ಅಮರಳಾದ ಸಾಲುಮರದ ತಿಮ್ಮಕ್ಕ : ತೋಂಟದ ಶ್ರೀಗಳು

ಬಸವ ಮೀಡಿಯಾ
ಬಸವ ಮೀಡಿಯಾ

ಗದಗ

ಸಾಲು ಸಾಲು ಮರಗಳನ್ನು ನೆಟ್ಟು ಅಮರಳಾದ ತಿಮ್ಮಕ್ಕ ಪರಿಸರದ ಬಗ್ಗೆ ಹೊಂದಿದ್ದ ಕಾಳಜಿ ಅವಿಸ್ಮರಣೀಯ. ವನದೇವತೆ ಎಂಬ ಖ್ಯಾತಿ ಪಡೆದು ಪರಿಸರ ಪ್ರೇಮಿಗಳಿಗೆಲ್ಲ ಮಾದರಿಯಾಗಿದ್ದ ಅವಳು ಇಂದು ನಮ್ಮನ್ನು ಅಗಲಿರುವುದು ನೋವಿನ ಸಂಗತಿ ಎಂದು ಡಂಬಳ-ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಕಂಬನಿ ಮಿಡಿದಿದ್ದಾರೆ.

ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಶ್ರೀಗಳು ಗಿಡಮರಗಳನ್ನು ಮಕ್ಕಳಂತೆ ಸಾಕಿ ಸಲುಹಿದ ತಿಮ್ಮಕ್ಕ ವೃಕ್ಷಮಾತೆ ಎಂದೇ ಚಿರಪರಿಚಿತಳು. ಗಿಡಮರಗಳ ಮಹತ್ವವನ್ನು ತಿಳಿಸುತ್ತ ಪರಿಸರ ಜಾಗೃತಿಗಾಗಿ ಅಹರ್ನಿಶಿ ಶ್ರಮಿಸಿದ ಅವಳು ದಂತಕತೆಯಾಗಿದ್ದಾಳೆ.

ಪದ್ಮಪ್ರಶಸ್ತಿ ವಿಭೂಷಿತಳಾಗಿ, ಕರ್ನಾಟಕದ ಹಿರಿಮೆ-ಗರಿಮೆಗೆ ಕಾರಣಳಾಗಿದ್ದ ಅವಳ ಆಶೋತ್ತರಗಳನ್ನು ಕರ್ನಾಟಕ ಸರಕಾರ ಈಡೇರಿಸುವ ಮೂಲಕ ತಿಮ್ಮಕ್ಕನಿಗೆ ಗೌರವ ಸಲ್ಲಿಸಬೇಕು ಮತ್ತು ಅವಳ ಆತ್ಮಕ್ಕೆ ದೇವರು ಚಿರಶಾಂತಿಯನ್ನು ದಯಪಾಲಿಸಲಿ ಎಂದು ಶ್ರೀಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JjqqFwfw2jf2WxG5glPZ0O

Share This Article
Leave a comment

Leave a Reply

Your email address will not be published. Required fields are marked *