ಬೆಂಗಳೂರು
“ಪ್ರತ್ಯೇಕ ಧರ್ಮದ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ಇದನ್ನು ಪತ್ರಿಕೆಗಳಲ್ಲಿ ಗಮನಿಸಿದ್ದೇನೆ. ಲಿಂಗಾಯತ ಧರ್ಮದ ಅಥವಾ ವೀರಶೈವ ಲಿಂಗಾಯತ ಕೂಗು ಇವತ್ತು ಮುನ್ನೆಲೆಗೆ ಬಂದಿದ್ದು, ಅದರ ಹಿನ್ನೆಲೆಯಲ್ಲಿ ಇದ್ದು ಮಾತನಾಡುವವರು ಯಾರೆಂಬ ಅರಿವು ಸಮಾಜಕ್ಕೆ ಇದೆ ಎಂದು ತಿಳಿಸಿದರು, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸೋಮವಾರ ಹೇಳಿದರು.
ನಗರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ನಡೆದ ಕಾರ್ಯಕ್ರಮವೊಂದರ ನಂತರ ಮಾಧ್ಯಮಗಳ ಜೊತೆ ಮಾತನಾಡುತ್ತಾ ಹಿಂದೂ ಧರ್ಮವನ್ನು ಒಡೆಯುವ ದುಸ್ಸಾಹಸಕ್ಕೆ ಕೈ ಹಾಕಿದ್ದಾರೆ. “ಹಿಂದೆಯೂ ಇಂಥ ಷಡ್ಯಂತ್ರ, ಪ್ರಯತ್ನ ನಡೆದಿತ್ತು. ಅದರಲ್ಲಿ ಯಶಸ್ಸು ಸಿಕ್ಕಿರಲಿಲ್ಲ, ಮುಂದೆಯೂ ಸಿಗಲು ಸಾಧ್ಯವಿಲ್ಲ. ನಾವಿಂದು ಹಿಂದೂ ಧರ್ಮವನ್ನು ರಕ್ಷಿಸಬೇಕಿದೆ,” ಎಂದು ತಿಳಿಸಿದರು.
ಬಸವೇಶ್ವರರ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ಇಡುವುದನ್ನು ಸ್ವಾಗತಿಸುತ್ತೇವೆ. ಆದರೆ, ಸಿದ್ದರಾಮಯ್ಯನವರ ಅಂತರಂಗದಲ್ಲಿ ಏನಿದೆ ಎಂಬುದನ್ನು ಬಹಿರಂಗ ಪಡಿಸಬೇಕೆಂದು ಎಂದು ವಿಜಯೇಂದ್ರ ಆಗ್ರಹಿಸಿದರು.
ಜಾತಿ ಜನಗಣತಿಯಲ್ಲಿ ಕೆಲವೆಡೆ ವಿಕಲಚೇತನರನ್ನೂ ಬಳಸಿಕೊಳ್ಳುತ್ತಿದ್ದಾರೆ. ಸಮರ್ಪಕ ಸಿದ್ಧತೆಯೂ ಇಲ್ಲ; ಆತುರಾತುರವಾಗಿ ಮುಖ್ಯಮಂತ್ರಿಗಳೇ 15 ದಿನದಲ್ಲಿ ಮುಗಿಸಬೇಕೆನ್ನುತ್ತಾರೆ. ಈ ಆತುರ ಯಾಕೆ ಎಂಬುದು ಯಕ್ಷಪ್ರಶ್ನೆ ಎಂದು ನುಡಿದರು.
ಸಮಾಜ ವಿಭಜಿಸುವ ದುಸ್ಸಾಹಸ
ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ನಡೆದ ದಿನವೂ ವಿಜಯೇಂದ್ರ ಧರ್ಮ ಒಡೆಯಲಾಗುತ್ತಿದೆ ಎಂದು ಆರೋಪಿಸಿದ್ದರು.
