ಬಾಗಲಕೋಟೆ
ಬಸವತತ್ವದ ಸ್ವಾಮೀಜಿಗಳನ್ನು ಬಸವ ತಾಲಿಬಾನಿಗಳು ಎಂದು ಕರೆದ ಕನ್ನೇರಿ ಶ್ರೀ ಹೇಳಿಕೆಯನ್ನು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಸಮರ್ಥನೆ ಮಾಡಿಕೊಂಡರು.
ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ದೇಶದ ಬಗ್ಗೆ ಕಮ್ಮಿ ನಿಷ್ಠೆ ಇಟ್ಟುಕೊಂಡಂತ ಕೆಲವು ಕಮ್ಯುನಿಷ್ಟ್ ಬಸವ ಸನ್ಯಾಸಿಗಳು ಬಸವ ತಾಲಿಬಾನಿಗಳಾಗಿದ್ದಾರೆ. ಅವರು ದೇವರುಗಳನ್ನ ಮೂಲೆಗೆ ಎಸಿಯಿರಿ ಎಂದಿದ್ದಾರೆ, ಮಾಂಸ-ಹೆಂಡ ಸೇವಿಸಿ ಅಂತಾ ಈ ರೀತಿ ಹೇಳಿದ್ದಾರೆ.
ಲಿಂಗಾಯತ ಸಮಾಜದಲ್ಲಿರೋ ಇಂತಹ ಸನ್ಯಾಸಿಗಳಿಗೆ ಕಾಡಸಿದ್ದೇಶ್ವರ ಸ್ವಾಮಿ ಬಸವ ತಾಲಿಬಾನಿಗಳು ಎಂದು ಕರೆದದ್ದು ಸರಿ ಎಂದು ಸಮರ್ಥಿಸಿಕೊಂಡರು.
ಬಸವಣ್ಣನವರಿಗೆ ತಾಲಿಬಾನಿ ಹೆಸರು ಸೇರಿಸಿದ್ದು ಸರಿಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಲಿಂಗಾಯತ ಸಮಾಜದಲ್ಲಿ ಇರುವಂತಹ ಕೆಲವರು ಬಸವ ಸಂಸ್ಕೃತಿ ಅಂತ ಹೇಳಿ ದೇವರ ಬಗ್ಗೆ ಟೀಕೆ ಮಾಡಿದರು, ಹೆಂಡ, ಮಾಂಸ ತಿನ್ನರಿ ಅಂತ ಹೇಳಿದರು ಎಂದು ಈಶ್ವರಪ್ಪ ಆಪಾದಿಸಿದರು.
ಸುಪ್ರೀಂ ಕೋರ್ಟ್ ಕನ್ನೇರಿ ಸ್ವಾಮಿಯ ಮೇಲೆ ಹೇಳಿರೋ ಮಾತು ಸ್ವಾಗತಿಸುತ್ತೇನೆ. ಅದೇ ಕೋರ್ಟ್ ಇವರ ಪರವಾಗಿಯೂ ಮಾತನಾಡಿದೆ, ಎಂದು ಈಶ್ವರಪ್ಪ ಹೇಳಿದರು.
ಈಶ್ವರಪ್ಪ ಜೊತೆಗೆ ಸಂಘಪರಿವಾರದ ಕೆಲ ಮುಖಂಡರು ಇದ್ದರು.

ಬಚ್ಚಲ ಬಾಯಿ ಈಶ್ವರಪ್ಪ ನಿನು ಎಷ್ಟೇ ಲಿಂಗಾಯತರಿಗೆ ವಿರೋಧ ಮಾಡಿದರೂ ನಿನೊಬ್ಬ ಶೂದ್ರ ನಿನಗೆ ಹೊರಗಡೆ ನಿಲ್ಲಿಸುತ್ತಾರೆ ಅರ್ಥ ಮಾಡಕೊ. ಗುರು ಬಸವಣ್ಣನವರ ಮಹಾಮನೆ ಎಲ್ಲರಿಗೂ ತೆರಿದಿದೆ ನಿನಗೆ ಅರ್ಥ ಆಗಲ್ಲ
ಮಾತಿನಲ್ಲಿ ಮಂಟಪ ಕಟ್ಟಿ ಶಿಷ್ಟ ಮತ್ತು ಕ್ಷುದ್ರ ಹೆಂಡ ಮಾಂಸ ಸುರೆಪಾನ ಮಾಡುವ ದೇವರುಗಳನ್ನು
ಸ್ತ್ರಷ್ಟಿಸಿ ದೇವರ ಹೆಸರಲ್ಲಿ ಶೂದ್ರರನ್ನು ಶೋಷಣೆ ಮಾಡುತ್ತಿರುವ ಮನುವಾದಿಗಳ ಕುತಂತ್ರ ಈ ದಡ್ಡ ಶೂದ್ರ ಈಶ್ವರಪ್ಪನಿಗೆ ಕನ್ನೇರಿ ಸ್ವಾಮೀಜಿಗೆ ಏನು ಗುರುತು ಸಂಘದ ಆದೇಶ ಪಾಲಿಸುವ ಶಿಸ್ತಿನ ಗೇಟ್ ಕೀಪರ್ ಗಳು ಅವರು ಹೇಳಿದಂತೆ ಬೊಗಳುವ ಕಾಲಾಳುಗಳು ಇವರೇ ಸನಾತನ ಹಿಂದೂ ತಾಲಿಬಾನಿಗಳು ಇಂಥ ತಾಲಿಬಾನಿಗಳನ್ನು ಜೀವ
ವಿರೋಧಿಗಳನ್ನು ಹುಸಿ ದೇಶಭಕ್ತರನ್ನು ಮಟ್ಟ ಹಾಕಲು ಹುಟ್ಟಿದ್ದೆ ರಾಷ್ಟ್ರವಾದಿ ಬಸವ ಧರ್ಮ
ವಯಸ್ಸಾದ್ರೂ ಭುದ್ದಿಬರಲಿಲ್ಲ ಇದಕ್ಲೆ, ಬ್ರಾಹ್ಮಣ ಹಿಂದುತ್ವದ ಸ್ವಾಮೀಜಿಗಳಿಗೆ ತಾಲಿಬಾನಿಗಳು ಅಂದ್ರೆ ಹೇಗಿರುತ್ತೆ ಈ ಶ್ವರಪ್ಪ ? ಇಂತ ಹರಕು ಬಾಯಿಗೆ ಹೊರಗೆ ದಬ್ಬಿಸಿಕೊಂಡಿರೋದು