ಬಸವ ಕಲ್ಯಾಣ
24ನೇ ಕಲ್ಯಾಣ ಪರ್ವ ಕಾರ್ಯಕ್ರಮದಲ್ಲಿ ಲಿಂಗಾಯತ ಧರ್ಮ ವಿರೋಧಿ ಭೀಮಣ್ಣ ಖಂಡ್ರೆಯವರಿಗೆ ‘ಶರಣ ಸಮಾಜ ಸೇವಾ ರತ್ನ ಪ್ರಶಸ್ತಿ’ ಕೊಡುತ್ತಿರುವುದು ಕಳವಳಕಾರಿ ಸಂಗತಿ.
ಐದು ದಶಕಗಳ ಕಾಲ ಪೂಜ್ಯ ಮಾತಾಜಿಯವರು ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮಾಡುವಾಗ ಅಡಚಣೆ ಉಂಟುಮಾಡಿ, ಲಿಂಗಾಯತ ಧರ್ಮಿಯರ ಆಸ್ಮಿತೆಗೆ ಧಕ್ಕೆ ತಂದು, ಮೋಸದಿಂದ ವೀರಶೈವ ಲಿಂಗಾಯತ ಜಾತಿ ಪ್ರಮಾಣ ಕೊಡುವಂತೆ ಮಾಡಿ, ಲಿಂಗಾಯತ ಧರ್ಮಕ್ಕೆ ವೀರಶೈವ ತಳಕು ಹಾಕಿಸಿ ಐತಿಹಾಸಿಕ ದೋಷವೆಸಗಿದ ಭೀಮಣ್ಣ ಖಂಡ್ರೆಗೆ ಪ್ರಶಸ್ತಿ ಕೊಡುತ್ತಿರುವುದು ಯಾವ ಕಾರಣಕ್ಕೆ?
ವೀರಶೈವ ಲಿಂಗಾಯತ ಬೇರೆ ಬೇರೆ ಎಂದು ಮಾತಾಜಿಯವರು ಸ್ಪಷ್ಟೀಕರಣ ಕೊಟ್ಟಾಗ ಅದನ್ನು ವಿರೋಧಿಸಿದ ಭೀಮಣ್ಣ ಖಂಡ್ರೆಯವರು ಭಕ್ತರ ಮದುವೆಗೆಂದು ಬೀದರ ಜಿಲ್ಲೆಗೆ ಬರುವಾಗ ಮಾತೆ ಮಹಾದೇವಿಯವರನ್ನು ಬರದಂತೆ ತಡೆಯೊಡ್ಡಿದ್ದು ರಾಷ್ಟ್ರೀಯ ಬಸವದಳದ ಹಿರಿಯರು ಇನ್ನೂ ಮರೆತಿಲ್ಲ.
ಇಂದಿಗೂ ಅವರ ಮಗ ಈಶ್ವರ ಖಂಡ್ರೆಯವರು ವೀರಶೈವ ಲಿಂಗಾಯತ ಒಂದೇ ಎಂದು ಹೇಳುತ್ತಾ, ವೇದಿಕೆಗಳಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಗಾರರನ್ನು ತುಚ್ಚವಾಗಿ ಬೈದು; ಘಾತುಕ ಶಕ್ತಿಗಳೆಂದು ಹೇಳುತ್ತಿರುವಾಗ ಯಾವ ನೈತಿಕ ಆಧಾರದ ಮೇಲೆ ಪ್ರಶಸ್ತಿ ನೀಡುತ್ತಿರುವಿರಿ.
ಇತ್ತ ಲಿಂಗಾಯತ ಧರ್ಮಕ್ಕೆ ಹೋರಾಟ ಮಾಡುತ್ತಲೇ ಅತ್ತ ಒಳಗಿಂದೊಳಗೆ ವೀರಶೈವ ಲಿಂಗಾಯತ ಮಹಾಸಭೆಯ ಮುಖ್ಯಸ್ಥರಿಗೆ ಸತ್ಕಾರ ಮಾಡುವುದು ಎಷ್ಟರ ಮಟ್ಟಿಗೆ ಸರಿ.