‘ವೀರಶೈವ ಲಿಂಗಾಯತ ಸಮಾಜ ವಿಭಜಿಸುವ, ಹಿಂದೂ ಧರ್ಮವನ್ನು ಒಡೆಯುವ ದುಸ್ಸಾಹಸದ ಕೆಲಸ ನಡೆಯುತ್ತಿದೆ’ ಎಂದು ಮೈಸೂರಿನಲ್ಲಿ ಗುರುಮಲ್ಲೇಶ್ವರ ದಾಸೋಹ ಮಠ ಹಾಗೂ ವಿದ್ಯಾರ್ಥಿನಿಲಯದ ನೂತನ ಕಟ್ಟಡ ಉದ್ಘಾಟನೆಯ ಸಂದರ್ಭದಲ್ಲಿ ಹೇಳಿದ್ದರು.
‘ರಾಜಕಾರಣದಲ್ಲಿ ಧರ್ಮ ಇರಬೇಕು. ಆದರೆ, ಕೆಲವರು ಧರ್ಮದಲ್ಲಿ ರಾಜಕಾರಣ ತಂದು ಷಡ್ಯಂತ್ರ ನಡೆಸುತ್ತಿದ್ದಾರೆ. ಇಂದು ವೀರಶೈವ ಲಿಂಗಾಯತ ಸಮಾಜಕ್ಕೆ ಹಿನ್ನಡೆಯಾಗುತ್ತಿದ್ದರೂ ಪುಟಿದೇಳಲಿದೆ. ಇತರ ಸಮುದಾಯಕ್ಕೂ ಆಶ್ರಯ ನೀಡಿ ಹಿಂದೂ ಸಮಾಜವನ್ನು ಸುಭದ್ರಗೊಳಿಸಲಿದೆ’ ಎಂದಿದ್ದರು.

Pl clear your stand first you are Lingayat, Veershaiva or Hindu. Do not play the politics here .
ಬಸ್ಸaವಣ್ಣನವರು ಸನಾತನ ಧರ್ಮದಿಂದ ಹೊರಬಂದವರು. ಚತುರ್ವರ್ಣ ಪಧ್ಧತಿ ಯನ್ನು ತಿರಸ್ಕಿಸಿದವರು. ಅವರ ದಾರಿಯಲ್ಲಿ ನಾವು ನಡೆಯುತ್ತೇವೆ. ನಿಮಗೆ ಅದು ಇಷ್ಟವಿಲ್ಲದಿದ್ದರೆ ನಾವು ಮಾಡುವುದು ಷಡ್ಯಂತ್ರ ಅಂತ ಹೇಳುವುದು ತಪ್ಪು.. ಮೊದಲು ನೀವು ಬಸವಣ್ಣನವರನ್ನು ಧರ್ಮ ಗುರು ಎಂದು ಪರಿಗಣಿಸಿ.
ಬಸವ ನಾಡಿನವರಾದ ತಾವು ಅಂತರಂಗದಲ್ಲಿ ಬಸವಣ್ಣನವರ ಬಗ್ಗೆ ತಿಳಿದಿದೆ ನಿಮ್ಮ ಎದೆಯ ಮೇಲಿರುವ ಲಿಂಗಸಾಕ್ಷಿಯಾಗಿ ನೀವು ನುಡಿಯಬೇಕು ಆದರೆ ನಿಮ್ಮ ಅಖಿಲ ಭಾರತ ವೀರೇಶ್ ವ ಮಹಾಸಭಾದಲ್ಲಿರುವ ಹುದ್ದೆಯಿಂದಾಗಿ ನೀವು ವೀರಶೈವ ಲಿಂಗಾಯತ ಎಂದು ತಪ್ಪು ದಾರಿಯನ್ನ ಹಿಡಿದಿದ್ದೀರಾ ಮಲ್ಲೇಶ್ವರ ಕಂಡ್ರೆ ಅವರೇ ಇದನ್ನು ಬದಲಾಯಿಸಿಕೊಳ್ಳಿ ನಿಮ್ಮ ತಂದೆಯವರಿಗೂ ಹೇಳಿ
ವಿಜಯೇಂದ್ರ ಸರ್ ರವರೆ ತಾವು ಆರ್ ಎಸ್ ಎಸ್ ನಿರ್ಣಯದಂತೆ ಧರ್ಮಗಳ ಅರಿವಿಲ್ಲದೆ ವೋಟಿಗಾಗಿ ಲಿಂಗಾಯತರನ್ನು ಬಳಸಿಕೊಂಡು ಧರ್ಮ ಕೇಳಿದ ತಕ್ಷಣ ಹಿಂದೂ ಧರ್ಮದವರು ಅಂತೆ ಕುಣಿಯುವುದು ಎಷ್ಟು ಸರಿ ನೀವು ಧರ್ಮದ ಬಗ್ಗೆ ಸರಿಯಾದ ಅರಿವನ್ನು ಮೂಡಿಸಿಕೊಂಡು ಧರ್ಮದ ಲಕ್ಷಣಗಳನ್ನು ತಿಳಿದು ಬಸವೆಶ್ವರರು ತಿಳಿಸಿದ ಲಿಂಗಾಯತ ಧರ್ಮದ ಮೂಲ ಲಕ್ಷಣದ ಬಗ್ಗೆ ಸರಿಯಾದ ಅರಿವು ಪಡೆದುಕೊಂಡು ಮಾತಾಡುವುದು ಒಳಿತು
