ಮುರುಘಾ ಶರಣರು ಯಾವುದೇ ಅಧಿಕಾರ ಬಯಸದೆ, ಪೀಠದ ಹೊರಗಿದ್ದು ಜನಸೇವೆ ಸಲ್ಲಿಸಬೇಕು.
ಚಿತ್ರದುರ್ಗ
ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿರುವ ಮೊದಲ ಪೋಕ್ಸೊ ಪ್ರಕರಣದಲ್ಲಿ ನಗರದ ಜಿಲ್ಲಾ ಕೋರ್ಟ್‌ನ ಆದೇಶ ನವೆಂಬರ್ 26 ಬರಲಿದೆ.
ಮುರುಘಾ ಶರಣರ ಮೇಲಿರುವ ಎರಡನೇ ಪ್ರಕರಣದ ಇತ್ಯರ್ಥ ಬಾಕಿಯಿದೆ. ಜಿಲ್ಲಾ ಕೋರ್ಟಿನ ತೀರ್ಪಿನ ನಂತರ ಈ ಪ್ರಕರಣಗಳು ಹೈಕೋರ್ಟ್, ಸುಪ್ರೀಂ ಕೋರ್ಟ್ ಮೆಟ್ಟಲು ಹತ್ತುವ ಎಲ್ಲಾ ಸಾಧ್ಯತೆಗಳಿವೆ.
ಒಂದು ವೇಳೆ ಈ ಕಾನೂನು ಸಮರಗಳಲ್ಲಿ ಮುರುಘಾ ಶರಣರು ಜಯಗಳಿಸಿ್ದರೆ ಅವರನ್ನು ಮುರುಘಾ ಮಠದ ಪೀಠಕ್ಕೆ ಮತ್ತೆ ಕರೆತರುವ ಪ್ರಯತ್ನ ಕೆಲವು ವಲಯಗಳಲ್ಲಿ ನಡೆಯುತ್ತಿದೆ ಎಂದು ತಿಳಿದು ಬಂದಿದೆ.
ಯಾವುದೇ ಊಹಾಪೋಹವನ್ನು ಗಣನೆಗೆ ತೆಗೆದುಕೊಳ್ಳದಿರುವುದು ಬಸವ ಮೀಡಿಯಾದ ಸಂಪಾದಕೀಯ ನಿಲುವು. ಆದರೆ ಇದು ಲಿಂಗಾಯತ ಧರ್ಮದ ಪ್ರಾಚೀನ, ಪವಿತ್ರ, ಪ್ರತಿಷ್ಠ, ಪ್ರಭಾವಿ ಮಠಕ್ಕೆ ಸಂಬಂಧಿಸಿದ ಅತೀ ಸೂಕ್ಷ್ಮ, ಗಂಭೀರ ವಿಷಯ.
ಈ ನಿಟ್ಟಿನಲ್ಲಿ ಸಮಾಜದಲ್ಲಿ ಒಂದು ಸಾರ್ವಜನಿಕ ಸಂವಾದ ನಡೆಸುವುದು ನಮ್ಮ ಕಾಯಕದ ನೈತಿಕ ಜವಾಬ್ದಾರಿ ಎಂದು ಪರಿಗಣಿಸಿ ಸಮಾಜದ ಹಿರಿಯರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದೇವೆ.
ಇಂದು ನಾಡೋಜ ಗೊ.ರು. ಚನ್ನಬಸಪ್ಪ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
1) ಮುರುಘಾ ಶರಣರ ಹಗರಣ ಕಾಣರಿಯದಂತಹ ಪ್ರಕರಣ. ಮೂರು ವರ್ಷಗಳಿಂದ ಇದರ ಪ್ರತಿಯೊಂದು ಬೆಳವಣಿಗೆಯನ್ನು ಜನರು ಬಹಳ ಸೂಕ್ಶ್ಮವಾಗಿ ಗಮನಿಸುತ್ತಿದ್ದಾರೆ. ಲಿಂಗಾಯತ ಸಮಾಜದ ಮೇಲೆ ಈ ಹಗರಣದ ಪರಿಣಾಮವೇನಾಗಿದೆ?
