26ನೇ ದಿನದ ಲೈವ್ ಬ್ಲಾಗ
ಮಂಗಲ
ಸಿದ್ದಗಂಗಾ ಮಠದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳಿಂದ ಸಮಾರೋಪ ಆಶೀರ್ವಚನ.
ಪ್ರೊ. ರಾಜಣ್ಣ ಅವರಿಂದ ಶರಣು ಸಮರ್ಪಣೆ.
ಕಲ್ಯಾಣ ಗೀತೆಯೊಂದಿಗೆ ಸಮಾರಂಭ ಮಂಗಲ.



ಸುರೇಶ ಕಡಗದ, ಬಸವೇಶ ಶೆಟ್ಟಿ ಧನ್ಯವಾದ
ಫೋಟೋ, ವಿಡಿಯೋ, ಮಾಹಿತಿ ನೀಡಿದ ಸುರೇಶ ಕಡಗದ, ಬಸವೇಶ ಶೆಟ್ಟಿ ಅವರಿಗೆ ಧನ್ಯವಾದ.
ಸಾರ್ವಜನಿಕ ಸಮಾವೇಶ
ಪೂಜ್ಯ ಡಾ. ಶಿವಕುಮಾರ ಮಹಾಸ್ವಾಮೀಜಿ ಹೆಸರಿನ ವೇದಿಕೆಯಲ್ಲಿ ಸಮಾವೇಶ ಆರಂಭ.
ಪೂಜ್ಯರು, ಗಣ್ಯರು ಬಸವ ಮೂರ್ತಿಗೆ ಪುಷ್ಪಾರ್ಪಣೆ ಮಾಡುವ ಮುಖಾಂತರ ಸಮಾವೇಶದ ಉದ್ಘಾಟನೆ.
ರುದ್ರಮೂರ್ತಿ ಎಲೆರಾಂಪುರ ಅವರ ತಂಡದಿಂದ ವಚನ ಪ್ರಾರ್ಥನೆ.
ಮುಂಡರಗಿ-ಬೈಲೂರಿನ ನಿಜಗುಣಾನಂದ ಸ್ವಾಮೀಜಿ ಅವರಿಂದ ‘ಶರಣರ ಏಕದೇವತಾ ನಿಷ್ಠೆ’ ಕುರಿತು ಅನುಭಾವ.
ಡಾ. ಬಿ.ಸಿ. ಶೈಲಾ ನಾಗರಾಜ ಅವರ ‘ಬಸವ ಸಂಸ್ಕೃತಿ’ ಕೃತಿ ಬಿಡುಗಡೆಗೊಂಡಿತು.
ಬಸವಧರ್ಮ ಪೀಠದ ಡಾ. ಗಂಗಾ ಮಾತಾಜಿ ಅವರಿಂದ ಆಶೀರ್ವಚನ.
ಡಾ. ತೋಂಟದ ಸಿದ್ದರಾಮ ಮಹಾಸ್ವಾಮಿಗಳಿಂದ ಆಶೀರ್ವಚನ.
ಬೆಟ್ಟದಳ್ಳಿ ಗವಿಮಠದ ಅಧ್ಯಕ್ಷರಾದ ಚಂದ್ರಶೇಖರ ಸ್ವಾಮೀಜಿ ಅವರಿಂದ ಆಶೀರ್ವಚನ.
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳಿಂದ ಆಶೀರ್ವಚನ.
ಭಾಲ್ಕಿ ಬಸವಲಿಂಗ ಪಟ್ಟದ್ದೇವರಿಂದ ಆಶೀರ್ವಚನ. ಮೆರವಣಿಗೆಯ ಶರಣ ವೇಷಧಾರಿ ಮಕ್ಕಳಿಗೆ ವಚನ ಪುಸ್ತಕ ಕಾಣಿಕೆಯಾಗಿ ನೀಡಿ ಸತ್ಕರಿಸಲಾಯಿತು.







ಮೂರು ಗಂಟೆಗಳ ಕಾಲ ನಡೆದ ಮೆರವಣಿಗೆ
ಮೂರು ಗಂಟೆಗಳ ಕಾಲ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಸಿದ್ಧಿವಿನಾಯಕ ಸಮುದಾಯ ಭವನ ತಲುಪಿದ ಮೆರವಣಿಗೆ. ಸಾರ್ವಜನಿಕ ಸಮಾವೇಶ ಈ ಭವನದಲ್ಲಿ ನಡೆಯಲಿದೆ.
