ಹುಕ್ಕೇರಿ:
20ನೇ ಶರಣತತ್ವ ಕಮ್ಮಟ ಡಿಸೆಂಬರ್ 11 ರಿಂದ 14, 2025ರವರೆಗೆ ನಾಲ್ಕು ದಿನ ಹುಕ್ಕೇರಿ ತಾಲೂಕು ನಿಡಸೋಶಿಯ ಎಸ್ ಜೆ ಟಿ ಎನ್ ಟ್ರಸ್ಟ್ ಹಿರಾ ಸುಗರ್ ರೂರಲ್ ಇಂಜಿನಿಯರಿಂಗ್ ಕಾಲೇಜುದಲ್ಲಿ ನಡೆಯಲಿದೆ.
ಲಿಂಗೈಕ್ಯ ಶರಣೆ ಪುಟ್ಟಮ್ಮ ಮತ್ತು ಲಿಂ. ಶರಣ ಬಸವರಾಜಪ್ಪ ಅಜ್ಜಂಪುರಶೆಟ್ರು ಸೇವಾ ಟ್ರಸ್ಟ್, ಬಸವ ಬಳಗ ದಾವಣಗೆರೆ ಇವರ ಪ್ರಾಯೋಜಕತ್ವದಲ್ಲಿ, ಪೂಜ್ಯ ಡಾ. ಶಿವಲಿಂಗೇಶ್ವರ ಮಹಾಸ್ವಾಮಿಗಳು ಜಗದ್ಗುರು ಶ್ರೀ ದುರದುಂಡೇಶ್ವರ ಸಿದ್ಧಸಂಸ್ಥಾನ ಮಠ ನಿಡಸೋಶಿ ಇವರ ಆಶ್ರಯದಲ್ಲಿ, ಶ್ರೀಮಠದ ಎಸ್ ಜೆ ಪಿ ಎನ್ ಟ್ರಸ್ಟ್ ಕಾಲೇಜಿನ ಸಹಯೋಗದಲ್ಲಿ ಹಾಗೂ ಸರ್ವ ಬಸವ ಲಿಂಗಾಯತಪರ ಸಂಘಟನೆಗಳ ಸಹಕಾರದಲ್ಲಿ ಹಮ್ಮಿಕೊಳ್ಳಲಾಗಿದೆ.

