ಲಿಂಗಸೂಗೂರು
ನಗರದ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶಾಖಾ ಅನುಭವ ಮಂಟಪದಲ್ಲಿ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ “ವಿಶ್ವ ಬಸವ ಧರ್ಮ” ಪ್ರವಚನ ಕಾರ್ಯಕ್ರಮ ಬುಧವಾರ ಆರಂಭಗೊಂಡಿತು.
ಸಂವಿಧಾನ ಪೀಠಿಕೆ ಓದುವ ಮುಖಾಂತರ ಪ್ರಾರಂಭಗೊಂಡ ಪ್ರವಚನವನ್ನು, ಶೂನ್ಯ ಸಂಪಾದನ ಪೀಠ ಹುಣಸಿಕೊಳ್ಳಮಠ, ಯಮಕನಮರಡಿಯ ಪೂಜ್ಯ ಬಸವ ದೇವರು ಅವರು ಪ್ರಾರಂಭದ ನುಡಿಗಳನ್ನು ಆಡಿದರು. ಬಸವಾದಿ ಶರಣರ ಜೀವನ ಮಾರ್ಗ ತಿಳಿಸಿಕೊಟ್ಟರು.
ಅಕ್ಟೋಬರ್ 8 ರಿಂದ 23, 2025 ರವರೆಗೆ ಸಂಜೆ 7 ರಿಂದ 8 ಗಂಟೆಯವರೆಗೆ ‘ವಿಶ್ವ ಬಸವ ಧರ್ಮ ಪ್ರವಚನ’ ನಡೆಯಲಿದೆ.

ಸಾನಿಧ್ಯವನ್ನು ಚಿತ್ತರಗಿ ಶ್ರೀ ವಿಜಯಮಹಾತೇಶ್ವರ ಸಂಸ್ಥಾನಮಠ ಇಲಕಲ್ಲನ ಪೂಜ್ಯ ಗುರುಮಹಾಂತ ಮಹಾಸ್ವಾಮಿಗಳು ವಹಿಸಿದ್ದರು. ನೇತೃತ್ವವನ್ನು ಪೂಜ್ಯ ಸಿದ್ದಲಿಂಗ ಸ್ವಾಮಿಗಳು ಲಿಂಗಸಗೂರು ಇವರು ವಹಿಸಿದ್ದರು.
ಶರಣ ಶರಣೆಯರು ಭಾಗವಹಿಸಿದ್ದರು. ಪ್ರತಿದಿನ ಪ್ರವಚನಕ್ಕೆ ನೆರೆಹೊರೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆತರಲು ತಿಳಿಸಲಾಯಿತು. ಬಸವತತ್ವವನ್ನು ಒಬ್ಬರಿಂದ ಒಬ್ಬರಿಗೆ ತಿಳಿಸಲು ಕರೆ ನೀಡಲಾಯಿತು.

ಸೋಮಶೇಖರ ಬಳಗಾನೂರ ಸ್ವಾಗತಿಸಿದರು. ಶೇಖಪ್ಪ ಇಜೇರಿ ಸಂವಿಧಾನ ಪೀಠಿಕೆ ಬೋಧಿಸಿದರು. ಸುನಂದಾ ಗಂಗಾಧರ ವಚನ ಗಾಯನ ಮಾಡಿದರು. ಶ್ರೀ ಮಠದ ಸದ್ಭಕ್ತರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.