ಸಾಮರಸ್ಯ ನಡಿಗೆಯಲ್ಲಿ ನಾಡಿನ ಪೂಜ್ಯರು
ಶ್ರೀಗಳು ಸಾಮರಸ್ಯ ನಡಿಗೆಯಲ್ಲಿ
ಸಾಮರಸ್ಯ ನಡಿಗೆಯಲ್ಲಿ ಶರಣರ ವೇಷ ಧರಿಸಿದ ಮಕ್ಕಳು
ಸಾಮರಸ್ಯ ನಡಿಗೆಯಲ್ಲಿ ಸಿದ್ಧಲಿಂಗ ಮಹಾಸ್ವಾಮಿಗಳು
ಮುರುಘರಾಜೇಂದ್ರ ಹಾಸ್ಟೆಲ್ ಆವರಣದಿಂದ ವಿವಿಧ ಜನಪದ ಕಲಾತಂಡಗಳೊಂದಿಗೆ ಪಾದಯಾತ್ರೆ, ಮೆರವಣಿಗೆ ಆರಂಭ. ಸಿದ್ದಿವಿನಾಯಕ ಸಮುದಾಯ ಭವನದವರೆಗೆ ಸಾಗಲಿದೆ.
ತುಮಕೂರು ಸಿದ್ದಗಂಗಾ ಮಠದ ಪೂಜ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಸೇರಿದಂತೆ ಅನೇಕ ಪೂಜ್ಯರು, ಗಣ್ಯರು, ಶರಣ ಶರಣೆಯರು ಪಾದಯಾತ್ರೆಯಲ್ಲಿ ಸಾಗುತ್ತಿದ್ದಾರೆ.









ಪ್ರಶ್ನೆ ಕೇಳುವ ಮಕ್ಕಳು ಪ್ರಜ್ಞಾವಂತರು: ಬೆಟ್ಟದಳ್ಳಿ ಗವಿಮಠ ಶ್ರೀ
ಬೆಟ್ಟದಳ್ಳಿ ಗವಿಮಠದ ಅಧ್ಯಕ್ಷರಾದ ಚಂದ್ರಶೇಖರ್ಯ ಸ್ವಾಮೀಜಿ ಅವರಿಂದ ಸಾನಿಧ್ಯ ನುಡಿ. ನಾವೆಲ್ಲ ಕಷ್ಟಪಟ್ಟು ದುಡಿಯಬೇಕು. ಶರಣರಂತೆ ಕಾಯಕ ಮಾಡಬೇಕು. ವಚನಗಳು ನಮಗೆ ಬರುವ ಸಮಸ್ಯೆಗಳನ್ನು ನೀಗಿ ಮುನ್ನಡೆಯಲು ಸರಿಯಾದ ಬೆಳಕು ತೋರಿಸುತ್ತವೆ. ಬಸವಾದಿ ಶರಣರು ನುಡಿದಂತೆ ನಡೆದು, ನಡೆದಂತೆ ನುಡಿದು ವಾಸ್ತವ ಸತ್ಯವನ್ನು ತಿಳಿಸಿಕೊಟ್ಟು ಹೋಗಿದ್ದಾರೆ. ತಿದ್ದಿಕೊಂಡು ರೂಢಿಸಿಕೊಂಡು ನಡೆದರೆ ಕಲ್ಯಾಣ ರಾಜ್ಯ ನಿರ್ಮಾಣ ಸಾಧ್ಯ. ಸಕಲ ಜೀವಾತ್ಮರಿಗೆ ಲೇಸು ಬಯಸಿದ್ದೇ ಶರಣ ಧರ್ಮ. ಪ್ರಶ್ನೆ ಕೇಳಿದ ಮಕ್ಕಳು ಪ್ರಜ್ಞಾವಂತರು, ವಿಚಾರವಂತರು ಆಗಿದ್ದಾರೆ ಎಂಬುದನ್ನು ಸ್ವಾಮೀಜಿ ಹೇಳಿದರು.
ಕಲ್ಯಾಣಗೀತೆಯೊಂದಿಗೆ ಸಂವಾದ ಮಂಗಲಗೊಂಡಿತು.
ಸಂವಾದದ ಚಿತ್ರಗಳು









ಪ್ರಶ್ನೆಗಳು
ನಾವು ಲಿಂಗಪೂಜೆಯಲ್ಲಿ ನಿರತರಾದಾಗ ಯಾವ ಮಂತ್ರ ಹೇಳಬೇಕು?
ವಿಭೂತಿ ರುದ್ರಾಕ್ಷಿಯ ಮಹಿಮೆ ತಿಳಿಸಿ.