ಇಂತಹ ಬೆಳವಣಿಗೆಗಳು ಲಿಂಗಾಯತ ಧರ್ಮಿಯರ ಅಂತಃಶಕ್ತಿಯನ್ನು ಕುಗ್ಗುವಂತೆ ಮಾಡುತ್ತಿದೆಯಲ್ಲದೆ ಬೆಲಿಯೇ ಎದ್ದು ಹೊಲ ಮೇಯ್ದಂತಾಗಿದೆ.
ಲಿಂಗಾಯತ ಧರ್ಮ ಹೋರಾಟದ ಚುಕ್ಕಾಣಿ ಹಿಡಿದವರೇ ದಾರಿ ತಪ್ಪಿದರೆ ಲಿಂಗಾಯತ ಧರ್ಮೀಯರ ಗತಿ ಏನು? ಮಾತಾಜಿ ಲಿಂಗೈಕ್ಯ ನಂತರ ಮಾತಾಜಿಯವರ ಆತ್ಮಕ್ಕೆ ಅಶಾಂತಿಯುಂಟು ಮಾಡುವ ಇಂತಹ ಘಟನೆಗಳು ಆಗುತ್ತಿರುವುದು ನಿಜಕ್ಕೂ ಬೇಸರವನ್ನುಂಟು ಮಾಡುತ್ತಿವೆ.
ಮಾತಾಜಿಯವರು ಎಷ್ಟೇ ಕಷ್ಟ ಬಂದರೂ ರಾಜಕಾರಣಿಗಳಿಗೆ ಧರ್ಮದ್ರೋಹಿಗಳಿಗೆ ಮಣೆ ಹಾಕಿಲ್ಲ; ಅವರ ಶಿಷ್ಯರು ಅದರಂತೆ ನಡೆದುಕೊಳ್ಳಬೇಕು.
ಲಿಂಗಾಯತ ಧರ್ಮ ವಿರೋಧಿಸುವವರು ಎಷ್ಟೇ ಪ್ರಬಲವಾಗಿದ್ದರೂ ಮಣೆ ಹಾಕಬಾರದು. “ದೂಷಕನವನೊಬ್ಬ ದೇಶವ ಕೊಟ್ಟರೆ ಆಸೆ ಮಾಡಿ ಅವನ ಹೊರೆಯಲಿರಬೇಡ…” ಎನ್ನುವ ಧರ್ಮಪಿತ ಬಸವಣ್ಣನವರು ವಚನ ಅರ್ಥ ಮಾಡಿಕೊಳ್ಳುವುದು ಒಳಿತು.
ಲಿಂಗಾಯತ ಧರ್ಮಿಯರ ಸ್ವಾಭಿಮಾನಕ್ಕೆ ಧಕ್ಕೆ ತಂದ ಭೀಮಣ್ಣ ಖಂಡ್ರೆಯವರಿಗೆ ಪ್ರಶಸ್ತಿ ನೀಡುವುದನ್ನು ನಾನೊಬ್ಬ ಮಾತಾಜಿ ಶಿಷ್ಯನಾಗಿ ಲಿಂಗಾಯತ ಧರ್ಮಿಯನಾಗಿ ಪ್ರಬಲವಾಗಿ ಖಂಡಿಸುತ್ತೇನೆ. ಪೂಜ್ಯ ಮಾತೆ ಗಂಗಾದೇವಿಯವರು ಈ ಪ್ರಶಸ್ತಿಯನ್ನು ಹಿಂಪಡೆದು, ಮಾತಾಜಿಯವರ ಅಡಿಯಲ್ಲಿ ಅಡಿಯಾಗಿ ನಡೆದು ಲಿಂಗಾಯತ ಸಮಾಜಕ್ಕೆ ಗುರುಗಳಂತೆ ಮಾದರಿಯಾಗಿ ನಿಲ್ಲಬೇಕು.
ಒಂದು ವೇಳೆ ಪ್ರಶಸ್ತಿ ಕೊಡುವುದೇ ಆದರೆ ಅವರು ಲಿಂಗಾಯತ ಧರ್ಮವೆಂದು ಒಪ್ಪಿಕೊಂಡು ಪತ್ರಿಕೆಯಲ್ಲಿ ಹೇಳಿಕೆ ನೀಡಲಿ. ಅಷ್ಟಕ್ಕೂ ಮೀರಿ ನೀವು ಪ್ರಶಸ್ತಿ ಕೊಟ್ಟರೆ “ನಿಮ್ಮ ನಡೆಯೊಂದು ಪರಿ ನುಡಿಯೊಂದು ಪರಿ” ಎಂದು ಭಾವಿಸಬೇಕಾಗುತ್ತದೆ. ಮಾತಾಜಿ ಆತ್ಮ ಎಂದೂ ಕ್ಷಮಿಸಲಾರದು.
