ವಿದೇಶ ಪ್ರವಾಸದಿಂದ ಅಭಿಯಾನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ: ಶ್ರೀಗಳ ವಿಷಾದ
ಸುತ್ತೂರು
ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿನ ಬಗ್ಗೆ ಸುತ್ತೂರು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿ ಮುಂದೆಯೂ ಇದೇ ರೀತಿ ಕಾರ್ಯನಿರ್ವಹಿಸಿ ಎಂದು ಬಸವ ಸಂಘಟನೆಗಳನ್ನು ಆಶೀರ್ವದಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಚಾಮರಾಜನಗರದ ವಿವಿಧ ಬಸವ ಸಂಘಟನೆಗಳ ಮುಖಂಡರು ಸುತ್ತೂರಿನ ಹಳೇ ಮಠದಲ್ಲಿ ಶ್ರೀಗಳನ್ನು ಭೇಟಿ ಮಾಡಿ ಕಳೆದ ತಿಂಗಳು ಸೆಪ್ಟೆಂಬರ್ 24ರಂದು ಚಾಮರಾಜನಗರದಲ್ಲಿ ನಡೆದ ಅಭಿಯಾನದ ಬಗ್ಗೆ ಮಾಹಿತಿ ನೀಡಿದರು.

ಸುತ್ತೂರು ಶ್ರೀಗಳು ಚಾಮರಾಜನಗರ ಜಿಲ್ಲೆಯಿಂದ ಬಂದಿದ್ದ ಬಸವಭಕ್ತರನ್ನು ಪ್ರಶಂಸಿಸಿ,ಅಭಿಯಾನದ ಸಮಿತಿಯ ಅಧ್ಯಕ್ಷ ಕೋಡಿಮೋಳೆ ರಾಜಶೇಖರ್ ಅವರಿಗೆ ಶಾಲು, ಹಾರ ಹಾಕಿ ಸನ್ಮಾನಿಸಿದರು. ವಿದೇಶ ಪ್ರವಾಸದಲ್ಲಿದ್ದರಿಂದ ಅಭಿಯಾನದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲವೆಂದು ಶ್ರೀಗಳು ವಿಷಾದ ವ್ಯಕ್ತಪಡಿಸಿದರು.

ಅಭಿಯಾನದ ಯಶಸ್ಸಿಗೆ ಸುತ್ತೂರು ಶ್ರೀಗಳ ಮಾರ್ಗದರ್ಶನ, ಚಾಮರಾಜನಗರ ಜಿಲ್ಲೆಯ ಮಠಧಿಪತಿಗಳ ನೇತೃತ್ವ ಹಾಗೂ ಜಿಲ್ಲೆಯ ಎಲ್ಲಾ ಲಿಂಗಾಯಿತ ಸಂಘ ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆ ಕಾರಣವಾಯಿತೆಂದು ಅಭಿಯಾನದ ಕಾರ್ಯದರ್ಶಿ ಎನ್ರಿಚ್ ಮಹದೇವಸ್ವಾಮಿ ಸುತ್ತೂರು ಶ್ರೀಗಳಿಗೆ ತಿಳಿಸಿದರು.

ಚಾಮರಾಜನಗರ ಜಿಲ್ಲೆಯ ಮಠಧಿಪತಿಗಳು, ಜಿಲ್ಲೆಯ ಎಲ್ಲಾ ಲಿಂಗಾಯತ ಸಂಘ ಸಂಸ್ಥೆಗಳ ಮುಖಂಡರು, ಅಭಿಯಾನದ ಎಲ್ಲಾ ಸಮಿತಿಗಳ ಪಧಾಧಿಕಾರಿಗಳು ಉಪಸ್ಥಿತರಿದ್ದರು.