ಭಕ್ತರು ಮಠಕ್ಕೆ ದಾಸೋಹ ನೀಡಲು ತಂದಾಗ, ತಂದಿರುವ ದಾಸೋಹ ಸತ್ಯಶುದ್ಧವಾದದ್ದೇ ಎಂದು ಪ್ರಶ್ನಿಸಿದ್ದೀರಾ?
ಅನ್ಯ ಧರ್ಮಗಳಲ್ಲಿರುವಂತೆ ಲಿಂಗಾಯತರಿಗೆ ಪ್ರಾರ್ಥನಾ ಕೇಂದ್ರಗಳಾವುವು?
ಸ್ವಾಮೀಜಿಗಳ ಕಾಲಿಗೆ ನಮಸ್ಕರಿಸಬೇಕೆಂದು ಯಾವ ವಚನದಲ್ಲಿ ಹೇಳಲಾಗಿದೆ?
ದಾಸೋಹ ತತ್ವದ ಅರ್ಥವೇನು?
ಸ್ವಾಮೀಜಿಗಳಿಗೆ ಕಷ್ಟ ಬಂದಾಗ ಸ್ವಾಮೀಜಿಗಳು ಯಾರ ಮೊರೆ ಹೋಗುತ್ತಾರೆ?
ಬಸವಣ್ಣ ಲಿಂಗಾಯತ ಧರ್ಮದ ಸ್ಥಾಪಕರಾ ಅಥವಾ ಪುನರುದ್ಧಾರಕರಾ?
ಎಳೆಹೂಟೆ ಶಿಕ್ಷೆಯ ಪ್ರಸಂಗದ ಬಗ್ಗೆ ತಿಳಿಸಿ.
ಮಠಗಳು ಗುಡಿಕೈಗಾರಿಕೆಗಳು ಮತ್ತೀತರ ಚಟುವಟಿಕೆಗಳ ಬಗ್ಗೆ ಕೆಲಸ ಮಾಡಿವೆಯೇ?
ವಚನಕಾರರು ಸಂಸಾರಿಗಳಾಗಿದ್ದರು, ಈ ಮಠ-ಪೀಠಗಳು ಏಕೆ?
ಮಧುರವಾಗಿದ್ದ ಬಿಜ್ಜಳ ಹಾಗೂ ಬಸವಣ್ಣನವರ ಸಂಬಂಧ ಹದಗೆಡಲು ಕಾರಣವೇನು?
ಬಸವಣ್ಣನವರು ಇಷ್ಟಲಿಂಗ ಏಕೆ ಕೊಟ್ಟರು?
ಕಾವಿ ಬಟ್ಟೆಯ ಮಹತ್ವ ಏನು?
ಷಟಸ್ಥಲ ಸಿದ್ದಾಂತ ಅಂದರೇನು, ಮಹತ್ವವೇನು?
ಹಿಂದೂ ಧರ್ಮದ ಶಿವ, ಲಿಂಗಾಯತ ಧರ್ಮದ ಶಿವನ ಕಲ್ಪನೆ ಬೇರೆ ಬೇರೆಯಾ? ಅದಿಲ್ಲದಿದ್ದರೆ ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆ ಯಾಕೆ?
ಈ ಅಭಿಯಾನದ ಬಗ್ಗೆ ಎಲ್ಲಾ ಜನರಲ್ಲಿ ಹೇಗೆ ಜಾಗೃತಿ ಮೂಡಿಸುತ್ತೀರಿ?
ವಚನಕಾರರ ಅಂಕಿತನಾಮಗಳು ದೇವರ ಹೆಸರೇ ಏಕೆ?
ಲಿಂಗಾಯತ ವಿವಾಹ ಪದ್ಧತಿಯಲ್ಲಿ ಏಕೆ ನಿರ್ದಿಷ್ಟ ನಿಯಮಗಳಿಲ್ಲ?
ಲಿಂಗಾಯತರಲ್ಲಿ ಗೊಂದಲ ಹಾಗೂ ಲಿಂಗಾಯತ ಮಠಾಧಿಪತಿಗಳಲ್ಲಿ ಗೊಂದಲ ಹೆಚ್ಚಾಗಿವೆ, ಇವನ್ನು ಹೇಗೆ ಸರಿಪಡಿಸುತ್ತೀರಾ?
ಸಂವಾದ ಆರಂಭ
ಕದಳಿ ವೇದಿಕೆಯ ಸದಸ್ಯರು ಪ್ರಾರ್ಥನೆ ಗೈದರು.
ಪ್ರೊ. ರಾಜಣ್ಣ ಅವರು ಸರ್ವರನ್ನು ಸ್ವಾಗತಿಸಿದರು.
