ಚಿತ್ರದುರ್ಗ:
ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ವತಿಯಿಂದ ಕಾರ್ತಿಕ ಮಾಸದ ಅಂಗವಾಗಿ ಏರ್ಪಡಿಸಿದ್ದ ವಚನ ಕಾರ್ತಿಕದ ಅಂಗವಾಗಿ ೨ ವಿಭಾಗಗಳಲ್ಲಿ ಏರ್ಪಡಿಸಿದ್ದ ವಚನ ಕಂಠಪಾಠ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ, ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸ್ಪರ್ಧೆಯ ಭಾಗ-೧ ರಲ್ಲಿ ಚಿತ್ರದುರ್ಗ ಮಾಳಪ್ಪನಹಟ್ಟಿಯ ಕು| ಸಾನ್ವಿ (ಪ್ರಥಮ), ಚಿತ್ರದುರ್ಗ ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದ ಕು| ಹಿತಾ (ದ್ವಿತೀಯ), ಚಿತ್ರದುರ್ಗ ನಗರದ ಕು| ಅನನ್ಯ (ತೃತೀಯ) ಹಾಗೂ ಸಮಾಧಾನಕರ ವಿಭಾಗದಲ್ಲಿ ಶ್ರೀ ಬೃಹನ್ಮಠದ ವಿದ್ಯಾರ್ಥಿ ಕು| ಕಿಶೋರ್ ಆಯ್ಕೆಯಾಗಿದ್ದರು.

ಭಾಗ-೨ ರಲ್ಲಿ ಬೆಳಗಾವಿ ಜಿಲ್ಲಾ ಬೈಲಹೊಂಗಲದ ಕು| ಲಾವಣ್ಯ ಅಂಗಡಿ ೪೯೬ ವಚನಗಳನ್ನು ಹೇಳಿ ಪ್ರಥಮಸ್ಥಾನ ಪಡೆದರು. ಚಿತ್ರದುರ್ಗ ಶಿಕ್ಷಕಿ ಗೀತಾ ರುದ್ರೇಶ್ ೧೬೭ ವಚನ ಹೇಳುವುದರ ಮೂಲಕ ದ್ವಿತೀಯ ಸ್ಥಾನ, ಚಿತ್ರದುರ್ಗ ತಾಲ್ಲೂಕಿನ ಮಾಳಪ್ಪನಹಟ್ಟಿಯ ಸ್ಪೂರ್ತಿ ೯೨ ವಚನ ಹೇಳಿ ತೃತೀಯ ಸ್ಥಾನ ಹಾಗೂ ಹೊಳಲ್ಕೆರೆಯ ಸ್ಪಂದನಾ ಪಟೇಲ್ ಅವರು ಸಮಾಧಾನಕರ ಸ್ಥಾನ ಪಡೆದಿದ್ದಾರೆಂದು ಶ್ರೀಮಠದ ಪ್ರಕಟಣೆ ತಿಳಿಸಿತ್ತು.

ವಿಜೇತರು ಹಾಗೂ ಸ್ಪರ್ಧಿಗಳೆಲ್ಲರಿಗೂ ನಗದು ಬಹುಮಾನ, ಪ್ರಮಾಣಪತ್ರ, ಹಾರ, ಶಾಲು ಹಾಗೂ ಸ್ಮರಣಿಕೆಯನ್ನು ಸೋಮವಾರ ಮಠದ ಆವರಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ನೀಡಿ ಸತ್ಕರಿಸಲಾಯಿತು.

ಸಮಾರಂಭದಲ್ಲಿ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರು, ಜನಪ್ರತಿನಿಧಿಗಳು, ವಿವಿಧ ಸಮಾಜಗಳ ಮುಖಂಡರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಭಕ್ತರು, ಸಾರ್ವಜನಿಕರು ಭಾಗವಹಿಸಿದ್ದರು.