ಇಡೀ ಜಗತ್ತಿನಲ್ಲಿ ಅಣ್ಣ ಬಸವಣ್ಣನವರ ಆದರ್ಶಗಳು ಸದ್ದು ಮಾಡುತ್ತಿದೆ ಆದರೆ ನಮ್ಮ ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು(ಕಾಂಗ್ರೆಸ್ನಲ್ಲಿರುವ ವೀರಶೈವ ಲಿಂಗಾಯತರು ಹಾಗೂ ಕೆಲ ಬಿಜೆಪಿ ನಾಯಕರು ಗಳು) ಕಟ್ಟಿ ಹಾಕಲು ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ.ಅದಕ್ಕೆ ಶ್ರೀ ಶ್ರೀ ಶಿವಕುಮಾರಸ್ವಾಮಿಜಿ ಯವರನ್ನು ಬಳಸಲಾಗುತ್ತದೆ.
ನನಗೆ ತಿಳಿದಂತೆ ಅಣ್ಣ ಬಸವಣ್ಣನವರ ಆದರ್ಶಗಳನ್ನೇ
ಉಸಿರಾಡುತ್ತಿದ್ದರು.ಅವರು ಅಧಿಕಾರಕ್ಕಾಗಿ ಯಾರದೋ ಓಲೈಕೆಗಾಗಿ ಜೀವಿಸಲಿಲ್ಲ.
ಸಿದ್ದಗಂಗಾ ಮಠವನ್ನು ನಿಮ್ಮ ಮಾತುಗಳಿಂದ ಮೈಲಿಗೆ ಮಾಡಬೇಡಿ, ಮುಂದಿನ ಪೀಳಿಗೆಗೆ ತಪ್ಪು ಅರ್ಥ ಹೋದೀತು ಎಂಬುದನ್ನು ನಮ್ಮ ನಾಯಕರುಗಳಿಗೆ ಅರ್ಥ ಮಾಡಿಸಿ ಗಂಗಾಧರಣ್ಣ ಶರಣು ಶರಣಾರ್ಥಿ.
ಆರ್ ಎಸ್ ಎಸ್ ಮೂಲದ ವಿಜೇಂದ್ರ ನಿಗೆ ಮತ್ತು ಈಶ್ವರ ಕಂಡ್ರೆ ಅವರಿಗೆ ಅಧ್ಯಯನಶೀಲತೆಯ ಕೊರತೆ ಮತ್ತು ವಿಜ್ಞಾನದ ಅರಿವಿನ ಕೊರತೆ ಹಾಗೂ ವಚನ ಅಧ್ಯಯನದ ಕೊರತೆ ಎದ್ದು ಕಾಣುತ್ತದೆ ಅವರು ಲಿಂಗಾಯತರು ಅಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ ತಾವು ಲಿಂಗಾಯತರಾಗಿದ್ದು ಕೂಡ ಅಲ್ಲ ಎಂದು ಹೇಳಿಕೊಳ್ಳುವ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಳ್ಳುತ್ತಿರುವ ಮಹಾ ನಾಯಕರು ಇವರು
ಏಳು ಜಿಲ್ಲಾ ಅಧ್ಯಕ್ಷರು, ವೀರಶೈವ ಮಹಾಸಭಾ ಲಿಂಗಾಯತ ಧರ್ಮಕ್ಕೆ ಬೆಂಬಲ ಕೊಟ್ಟಿದ್ದಾರೆ ಅಂತ ಮಾನ್ಯ ಜಾಮದಾರ ಅವರು ತಿಳಿಸಿದ್ದಾರೆ. ಅವರ ಸಮಿತಿ ಸದಸ್ಯರಿಂದ ಉಳಿದ ಜಿಲ್ಲಾ ಅಧ್ಯಕ್ಷರಿಗೂ ತಿಳಿಸಿ ಹೇಳಬೇಕು.