ಮಾಧ್ಯಮಗಳಲ್ಲಿ ಈ ಸಂಬಂಧ ಬರುತ್ತಿರುವ ಸುದ್ದಿಗಳನ್ನು ಓದಿ ನಾನು ವ್ಯಥೆಗೊಂಡಿದ್ದೇನೆ. ಈ ಹಗರಣ ಲಿಂಗಾಯತ ಸಮಾಜದ ಮೇಲಷ್ಟೇ ಅಲ್ಲ; ಇಡೀ ಮಾನವ ಧರ್ಮಕ್ಕೇ ಕಳಂಕ ತಂದಿದೆ. ಇದು ‘ಧರ್ಮಗುರು’ ಸ್ಥಾನದ ಬಗೆಗೆ ಜನ ಸಮುದಾಯ ಇಟ್ಟುಕೊಂಡು ಬಂದಿರುವ ಭಕ್ತಿ-ಶ್ರದ್ಧೆಗಳು ಮುರುಟಿಹೋಗುವಂತಹ ವಿಷಾದನೀಯ ಹಗರಣ.
2) ನ್ಯಾಯಾಲಯದಲ್ಲಿ ಈ ಪ್ರಕರಣವೆಲ್ಲ ಮುಗಿದ ಮೇಲೆ ಮುರುಘಾ ಶರಣರು ಮತ್ತೆ ಪೀಠಕ್ಕೆ ಬರುತ್ತಾರೆ ಎಂಬ ಮಾತಿದೆ. ಈ ಸಾಧ್ಯತೆಯ ಬಗ್ಗೆ ನಿಮ್ಮ ಪ್ರತಿಕ್ರಿಯೆ.
ನ್ಯಾಯಾಲಯದಲ್ಲಿ ಪ್ರಕರಣ ಸಂಬಂಧ ನಡೆಯುತ್ತಿರುವ ಕಲಾಪಗಳು ಮುಗಿದ ನಂತರ ಮುರುಘಾ ಶರಣರು ಮತ್ತೆ ಪೀಠಕ್ಕೆ ಬರುವ ಸಾಧ್ಯತೆ, ಅವರ ಅಂತಃಸಾಕ್ಷಿಗೆ ಸಂಬಂಧಿಸಿದ್ದು; ಮುಗ್ಧ ಅಥವಾ ಸ್ವಹಿತಾಸಕ್ತ ಭಕ್ತರ ಬೆಂಬಲಕ್ಕೆ ಸಂಬಂಧಿಸಿದ್ದು.
3) ಕೋರ್ಟಿನಲ್ಲಿ ತೀರ್ಪು ಮುರುಘಾ ಶರಣರ ಪರವಾಗಿ ಬಂದರೆ ಅವರು ಮತ್ತೆ ಪೀಠಕ್ಕೆ ಬರಲು ಅಡ್ಡಿಯಿಲ್ಲ ಎಂದು ಕೆಲವರು ಹೇಳುತ್ತಾರೆ. ಇದಕ್ಕೆ ನಿಮ್ಮ ಅಭಿಪ್ರಾಯ.
ನ್ಯಾಯಾಲಯದಲ್ಲಿ ಮುರುಘಾ ಶರಣರ ಪರವಾಗಿ ತೀರ್ಪು ಬಂದರೆ, ಅವರ ಬಗೆಗೆ ಜನರಿಗೆ ಮೊದಲಿನ ಭಕ್ತಿ-ವಿಶ್ವಾಸಗಳು ಇರುತ್ತವೆ ಎಂದು ಹೇಳಲಾಗುವುದಿಲ್ಲ. ಆತ್ಮಪ್ರಜ್ಞೆ ಇದ್ದರೆ, ಅವರು ಮತ್ತೆ ಪೀಠಕ್ಕೆ ಬರಬಾರದು; ಅವರು ಬರಲಾರರೆಂದೇ ನಾನು ಭಾವಿಸುತ್ತೇನೆ.
