ಅಪಪ್ರಚಾರಕ್ಕೆ ಬಸವ ಭಕ್ತರು ಕಿವಿಗೊಡುವ ಅಗತ್ಯವಿಲ್ಲ: ಗಂಗಾ ಮಾತಾಜಿ
ದಾವಣಗೆರೆ
ಕನ್ನೇರಿ ಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ಲಿಂಗಾಯತ ಮಠಾಧೀಶರನ್ನು ನಿಂದಿಸಿದ್ದು ಖಂಡನೀಯ. ಸ್ವಾಮಿ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಶಾಸಕ, ಲಿಂಗಾಯತ ಮುಖಂಡರ ಮನೆಯ ಮುಂದೆ ಧರಣಿ ನಡೆಸಲು ರಾಷ್ಟ್ರೀಯ ಬಸವ ದಳದ ಜಿಲ್ಲಾ ಸಮ್ಮೇಳನ ನಿರ್ಣಯ ಕೈಗೊಂಡಿದೆ.
ಭಾನುವಾರ ನಗರದಲ್ಲಿ ನಡೆದ ಸಮ್ಮೇಳನದ ದಿವ್ಯ ಸಾನಿಧ್ಯವಹಿಸಿ ಕೂಡಲ ಸಂಗಮದ ಬಸವಧರ್ಮ ಪೀಠದ ಪೂಜ್ಯ ಮಾತೆ ಗಂಗಾದೇವಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
“ಬಸವ ಸಂಸ್ಕೃತಿ ಅಭಿಯಾನದ ಕುರಿತಂತೆ ಕನ್ನೇರಿ ಸ್ವಾಮಿ ಮಾತನಾಡಿದ್ದು ಸರಿಯಲ್ಲ. ಕಾವಿ ಧರಿಸಿದ ನಂತರ ನಾವು ಅಶ್ಲೀಲ ಪದಗಳನ್ನು ಬಳಸಬಾರದು. ವೈಚಾರಿಕ ಭಿನ್ನಾಭಿಪ್ರಾಯವಿದ್ದರೆ ಮಾತನಾಡೋಣ,” ಎಂದರು.

ಲಿಂಗಾಯತ ಹೋರಾಟ ನಿಲ್ಲುವುದಿಲ್ಲ
“ಒಂದು ತಿಂಗಳು ನಡೆದ ಬಸವ ಸಂಸ್ಕೃತಿ ಅಭಿಯಾನ ಸುಮಾರು ಒಂದುವರೆ ಕೋಟಿ ಜನರನ್ನು ಯಶಸ್ವಿಯಾಗಿ ಮುಟ್ಟಿದೆ. ಬಸವ ಭಕ್ತರಲ್ಲಿ ಜಾಗೃತಿ ಮೂಡಿಸಿದೆ. ಇದನ್ನು ಸಹಿಸದ ಕೆಲ ಶಕ್ತಿಗಳು ಅಪಪ್ರಚಾರ, ನಕಾರಾತ್ಮಕ ಭಾವನೆಗಳನ್ನು ಭಿತ್ತುತ್ತಿವೆ. ಇದಕ್ಕೆ ಬಸವ ಭಕ್ತರು ಕಿವಿಗೊಡುವ ಅಗತ್ಯವಿಲ್ಲ. ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟವು ಇಲ್ಲಿಗೆ ನಿಲ್ಲುವುದಿಲ್ಲ. ಮುಂದೆ ಇಟ್ಟಿರುವ ಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಹಿಂದೆ ತೆಗೆಯಬಾರದು. ನವೆಂಬರ್ 11ರಂದು ಕೂಡಲಸಂಗಮದಲ್ಲಿ ಚಿಂತನ–ಮಂಥನ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಪ್ರತ್ಯೇಕ ಧರ್ಮದ ಹೋರಾಟದ ರೂಪುರೇಷಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದೆ,” ಎಂದರು.
