ಬೆಂಗಳೂರು
ಬಸವಧರ್ಮ ಪೀಠ ತನ್ನ 24ನೇ ಕಲ್ಯಾಣ ಪರ್ವದಲ್ಲಿ ಭೀಮಣ್ಣ ಖಂಡ್ರೆ ಅವರಿಗೆ ಶರಣ ಸಮಾಜ ಸೇವಾ ರತ್ನ ಪ್ರಶಸ್ತಿಯನ್ನು ನೀಡುತ್ತಿರುವುದಕ್ಕೆ ತೆಗೆದುಕೊಂಡ ಮಾನದಂಡಗಳೇನು ಸಮಾಜಕ್ಕೆ ಬಹಿರಂಗಪಡಿಸಿಬೇಕು.
ಪೂಜ್ಯ ಮಾತೆ ಮಹಾದೇವಿ ತಾಯಿಯವರು ಪ್ರಥಮ ಕಲ್ಯಾಣ ಪರ್ವ ಮಾಡಲು ಬಸವಕಲ್ಯಾಣ ಪ್ರವೇಶಕ್ಕೆ ತೊಂದರೆ ಕೊಟ್ಟು ಬಸವ ಭಕ್ತರ ಮೇಲೆ ಲಾಠಿಚಾರ್ಜ್ ಮಾಡಿಸಿದವರು ಖಂಡ್ರೆ ಅವರು.
ಮಾತಾಜಿ ಅವರನ್ನು ಅಂದು ಬಂಧಿಸುವ ಪ್ರಯತ್ನ ಮಾಡಿ ಅವರಿಗೆ ಅನೇಕ ತೊಂದರೆ ಕೊಟ್ಟರು, ಲಿಂಗಾಯತ ಧರ್ಮ ಹೋರಾಟಕ್ಕೆ ಅಡಚಣೆ ಉಂಟು ಮಾಡಿದರು.
2002ರಲ್ಲಿ ರಾಜಕೀಯ ಕುತಂತ್ರದಿಂದ ವೀರಶೈವ ಪದವನ್ನು ಲಿಂಗಾಯತ ಪದಕ್ಕೆ ಜೋಡಿಸಿ 3ಬಿ ಗ್ರೂಪ್ಗೆ ವೀರಶೈವ – ಲಿಂಗಾಯತ ಜಾತಿ ಪ್ರಮಾಣ ಪತ್ರ ಕೊಡುವಂತೆ ಮಾಡಿ, ವಿಕ್ರಮ ಬೇತಾಳದಂತೆ ವೀರಶೈವ ಪದ ಲಿಂಗಾಯತಕ್ಕೆ ಅಂಟಿಸಿದ ಈ ವ್ಯಕ್ತಿಗೆ ಪ್ರಶಸ್ತಿಯಾಕೆ?
ಸ್ವತಂತ್ರ ಲಿಂಗಾಯತ ಧರ್ಮ ಹೋರಾಟದಲ್ಲಿ ಲಿಂಗಾಯತ ವೀರಶೈವ ಬೇರೆ ಬೇರೆ ಎಂಬ ಮಾತಾಜಿಯವರ ಹೇಳಿಕೆಯನ್ನು ವಿರೋಧಿಸಿ ಅವರಿಗೆ ಅವಮಾನ ಮಾಡಿದ್ದು ಇದೇ ಖಂಡ್ರೆಯವರು.
ಮಾತಾಜಿಯವರ ಹಾದಿಯಲ್ಲಿ ನಡೆಯಬೇಕಾದ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಪೂಜ್ಯ ಗಂಗಾದೇವಿ ಮಾತಾಜಿಯವರು ಇಂಥ ವ್ಯಕ್ತಿಗೆ ಪ್ರಶಸ್ತಿ ನೀಡುವ ಬಗ್ಗೆ ಸ್ಪಷ್ಟೀಕರಣ ನೀಡಬೇಕು.
ತಮ್ಮ ಸ್ವಾರ್ಥಕ್ಕೆ ನೀಡುವ ಇಂಥ ಪ್ರಶಸ್ತಿಗಳ ಮೌಲ್ಯವೇನು ಎಂಬುದು ಬಸವ ಭಕ್ತರು ಪ್ರಶ್ನೆ.
ಲಿಂಗಾಯತ ಮತ್ತು ವೀರಶೈವ ಒಂದೇ ಎಂದು ಹೇಳಿದರು, ಅವರು ೧೦-೧೨ ಬಲವಾದ ಕಾರಣ ನೀಡಿ ಎರಡು ಒಂದೆ ಎಂದು ನಿರೂಪಿಸಲು ಬರಹದಿಂದ ಸಾಬೀತು ಪಡಿಸಬೇಕು. ಆಗ ಅವರ ಎಲ್ಲಾ ರೀತಿಯ ಸಭೆಗಳಲ್ಲಿ ಅವರು ಸ್ವ ಇಚ್ಛೆಯಿಂದ ಭಾಗವಹಿಸಲು ಅನುಮತಿಸಬೇಕು. ದೇವರು ಎಲ್ಲರಿಗೆ ಒಳ್ಳೆಯದು ಮಾಡಲಿ.