ಪೂಜ್ಯರು ಹಾಗೂ ಗಣ್ಯರು ಜ್ಯೋತಿ ಬೆಳಗಿಸಿ, ಬಸವ ಮೂರ್ತಿಗೆ ಪುಷ್ಪಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿದರು.
ಶೇಗುಣಸಿ ಡಾ. ಮಹಾಂತ ಪ್ರಭುಸ್ವಾಮೀಜಿ ಅವರಿಂದ ಆಶಯ ನುಡಿ.
ಷಟಸ್ಥಲ ಧ್ವಜಾರೋಹಣ
ಶ್ರೀ ಸಿದ್ಧಿವಿನಾಯಕ ಸಮುದಾಯ ಭವನದಲ್ಲಿ ಬೆಟ್ಟದಹಳ್ಳಿ ಗವಿಮಠಾಧ್ಯಕ್ಷರಾದ ಚಂದ್ರಶೇಖರ ಸ್ವಾಮೀಜಿ ಷಟಸ್ಥಲ ಧ್ವಜಾರೋಹಣ ಮಾಡಿದರು.
ಜಾ.ಲಿಂ. ಮಹಾಸಭಾ ಜಿಲ್ಲಾಧ್ಯಕ್ಷ ಜಿ.ವಿ. ನಾಗಭೂಷಣ ಅವರು ಧ್ವಜಗೀತೆ ಹಾಡಿದರು.
ಮೃತ್ಯುಂಜಯ ದೇಶಿಕೇಂದ್ರ ಸ್ವಾಮೀಜಿ, ಸಿದ್ದಲಿಂಗ ಶಿವಾನಂದ ಸ್ವಾಮೀಜಿ, ಶಿವಪಂಚಾಕ್ಷರಿ ಸ್ವಾಮೀಜಿ, ಗೋಸಲ ಚೆನ್ನಬಸವ ಶಿವಾಚಾರ್ಯ ಸ್ವಾಮೀಜಿ ಮತ್ತು ಬಸವಪರ ಸಂಘಟನೆಗಳ ಸದಸ್ಯರು ಉಪಸ್ಥಿತರಿದ್ದರು.


ಇಂದಿನ ಕಾರ್ಯಕ್ರಮ
ಸಂವಾದ
ಬೆಳಿಗ್ಗೆ 11 ಗಂಟೆಗೆ ಸಿದ್ಧಿವಿನಾಯಕ ಸಮುದಾಯ ಭವನದಲ್ಲಿ ವಿದ್ಯಾರ್ಥಿ-ಯುವಜನ, ಸಾರ್ವಜನಿಕರೊಂದಿಗೆ ವಚನ ಸಂವಾದ.
ಪಾದಯಾತ್ರೆ
ಮಧ್ಯಾಹ್ನ 2:30 ಗಂಟೆಗೆ ಪಾದಯಾತ್ರೆ, ಮೆರವಣಿಗೆ ಜಯದೇವ ಮುರುಘರಾಜೇಂದ್ರ ಹಾಸ್ಟೆಲ್ ಆವರಣದಿಂದ ಸಿದ್ಧಿವಿನಾಯಕ ಸಮುದಾಯ ಭವನದವರೆಗೆ.
ಬಹಿರಂಗ ಸಭೆ
ಸಂಜೆ 5:30 ಗಂಟೆಗೆ ಸಾರ್ವಜನಿಕ ಸಮಾವೇಶ ಸಿದ್ಧಿವಿನಾಯಕ ಸಮುದಾಯ ಭವನದಲ್ಲಿ.
ಅನುಭಾವ
ಮುಂಡರಗಿ-ಬೈಲೂರನ ನಿಜಗುಣಾನಂದ ಸ್ವಾಮೀಜಿ ಅವರಿಂದ ‘ಶರಣರ ಏಕದೇವತಾ ನಿಷ್ಠೆ’ ಕುರಿತು ಉಪನ್ಯಾಸ.
ಚೆನ್ನೈ ಪ್ರಾಧ್ಯಾಪಕ ಡಾ. ತಮಿಳ್ ಸೆಲ್ವಿ ಅವರಿಂದ ‘ವಚನ ಮಾಂಗಲ್ಯ’ ವಿಷಯವಾಗಿ ಉಪನ್ಯಾಸ.
ನಾಟಕ
ರಾತ್ರಿ 8 ಗಂಟೆಗೆ ‘ಜಂಗಮದೆಡೆಗೆ’ ನಾಟಕ ಸಾಣೇಹಳ್ಳಿ ಶಿವಸಂಚಾರ ಕಲಾತಂಡದಿಂದ.