4) ಮುರುಘಾ ಶರಣರು ಮತ್ತೆ ಪೀಠಕ್ಕೆ ಬಂದರೆ ಸಮಾಜಕ್ಕೆ ಏನು ಸಂದೇಶ ಹೋಗುತ್ತದೆ? ಲಿಂಗಾಯತ ಮತ್ತು ಒಟ್ಟು ನಾಗರಿಕ ಸಮಾಜದ ಮೇಲೆ ಇದರ ಪರಿಣಾಮವೇನಾಗುತ್ತದೆ?
ಒಂದು ವೇಳೆ ಅವರು ಪೀಠಕ್ಕೆ ಬಂದರೂ ಅವರ ಸಂದೇಶ ಸಂದೇಹರಹಿತವಾಗಿರಲು ಸಾಧ್ಯವಿಲ್ಲ. ವ್ಯಕ್ತಿ ಒಮ್ಮೆ ಹೊತ್ತ ಕಳಂಕ ತೊಳೆದರೆ ಹೋಗುವಂಥದ್ದಲ್ಲ. ಮುರುಘಾ ಶರಣರು ಇದ್ದ ಧಾರ್ಮಿಕ ಪೀಠಕ್ಕೆ ಒಂದು ಪಾವಿತ್ರ್ಯತೆ ಇದೆ;ಪರಂಪರೆ ಇದೆ.
ಅವರು ಮನ ಶುದ್ಧ, ತನು ಶುದ್ಧ, ಧನ ಶುದ್ಧರಾಗಿದ್ದರೆ, ಅವರೇ ಸಾರುತ್ತಿದ್ದ ಶರಣರ ಸಂದೇಶದಂತೆ, ಸಾತ್ವಿಕ ಜೀವನಕ್ಕಾಗಿ ಮೀಸಲಿಟ್ಟು ಮತ್ತೆ ಯಾವುದೇ ಅಧಿಕಾರ ಬಯಸದೆ, ಪೀಠದ ಹೊರಗಿದ್ದು ಜನಸೇವೆ ಸಲ್ಲಿಸಬೇಕು.

ಇದನ್ನು ಕೇಳಿಯೇ ಆಘಾತವಾಗಿದೆ. ಇದನ್ನು ವಿರೋದಿಸಲೇಬೇಕು. ಮುಕ್ತವಾಗಿ ತಮ್ಮ ಅಭಿಪ್ರಾಯ ತಿಳಿಸಿರುವ ಶರಣ ಗೊರುಚರವರಿಗೆ ಧನ್ಯವಾದ. ಅವರ ಮಾತಿಗೆ ನನ್ನ ಸಂಪೂರ್ಣ ಸಹಮತವಿದೆ.
ಮರಳಿ ಬರುವ ಸಾಧ್ಯತೆಗಳು ಬಹಳ ಕಡಿಮೆ ಇವೆ ಒಂದು ವೇಳೆ ತೀರ್ಪು ಅವರ ಪರವಾಗಿ ಬಂದರೆ ಮೊದಲಿನ ಹಾಗೆ ಜನರು ಅವರನ್ನು ಪೂಜ್ಯ ಭಾವನೆಯಿಂದ ನೋಡುವುದಿಲ್ಲ ನೋಡಿದರು ಗೌರವ ಕೊಡುವುದಿಲ್ಲ ಬೆಟರ್ ಹೊರಗಿದ್ದು ಜನಸೇವೆ ಮಾಡಲಿ
ತೀರ್ಪು ಬರುವ ಮುನ್ನ ನಕಾರಾತ್ಮಕ, ಪ್ರತಿಕ್ರಿಯೆ ಅಭಿಪ್ರಾಯ ವ್ಯಕ್ತಪಡಿಸುವುದು ಸರಿಯೇ?
ಮುರುಘಾಮಠದ ಸಮಸ್ಯೆ ಪರಂಪರೆಯ ಮಠಾಧೀಶರು ಮತ್ತು ಭಕ್ತರೇ ಬಗೆಹರಿಸಿ ಕೊಳ್ಳುತ್ತಾರೆ.
