ಬಸವಕಲ್ಯಾಣ:
ಬಸವಕಲ್ಯಾಣದಲ್ಲಿ ನಡೆಯುವ ೪೬ನೆಯ ಶರಣ ಕಮ್ಮಟ ಹಾಗೂ ಅನುಭವಮಂಟಪ ಉತ್ಸವ-೨೦೨೫ ನಿಮಿತ್ಯ ದಿ: ೨೨- ೨೮ನವೆಂಬರ್ ರವರೆಗೆ ಏಳು ದಿನಗಳ ಕಾಲ ನಡೆಯುವ ಸಾಮೂಹಿಕ ವಚನ ಪಾರಾಯಣದ ಉದ್ಘಾಟನೆ ನಾಡೋಜ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ದಿವ್ಯ ಸಾನಿಧ್ಯದಲ್ಲಿ ನಡೆಯಿತು.
ಸಾನಿಧ್ಯ ವಹಿಸಿದ ಪೂಜ್ಯರು, ವಚನಗಳು ನಮಗೆ ಪೊಲಿಯೋ ಡ್ರಾಪವಿದ್ದಂತೆ. ಪೋಲಿಯೊ ಡ್ರಾಪ್ ಹಾಕಿಸಿದರೆ ಮಕ್ಕಳು ಹೇಗೆ ಆರೋಗ್ಯವಂತರಾಗಿ ಬೆಳೆಯುತ್ತಾರೋ ಹಾಗೆ ವಚನಗಳು ನಮ್ಮ ಜೀವನದಲ್ಲಿ ಪ್ರತಿದಿನ ಪಠಣ ಮಾಡುವುದರಿಂದ ನಮಗೆ ಯಾವುದೇ ರೀತಿಯ ಭಯ ಆತಂಕವಿರುವುದಿಲ್ಲ.

ಬಸವಾದಿ ಶರಣರು ತಮ್ಮ ಪ್ರಾಣವನ್ನು ಕೊಟ್ಟು ವಚನಗಳ ರಕ್ಷಣೆ ಮಾಡಿದ್ದಾರೆ. ಅವರು ಕೊಟ್ಟ ಈ ವಚನಗಳು ನಾವು ಪ್ರತಿನಿತ್ಯ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನ ಸಾಗಿಸೋಣ ಎಂದು ನುಡಿದರು.
ಉದ್ಘಾಟನೆ ನೆರವೇರಿಸಿದ ಬೀದರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಶರಣ ಶಿವಾನಂದ ಬಿ. ಕರಾಳೆ ಅವರು ವಚನಗಳು ನಮ್ಮ ಜೀವನಕ್ಕೆ ಅತ್ಯ ಅಮೂಲ್ಯವಾದದ್ದು, ವಚನಗಳ ಪಠಣದಿಂದ ನಮ್ಮ ಜೀವನ ಸುಂದರವಾಗುತ್ತದೆ. ಮುಂದಿನ ಯುವಪೀಳಿಗೆಗೆ ವಚನಗಳ ಪರಿಚಯ ಮಾಡಿಸುವುದು ತುಂಬಾ ಅವಶ್ಯವಾಗಿದೆ.
ಬಸವಾದಿ ಶರಣರು ತೋರಿಸಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ವಚನಗಳ ಪಠಣದಿಂದ ನಮ್ಮ ಜೀವನ ಪಾವನಗೊಳಿಸಿಕೊಳ್ಳಬೇಕೆಂದು ತಮ್ಮ ವಿಚಾರಗಳನ್ನು ಹಂಚಿಕೊಂಡರು.

ಪೂಜ್ಯ ಶ್ರೀ ಡಾ.ಶಿವಾನಂದ ಮಹಾಸ್ವಾಮಿಗಳು ಹುಲಸೂರು, ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ, ಪೂಜ್ಯ ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಬಸವಕಲ್ಯಾಣ, ಪೂಜ್ಯ ಶ್ರೀ ಡಾ.ಗಂಗಾಂಬಿಕಾ ಅಕ್ಕ, ಪೂಜ್ಯ ಶ್ರೀ ಪ್ರಭುದೇವ ಮಹಾಸ್ವಾಮಿಗಳು ಗೋರ್ಟಾ, ಪೂಜ್ಯ ಶ್ರೀ ಪೂಜ್ಯ ಶ್ರೀ ಬಸವಲಿಂಗ ಸ್ವಾಮಿಗಳು, ಪೂಜ್ಯ ಶ್ರೀ ಪಂಚಾಕ್ಷರಿ ಸ್ವಾಮಿಗಳು ಬೇಲೂರು, ಪೂಜ್ಯ ಶ್ರೀ ಬಸವದೇವರು, ಪೂಜ್ಯ ಶ್ರೀ ಪ್ರಭುಲಿಂಗದೇವರು, ಪೂಜ್ಯ ಶ್ರೀ ಶಿವಬಸವದೇವರು, ಪೂಜ್ಯ ಶ್ರೀ ಗಂಗಾಧರ ದೇವರು, ಪೂಜ್ಯ ಶ್ರೀ ಸತ್ಯದೇವಿತಾಯಿ, ಪೂಜ್ಯ ಶ್ರೀ ಗಾಯತ್ರಿತಾಯಿ, ಪೂಜ್ಯ ಶ್ರೀ ಸುಗುಣಾದೇವಿತಾಯಿ, ಪೂಜ್ಯ ಶ್ರೀ ಹಾಲಮ್ಮತಾಯಿ, ಪೂಜ್ಯ ಶ್ರೀ ಸತ್ಯಕ್ಕ ತಾಯಿ, ಪೂಜ್ಯ ಶ್ರೀ ಕಲ್ಯಾಣಮ್ಮತಾಯಿ ಸಮ್ಮುಖ ವಹಿಸಿದ್ದರು.
ಸಾಮೂಹಿಕ ವಚನ ಪಾರಾಯಣ ಸೇವಾ ಸಮಿತಿ ಅಧ್ಯಕ್ಷ, ರವಿ ಕೋಳಕೂರು ಅವರು ಸ್ವಾಗತಿಸಿದರು. ಶರಣ ರಾಜು ಜುಬರೆ ನಿರೂಪಿಸಿದರು. ಶರಣ ಎಸ್.ಎಸ್.ನಾಗರಾಳೆ ಪರಿವಾರ ಅವರಿಂದ ಪ್ರಸಾದ ದಾಸೋಹ ನಡೆಯಿತು.