ಲಿಂಗಾಯತ ಧರ್ಮವೆಂದು ಹೋದರೆ ಮಾತ್ರವೇ ನಮಗೆ ಪ್ರತ್ಯೇಕ ಧರ್ಮದ ಮಾನತೆ ಸಿಗುತ್ತದೆ ಎಂದು ಹೇಳಿದರು. ಮಾತೆ ಮಹಾದೇವಿಯವರೆ ಲಿಂಗಾಯತ ಪ್ರತ್ಯೇಕ ಧರ್ಮದ ಕೂಗಿಗೆ ಮುನ್ನುಡಿ ಬರೆದಿದ್ದರು. ದಶಕಗಳಿಂದಲೂ ಈ ಹೋರಾಟ ನಡೆಯುತ್ತಲೇ ಇದೆ.
ರಂಭಾಪುರಿ ಶ್ರೀ
ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸುತ್ತಾ ವೀರಶೈವ ಲಿಂಗಾಯತವೆಂದಾದರೆ ನಮಗೆ ಪ್ರತ್ಯೇಕ ಧರ್ಮದ ಮಾನ್ಯತೆಯೆಂಬುದು ಮರೀಚಿಕೆಯಾಗುತ್ತದೆ. ಹಾಗಾಗಿಯೇ ಲಿಂಗಾಯತ ನಾವೆಲ್ಲರೂ
ಧರ್ಮದ ಮಾನ್ಯತೆಗಾಗಿಯೇ ಹೋರಾಟ ನಡೆಸಬೇಕು ಎಂದು ಹೇಳಿದರು.
” ಗುರು–ವಿರಕ್ತ ಪರಂಪರೆ ಒಗ್ಗೂಡುವುದಕ್ಕೆ ವಿರೋಧವಿಲ್ಲ. ಆದರೆ, ವೀರಶೈವ ಲಿಂಗಾಯತವೆಂದುಕೊಂಡು ಹೋದರೆ ಇನ್ನೂ ಒಂದು ಶತಮಾನ ಕಳೆದರೂ ಪ್ರತ್ಯೇಕ ಧರ್ಮದ ಮಾನ್ಯತೆ ಸಿಗುವುದಿಲ್ಲ. 12ನೇ ಶತಮಾನದಲ್ಲಿ ಧರ್ಮ ಸ್ಥಾಪನೆ ಮಾಡಿದ ಬಸವಣ್ಣನವರನ್ನು ಧರ್ಮಗುರು, ವಚನಗಳನ್ನು ಧರ್ಮಗ್ರಂಥ ಹಾಗೂ ಕೂಡಲಸಂಗಮವನ್ನು ಧರ್ಮಕ್ಷೇತ್ರ ಎಂಬುದಾಗಿ ಒಪ್ಪಿಕೊಳ್ಳುವವರೊಂದಿಗೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಇದಕ್ಕೆ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಸಿದ್ಧರಿದ್ದಾರೆಯೇ’ ಎಂದು ಕೇಳಿದರು.

ಒಡೆಯಲು ಧರ್ಮ ಮಡಕೆಯಲ್ಲ
ಹಿಂದೂ ಎನ್ನುವುದು ಧರ್ಮವಲ್ಲ, ಅದೊಂದು ಜೀವನ ಪದ್ಧತಿ. ಯಾರೋ ಒಡೆದು ಹಾಕುವುದಕ್ಕೆ ಧರ್ಮ ಮಡಿಕೆಯಲ್ಲ.
ಅಭಿಯಾನದಲ್ಲಿ ರಾಜಕೀಯ ಉದ್ದೇಶದಿಂದ ನಡೆದಿಲ್ಲ. ಯಾವ ಪಕ್ಷದಿಂದಲೂ ಹಣ ತೆಗೆದುಕೋದಿಲ್ಲ. ಮಠಾಧೀಶರೇ, ಬಸವ ಸಂಘಟನೆಗಳ ಹಣದಿಂದಲೇ ಅಭಿಯಾನ ನಡೆದಿದೆ. ಬಸವಣ್ಣನವರ ಬಗ್ಗೆ ಸಿದ್ದರಾಮಯ್ಯನವರಿಗೆ ಅಭಿಮಾನವಿದೆ. ಹಾಗಾಗಿಯೇ ಅಭಿಮಾನದಿಂದ ಮಾತನಾಡುತ್ತಾರೆ ಎಂದು ಹೇಳಿದರು.