ಶರಣರೇ ಇದು ಬರೀ ಕಾನೂನಿನ ಪ್ರಶ್ನೆ ಮಾತ್ರವಲ್ಲ. ಇಂತ ಘೋರವಾದ ಹಗರಣ ಮುರುಘಾ ಶರಣರ ಆಡಳಿತದಲ್ಲಿ ನಡೆಯಿತು. ಅವರು ನೈತಿಕೆ ಜವಾಬ್ದಾರಿ ತೆಗೆದುಕೊಂಡು ಮಠಕ್ಕೆ ಕಾಲಿಡಬಾರದು.
ಗೊರುಚ ರವರ ಅಭಿಪ್ರಾಯ ಸಮಾಜದ ಒಟ್ಟಾಭಿಪ್ರಾಯವಾಗಬೇಕು. ಇದೆ ನನ್ನ ಅಭಿಪ್ರಾಯವೂ ಹೌದು.
ಗೋರುಚ ಹಿರಿಯರ ಅಭಿಪ್ರಾಯ ಸರಿಯಾಗಿಯೇ ಎದೆ
I also agreed the opinion given by Gorur Channabasappa.
ಗೋರುಚ ಅಪ್ಪಾಜಿಯವರ ಮಾತಿಗೆ ನನ್ನ ಸಹಮತವಿದೆ
ಗೋ.ರು.ಚ. ಅವರು ಸರಿಯಾಗಿ ಹೇಳಿದ್ದಾರೆ. ಆತ್ಮಗೌರವವಿದ್ದರೆ ಮತ್ತೆ ಪೀಠಕ್ಕೆ ಬರಬಾರದು
This is mainly a MORAL issue. Its LEGAL aspect is secondary. I hope as GORUCHA expressed sharanaru should not ocupy the PEETHA. He should involve himself in social work and community service.
ಎಲ್ಲ ಲಿಂಗಾಯತರ ಎದೆಯಾಳದ ನೋವಿಗೆ ಗೊರುಚ ಧ್ವನಿಯಾಗಿದ್ದಾರೆ. ಧರ್ಮ ಮಾನ್ಯತೆಯ ದಿಟ್ಟ ಹೋರಾಟದ ನಡುವೆ ಈ ಪ್ರಕರಣ ನಿಜಕ್ಕೂ ಒಂದು ಅಪಸವ್ಯವೇ ಸರಿ! ಗೊರುಚ ನಿಲುವನ್ನು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ನಿರೀಕ್ಷಿಸಿದ್ದೆ… ! ಈಗಲಾದರೂ ಖಾವಿಗಳು ಬಾಯ್ದೆರೆಯಲಿ..ಅದು ಅವರ ಕರ್ತವ್ಯ ಕೂಡಾ ! ಈ ಪ್ರಕಣದಲ್ಲಿ ಕಾನೂನಿನ ಕುಡಿಕೆಯಿಂದ ಬಿಡಿಸಿಕೊಂಡರೂ ಮತ್ತೊಂದು ಕಾದಿದೆಯಲ್ಲ… ಎರಡರಿಂದಲೂ ಮುಕ್ತವಾದರೂ ಕಂಬಿ ಎಣಿಸಿ ಬಂದ ಈ ಖಾವಿಯ ಕಾಲಿಗೆ ಎರಗುವುದಕ್ಕೆ ನಾನೇ ಏಕೆ ಯಾರ ಮನಸ್ಸೂ ಒಪ್ಪದು! ಮುರಘಾ ಪರಂಪರೆ ಸಮಾಜದ ಸ್ವತ್ತು ..ಇದನ್ನು ಉಳಿಸಿಕೊಳ್ಳುವ ಬಗ್ಗೆ ಮಠಾಧಿಪತಿಗಳ ಒಕ್ಕೂಟ ಸಮಾಜಕ್ಕೆ ಮಾರ್ಗದರ್ಶನ ನೀಡಬೇಕಾದುದು ಇಂದಿನ ತುರ್ತು ! ಇದಕ್ಕೆ ತೀರ್ಪು ಬರಲಿ ಎ೦ದು ಕಾಯುತ್ತಾ ಕೂರುವುದು ಅನಗತ್ಯ… ಸುತ್ತೂರು ಸಿದ್ಧಗಂಗೆ… ಒಕ್ಕೂಟಗಳೆಲ್ಲವೂ ಸುಮ್ಮನಿದ್ದರೆ ಸಮಾಜಕ್ಕೆ ದ್ರೋಹ. ಬಗೆದಂತಾಗದೇ..???!!
