ಹುಬ್ಬಳ್ಳಿ
ರೈತರು ವಿರುದ್ಧ ನಾಲಿಗೆ ಹರಿಬಿಟ್ಟು ಅವಾಚ್ಯ ಶಬ್ದ ಬಳಸಿ ನಿಂದಿಸಿದ ಬಸನಗೌಡ ಪಾಟೀಲ ಯತ್ನಾಳಗೆ ಪತ್ರಕರ್ತೆ, ನಿರೂಪಕಿ ರಾಧಾ ಹಿರೇಗೌಡರ ಸಮಸ್ತ ಮಹಿಳಾ ಸಮಾಜದ ಪರವಾಗಿ ತಿರುಗೇಟು ನೀಡಿದ್ದಾರೆ.
ಇತ್ತೀಚಿಗೆ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಇವತ್ತೆ ಬರ್ಲಿ ನನ್ನ ಕಾರ್ಖಾನೆ ಕೊಡ್ತಿನಿ, ನಾಲ್ಕುವರೆ ಸಾವಿರ ಕೊಡಲಿ, ಅವನೌನ್ ಹಡ ಬಂಗಾರ ತೇಗಿಲೆಂದು ರೈತರು ವಿರುದ್ಧ ನಾಲಿಗೆ ಹರಿಬಿಟ್ಟಿರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಪತ್ರಕರ್ತೆ ರಾಧಾ ಯತ್ನಾಳ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆ ವಿಡಿಯೋ ಸದ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಏನ್ರಿ ನಿಮ್ಮೌನ್ ಹಡ ಅಂದ್ರ ಯಾರಿಗಿ ಬೈತಿರಿ ನೀವು, ತಾಯಿಗಿ ಬೈತಿರಿ, ನೀವು ತಾಯಿ ಹೊಟ್ಟೆಯಲಿ ಹುಟ್ಟಿಲ್ಲ? ಸಾರ್ವಜನಿಕವಾಗಿ ಹೆಂಗ್ ಮಾತಾಡಬೇಕು ಅಂತ ನಾಲಿಗಿ ಮ್ಯಾಲ ಹಿಡಿತ ಇರಲಿ ಎಂದು ಎಚ್ಚರಿಸಿದ್ದಾರೆ.
ನಾಲಿಗೆ ಮೇಲೆ ಹಿಡಿತ ಕಳೆದುಕೊಂಡು ಬಾಯಿಗೆ ಬಂದಂತೆ ಮಾತಾಡಿದ್ದರಿಂದಲೇ ಬಿಜೆಪಿಯಿಂದ ಉಚ್ಚಾಟನೆಗೊಂಡಿದ್ದಿರಿ ಎಂದು ರಾಧಾ ತಿರುಗೇಟು ನೀಡಿದ್ದಾರೆ.
