ಬಸವಕಲ್ಯಾಣ:
ಬಸವಾದಿ ಶರಣರ ವಚನಗಳನ್ನು ನಾವು ದಿನನಿತ್ಯ ಪಠಣ ಮಾಡುವುದರಿಂದ ದೇವಕರುಣೆ ನಮಗಾಗುತ್ತದೆ. ಪೂಜ್ಯರು ಹಮ್ಮಿಕೊಂಡಿರುವ ಈ ವಚನ ಕಂಠಪಾಠ ಸ್ಪರ್ಧೆಯಲ್ಲಿ ಎಲ್ಲರೂ ಭಾಗವಹಿಸಿರಿ. ವಚನ ಪಠಣ ಮಾಡುವುದರ ಜೊತೆ ಬಸವಾದಿ ಶರಣರ ತತ್ವಾದರ್ಶಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನಮ್ ನುಡಿದರು.
೪೬ನೇ ಶರಣ ಕಮ್ಮಟ, ಅನುಭವಮಂಟಪ ಉತ್ಸವ-೨೦೨೫ ರ ನಿಮಿತ್ಯ ಹಮ್ಮಿಕೊಂಡಿರುವ ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪೂಜ್ಯ ಗುರುಬಸವ ಪಟ್ಟದ್ದೇವರು ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತ, ವಚನ ಸಾಹಿತ್ಯ ಸರ್ವಕಾಲಕ್ಕೂ ಪ್ರಸ್ತುತವಾಗಿದೆ. ಶರಣರು ತಮ್ಮ ಅನುಭಾವದಿಂದ ವಚನಗಳು ಬರೆದಿದ್ದಾರೆ.
ನಮ್ಮ ಜೀವನದ ಸಮಸ್ಯೆಗಳಿಗೆ ವಚನ ಸಾಹಿತ್ಯದಲ್ಲಿ ಪರಿಹಾರವಿದೆ. ಚಿಕ್ಕವಯಸ್ಸಿನ ಮಕ್ಕಳಲ್ಲಿ ವಚನಪ್ರಜ್ಞೆ ಬೆಳೆದರೆ ಅವರ ವ್ಯಕ್ತಿತ್ವ ವಿಕಾಸವಾಗುತ್ತದೆ ಎಂಬ ಉದ್ದೇಶದಿಂದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಅನೇಕ ವರ್ಷಗಳಿಂದ ವಚನ ಕಂಠಪಾಠ ಸ್ಪರ್ಧೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪರಿಣಾಮವಾಗಿ ರಾಜ್ಯದ ಅನೇಕ ಜಿಲ್ಲೆಗಳ ಸ್ಪರ್ಧಾಳುಗಳು ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಪೂಜ್ಯ ಶಿವಾನಂದ ಸ್ವಾಮಿಗಳು, ಅತ್ತಿವೇರಿ ಬಸವಶ್ರೀ ಮಾತಾಜಿ, ಬಸವದೇವರು, ಪ್ರಭುಲಿಂಗ ದೇವರು, ಶಿವಬಸವ ದೇವರು, ಸುಗುಣಾತಾಯಿ ಮುಂತಾದ ಪೂಜ್ಯರು ಸಮ್ಮುಖ ವಹಿಸಿದ್ದರು.
ಬಸವಗುರು ಪೂಜೆಯು ಕುಪೇಂದ್ರ ಪಾಟೀಲ, ಅಧ್ಯಕ್ಷರು, ಸುಶೀಲಾದೇವಿ ಬಿ. ಪಟೇಲ್ ಚಾರಿಟೇಬಲ್ ಟ್ರಸ್ಟ್ ಅವರಿಂದ ನೆರವೇರಿತು. ಅಧ್ಯಕ್ಷತೆಯನ್ನು ದೇವಯ್ಯ ಗುತ್ತೇದಾರ ಅವರು ವಹಿಸಿಕೊಂಡಿದ್ದರು.
ಸಮೇದ ಪಟೇಲ್, ಜೆಡಿ ಅಗ್ರಿಕಲ್ಚರ್ ಕಲಬುರಗಿ, ವಿಜಯಲಕ್ಷ್ಮೀ ಗಡ್ಡೆ, ಬಸವರಾಜ ಮೂರುಡೆ, ಶಿವಪುತ್ರ ದುರ್ಗೆ, ಲಕ್ಷ್ಮೀಪುತ್ರ ನಿಂಬಾಳಕರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಶರಣ ಆಕಾಶ ಖಂಡಾಳೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿದರು. ಜಗನ್ನಾಥ ಪಾಟೀಲ ಶರಣು ಸಮರ್ಪಣೆ ಮಾಡಿದರು.
