ಬೀದರ
ಲಿಂಗಾಯತ ಮಹಾಮಠ ಗೋರ್ಟಾ (ಬಿ) ಗ್ರಾಮದಲ್ಲಿ ನಡೆದ ಮರಣವೆ ಮಹಾನವಮಿ ಮಹೋತ್ಸವ ಹಾಗೂ ಕಲ್ಯಾಣ ಕ್ರಾಂತಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ಅವರು ಗೋರಟಾ ಗ್ರಾಮದ ಲಿಂಗಾಯತ ಸೇವಾದಳದ ಅಧ್ಯಕ್ಷರನ್ನಾಗಿ ಸುಪ್ರೀತ ಪತಂಗೆ ಅವರನ್ನು ನೇಮಕ ಮಾಡಿದ್ದಾರೆ.
ಯುವಕರನ್ನು ಧರ್ಮ ಮಾರ್ಗದ ಕಡೆಗೆ ಕರೆತರಬೇಕೆಂದು ಹಳ್ಳಿ ಹಳ್ಳಿಗಳಲ್ಲಿ ಲಿಂಗಾಯತ ಸೇವಾದಳಗಳನ್ನು ಹುಟ್ಟುಹಾಕಿ ಯುವಕರನ್ನು ಧರ್ಮದ ಮಾರ್ಗದ ಕಡೆಗೆ ಕರೆತರುವ ಕಾರ್ಯ ಈಗಾಗಲೇ ಭರದಿಂದ ಸಾಗುತ್ತಿದೆ ಎಂದು ತಿಳಿಸಿದರು.
ಸೇವಾಧಾರಿಯಾದ ಬಸವನಿಷ್ಠರಾದ ಲಿಂಗಾಯತ ಮಹಾಮಠದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ಸುಪ್ರೀತ ಪತಂಗೆಯವರು ಯುವಕರನ್ನು ಪ್ರೇರೇಪಿಸಿ ಧರ್ಮದ ಕಡೆಗೆ ಕರೆತರುವರೆಂಬ ಭರವಸೆ ತಮಗಿದೆ ಎಂದು ತಿಳಿಸಿದರು.
ಕಾರ್ಯದರ್ಶಿಯಾಗಿ ದರ್ಶನ ಬಿರಾದರ ಅವರಿಗೆ ಈ ಸಂದರ್ಭದಲ್ಲಿ ಜವಾಬ್ದಾರಿ ನೀಡಲಾಯಿತು.
ಹಾಗೂ ಸದಸ್ಯರಾಗಿ ಪ್ರಜ್ವಲ ಪತಂಗೆ, ವಿಶ್ವಚೇತನ ರಾಜೋಳೆ, ವೈಭವ ಬಿರಾದಾರ, ಗುರುರಾಜ ಪತಂಗೆ, ಪ್ರಜ್ವಲ ರಾಜೋಳೆ, ಶಾಶ್ವತ ರಾಜೇಶ್ವರೆ, ಅಭಿಷೇಕ ರಾಜೋಳೆ, ಸುಜಿತ ರಾಜೇಶ್ವರೆ, ಆಯುಷ್ಯ ಪತಂಗೆ ಅವರನ್ನು ಆಯ್ಕೆ ಮಾಡಲಾಯಿತು.