ಚಿಂಚೋಳಿ:
ತಾಲ್ಲೂಕಿನ ಚಿಮ್ಮನಚೋಡ ಗ್ರಾಮದ ಹನುಮಾನ ದೇವಸ್ಥಾನದ ಆವರಣದಲ್ಲಿ ಧಾತ್ರಿ ರಂಗ ಸಂಸ್ಥೆ, ಸಿರಿಗೇರಿ ಕಲಾತಂಡದವರ ‘ಶಿವಶರಣ ಹರಳಯ್ಯ’ ನಾಟಕ ಪ್ರದರ್ಶನಗೊಂಡಿತು.
ಆರಂಭದಲ್ಲಿ ಬಸವ ಪರುಷಕಟ್ಟೆ ಅಧ್ಯಕ್ಷ ಆನಂದ ಬೆಡಸೂರು ಅವರು ಷಟಸ್ಥಲ ಧ್ವಜಾರೋಹಣ ಮಾಡಿದರು.

ನಾಟಕ ಪ್ರದರ್ಶನ ಮೊದಲು ಮಲ್ಲಿನಾಥ ಕೋಲಕುಂದಿ, ಡಾ. ಸಿ.ಎಸ್. ರಗಟೆ, ಶಂಕರ ಹಿಪ್ಪರಗಿ, ಶ್ಯಾಮರಾವ ಕೊರವಿ ರಂಗಭೂಮಿ ಪೂಜೆಗೈದರು.

ಜಗನ್ನಾಥರೆಡ್ಡಿ ರಂಜೋಳ, ನರಸಪ್ಪ ಗಣಾಪುರ , ಶರಣರೆಡ್ಡಿ ಮೊಗಲಪ್ಪನೋರ, ಶರಣರೆಡ್ಡಿ ವೀರೆಡ್ಡಿ, ಬಸವರಾಜ ಬುರಕಪಳ್ಳಿ, ಬಂಡಾರೆಡ್ಡಿ ಅಡಿಕಿ, ಪಂಡಿತ ಕಟ್ಟಿಮನಿ, ಜಗದೀಶ ತೆಲಕಾಪಳ್ಳಿ, ಜಗನ್ನಾಥ ತೆಲಕಾಪಳ್ಳಿ, ಅಭಿಷೇಕ ಕುಲಕರ್ಣಿ, ಸಿದ್ದಪ್ಪ ವಾಡೇದ, ಮಡಿವಾಳಪ್ಪ ರಗಟೆ, ರಾಜಕುಮಾರ ಕಿಳ್ಳಾ, ರತನಕುಮಾರ ತೆಲಕಾಪಳ್ಳಿ, ಗೋಪಾಲ ಬಾಜೆಪಳ್ಳಿ, ಶಿವಕುಮಾರ ಹಿರೇಮಠ, ವೈಜನಾಥ ಬಾಜೆಪಳ್ಳಿ, ವಿಶ್ವನಾಥರೆಡ್ಡಿ ಪೀರೆಡ್ಡಿ, ನರಸಪ್ಪ ಕೊಡದೂರ, ಅಶೋಕ ರೇಕುಳಗಿ, ಬಸಯ್ಯ ಮದರಗಿಮಠ, ಜಗನ್ನಾಥ ಹೊಸಮನಿ, ಸಿದ್ಧಲಿಂಗ ದುಬಲಗುಂಡಿ, ಮಹ್ಮದ ಖುರೇಷಿ, ಸಂತೋಷ ಗೌನಳ್ಳಿ, ಸಂಗಪ್ಪ ಭಕ್ತಂಪಳ್ಳಿ, ಇಸ್ಮಾಯಿಲ್ ಸೌದಾಗರ, ಶಿವಮೂರ್ತಿ ಜಾಡರ, ಸಂತೋಷ ಕೊಡಂಗಲ, ಅಮರನಾಥ ದುಬಲಗುಂಡಿ, ಸಂಗಮೇಶ ರಗಟೆ, ಶಾಂತಪ್ಪ ದುಬಲಗುಂಡಿ, ಕಾಶೀನಾಥರೆಡ್ಡಿ ಗುಡೆಪ್ಪನೋರ, ನಾಗೇಂದ್ರಪ್ಪ ಯಂಪಳ್ಳಿ, ಜಗನ್ನಾಥ ನಿಪ್ಪಾಣಿ, ಕಾಶಿನಾಥ ಸಿಂಧೆ ಮುಂತಾದವರು ಅತಿಥಿಗಳಾಗಿದ್ದರು.

ಸಾವಿರಾರು ಸಂಖ್ಯೆಯಲ್ಲಿ ಜನರು ನಾಟಕ ವೀಕ್ಷಣೆ ಮಾಡಿದರು. ರಮೇಶ ಭೂತಪೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