ನಮ್ಮ ಅಖಂಡ ಲಿಂಗಾಯತ ಸಮಾಜದ ಭೀಷ್ಮ, ನೈಜ, ಶುದ್ಧ ಬಸವತತ್ವದ ಪ್ರಾಮಾಣಿಕ ಪ್ರತಿಪಾದಕ, ಈ ತಲೆಮಾರಿನ ಸಾಕ್ಷ್ಮಿಪ್ರಜ್ಞೆ ಸನ್ಮಾನ್ಯ ಗೊರುಚ ಅವರ ಅಭಿಪ್ರಾಯ ಸಮಗ್ರ ಲಿಂಗಾಯತ ಸಮಾಜದ ಒಕ್ಕೊರಲಿನ
ಅಭಿಪ್ರಾಯವಾಗಿ ಹೊರಹೊಮ್ಮಬೇಕು. ಅದನ್ನು ಮುರುಘಾ ಶರಣರು ಚಾಚೂ ತಪ್ಪದೇ ಪಾಲಿಸಬೇಕು. ಈಗಲೇ ಇಡೀ ಸಮಾಜ ತಲೆತಗ್ಗಿಸುವಂತಾಗಿದೆ. ಇನ್ನೂ ಪೀಠಕ್ಕೆ ಮತ್ತೆ ಹತ್ತಿರವಾದರೆ ಸಮಾಜದ ಗೌರವ ಏನೇನೂ ಉಳಿಯದು. ಮುರುಘಾ
ಮಠ ಮಾತ್ರವಲ್ಲದೇ ಇನ್ನಷ್ಟು
ಮಠಾಧಿಪತಿಗಳು ಚರಿತ್ರ ಹೀನರು ಗುಟ್ಟಾಗಿ ಇರುವ ಎಲ್ಲಾ ಸಾಧ್ಯತೆಗಳು ಇವೆ. ಆದರೆ ಆಯಾ ಒಳಪಂಗಡಗಳವರು ಬಾಯಿ ಬಿಟ್ಟರೆ ಬಣ್ಣಗೇಡು ಅಂತ ಎಲ್ಲವನ್ನೂ ತಮ್ಮತಮ್ಮಲ್ಲೇ ನುಂಗಿಕೊಂಡು ಹೋಗುತ್ತಿರುವ ಸಾಧ್ಯತೆ ಇದೆ.
ಯಾರು ಈ ಕೆಲವರು ಬಸವ ಮೀಡಿಯಾ ಬಿಡಿಸಿ ಹೇಳಬೇಕು. ಮುರುಘಾ ಮಠ ಈ ಷಡ್ಯಂತ್ರಕ್ಕೆ ಬಲಿಯಾಗಬಾರದು.
ಇದರಲ್ಲಿ ಷಡ್ಯಂತರ ಏನಿದೆ? ಒಂದು ಧಾರ್ಮಿಕ ಕೇಂದ್ರವಾದ ಮಠದ ಕಳಂಕವನ್ನು ತೊಳೆದು ಗೌರವವನ್ನು ಕಾಪಾಡಬೇಕಾದದ್ದು ಶಿವಮೂರ್ತಿ ಶರಣರ ಜವಾಬ್ದಾರಿಯೂ ಹೌದು.
ಗೊರೂಚ ಅವರ ದ್ವನಿಗೆ ನಾನೂ ದ್ವನಿಗೂಡಿಸುತ್ತೇನೆ.
My opinion is the same, murgasri should not take charge of the math, now his guidance will not work on the society.
