೂಡಿ ಬಂದವು. ಸೃಷ್ಟಿ ಮತ್ತು ಸಂಗಡಿಗರಿಂದ ಮೂಡಿ ಬಂದ ಅಪರೇಷನ್ ಸಿಂಧೂರ ರೂಪಕ ಗಮನ ಸೆಳೆಯಿತು. ಶಿವಕುಮಾರ ಬಿರಾದಾರ ಸ್ವಾಗತಿಸಿದರೆ, ಸಂಗಮೇಶ ತೋಗರಖೇಡೆ ನಿರೂಪಿಸಿದರು

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ https://chat.whatsapp.com/BvguxN7Z0AG9g7Il7l5Lzh

Share This Article
Leave a comment

Leave a Reply

Your email address will not be published. Required fields are marked *