29ನೇ ದಿನದ ಲೈವ್ ಬ್ಲಾಗ್
ಸಾರ್ವಜನಿಕ ಸಭೆ
ನೆಲಮಂಗಲ ಶಾಸಕರಾದ ಶ್ರೀನಿವಾಸ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.

ಶಾಸಕ ಶ್ರೀನಿವಾಸ ಅವರಿಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ಸತ್ಕರಿಸಲಾಯಿತು.

ಪವಾಡ ಶ್ರೀ ಬಸವಣ್ಣ ದೇವರ ಮಠದ ಸಿದ್ಧಲಿಂಗ ಮಹಾಸ್ವಾಮಿಗಳು ಸಾನಿಧ್ಯ ನುಡಿಗಳನ್ನು ಆಡಿದರು.

ಬಸವಧರ್ಮ ಪೀಠದ ಡಾ. ಗಂಗಾ ಮಾತಾಜಿ ಅವರಿಂದ ಆಶೀರ್ವಚನ.

ಭಾಲ್ಕಿ ಬಸವಲಿಂಗ ಪಟ್ಟದ್ದೇವರಿಂದ ಆಶೀರ್ವಚನ.

ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳಿಂದ ಆಶೀರ್ವಚನ.

ಕಲ್ಯಾಣ ಗೀತೆಯೊಂದಿಗೆ ಸಮಾರಂಭ ಮಂಗಲಗೊಂಡಿತು.



ಸಂವಾದದ ಚಿತ್ರಗಳು




ಇಂದಿನ ಪ್ರಶ್ನೆಗಳು
ರಾಮರಾಜ್ಯ ಮತ್ತು ಬಸವರಾಜ್ಯಕ್ಕೆ ಇರುವ ವ್ಯತ್ಯಾಸವೇನು?
ಬೌದ್ಧಧರ್ಮಕ್ಕಿಂತ ಬಸವಧರ್ಮ ಹೇಗೆ ವಿಶೇಷ?
ವಚನ ಸಾಹಿತ್ಯ ಮತ್ತು ಈಗಿನ ಸಾಹಿತ್ಯಕ್ಕೆ ಇರುವ ವ್ಯತ್ಯಾಸ?
ಇವತ್ತೇನಾದ್ರು ಬಸವಣ್ಣನವರು ಪ್ರತ್ಯಕ್ಷರಾದರೆ ಅವರಿಗೆ ಈಗಿನ ಸಮಾಜ ನೋಡಿ ಏನನ್ನಿಸಬಹುದು?
ಬಸವಣ್ಣ ತಮ್ಮ ತತ್ವಗಳನ್ನು ತಲುಪಿಸಲು ಯಾವ ಮಾರ್ಗ ಅನುಸರಿಸಿದರು?
ವಚನಗಳನ್ನು ಅನುಸರಿಸಿ ಇವತ್ತು ಸರಳವಾಗಿ ಬದುಕಬಹುದೆ?
ಕೆಲವು ಬಸವಧರ್ಮಿಯರು ಕ್ರೈಸ್ತಧರ್ಮಕ್ಕೆ ಮತಾಂತರವಾಗುತ್ತಿದ್ದಾರೆ ಯಾಕೆ?
ಬಸವಾದಿ ಶರಣರು ವಚನಗಳನ್ನು ಬರೆಯದಿದ್ದರೆ ಆಧುನಿಕ ಜಗತ್ತು ಹೇಗಿರುತ್ತಿತ್ತು?
ಬಸವಣ್ಣನವರ ಪ್ರಮುಖ ತತ್ವಗಳಾವವು?
ಕಾಯಕ ಮತ್ತು ಭಕ್ತಿಗೆ ಇರುವ ಸಂಬಂಧವೇನು?
ರಕ್ಷಕರೇ ಭಕ್ಷಕರಾದರೆ ಏನು ಮಾಡುವುದು?
ಆಗಿನ ಶರಣರಂತೆ ಈಗ ಏಕೆ ವಚನಗಳನ್ನು ಬರೆಯಲಾಗುತ್ತಿಲ್ಲ?
ಶರಣರು ವಚನ ಮಾರ್ಗವನ್ನೇ ಏಕೆ ಆಯ್ಕೆಮಾಡಿಕೊಂಡರು?
ಜಾತಿಭೇದವಿಲ್ಲದೇ ಲಿಂಗಪೂಜೆ ಮಾಡಬಹುದೆ?
ಅಹಿಂಸೆ ಪಾಲನೆ ಈಗ ಸಾಧ್ಯವೆ?
ಬಸವಧರ್ಮಕ್ಕು ಮತ್ತು ಹಿಂದೂಧರ್ಮಕ್ಕೂ ಸಾಮ್ಯತೆ ಇದೆಯಾ?
ವ್ಯಕ್ತಿತ್ವ ವಿಕಸನಕ್ಕೆ ನಾವೇನು ಮಾಡಬೇಕು?
ಬಸವಣ್ಣನವರಂತೆ ಅಧಿಕಾರ ತ್ಯಾಗ ಈಗಿನ ರಾಜಕಾರಣಿಗಳಿಗೆ ಸಾಧ್ಯವೆ?
ಕಾಯಕವೇ ಕೈಲಾಸ ಎಂದು ಬಸವಣ್ಣನವರು ಯಾಕೆ ಹೇಳಿದರು?
ಬಸವಣ್ಣನವರು ಸಮಾನತೆ, ಕರುಣೆ ವಿಷಯವಾಗಿ ಏನು ಹೇಳಿದರು?
ಬಸವ ಸಂಸ್ಕೃತಿಯ ವಿಶೇಷತೆ ಏನು?
ಭಕ್ತಿ ಶ್ರದ್ಧೆಗಿರುವ ವ್ಯತ್ಯಾಸವೇನು?
ಪ್ರಶ್ನೆ ಕೇಳಿದ ಎಲ್ಲ ಮಕ್ಕಳಿಗೆ ವಚನ ಪುಸ್ತಕ ಕಾಣಿಕೆಯಾಗಿ ನೀಡಲಾಯಿತು.
ಸಂವಾದ ಕಾರ್ಯಕ್ರಮ ಆರಂಭ
ಆರಂಭದಲ್ಲಿ ಸಾಣೇಹಳ್ಳಿ ತಂಡದಿಂದ ವಚನ ಪ್ರಾರ್ಥನೆ

