27ನೇ ದಿನದ ಲೈವ್ ಬ್ಲಾಗ್
ಉಪನ್ಯಾಸ ಕಾರ್ಯಕ್ರಮ
ಬೆಂಗಳೂರು ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ, ಚಿಂತಕ ಡಾ. ಬಿ.ಎಲ್. ಶಂಕರ್ ಅವರಿಂದ ‘ಶರಣರು ಕಟ್ಟಬಯಸಿದ ಸಮಾಜ ಮತ್ತು ಇಂದಿನ ಸಮಾಜ’ ವಿಷಯವಾಗಿ ಉಪನ್ಯಾಸ.

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳಿಂದ ಸಮಾರೋಪ ನುಡಿ.

ಕಲ್ಯಾಣ ಗೀತೆಯೊಂದಿಗೆ ಸಮಾರಂಭ ಮಂಗಲಗೊಂಡಿತು.
ಫೋಟೋ, ವಿಡಿಯೋ, ಮಾಹಿತಿ ಒದಗಿಸಿದ ಕಾಳೆ ಖಂಡೇರಾವ್ ಅವರಿಗೆ ಧನ್ಯವಾದ.
ಪ್ರಶ್ನೆಗಳು
ಮೊದಲ ಬಾರಿಗೆ ವಚನ ಸಾಹಿತ್ಯ ರಚನೆ ಯಾರಿಂದ, ಕಾಲಘಟ್ಟ ಯಾವುದು?
ಬ್ರಾಹ್ಮಣರಾಗಿದ್ದ ಬಸವಣ್ಣನವರು ಲಿಂಗಾಯತ ಧರ್ಮಕ್ಕೆ ಏಕೆ ಬಂದರು?
ವೀರಶೈವ ಹಾಗೂ ಲಿಂಗಾಯತ ನಡುವಿನ ವ್ಯತ್ಯಾಸವೇನು?
ಬುದ್ಧ ಬಸವ ಅಂಬೇಡ್ಕರ್ ಅವರ ಸಮಾನತೆಯ ಸಾಧನೆ ಯಾಕೆ ಆಗುತ್ತಿಲ್ಲ?
ವಚನ ಸಾಹಿತ್ಯ ಹುಟ್ಟಲು ಕಾರಣವೇನು?
12ನೇ ಶತಮಾನದಲ್ಲಿ ಲಿಂಗಧಾರಣೆಯ ಮಹತ್ವ ಏನಾಗಿತ್ತು?
ವಚನಕಾರರು ಅಂಕಿತನಾಮ ಏಕೆ ಇಟ್ಟುಕೊಂಡರು?
ವಚನಕಾರರ ಪ್ರಕಾರ ವಿಗ್ರಹ ಆರಾಧನೆ ನಿಷೇಧ, ಹಾಗಾದರೆ ಇಷ್ಟಲಿಂಗ ವಿಗ್ರಹವಲ್ಲವೆ?
ಇಂದಿನ ಲಿಂಗಾಯತರು ಅಂತರ್ಜಾತಿ ವಿವಾಹಕ್ಕೆ ಯಾಕೆ ಅವಕಾಶ ಕೊಡುತ್ತಿಲ್ಲ?
ಬಸವಣ್ಣನವರು ಹೇಳಿದ ನಿಜಧರ್ಮ ಆಚರಣೆ ಸಾಧ್ಯವೇ?
ಬಸವಣ್ಣನವರು ಸಮಸಮಾಜ ಬೇಕು ಅಂದ್ರು, ಲಿಂಗಾಯತರು ಪ್ರತ್ಯೇಕ ಧರ್ಮ ಏಕೆ ಕೇಳುತ್ತಾರೆ?
ಇಷ್ಟಲಿಂಗ ಕೊಟ್ಟದ್ದು ಸರಿಯಾ ತಪ್ಪಾ? ಇಷ್ಟಲಿಂಗ ಅಂದರೆ ಏನು?
ವಚನ ಸಾಹಿತ್ಯದಲ್ಲಿ ಬಂದಿರುವ ಶರಣಸತಿ ಲಿಂಗಪತಿ ಅರ್ಥವೇನು?
ವಚನಕಾರರ ಕಾಯಕ ದಾಸೋಹ ತತ್ವದ ಮಹತ್ವವೇನು?
ಬಸವಣ್ಣನವರು ಲಿಂಗಾಯತ ಧರ್ಮವನ್ನೇ ಏಕೆ ಮತ್ತು ಇಷ್ಟಲಿಂಗವನ್ನು ಏಕೆ ಕೊಟ್ಟರು?
ಕಾಯಕವೇ ಕೈಲಾಸ ಎಂಬುದನ್ನು ಇವತ್ತಿಗೆ ಹೇಗೆ ಅನ್ವಯಿಸುವುದು?
ಎಲ್ಲ ಧರ್ಮಗಳು ಹೆಣ್ಣನ್ನು ಭೋಗಿಸುವ ವಸ್ತುವಾಗಿ ನೋಡಿವೆ. ಯಾವುದಾದರೂ ಧರ್ಮ ಅವಳನ್ನು ಮನುಷ್ಯಳಂತೆ ನೋಡಿದೆಯಾ?
ಅಂದಿನಿಂದ ಇಂದಿನವರೆಗೂ ಜಾತಿವ್ಯವಸ್ಥೆ ಗಟ್ಟಿಯಾಗಿದೆ. ಅದರ ನಿರ್ಮೂಲನೆಯ ಮಾರ್ಗ ಯಾವುದು?
ಸ್ವಾಮೀಜಿಗಳು ರಾಜಕಾರಣ ಮಾಡುವುದು ಸರಿಯೆ?
ಸಂವಾದ ಕಾರ್ಯಕ್ರಮ ಆರಂಭ
ಟಿ. ಚನ್ನಯ್ಯ ರಂಗಮಂದಿರದಲ್ಲಿ ಸಂವಾದ ಕಾರ್ಯಕ್ರಮ ಆರಂಭ.
ಚಿಂತಕ, ಮಾಜಿ ಸಭಾಪತಿ ವಿ. ಆರ್. ಸುದರ್ಶನ ಅವರಿಂದ ಉದ್ಘಾಟನಾ ನುಡಿಗಳು.

