ಬೀದರ
ತಿಂಗಳು ಪರ್ಯಂತ ನಡೆದ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಬಸವ ಸಂಸ್ಕೃತಿ ಅಭಿಯಾನವು ಅಕ್ಟೋಬರ್ 5ನೇ ತಾರೀಖಿನಂದು ಬೆಂಗಳೂರಿನಲ್ಲಿ ಸಮಾರೋಪಗೊಳ್ಳಲಿದೆ.
ಲಕ್ಷಾಂತರ ಜನ ಸೇರುವ ನಿರೀಕ್ಷೆಯಲ್ಲಿರುವ ಈ ಕಾರ್ಯಕ್ರಮಕ್ಕೆ ಜನರಿಗೆ ಅನುಕೂಲವಾಗಲು ಬೀದರಿನಿಂದ ಬೆಂಗಳೂರಿಗೆ ವಿಶೇಷ ರೈಲು ವ್ಯವಸ್ಥೆಯನ್ನು ಮಾಡಲಾಗಿದೆ.
ವಿಶೇಷ ರೈಲು ಅಕ್ಟೋಬರ್ 4 ರಂದು ಮಧ್ಯಾಹ್ನ 2.30 ಕ್ಕೆ ಬೀದರಿನಿಂದ ಹೊರಟು ಹುಮನಾಬಾದ್, ಕಲಬುರಗಿ, ಯಾದಗಿರಿ, ರಾಯಚೂರು, ಅನಂತಪುರ, ಧರ್ಮಾವರಂ, ಯಲಹಂಕ ಮೂಲಕ ಬೆಳಗಿನ ಜಾವ 5 ಗಂಟೆಗೆ ಬೆಂಗಳೂರು ಕೇಂದ್ರ ನಿಲ್ದಾಣ ತಲುಪಲಿದೆ. ಪುನಃ ರಾತ್ರಿ 10.30 ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ ಮಧ್ಯಾಹ್ನ 2.30 ಕ್ಕೆ ಬೀದರ ತಲುಪಲಿದೆ.
ವಿಶೇಷ ರೈಲು ವ್ಯವಸ್ಥೆಗೆ ಸ್ಪಂದಿಸಿದ ವಿ. ಸೋಮಣ್ಣ ಹಾಗೂ ಸಂಸದ ಸಾಗರ ಖಂಡ್ರೆಯವರಿಗೆ ಧನ್ಯವಾದಗಳನ್ನು ತಿಳಿಸಿ, ಬಸವಾನುಯಾಯಿಗಳು ಈ ರೈಲಿನ ಸದುಪಯೋಗವನ್ನು ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭವನ್ನು ಯಶಸ್ವಿಗೊಳಿಸಲು ಜಾ.ಲಿ.ಮ. ದ ರಾಜ್ಯ ಉಪಾಧ್ಯಕ್ಷ ಬಸವರಾಜ ಧನ್ನೂರ ತಿಳಿಸಿದ್ದಾರೆ.