ಯಮುನಾ ಮತ್ತು ತಂಡದವರಿಂದ ವಚನ ಪ್ರಾರ್ಥನೆ.

ಉಪನ್ಯಾಸಕ ಅಭಿಲಾಷ ಅವರಿಂದ ಸ್ವಾಗತ.
ಪೂಜ್ಯರು ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.


ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.

ವಣಕಲ್ಲು ಬಸವರಮಾನಂದ ಶ್ರೀಗಳು ಪ್ರಾರಂಭದ ನುಡಿ ಆಡಿದರು.

ಅನುಭಾವ ನುಡಿ ಮೋಟಗಿ ಮಠದ ಪ್ರಭುಚನ್ನಬಸವ ಶ್ರೀಗಳಿಂದ.


ಬೆಂಗಳೂರು ಗ್ರಾಮಾಂತರದಲ್ಲಿ ಅಭಿಯಾನದ ಪಾದಯಾತ್ರೆ
ಸಾವಿರಾರು ನಾಗರಿಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಷಟಸ್ಥಲ ಧ್ವಜಾರೋಹಣ
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳಿಂದ ಷಟಸ್ಥಲ ಧ್ವಜಾರೋಹಣ. ಪೂಜ್ಯರು, ಗಣ್ಯರು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.





ಪಾದಯಾತ್ರೆ ಆರಂಭ
ಕವಾಡಿಮಠದಿಂದ ಪಾದಯಾತ್ರೆಗೆ ಚಾಲನೆ ನೀಡಿದ ಪೂಜ್ಯರು, ಗಣ್ಯರು.

ಪವಾಡ ಶ್ರೀ ಬಸವಣ್ಣ ದೇವರಮಠದವರೆಗೆ ಸಾಗಲಿದೆ.











ಪವಾಡಶ್ರೀ ಬಸವಣ್ಣ ದೇವರ ಮಠ ತಲುಪಿದ ಮೆರವಣಿಗೆ.
ಇಂದಿನ ಕಾರ್ಯಕ್ರಮ
ಮೆರವಣಿಗೆ
ಬೆಳಿಗ್ಗೆ 10:30 ಗಂಟೆಗೆ ಪಾದಯಾತ್ರೆ, ಕವಾಡಿಮಠದಿಂದ ಬಸವಣ್ಣದೇವರ ಮಠದವರೆಗೆ.
ಸಂವಾದ
ಬೆಳಗ್ಗೆ 11ಗಂಟೆಗೆ ವಚನ ಸಂವಾದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ.
ಬಹಿರಂಗ ಸಭೆ
ಮಧ್ಯಾಹ್ನ 12 ಗಂಟೆಗೆ ಸಾರ್ವಜನಿಕ ಸಮಾವೇಶ.
ಅನುಭಾವ
ಹಾಸನದ ಬಸವ ಮಹಾಂತ ಸ್ವಾಮೀಜಿ ಅವರಿಂದ ‘ಮನವೆಂಬ ಮರ್ಕಟ’ ವಿಷಯವಾಗಿ ಅನುಭಾವ.
ಸಾಹಿತಿ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರಿಂದ ‘ವಚನಕಾರರ ಧರ್ಮ’ ವಿಷಯವಾಗಿ ಉಪನ್ಯಾಸ.
ನಾಟಕ
ಮಧ್ಯಾಹ್ನ 2 ಗಂಟೆಗೆ ‘ಜಂಗಮದೆಡೆಗೆ’ ನಾಟಕ ಪ್ರದರ್ಶನ, ಸಾಣೇಹಳ್ಳಿ ಶಿವಸಂಚಾರ ಕಲಾತಂಡದಿಂದ.
ಸ್ಥಳ: ಪವಾಡ ಶ್ರೀ ಬಸವಣ್ಣ ದೇವರಮಠ, ನೆಲಮಂಗಲ.