ಬಸವಣ್ಣನವರು ಅವರ ತತ್ವಗಳು ಯಾವುವು ಎಂಬುದನ್ನು ಬಸವ ನಾಡಿನಲ್ಲಿ ಜನಿಸಿದ ಖಂಡ್ರೆಯವರಿಗೆ ಹೇಳಬೇಕಾಗಿಲ್ಲ. ಮತ್ತು ವೀರಶೈವ ಅಂತ ಹೋದರೆ 3 ಸಲವು ತಿರಸ್ಕರಿಸಿರುವುದು ಖಂಡ್ರೆಯವರಿಗೆ ಗೊತ್ತಿದೆ. ಆದರೂ
ಅಧಿಕಾರಕ್ಕಾಗಿ ಮತ್ತು ತಮ್ಮ ಸ್ವಾರ್ಥಕ್ಕಾಗಿ ಇಂತಹ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ರಾಜಕಾರಣಿಗಳು ಮತ್ತು ಸ್ವಾಮಿಗಳು ತಮ್ಮ ಸ್ವಾರ್ಥ ಬದಿಗಿಟ್ಟು ಸಮಾಜದ ಹಿತಕ್ಕಾಗಿ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆ ಗೆ ಮುಂದಾದರೆ ಖಂಡಿತ ಯಶ ಸಿಗುತ್ತದೆ. ಇಲ್ಲದಿದ್ದರೆ ಲಿಂಗಾಯತ ಸ್ವತಂತ್ರ ಧರ್ಮ ಮಾಡಬಾರದೆನ್ನುವವರ ಬಲಿಗೆ ಬಕರಾ ಆಗುತ್ತಾರೆ.ಇದರಿಂದ ಸಮಾಜಕ್ಕೂ ಅವರಿಗೂ ಒಳಿತಾಗುವುದಿಲ್ಲ.
ಮೊದಲು ಲಿಂಗಾಯಿತ ನಾಗು
ಆದಮೇಲೆ ಪಕ್ಷಿ
ಬರೇ ಪಂಚಪೀಠದವರನ್ನು ಕಟ್ಟಿಕೊಂಡು ಹೋದರೆ ನಿನಗೆ ಸಿಗುವುದು ಚಿಪ್ಪು
ವಿಜಯೇಂದ್ರ ರವರಿಗೆ ಲಿಂಗಾಯತ ಮತ್ತು ವೀರಶೈವ ಈ ಎರಡರ ವ್ಯತ್ಯಾಸದ ಆಳವಾದ ಅದ್ಯಾಯಾನದ ಅವಶ್ಯಕತೆ ಇದೆ. ಮತ್ತೆ ಹಿಂದುತ್ವ ವಾದಿಗಳಿಗೆ ಇದನ್ನು ತಿಳಿಯದೆ ಜಾಣ ಕುರುಡರಾಗಿದ್ದಾರೆ
ವಿಜಯೇಂದ್ರ ಮತ್ತು ಈಶ್ವರ ಖಂಡ್ರೆ ಇಬ್ಬರು ಜಾಣ ಕುರುಡರಂತೆ ನಡೆದುಕೊಂಡು ಲಿಂಗಾಯತ ಧರ್ಮದ ಸಮುದಾಯದವರ ಅಭಿವೃದ್ಧಿಗೆ ಕಂಟಕ ಮಾಡುತಿದ್ದಾರೆ