ಬೀದರ
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ನಗರದ ಕೆಇಬಿ ರಸ್ತೆಯಲ್ಲಿರುವ ಐಎಂಎ ಫಂಕ್ಷನ್ ಹಾಲ್ ನಲ್ಲಿ ಶಿವಶರಣ ಹರಳಯ್ಯ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಸಿರಿಗೆರೆಯ ಧಾತ್ರಿ ರಂಗಸಂಸ್ಥೆಯ ಕಲಾವಿದರು ಮಹಾಶರಣ ಹರಳಯ್ಯನವರ ಜೀವನವನ್ನು ನಾಟಕದ ಮೂಲಕ ಪರಿಚಯಿಸಿ ಅಭಿನಯಿಸಿದರು.
ಜಾತಿ ಎಂಬ ಅನಿಷ್ಠ ರೋಗ ಬೇರೂರಿದ್ದ 12ನೇ ಶತಮಾನದಲ್ಲೇ ಬಸವಣ್ಣನವರು ಅಂತರ್ಜಾತಿ ವಿವಾಹದ ಮೂಲಕ ನಡೆಸಿದ ಕಲ್ಯಾಣ ಕ್ರಾಂತಿಯನ್ನು ಕಣ್ಣಿಗೆ ಕಟ್ಟುವಂತೆ ಧಾತ್ರಿ ಸಂಸ್ಥೆಯ ಕಲಾವಿದರ ಅಭಿನಯಸಿದ್ದು
ಪ್ರೇಕ್ಷಕರ ಮನ ಗೆದ್ದಿತು.
ಕಲಾವಿದ ಜಿ.ಎಂ. ವಿಜಯಕುಮಾರ ಹರಳಯ್ಯನವರ ಪಾತ್ರಕ್ಕೆ ಜೀವ ತುಂಬಿದರು. ಒಂಬತ್ತು ಶತಮಾನಗಳ ಹಿಂದೆ ಕಲ್ಯಾಣದ ನೆಲದಲ್ಲಿ ನಡೆದ ಘಟನೆಯನ್ನು ಕಂಡು ಪ್ರೇಕ್ಷಕರ ಕಣ್ಣುಗಳು ಒದ್ದೆಯಾದವು.

ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ಧನ್ನೂರ ಅವರು ಧಾತ್ರಿ ಸಂಸ್ಥೆಯ ಕಲಾವಿದರ ಅಭಿನಯವನ್ನು ಮನದುಂಬಿ ಹಾರೈಸಿ, ಕಲಾವಿದರನ್ನು ಸನ್ಮಾನಿಸಿ ಗೌರವ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ವಿಜಯಕುಮಾರ ಸೋನಾರೆ, ಲಿಂಗಾಯತ ಸಮಾಜದ ಮುಖಂಡರಾದ ಜಯರಾಜ ಖಂಡ್ರೆ ಸೇರಿ ಇನ್ನಿತರರು ಉಪಸ್ಥಿತರಿದ್ದರು.