ಜನವರಿ 12ರಿಂದ ಶರಣ ಮೇಳ
ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಸಂಬಂಧಿಸಿದಂತೆ ಜ.12ರಿಂದ 14ರವರೆಗೆ ಕೂಡಲಸಂಗಮದಲ್ಲಿ ಶರಣ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾತೆ ಗಂಗಾದೇವಿ ತಿಳಿಸಿದರು.
‘ವರ್ಷಕ್ಕೊಮ್ಮೆ ನಡೆಯುವ ಶರಣ ಮೇಳಕ್ಕೆ ರಾಜ್ಯದ ವಿವಿಧೆಡೆಯಿಂದ ಬಸವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. 108 ವಚನಗಳ ಪಾರಾಯಣ, ಪ್ರಾರ್ಥನೆ ಹಾಗೂ ಪೀಠಾರೋಹಣ ಕಾರ್ಯಗಳು ಜರುಗಲಿವೆ’ ಎಂದು ಮಾಹಿತಿ ನೀಡಿದರು.

ತಂಟೆಗೆ ಬಂದರೆ ಸುಮ್ಮನಿರುವುದಿಲ್ಲ
ಮಾಧ್ಯಮ ಮಿತ್ರರನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಬಸವದಳ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ ಎನ್ ಜೈನ ಧರ್ಮಕ್ಕೆ ಸಂವಿಧಾನಿಕ ಅಲ್ಪಸಂಖ್ಯಾತರ ಮಾನ್ಯತೆಯನ್ನು 2014ರಲ್ಲಿ ಕೇಂದ್ರ ಸರ್ಕಾರವು ಕೊಟ್ಟಿದ್ದು, ಅದೇ ಮಾದರಿಯಲ್ಲಿ ಲಿಂಗಾಯತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಯ ಹೋರಾಟವನ್ನು ನಾವೆಲ್ಲರೂ ಮಾಡುತ್ತಿದ್ದೇವೆ.
ಜೈನರು ಕೇಳಿದಾಗ ಒಡೆಯದಿದ್ದ ಹಿಂದೂ ಧರ್ಮವೂ ಲಿಂಗಾಯತರು ಕೇಳಿದಾಗ ಹೇಗೆ ಹೊಡೆದಂತಾಗುತ್ತದೆ ಎಂದು ಪ್ರಶ್ನಿಸಿದರು.
ಇತ್ತೀಚಿಗೆ ಕೆಲವು ಜಾತಿವಾದಿಗಳು ಲಿಂಗಾಯತ ಧರ್ಮದ ಹೋರಾಟದ ವಿರುದ್ಧ ಅಪಸ್ವರವನ್ನು ಎತ್ತಿದ್ದನ್ನು ಖಂಡಿಸುತ್ತಾ, ಇಂತಹ ಜಾತಿವಾದಿಗಳ ಕುತಂತ್ರ ನಡೆಯುವುದಿಲ್ಲ ಲಿಂಗಾಯತ ಧರ್ಮೀಯರು ಬಹಳ ಅರಿವುಳ್ಳವರಾಗಿದ್ದು ಈ ಹೋರಾಟವನ್ನು ತೀವ್ರಗೊಳಿಸಲಿದ್ದಾರೆ.
ಕುಂಕುಮ ಹಚ್ಚಿಕೊಂಡಿರುವವರು ಹಾಗೂ ವಚನ ಬರದವರಿಗೆ ಲಿಂಗಾಯತ ಧರ್ಮದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕನ್ನೇರಿ ಸ್ವಾಮಿಗೆ ಬೆಂಬಲ ಸೂಚಿಸಿರುವುದು ಆರ್ ಎಸ್ ಎಸ್ ಮುಖಂಡರ ಮಾನಸಿಕ ಹಾಗೂ ನೈತಿಕ ಅಧಪತನಕ್ಕೆ ಸಾಕ್ಷಿಯಾಗಿದೆ.