ಪರಮ ಪೂಜ್ಯ ಸದ್ಗುರುಗಳ ಪವಿತ್ರ ಪಾದಕಮಲಗಳಲ್ಲಿ ಭಕ್ತಿಪೂರ್ವಕ ಶರಣು ಶರಣಾರ್ಥಿಗಳು ಸತ್ಯವಾಗಿ ಹೇಳಿದ್ದೀರಿ. ನಮ್ಮ ದುರ್ದೈವ ಯಾವ ಸ್ವಾರ್ಥಕ್ಕೋಸ್ಕರ ಇಂತಹ ಕೆಲಸ ಮಾಡುತ್ತಿದ್ದಾರೋ ಗೊತ್ತಾಗುತ್ತಿಲ್ಲ.
BASAVA DHARMA PEETHA K DROHA
MATHAJI AVARIGE DROHA
RASHTREEYA BASAVA DALAKKE DROHA.
SHARANA BANDUGALU DHIKKARISABEKAADA SAMAYA .
ಈ ಮಹಾನುಭಾವರಿಗೆ ಶಾಟಾಯುಶಿಗಲೆಂದು ಸನ್ಮಾನಿಸಿ, ಆದರೆ!ಇವರು ಅನೇಕ ವಿಷಯಗಳಲ್ಲಿ ವಿರೋಧ ಹಾಗೂ ಅವಮಾಣಿಸಿದ್ದಾರೆಬುದ್ದನ್ನು ಯಾರೂ ಮರೆತಿಲ್ಲ. ವೀರಶೈವ ಮಹಾಸಭೆಯನ್ನು ವೀರಶೈವ ಲಿಂಗಾಯತ ಎಂದು ಗೊಂದಲ ಉಂಟುಮಾಡಿದೆ. ಈ ಸನ್ಮಾನ ಅವರ ವಯಸ್ಸಿಗೆ ಮಾತ್ರ ಸೀಮಿತ ಆಗಿರಲಿ.
ರಾಷ್ಟ್ರೀಯ ಬಸವ ದಳದವರ ಇದರ ಹಿಂದಿನ ಮರ್ಮ ತಿಳಿಯುತ್ತಿಲ್ಲ
ಆವಾಗೆ ಅವರಿಗೂ ತಿಳಿದು – ತಿಳಿಯದೆ ಹೋಗಿ ತಪ್ಪು ಮಾಡಿರಬಹುದು ಆ ತಪ್ಪು ಈಗ ಅವರಿಗೆ ಅರಿವಾಗಿ ಪಶ್ಒಚಾತಾಪ ಪಟ್ಟು ಒಳ್ಳೆಯವರಾಗಿರಬಹುದಲ್ಲವೇ.
ಹಾಗಾದರೆ ನೀವು ಕೆಟ್ಟವರನ್ನು ಒಳ್ಳೆಯದಾಗುವುದಕ್ಕೆ ಬಿಡುವುದಿಲ್ಲವೇ ನೀವೊಂದೇ ಒಳ್ಳೆಯವರಾಗಿ ಉಳಿದವರನ್ನೆಲ್ಲ ಉಳಿದವರನ್ನೆಲ್ಲಾ ಕೆಟ್ಟವರೆಂದು ಭಾವಿಸುತ್ತೀರಾ ಅವರ ತಪ್ಪನ್ನು ತಿಳಿಹೇಳಿ ಒಳ್ಳೆಯವರನ್ನಾಗಿ ಮಾಡುವುದು ಶರಣ ಧರ್ಮ ಇದನ್ನು ನೀವು ಅರಿತಿಲ್ಲವೇ ಇದನ್ನ ನೀವು ಅರಿಯದೆ ಶರಣರೆ ಹೇಗೆ ಹಾದಿರಿ…?