ಚಿತ್ರದುರ್ಗ:
ಸಮಯದ ಅಭಾವ ಹಾಗೂ ಕೆಲ ವಚನಕಾರರ ವಚನಗಳು ಹೇಳಲು ಸ್ವಲ್ಪ ಕ್ಲಿಷ್ಟಕರವಾದ್ದರಿಂದ ಬಸವಾದಿ ಶಿವಶರಣರ ಯಾವುದೇ ವಚನಗಳನ್ನು ಕಂಠಪಾಠ ಮಾಡಿ ವಚನಕಾರರ ಹೆಸರು, ಅಂಕಿತ ಹಾಗೂ ವಚನ ಹೇಳಬಹುದಾಗಿದೆ ಎಂದು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಅವರು ಸಲಹೆ ಮಾಡಿದರು.
ಅವರು ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ನಡೆಯುತ್ತಿರುವ ವಚನ ಕಾರ್ತೀಕದಲ್ಲಿ ಭಾಗವಹಿಸಿ ಆಡಳಿತ ಮಂಡಳಿಯ ಅಧ್ಯಕ್ಷರ ಸಲಹೆಯಂತೆ ಮಾಹಿತಿ ಹೇಳುತ್ತ, ವಚನ ಕಾರ್ತೀಕದ ಅಂಗವಾಗಿ ನವೆಂಬರ್ ೨೩ರಂದು ಶ್ರೀಮಠದಲ್ಲಿ ಏರ್ಪಡಿಸಿರುವ ವಚನ ಕಂಠಪಾಠ ಸ್ಪರ್ಧೆಯಲ್ಲಿ ಭಾಗವಹಿಸಿ ೨೫ ವಚನ ಹೇಳಿದವರಿಗೆ ೧೦೦ರೂ, ೫೦ ವಚನ ಹೇಳಿದವರಿಗೆ ೨೦೦ ರೂ, ೭೫ ವಚನ ಹೇಳಿದವರಿಗೆ ೩೦೦ ರೂ, ಹಾಗೂ ೧೦೦ ವಚನ ಹೇಳಿದವರಿಗೆ ೪೦೦ ರೂ.ನಂತೆ ನಗದು ಹಾಗು ಪ್ರಶಸ್ತಿ ಪತ್ರ ನೀಡಲಾಗುವುದು ಎಂದರು.
ಹಾಗೆಯೇ ೫೦೦ ವಚನ ಯಾವುದೇ ಶಿವಶರಣರದಾಗಲಿ ವಚನಕಾರರ ಹೆಸರು, ಅಂಕಿತ ಹಾಗೂ ವಚನಗಳನ್ನು ಹೇಳಿದರೆ ಮೊದಲ ನಗದು ಬಹುಮಾನ ಹತ್ತು ಸಾವಿರ ರೂ., ಎರಡನೇ ಬಹುಮಾನ ೭,೫೦೦ ರೂ., ಮೂರನೇ ಬಹುಮಾನ ೫ ಸಾವಿರ ರೂ., ಸಮಾಧಾನಕರ ೨,೫೦೦ ರೂ. ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ನೀಡಲಾಗುತ್ತದೆ ಎಂದು ತಿಳಿಸಿದರು.
ಈ ತಿಂಗಳ ೨೩ನೇ ತಾರೀಖು ಬೆಳಗ್ಗೆ ೯ ಗಂಟೆಗೆ ಪ್ರಾರಂಭವಾಗುವ ಈ ವಚನ ಕಂಠಪಾಠ ಸ್ಪರ್ಧೆ ಶ್ರೀಮಠದಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ ೯೪೪೮೨೯೫೯೦೧, ೯೯೪೫೯೫೦೩೦೩, ೯೯೦೨೯೨೯೭೦೧, ೯೯೪೪೯೯೭೪೦೦೪, ೯೭೪೦೦೩೭೧೭೬, ೯೪೪೮೬೬೪೯೩೨ – ಈ ನಂಬರ್‌ಗಳಿಗೆ ಸಂಪರ್ಕಿಸಬಹುದಾಗಿದೆ ಎಂದು ಶ್ರೀಮಠದ ಪ್ರಕಟಣೆಯಲ್ಲಿ ಕೋರಿದೆ.