ಪ್ರಚಾರಪ್ರಿಯರಾಗಿರುವ ಬಸವನಗೌಡ ಪಾಟೀಲ ಯತ್ನಾಳ ಹಾಗೂ ಸೂಲಿಬೆಲೆ ಅವರಂತಹ ಜಾತಿವಾದಿಗಳ ಮಾತಿಗೆ ಮಹಾಜನತೆ ಮರುಳಾಗುವುದಿಲ್ಲ. ಇನ್ನು ಮುಂದೆ ಲಿಂಗಾಯತ ಧರ್ಮೀಯರ ತಂಟೆಗೆ ಬಂದರೆ ರಾಷ್ಟ್ರೀಯ ಬಸವದಳವು ಹಾಗೂ ಎಲ್ಲಾ ಬಸವಪರ ಸಂಘಟನೆಗಳು ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.

ಕಾರ್ಯಕ್ರಮವನ್ನು ಪಾಂಡೋಮಟ್ಟಿಯ ಪೂಜ್ಯ ಗುರುಬಸವ ಮಹಾಸ್ವಾಮೀಜಿ ಅವರು ಉದ್ಘಾಟಿಸಿದರು. ಆರಂಭದಲ್ಲಿ ಬಸವಧರ್ಮ ಪೀಠದ ಗಣ್ಯ ನಾಯಕರಾದ ವೀರಣ್ಣ ಕೆ. ಲಿಂಗಾಯತ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಗುರು ಬಸವಣ್ಣನವರ ಜಯ ಘೋಷಗಳೊಂದಿಗೆ ಸಮಾವೇಶ ಮಂಗಲಗೊಂಡಿತು.
ಪಾಂಡೋಮಟ್ಟ ಗುರುಬಸವ ಸ್ವಾಮೀಜಿ, ಸದ್ಗುರು ಬಸವ ಯೋಗಿ ಸ್ವಾಮೀಜಿ, ಹುಚ್ಚಪ್ಪ ಮಾಸ್ತರ್, ರಾಷ್ಟ್ರೀಯ ಜಿಲ್ಲಾ ಸಮಿತಿ ಅಧ್ಯಕ್ಷ ವೈ.ನರೇಶಪ್ಪ, ಕೆ.ವೀರಣ್ಣ, ಪ್ರಧಾನ ಕಾರ್ಯದರ್ಶಿ ಎನ್.ಚಂದ್ರಮೌಳಿ, ಕೆ.ವಿವೇಕ್, ಪರಮೇಶಪ್ಪ, ಮಮತಾ ನಾಗರಾಜ, ಕುಸುಮ ಎ.ಚಂದ್ರಶೇಖರ, ರವೀಂದ್ರನಾಥ, ಷಣ್ಮುಖಯ್ಯ, ವೀಣಾ ಮಂಜುನಾಥ, ಮಹಾಲಿಂಗಪ್ಪ, ಪಲ್ಲವಿ, ಮಂಜುನಾಥ ಮೇಟಿ ಇತರರು ಇದ್ದರು.

ಸಮ್ಮೇಳನದ ನಿರ್ಣಯಗಳು:
1) ಸಂಘಟನಾ ವಿಸ್ತರಣೆ:
ದಾವಣಗೆರೆ ಜಿಲ್ಲೆಯ ಎಲ್ಲಾ ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿ ರಾಷ್ಟ್ರೀಯ ಬಸವ ದಳದ ಸಂಘಟನೆ ಸ್ಥಾಪನೆ, ಇಷ್ಟಲಿಂಗ ಯೋಗ ಪ್ರಾತ್ಯಕ್ಷಿಕೆ, ಕ್ರಿಯಾಮೂರ್ತಿಗಳ ಆಯೋಜನೆ ಮತ್ತು ವಚನ ಸಾಹಿತ್ಯದ ಪ್ರಚಾರ ಕೈಗೊಳ್ಳುವುದು.
