ಬೆಂಗಳೂರು:
ವಚನಜ್ಯೋತಿ ಬಳಗದ ವತಿಯಿಂದ ನ.18ರಿಂದ 27ರವರೆಗೆ ನಗರದ ಮಲ್ಲತ್ತಹಳ್ಳಿಯ ಕಲಾ ಗ್ರಾಮದಲ್ಲಿ ಮಕ್ಕಳ ವಚನ ಮೇಳ ಆಯೋಜಿಸಲಾಗಿದೆ.
ಶಿಶುವಿಹಾರದಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು, ಮಕ್ಕಳ ವಚನ ಮೇಳದಲ್ಲಿ ಪಾಲ್ಗೊಳ್ಳಬಹುದು. ವಚನ ಗಾಯನ, ವಚನ ಪ್ರಬಂಧ, ವಚನ ವಿವೇಚನ, ವಚನಚಿತ್ರ, ವಚನನೃತ್ಯ, ವಚನ ಅಂತ್ಯಾಕ್ಷರಿ, ವಚನ ರಸಪ್ರಶ್ನೆ, ವಚನ ರೂಪಕ, ವಚನ ವೇಷಭೂಷಣ, ವಚನ ಕಥೆ, ವಚನ ಕಂಠಪಾಠ ಮತ್ತು ಸಮೂಹ ವಚನ ಗಾಯನ ಸ್ಪರ್ಧೆಗಳು ನಡೆಯಲಿವೆ.

ಆಸಕ್ತರು ಅ.31ರೊಳಗೆ ನೋಂದಾಯಿಸಿಕೊಳ್ಳಬೇಕು. ಶಾಲೆಗಳಿಂದ ಅಥವಾ ವೈಯಕ್ತಿಕವಾಗಿಯೂ ಭಾಗವಹಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9845184367, 9945964727 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
