ಚಿಂಚೋಳಿ:
ಪಾವನಭೂಮಿ ಬಸವಕಲ್ಯಾಣ ನಗರದಲ್ಲಿ ಶರಣ ಕಮ್ಮಟ, ಅನುಭವಮಂಟಪ ಉತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆಯಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ಜಗದೀಶ ಮರಪಳ್ಳಿ ಅವರನ್ನು ಗ್ರಾಮದ ಶ್ರೀ ಬಸವ ಪುರುಷ ಕಟ್ಟೆಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.
೯೫೧ ವಚನಗಳನ್ನು ಕಂಠಪಾಠ ಹೇಳುವ ಮೂಲಕ ಕಲ್ಯಾಣ ನಾಡಿಗೆ ಕೀರ್ತಿ ತಂದಿದ್ದಾರೆ. ಕಳೆದ ಬಾರಿಯೂ ಭಾಗವಹಿಸಿದ್ದ ಜಗದೀಶ ಅವರು ೬೯೮ ವಚನ ಹೇಳಿ ೬೦ ರ ಹರೆಯದಲ್ಲೂ ರಾಜ್ಯಕ್ಕೆ ದ್ವಿತೀಯ ಸ್ಥಾನ ಗಳಿಸಿದ್ದರು.
ಈ ಬಾರಿಯ ಸಾಧನೆಗೆ ಶ್ರೀ ಬಸವ ಪರುಷ ಕಟ್ಟೆಯ ಅಧ್ಯಕ್ಷ ಆನಂದ ಬೆಡಸೂರು, ಖಜಾಂಚಿ ಶಿವಮೂರ್ತಿ ಜಾಡರ, ಕ್ರಿಯಾಮೂರ್ತಿ ವೀರಸಂಗಯ್ಯಸ್ವಾಮಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಇದೆ ವೇಳೆ ಡಾ. ಸಿ.ಎಸ್. ರಗಟೆ, ಚಂದ್ರಯ್ಯ ಮದರಗಿಮಠ, ವಿಶ್ವನಾಥ ಬುರುಕಪಳ್ಳಿ, ಸಂಗಮೇಶ ರಗಟೆ, ಶಾಂತಪ್ಪ ದುಬಲಗುಂಡಿ, ವಿಜಯಕುಮಾರ ಶಂಭುಲಿಂಗಪ್ಪ ಬೆಡಸೂರು, ಶರಣಕುಮಾರ ನೇತಿ, ಗುರುಶಾಂತ ಹುಂಡೇಕಾರ, ಮಲ್ಲಿಕಾರ್ಜುನ ಸಜ್ಜನ ಸೇರಿದಂತೆ ಗ್ರಾಮದ ಬಸವ ಭಕ್ತರು ಅಭಿನಂದಿಸಿ ಶುಭಕೋರಿದ್ದಾರೆ.