2) ಧಾರ್ಮಿಕ ಅಲ್ಪಸಂಖ್ಯಾತ ಹೋರಾಟ:
ಲಿಂಗಾಯತ ಧರ್ಮಕ್ಕೆ “ಧಾರ್ಮಿಕ ಅಲ್ಪಸಂಖ್ಯಾತರು” ಎಂಬ ಮಾನ್ಯತೆ ದೊರಕುವಂತೆ ನಿರಂತರವಾಗಿ ಹೋರಾಟ ಹಾಗೂ ಸಂಘಟನಾ ಚಟುವಟಿಕೆಗಳನ್ನು ಮುಂದುವರೆಸುವುದು.
3) ನಿಂದನೆಗೆ ಖಂಡನೆ ಮತ್ತು ಧರಣಿ ಸತ್ಯಾಗ್ರಹ:
ಬಸವ ಸಂಸ್ಕೃತಿಯ ಅಭಿಯಾನದ ಬಗ್ಗೆ ಕನ್ನೇರಿ ಶ್ರೀಗಳು ಮಾಡಿದ ನಿಂದನೆಯನ್ನು ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭೆ ಮತ್ತು ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕಾ ಮಹಿಳಾ ಗಣ ಉಗ್ರವಾಗಿ ಖಂಡಿಸುತ್ತವೆ.
→ ಅವರ ಹೇಳಿಕೆಗೆ ಸಮರ್ಥನೆ ನೀಡಿರುವ ಲಿಂಗಾಯತ ನಾಯಕರು ಹಾಗೂ ಶಾಸಕರ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ.
4) ಶರಣ ಮೇಳ ಮತ್ತು “ನಾನು ಲಿಂಗಾಯತ” ಅಭಿಯಾನ:
2026ರ ಜನವರಿಯಲ್ಲಿ ನಡೆಯಲಿರುವ 39ನೇ ಶರಣ ಮೇಳದ ಪ್ರಚಾರ ಹಾಗೂ ಜನವರಿ 15ರ ನಂತರ “ನಾನು ಲಿಂಗಾಯತ” ಎಂಬ 365 ದಿನಗಳ ಅಭಿಯಾನದಡಿ ವಿವಿಧ ಸ್ಥಳಗಳಲ್ಲಿ ಕಾರ್ಯಕರ್ತರ ಶಿಬಿರಗಳು ಮತ್ತು ಜನಾಂದೋಲನ ಹಮ್ಮಿಕೊಳ್ಳುವುದು.
5) ವರದಿ ಮರುಪರಿಶೀಲನೆ ಒತ್ತಾಯ:
ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂಬ ಶರಣ ನಾಗಮೋಹನ್ ದಾಸ್ ಅವರ ವರದಿಯನ್ನು ಮರುಪರಿಶೀಲನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಕಳುಹಿಸುವಂತೆ ಒತ್ತಾಯಿಸುವುದು.
5) ದೆಹಲಿಯಲ್ಲಿ ರ್ಯಾಲಿ:
ಲಿಂಗಾಯತ ಧರ್ಮಕ್ಕೆ ಧಾರ್ಮಿಕ ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಾ ರ್ಯಾಲಿ ಆಯೋಜಿಸುವ ಯೋಜನೆ.
6) ಮುಂದಿನ ಸಮಾವೇಶ:
ಮುಂದಿನ ತಿಂಗಳು ಡಿಸೆಂಬರ್ 21ರಂದು ವಿಜಯಪುರ ಜಿಲ್ಲಾಮಟ್ಟದ ಸಮಾವೇಶ ಆಯೋಜನೆ.
							
			
                                
                             
ತಮ್ಮೆಲ್ಲರ ಆಶಯಕ್ಕೆ ಬಸವ ಬಲ ತುಂಬಲಿ. ತಮ್ಮ ಸಂಘಟನೆ ಮತ್ತು ಹೋರಾಟ ಸ್ವತಂತ್ರ ಧರ್ಮದ ಮಾನ್ಯತೆಗೆ ಶುಭವಾಗಲಿ.ಶರಣು ಶರಣಾರ್ಥಿ.