ಗೊ.ರು. ಚ ಹಿರಿಯರು, ಅವರು ಹೇಳಿರುವುದರಲ್ಲಿ ಸತ್ಯಾಂಶ ಇದೆ. ನಾನು ಚಿತ್ರದುರ್ಗದ ಮಠದಿಂದ ದೂರ ಇರುವ ಊರಿನವ. ಅಲ್ಲಿ ನಡೆದ, ನಡೆಯುವ ಘಟನೆಗಳ ಅರಿವು ನನಗೆ ಇಲ್ಲ. ನನ್ನಂತೆ ಮಾಧ್ಯಮ ಸುದ್ದಿ ಓದಿ ತಿಳಿದವರೇ 90% ಕನ್ನಡಿಗರು. ಸತ್ಯಾಂಶ ಯಾರಿಗೆ ಗೊತ್ತು.
ಆರೋಪದ ಘಟನೆಗಳು ಸತ್ಯವೂ ಇರಬಹುದು, ಸುಳ್ಳು ಇರಬಹುದು. ಹೀಗೆ ಹೇಳಲು ಅಲ್ಲಿ ಅನೇಕ ಸುದ್ದಿ ಇದೆ, ಒಂದು ಆರೋಪ, ಇನ್ನೊಂದು ಪೀಠದ ಮೇಲೆ ಬಸವರಾಜ ಅವರ ಆಸೆ. ಹಾಗೂ ಸ್ವತಂತ್ರ ಲಿಂಗಾಯತ ಧರ್ಮದ ಹೊರಾಟದಲ್ಲಿ ಶ್ರೀಗಳ ಮುಂದಾಳತ್ವ, ಅದನ್ನು ವಿರೋಧಿಸುವ, ಹೋರಾಟ ತುಳಿಯುವ ರಾಜಕೀಯ ಪಕ್ಷ.
ಇವನ್ನೆಲ್ಲಾ ನೋಡಿದರೆ, ಶ್ರೀಗಳು ತಪ್ಪು ಮಾಡದೆ ಇರಬಹುದು. ಗೊತ್ತಿಲ್ಲ.
ನಮ್ಮ ನ್ಯಾಯಾಲಯಗಳಲ್ಲಿ ನ್ಯಾಯ ಸಿಗುವುದಿಲ್ಲ, ಕೇವಲ ನಿರ್ಣಯ ಸಿಗುತ್ತದೆ. ಇದು ನನ್ನ ಅನುಭವ. ಉದಾ 12 ವರುಷ ಕೋರ್ಟ್ ನಡೆಸಿ ಜಯಲಲಿತಾ ಅಪರಾಧಿ ಅಂತ ಹೇಳಿದರೆ, ಮೇಲ್ಮಾನವಿಯಲ್ಲಿ 15 ನಿಮಿಷದ ವಿಚಾರಣೆ ನಡೆಸಿ ನಿರಪರಾಧಿ ಅಂತ ಕೋರ್ಟ್ ಹೇಳಿದೆ.
ಕಾರಣ ನ್ಯಾಯ ಶ್ರೀಗಳ ಪರವಾಗಿ ಬಂದರೆ ಅವರ ಘನತೆ ಗೋಸ್ಕರ ಶ್ರೀಗಳು ಮೊದಲು ಪೀಠಕ್ಕೆ ಕುಳಿತು, ಸ್ವಲ್ಪ ದಿವಸದ ನಂತರ ಬೇಕಿದ್ದರೆ ಸ್ವ ಇಚ್ಛೆ ಯ ಮೇರೆಗೆ ಪೀಠ ಬಿಟ್ಟು, ಮಠದಲ್ಲಿ ಇದ್ದು ಧರ್ಮದ ಪ್ರಚಾರ ಮಾಡಲಿ.
ನಾನು ಇಲ್ಲಿಯವನೇ. ಇದರ ಸತ್ಯ ನನಗೆ ಗೊತ್ತಿದೆ. ಹೇಳಬಾರದ, ಕೇಳಬಾರದ ವಿಚಾರವಿದು. ಮುರುಘಾ ಶರಣರು ಸ್ವಇಚ್ಛೆಯಿಂದ ಚಿತ್ರದುರ್ಗಕ್ಕೆ ಬರುವುದಿಲ್ಲ ಎಂದು ನಿರ್ಧರಿಸಿದರೆ ಲಿಂಗಾಯತ ಧರ್ಮಕ್ಕೆ ಒಳ್ಳೆಯದಾಗುತ್ತದೆ.