ಎಸ್.ಡಿ. ಸಿ. ಕಾಲೇಜು ವಿದ್ಯಾರ್ಥಿಗಳಿಂದ ವಚನ ನೃತ್ಯ.

ಬಸವ ಭಾವಚಿತ್ರಕ್ಕೆ ಪೂಜ್ಯರು, ಗಣ್ಯರು ಪುಷ್ಪಾರ್ಪಣೆ ಮಾಡಿ ಉದ್ಘಾಟಿಸಿದರು.

ಶೇಗುಣಸಿ ಮಹಾಂತಪ್ರಭು ಶ್ರೀ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
ಬಾಲ್ಕಿಯ ಬಸವಲಿಂಗ ಪಟ್ಟದ್ದೇವರು ಬಸವಣ್ಣನವರ ಬದುಕಿನ ಬಗ್ಗೆ ಚಿಂತನೆ ಗೈದರು.

ಬಸವಣ್ಣನವರ ತಂದೆ-ತಾಯಿ ಹೆಸರು ಹೇಳಿದ ವಿದ್ಯಾರ್ಥಿನಿಗೆ ವಚನ ಪುಸ್ತಕ ಬಹುಮಾನವಾಗಿ ನೀಡಲಾಯಿತು.
ಅಶೋಕ ಲೋಣಿ ಸರ್ವರನ್ನು ಸ್ವಾಗತ ಕೋರಿದರು.
ಶೇಗುಣಸಿ ಶ್ರೀಗಳು ಸಂವಾದ ನಡೆಸಿಕೊಟ್ಟರು.



ಕೋಲಾರದಲ್ಲಿ ಸಾಮರಸ್ಯ ನಡಿಗೆ
ಸಾಮರಸ್ಯ ನಡಿಗೆ ಆರಂಭ
ನಡಿಗೆ ಟಿ. ಚನ್ನಯ್ಯ ರಂಗಮಂದಿರದವರೆಗೆ ಸಾಗಲಿದೆ.





ರಥಕ್ಕೆ ಸ್ವಾಗತ
ಬಂಗಾರಪೇಟೆ ವೃತ್ತದಲ್ಲಿ ಬಸವ ರಥವನ್ನು ಪೂಜ್ಯರು, ಗಣ್ಯರು ಸ್ವಾಗತಿಸಿಕೊಂಡರು. ನಂತರ ಅಲ್ಲಿನ ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಗೌರವಾರ್ಪಣೆ ಸಲ್ಲಿಸಿ ‘ಸೌಹಾರ್ದ ನಡಿಗೆ’ ಪ್ರಾರಂಭಿಸಲಾಯಿತು.

ಇಂದಿನ ಕಾರ್ಯಕ್ರಮ
ಸೌಹಾರ್ದ ನಡಿಗೆ
ಬೆಳಿಗ್ಗೆ 10 ಗಂಟೆಗೆ ಬಸವ ರಥವನ್ನು ಸ್ವಾಗತಿಸಿಕೊಂಡು, ‘ಸೌಹಾರ್ದ ಮಾನವತೆಯ ನಡಿಗೆ’ ಬಂಗಾರಪೇಟೆ ವೃತ್ತದ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಯಿಂದ ಶ್ರೀ ಟಿ. ಚೆನ್ನಯ್ಯ ರಂಗಮಂದಿರದ ವರೆಗೆ.
ಸಂವಾದ
ಬೆಳಿಗ್ಗೆ 11 ಗಂಟೆಗೆ ವಿದ್ಯಾರ್ಥಿಗಳೊಂದಿಗೆ ವಚನ ಸಂವಾದ.
ಬಹಿರಂಗ ಸಮಾವೇಶ
ಮಧ್ಯಾಹ್ನ 2.30 ಗಂಟೆಗೆ ಸಾರ್ವಜನಿಕ ಸಮಾರಂಭ.
ಉಪನ್ಯಾಸ
ಶ್ರೀ ಮಾತೆ ನಂದಾತಾಯಿ, ಧಾರವಾಡ ಮತ್ತು ಡಾ. ಬಿ. ಎಲ್. ಶಂಕರ್ ಚಿತ್ರಕಲಾ ಪರಿಷತ್, ಬೆಂಗಳೂರು ಇವರಿಂದ ಉಪನ್ಯಾಸ.
ನಾಟಕ
ಸಂಜೆ 4.30 ಗಂಟೆಗೆ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ, ಸಾಣೇಹಳ್ಳಿ ಶಿವಸಂಚಾರ ಕಲಾತಂಡದಿಂದ.