ಲಿಂಗಾಯತ ಧರ್ಮದ ಮನೆಯಲ್ಲಿ ಹುಟ್ಟಿ, ತಾನು ಲಿಂಗಾಯತ ಅಂತ ಹೇಳಿಕೊಂಡು, ಲಿಂಗಾಯತರ ವೋಟ್ ಪಡೆದು ಆರಿಸಿ ಬಂದು, ಲಿಂಗಾಯತ ಧರ್ಮವನ್ನು, ಬಸವಣ್ಣನವರನ್ನು ಹೀಯಾಳಿಸುವ, ತಿರಸ್ಕರಿಸುವ ಮತ್ತು ಬೇರೆ ದರ್ಮದವನು ಅಂತ ಹೇಳಿಕೊಳ್ಳುವ ಎಲ್ಲ ರಾಜಕಾರಣಿಗಳ ಮನೆ ಮುಂದೆ ಕನಿಷ್ಠ ಒಂದು ವಾರ
*ನಾನು ಲಿಂಗಾಯತ ಧರ್ಮ ದವನು ಅಲ್ಲ, ನನಗೆ ಲಿಂಗಾಯತರ vote ಬೇಡ*
ಎನ್ನುವ ಬ್ಯಾನರ್ ಹಾಕಿ ಕುಳಿತುಕೊಂಡು, ಶಾಂತವಾಗಿ,ಮೌನವಾಗಿ ಚಳುವಳಿ ಮಾಡಬೇಕು.
No need to sit in front of lingayat leaders house, we should teach them in comming election, especially Basangouda patil and some others of our own community, MB Patil is one who supporting lingayats, we should salute him instead of criticizing, lingayats are not hindu Or veerashaiva, lingayat is a independent religion founded by appa basava, even bsy and his son doesn’t know about lingayat, they are listening rss words, rss only made him to quit cm seat, bsy is a good leader and strong also but our own people are pulled his leg, it is shame to us, sanaatanies are not allowing us to see in high position, we should awake as early as possible other wise no place for us in the society. RSS and sanaatanis are very danger for lingayat community. I request all the lingayats to support sri jamdar sir and mb patil, to get lingayat religion. Jai basava. Sharnu sharnarthi. 🙏
ಈ ಕ್ಷಣ ಮಾತಾಜಿಯವರ ಆತ್ಮಕ್ಕೆ ಶಾಂತಿ ಸಿಕ್ಕಿರಬೇಕು. ಗಂಗಾ ಮಾತಾಜಿಯವರದು ಸರಿಯಾದ ಹೆಜ್ಜೆ. ಧರ್ಮ ಮಾನ್ಯತೆಯ ಹೋರಾಟಕ್ಕೆ ಸಮಸ್ತ ಬಸವಾಭಿಮಾನಿಗಳ ಬೆಂಬಲವಿದೆ.
ಲಿಂಗಾಯತರಲ್ಲಿ ಒಡ್ಕಂನ್ನುಂಟುಮಾದಲು ಕೆಲವು ಬಿಜೆಪಿ ಪಕ್ಷದ ಲಿಂಗಾಯತರನ್ನು ಬಳಸಿಕೊಂಡು ಸಂಘಪಾರಿವಾರಿಗಳು ಕುತಂತ್ರ ನಡೆಸಿದ್ದು ಎಲ್ಲಾ ಲಿಂಗಾಯತ ಪ್ರಮುಖರಿಗೆ ಗಮನದಲ್ಲಿ ಬಂದಿದೆ. ಯಾವಾಗಾಯವಾಹೊತ್ತಿನಲ್ಲಿ ಹೇಗೆ ಏನು ಮಾಡಬೇಕೆಂಬುದು ನಮಗೆಲ್ಲರಿಗುತಿಳಿದಿದೆ.