ಬೆಳಗಾವಿ
ವಚನ ಪಿತಾಮಹ ಡಾ. ಫ ಗು ಹಳಕಟ್ಟಿ ಭವನದಲ್ಲಿ ರವಿವಾರ ಸಾಮೂಹಿಕ ಪ್ರಾರ್ಥನೆ, ವಚನ ವಿಶ್ಲೇಷಣೆ ಕಾರ್ಯಕ್ರಮ ನಡೆಯಿತು.
ವಚನ ಸಾಹಿತ್ಯ ಕುರಿತು ಸಿದ್ದಣ್ಣಾ ಅ. ಇಟಗಿ ಅವರು ಉಪನ್ಯಾಸ ನೀಡುತ್ತಾ, ವಚನ ಸಾಹಿತ್ಯವು ಕೇವಲ ಧಾರ್ಮಿಕ ಗ್ರಂಥವಲ್ಲ, ಬದಲಾಗಿ 12ನೇ ಶತಮಾನದಲ್ಲಿ ಕನ್ನಡ ಸಮಾಜದಲ್ಲಿ ನೈತಿಕ ಮತ್ತು ಆಧ್ಯಾತ್ಮಿಕ ಪರಿವರ್ತನೆ ತಂದ ಒಂದು ಬೃಹತ್ ಚಳುವಳಿಯಾಗಿದೆ.
ಇದು ಕಾಯಕಕ್ಕೆ ಒತ್ತು ನೀಡಿ ಜಾತಿ, ಲಿಂಗ ತಾರತಮ್ಯ ವಿರುದ್ಧ ಹೋರಾಡಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದು ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ಸಂದೇಶಗಳನ್ನು ನೀಡಿತು. ವಚನ ಎಂಬುದಕ್ಕೆ ಮಾತು ಮತ್ತು ‘ಭಾಷೆ’ ಎಂಬ ಸಾಮಾನ್ಯ ಅರ್ಥಗಳಿವೆ. ವಚನ ಕನ್ನಡದ್ದೇ ಆದ ಸಾಹಿತ್ಯ ಪ್ರಕಾರವಾಗಿದೆ. ಶರಣರ ಅನುಭವ ಅನಿಸಿಕೆ ವಿಚಾರಗಳ ವಿಶಿಷ್ಟತೆಯ ಅನುಭಾವ ಎಂದು ತಿಳಿಸಿದರು.

ಅಕ್ಕಮಹಾದೇವಿ ತೆಗ್ಗಿ, ವಿ ಕೆ ಪಾಟೀಲ, ಬಸವರಾಜ ಬಿಜ್ಜರಗಿ, ಮಹದೇವ ಕೆ೦ಪಿಗೌಡರ, ಸುವಣಾ೯ ಗುಡಸ, ಜಯಶ್ರೀ ಚಾವಲಗಿ, ಶಿವಾನಂದ ತಲ್ಲೂರ, ಶಂಕರ ಗುಡಸ ವಚನ ವಿಶ್ಲೇಷಣೆ ಮಾಡಿದರು.
ಅಧ್ಯಕ್ಷತೆಯನ್ನು ಶರಣ ಈರಣ್ಣ ದೇಯಣ್ಣವರ ವಹಿಸಿದ್ದರು. ದಾಸೋಹ ಸೇವೆಯನ್ನು ಶರಣ ಅಶೋಕ ಇಟಗಿಯವರು ಮಾಡಿದರು. ಮಹಾಂತೇಶ ಮೆಣಸಿನಕಾಯಿ ಅತಿಥಿಗಳನ್ನು ಪರಿಚಯಿಸಿದರು.
ಆನಂದ ಕರಕಿ, ಗುರುಸಿದ್ದ ರೇವಣ್ಣವರ, ಪ.ಬ. ಕರಿಕಟ್ಟಿ, ಲಕ್ಷ್ಮಣ ಕುಂಬಾರ, ಮ.ಬ.ಕಾಡೆ, ಬಾಬಣ್ಣ ತಿಗಡಿ, ಶಂಕರ ರಾವಳ ಉಪಸ್ಥಿತರಿದ್ದರು.
ಸುರೇಶ ನರಗುಂದ ಸವ೯ರನ್ನು ಸ್ವಾಗತಿಸಿದರು. ಸಂಗಮೇಶ ಅರಳಿ ನಿರೂಪಿಸಿದರು. ಮಂಗಲದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.