ಧಾರವಾಡ
ಅಣ್ಣಿಗೇರಿ ತಾಲೂಕಿನ ಹಳ್ಳಿಕೇರಿ ಗ್ರಾಮದಲ್ಲಿ ಶುಕ್ರವಾರ ನಡೆದ ಸಹಜಾನಂದ ಮಹಾರಾಜರ ಸಪ್ತಾಹ ಕಾರ್ಯಕ್ರಮಕ್ಕೆ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮಿ ಗೈರಾದರು.
ಧಾರವಾಡ ಜಿಲ್ಲಾಧಿಕಾರಿಗಳು ಕನ್ನೇರಿ ಸ್ವಾಮಿ ವಿರುದ್ಧ ಜಿಲ್ಲಾ ಪ್ರವೇಶ ನಿರ್ಬಂಧ ಆದೇಶ ಹೊರಡಿಸಿದ ಕಾರಣ ಅವರು ಹಳ್ಳಿಕೇರಿ ಕಾರ್ಯಕ್ರಮಕ್ಕೆ ಬರಲಿಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಂ. ವಿ. ಗೊಂಗಡಶೆಟ್ಟಿ ಅವರು ಹೇಳಿದರು.
ಜಿಲ್ಲಾಧಿಕಾರಿಗಳು ಕನ್ನೇರಿ ಸ್ವಾಮಿಯ ಮೇಲೆ ನಿರ್ಬಂಧ ವಿದಿಸಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದ್ದರೂ, ಆದೇಶದ ಪ್ರತಿ ಇಲ್ಲಿಯವರೆಗೆ ಲಭ್ಯವಾಗಿಲ್ಲ. ಜಿಲ್ಲಾಧಿಕಾರಿಗಳು ಬೆಂಗಳೂರಿಗೆ ಹೋಗಿರುವ ಕಾರಣದಿಂದ ಅವರ ಒಪ್ಪಿಗೆಯಿಲ್ಲದೆ ಆದೇಶದ ಪ್ರತಿಯನ್ನು ಕೊಡಲಾಗುವುದಿಲ್ಲವೆಂದು ಅವರ ಕಚೇರಿಯ ಸಿಬ್ಬಂದಿ ತಿಳಿಸಿದರು.
ಹಳ್ಳಿಕೇರಿ ಗ್ರಾಮದ ಕಾರ್ಯಕ್ರಮದಲ್ಲಿ ಕನ್ನೇರಿ ಸ್ವಾಮಿ ಭಾಗವಹಿಸಲಿದ್ದಾರೆಂದು ಅಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ನಂತರ ಧಾರವಾಡದಲ್ಲಿ ಎರಡು ಬಾರಿ, ಅಣ್ಣಿಗೇರಿಯಲ್ಲಿ ಒಂದು ಬಾರಿ ಅವರ ವಿರುದ್ಧ ಬಸವಪರ ಪ್ರತಿಭಟಿಸಿದ್ದವು. ಜಿಲ್ಲಾ ಉಸ್ತುವಾರಿ ಮಂತ್ರಿ ಸಂತೋಷ್ ಲಾಡ್ ಅವರಿಗೂ ಮನವಿ ಸಲ್ಲಿಸಿದ್ದವು.

ಪಶ್ಚಾತಾಪವಿಲ್ಲದ ಸ್ವಾಮಿ
“ಕನ್ನೇರಿ ಸ್ವಾಮೀಜಿ ಅವರಿಗೆ ಇವತ್ತಿನವರೆಗೂ ತಮ್ಮ ತಪ್ಪಿನ ಕಲ್ಪನೆ ಆಗಿಲ್ಲ. ಬೋಧಿಸುವ ಸ್ವಾಮಿಗಳು ಎಲ್ಲರಿಗೂ ಮಾದರಿಯಾಗಿರಬೇಕು. ಅವರಿಗೆ ತಾವು ಮಾತನಾಡಿದ್ದರ ಬಗ್ಗೆ ಪಶ್ಚಾತಾಪವೇ ಆಗುತ್ತಿಲ್ಲ.
ಜಿಲ್ಲಾಧಿಕಾರಿಗಳು ವಾಸ್ತವ ಸ್ಥಿತಿಯನ್ನು ಅರಿತುಕೊಂಡು ಕಾನೂನು ಪ್ರಕಾರ ನಿರ್ಬಂಧ ಆದೇಶ ಮಾಡಿದ್ದು ಒಪ್ಪುವಂತಹದ್ದು, ಅವರ ಆದೇಶವನ್ನು ನಾವು ಸ್ವಾಗತಿಸುತ್ತೇವೆ,” ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಎಸ್. ಎಸ್. ಹರ್ಲಾಪುರ ಬಸವ ಮೀಡಿಯಾಕ್ಕೆ ಹೇಳಿದರು.
ಲಿಂಗಾಯತ ಮಠಾಧೀಶರನ್ನು ನಿಂದಿಸಿರುವ ಕಾರಣದಿಂದ ಕನ್ನೇರಿ ಸ್ವಾಮಿಗೆ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಂದಲೂ ನಿರ್ಬಂಧ ವಿಧಿಸಲಾಗಿದೆ. ಅದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನವರೆಗೂ ಹೋದ ಕನ್ನೇರಿ ಸ್ವಾಮಿಗೆ ನ್ಯಾಯಾಲಯದಲ್ಲಿಯೂ ಹಿನ್ನಡೆಯಾಗಿದೆ.

ಮಾತೆಂಬುದು ಜೊತಿರ್ಲಿಂಗ
ಎಚ್ಚರವಿರಬೇಕು ಸ್ವಾಮಿ
ಉಪ್ಪತಿಂದ ಮೇಲೆ ನೀರು ಕುಡಿಯಲೆ ಬೇಕು
ಕುಡಿಯದಿದ್ದರೆ ಬಸವಾನುಯಾಯಿಗಳು ಕುಡಿಸುತ್ತಾರೆ
ಈ ಮಠದ ಕನೆರಿಯ ಸ್ವಾಮಿಗೆ ಮಾತಾಡುವ ಸಂಸ್ಕೃತಿ ಇದ್ದಂತೆ ಕಾಣುವದಿಲ್ಲ. ಜಾಲತಾಣದಲ್ಲಿ ಅವರಡುವಮಾತು ಒರಟು ಧಾಟಿಯಲ್ಲಿ ಇರುತ್ತವೆ. ಮಾತಿನ ಗಂಭೀರ್ಯತೆ ವಿವರಿಸುವ ರೀತಿ ಸಾಹಿತ್ಯಕ ವಾಗಿಲ್ಲ. ಹುಂಬನಂತೆ ಮಾತಾಡುತ್ತಾರೆ .