Basava Media’s efforts for the betterment of society are truly commendable. It has brought an important issue into the public domain, raising awareness and providing a platform for people to raise their voices in this serious matter
ಗೋ.ರು.ಚ.ಶರಣರದು ಮಾತು ಸರಿ ಅನಿಸಿತು 👍💯❤️🙏💐
ಗೋರುಚ ಶರಣರ ಹೇಳಿದ್ದು ಚೆನ್ನಾಗಿ ಅನಿಸುತ್ತದೆ, ಆದರೆ ಅವರ ಒಂದು ಲಿಂಗಾಯತ ಧರ್ಮ ಹಾಗು ಬಸವಣ್ಣನವರ ಬಗ್ಗೆ ನಡೆದು ಬಂದ ದಾರಿ ನೋಡಿ ಈ ರೀತಿ ಹೇಳಿಕೆ ಸರಿ ? ಇನ್ನೊಂದು ಕೇಸ್ ಇರಲಿ ಅಥವಾ ನ್ಯಾಯ ಇವರ ಪರಿ ಬರುತ್ತೆ. ಒಂದು ವೇಳೆ ಹೈಕೋರ್ಟ್, ಸುಪ್ರೀಂಕೋರ್ಟ್ ಅಂತ ಹೋದ್ರೆ.ಆಗ ಅವರು ಪರಿ ನಿಂತು ಮುಂದೆ ಕೋರ್ಟ್ ಗೆ ಹೋಗಲಾರದಂತೆ ನೋಡಿ ಕೋಳ್ಳಬೇಕು. ಇಲ್ಲವಾದರೆ ಮುಂದೆ ಯಾವ ಶ್ರೀ ಗಳು ಮುಂದೆ ಬರಲ. ಪೀಠ ಒಪ್ಪಿ ಕೊಳ್ಳೋದು ಅವರಿಗೆ ಬಿಡಬೇಕು. ಅವರು ಪೀಠ ಒಪ್ಪಿ ಕೊಳ್ಳಲ. . ಒಂದು ವೇಳೆ ಯಾರಿಗಾದರೂ ಮಾರ್ಗದರ್ಶನ ಒಪ್ಪಿ ಕೊಂಡರೆ ದೊಡ್ಡದು. ಜೈ ಬಸವ.
ಹಿರಿಯರು ಹಾಗೂ ಜ್ಞಾನಿಗಳು ಆದ ಗೊ. ರು.ಚನ್ನಬಸಪ್ಪ ಅವರು ಲಿಂಗಾಯತ ಧರ್ಮದ ಸಾಕ್ಷಿ ಪ್ರಜ್ಞೆ ಯಂತೆ ಇದ್ದಾರೆ. ಅವರ ಅಭಿಪ್ರಾಯ ಸೂಕ್ತವಾಗಿದೆ. ಮುರುಘಾ ಶರಣರು ಮುಂದೆ ನಿರಪರಾಧಿ ಎಂದು ನ್ಯಾಯಾಲಯದ ತೀರ್ಪು ಬರಬಹುದು. ಆದರೆ ಭಕ್ತರು ಅವರನ್ನು ನೋಡುವ ದೃಷ್ಟಿ ನಕಾರಾತ್ಮಕವಾಗಿ ಇರುತ್ತದೆ. ಆದ್ದರಿಂದ ಪೀಠಾಧಿಕಾರಿ ಆಗದೆ ಬೇರೆ ಸೂಕ್ತ ವ್ಯಕ್ತಿಗೆ ಅವಕಾಶ ನೀಡಿ ಒಳ್ಳೆಯ ಮೇಲ್ಪಂಕ್ತಿ ಹಾಕಲು ಮುರುಘಾ ಶರಣರು ಮುಂದಾಗಲಿ.
.